18
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮರೆವು

August 1, 2012 - 2:31am
santhu_lm

ಹೊಡೆಯುವುದ ಕಲಿತೆ, ಬಡಿಯುವುದ ಕಲಿತೆ.
ರಕ್ಕಸದೇಣಿಯನತ್ತುವ ತವಕದಲಿ,
ದಕ್ಕುವಾ ಚಿತ್ರಗಳನೇ ನಾ ಮರೆತೆ.

ಸಹಿಸುವುದ ಕಲಿತೆ, ದಹಿಸುವುದ ಕಲಿತೆ.
ಇರುಳ ಮಬ್ಬಿನಲಿ ನೆಮ್ಮದಿಯನುಡುಕುತ್ತಾ,
ಕಳೆದ ಕ್ಷಣಗಳನೇ ನಾ ಮರೆತೆ.

ಗಳಿಸುವುದ ಕಲಿತೆ, ಉಳಿಸುವುದ ಕಲಿತೆ.
ಮೊಮ್ಮಕ್ಕಳಿಗೋಸುಗ ಎತ್ತಿಕ್ಕುವ ದಿಟ್ಟಿನಲಿ,
ನನ್ನ ತುತ್ತ ತಿನ್ನುವದ ನಾ ಮರೆತೆ.

ಇತಿಹಾಸ ಕಲಿತೆ, ಮುಂಬರುವುದನರಿತೆ.
ನಿನ್ನೆ ನಾಳೆಗಳ ಕಲಹಗಳ ನಡುವೆ,
ಇಂದು ಬಾಳುವುದ ನಾ ಮರೆತೆ.

ಉತ್ತುವುದ ಕಲಿತೆ, ಬಿತ್ತುವುದ ಕಲಿತೆ.
ಬೆಳೆದ ಭತ್ತವನುಣ್ಣುವ ಭರದಲಿ,
ಭೂತಾಯವ್ವನ ಋಣವ ನಾ ಮರೆತೆ.

ಬಾಳ ಬಂಡಿಯಲಿ ಕುಳಿತೆ, ನೊಗವನಿಕ್ಕುವುದನೂ ಕಲಿತೆ.
ಸವಾರಿಯ ಮಾಡುವ ಅಹಮ್ಮಿನ ಹಂಗಿನಲಿ
ಕಡಾಣಿ ಇಲ್ಲದ್ದನ್ನೇ ನಾ ಮರೆತೆ.

http://frommyheartsa...

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Soumya Bhat on
ಸಂತೋಷ್ ರವರೆ ಒಂದೊಂದು ಸಾಲೂ ಅರ್ಥಪೂರ್ಣ ಮತ್ತು ಸತ್ಯ. "ಗಳಿಸುವುದ ಕಲಿತೆ, ಉಳಿಸುವುದ ಕಲಿತೆ ಮೊಮ್ಮಕ್ಕಳಿಗೋಸುಗ ಎತ್ತಿಕ್ಕುವ ದಿಟ್ಟಿನಲಿ ನನ್ನ ತುತ್ತ ತಿನ್ನುವುದ ನಾ ಮರೆತೆ.." ಅದ್ಭುತ. ಇದಕ್ಕಿಂತ ಚನ್ನಾಗಿ ಬರೆಯಲು ಸಾಧ್ಯವಿಲ್ಲವೇನೋ ಎಂಬಂತೆ ಬರೆದಿದ್ದೀರಿ. ಈಡೀ ಬದುಕಿನ ಅನಾವರಣದಂತಿದೆ ಕವನ. ಬಹಳ ಇಷ್ಟವಾಯಿತು. ಶುಭವಾಗಲಿ, >ಸೌಮ್ಯ

Submitted by santhu_lm on
ಸೌಮ್ಯರವರಿಗೆ, ಧನ್ಯವಾದಗಳು. ತಮ್ಮ ಪ್ರೀತಿಗೆ ನಾನು ಅಭಾರಿ. ಹೀಗೆ ತಮ್ಮ ಪ್ರೋತ್ಸಾಹ ಮುಂದುವರೆಯಲಿ. ಸಂತೋಷ್

Submitted by Rajendra Kumar ... on
ಆತ್ಮೀಯ ಸಂತೋಷ್ ಅವರೆ, ಉತ್ತಮ, ಅರ್ಥಪೂರ್ಣ ಮತ್ತು ಸಂದೆಶಯುಕ್ತ ಕವನ...ಹಂಚಿಕೊಂಡಿದಕ್ಕೆ ಧನ್ಯವಾದಗಳು.

