20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮನದಾಳದ ಮಾತು

August 2, 2012 - 10:53pm
rajut1984

ಮರೆತೋದ ಮಾತಿದು ಮನದಾಳದಾಡಿದು

ನನ್ನ ಕಣ್ಣ ಅ೦ಚಿನ ನೂರಾರು ಕನಸಿದು

ಮಾತಿಗೆ ನಿಲುಕದ ಭಾವದ ಗೀಳಿದು

ಮನಸಾರೆ ಹಾಡುವೆನು ಕೇಳುವ ಹಾಡಿದು

 

ಬೇಸ್ತುಬಿದ್ದ ನನ್ನ ಮನಕೆ ಅರವಳಿಕೆ ನೀನಾದೆ

ಕಾಡತಿರುವ ನನ್ನ ಕನಸ ಕನವರಿಕೆಯು ಆದೆ

ಏನೆ೦ದು ಹೇಳಲಿ ಎ೦ದು ನಾನಿ೦ದು ಮೂಕಾದೆ

ಕಾಣದ ಕನಸಿನ ಸಾರಥಿಯಾದೆ  ಮಾರುತಿಯಾದೆ

 

ಗುಡಿ ಕಾಣದ ದೇವರ ಓಲೈಸೋ ಹಾಡಿದು

ಮನದಾಳದ ಕನಸಿನ ಐಕ್ಯತೆಯ ನೋವಿದು

ಭಾವಾಂಜಲಿ ಎನ್ನುವ ಪರಿಪರಿಯ ಗೀಳಿದು

ಬೇಡೆಂದರೂ ಪೋಗದ ಸೊಗಸಿನ ಮುನಿಸಿದು

 

                                                             -  ರಾಜು

 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by makara on
ರಾಜು ಅವರೆ, ಒಳ್ಳೆಯ ಪ್ರಯತ್ನಕ್ಕೆ ಅಭಿನಂದನೆಗಳು. ಪ್ರಾಸ ಹೆಣೆಯುವ ಭರಾಟೆಯಲ್ಲಿ ಕೆಲವೊಮ್ಮೆ ಪದ್ಯದ ಆಶಯಕ್ಕೆ ಭಂಗ ಬಂದಿದೆಯೆನಿಸುತ್ತಿದೆ. ನಾನೇನೂ ಕವಿಯಲ್ಲ ಆದರೂ ನನಗೆ ತಿಳಿದ ಕೆಲವು ಬದಲಾವಣೆಗಳನ್ನು ಮಾಡಿದರೆ ಕವನ ಹೆಚ್ಚು ಸುಂದರವಾಗಬಹುದೆನಿಸುತ್ತದೆ. ಕೆಳಗಿನ ಪಂಕ್ತಿಯಲ್ಲಿ ಬೇಸ್ತುಬಿದ್ದ ಎನ್ನುವುದಕ್ಕಿಂತ ಬೇಸತ್ತ ಎಂದರೆ ಸಾಕಿತ್ತೇನೋ. ಮತ್ತು ಕಡೆಯ ಸಾಲಿನಲ್ಲಿ ಮಾರುತಿಯಾದೆ ಎಂದರೆ ಭಕ್ತರಾದಿರೋ ಇಲ್ಲಾ ಬ್ರಹ್ಮಚಾರಿಯಾದಿರೋ? ಸ್ವಲ್ಪ ಬಿಡಿಸಿ ಹೇಳಿ. ಬೇಸ್ತುಬಿದ್ದ ನನ್ನ ಮನಕೆ ಅರವಳಿಕೆ ನೀನಾದೆ ಕಾಡತಿರುವ ನನ್ನ ಕನಸ ಕನವರಿಕೆಯು ಆದೆ ಏನೆ೦ದು ಹೇಳಲಿ ಎ೦ದು ನಾನಿ೦ದು ಮೂಕಾದೆ ಕಾಣದ ಕನಸಿನ ಸಾರಥಿಯಾದೆ ಮಾರುತಿಯಾದೆ ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by rajut1984 on
ಪ್ರತಿಕ್ರಿಯೆಗೆ ಧನ್ಯವಾದಗಳು ಶ್ರೀಧರ್ ರವರೆ . ಮಾರುತಿಯಾದೆ ಎಂದರೆ ಪ್ರೀತಿಯ‌ ಭಕ್ತನಾದೆ ಎ0ದು !