Submitted by santhu_lm on
ಗೆಳೆಯ ರಾಜೇಂದ್ರರಿಗೆ, ಧನ್ಯವಾದಗಳು. ತಮ್ಮ ಪ್ರೀತಿಗೆ ನಾನು ಅಭಾರಿ. ಹೀಗೆ ತಮ್ಮ ಪ್ರೋತ್ಸಾಹ ಮುಂದುವರೆಯಲಿ. ಸಂತೋಷ್

Submitted by H A Patil on
ಸಂತರೋಷ ಕುಮಾರ ರವರಿಗೆ ವಂದನೆಗಳು " ಮರೆವು " ಒಂದು ಸಶಕ್ತ ಕವನ.ತ್ರಿಪದಿಯಲ್ಲಿ ಸುಂದರವಾಗಿ ಅರ್ಥಪೂರ್ಣವಾಗಿ ರಚಿಸಿದ್ದೀರಿ, ಧನ್ಯವಾದಗಳು.

Submitted by santhu_lm on
ಪಾಟೀಲಣ್ಣನವರಿಗೆ, ಧನ್ಯವಾದಗಳು. ತಮ್ಮ ಪ್ರೀತಿಗೆ ನಾನು ಅಭಾರಿ. ಹೀಗೆ ತಮ್ಮ ಪ್ರೋತ್ಸಾಹ ಮುಂದುವರೆಯಲಿ. ಸಂತೋಷ್

Submitted by sathishnasa on
ನಿಜ ನಮಗೆ ಬೇಕಾದದ್ದನ್ನು ಮರೆತು ಬೇಡದರ ಹಿಂದೆ ತಿರುಗುತ್ತಿದ್ದೇವೆ ಒಳ್ಳೆಯ ಕವನ ಧನ್ಯವಾದಗಳೊಂದಿಗೆ ...ಸತೀಶ್

Submitted by Premashri on
ಅರ್ಥಪೂರ್ಣವಾದ ಉತ್ತಮ ಕವನ.

Submitted by santhu_lm on
ಪ್ರೇಮರವರಿಗೆ, ಧನ್ಯವಾದಗಳು. ತಮ್ಮ ಪ್ರೀತಿಗೆ ನಾನು ಅಭಾರಿ. ಹೀಗೆ ತಮ್ಮ ಪ್ರೋತ್ಸಾಹ ಮುಂದುವರೆಯಲಿ. ಸಂತೋಷ್

Submitted by santhu_lm on
ಗೆಳೆಯ ಸತೀಶ್ ರವರಿಗೆ, ಧನ್ಯವಾದಗಳು. ತಮ್ಮ ಪ್ರೀತಿಗೆ ನಾನು ಅಭಾರಿ. ಹೀಗೆ ತಮ್ಮ ಪ್ರೋತ್ಸಾಹ ಮುಂದುವರೆಯಲಿ. ಸಂತೋಷ್

Submitted by mmshaik on
ಸಂತೋಷ್ ಅವರೆ ನಮಸ್ಕಾರ. ಆತ್ಮಸಾಕ್ಷಿಯನ್ನು ಕೆಣಕುವ ಉತ್ತಮ ಕವನ..ಶುಭವಾಗಲಿ.

Submitted by santhu_lm on
Mmshaik ರವರಿಗೆ, ಧನ್ಯವಾದಗಳು. ತಮ್ಮ ಪ್ರೀತಿಗೆ ನಾನು ಅಭಾರಿ. ಹೀಗೆ ತಮ್ಮ ಪ್ರೋತ್ಸಾಹ ಮುಂದುವರೆಯಲಿ. ಸಂತೋಷ್