ಮೂರು ಮಳೆ 'ಹನಿ' ಗಳು

ಮೂರು ಮಳೆ 'ಹನಿ' ಗಳು

ಕವನ

ಮೂರು ಮಳೆ 'ಹನಿ' ಗಳು : 
 
೧ :
ನನಗೆ ತಿಳಿದಿದೆ
ನೀನು ನನ್ನೊಬ್ಬನಿಗಲ್ಲವೆಂದು.
ನೀನು ಅವನನ್ನು ಸ್ಪರ್ಷಿಸಿದರೂ
ನನಗೆ ಬೇಸರವಿಲ್ಲ.
ಆದರೂ
ನನಗಾದ ಅನುಭವವೇ
ಅವನಲ್ಲಾದರೆ ನನ್ನಲ್ಲೇನೋ ಮತ್ಸರ!..
 
೨ :
ವರ್ಷದ ಕೆಲವು ಗಳಿಗೆಯಾದರೂ
ನೀನು ನನ್ನೊಡನಿರುವುದು
ನನ್ನ ಸೌಭಾಗ್ಯ.
ಆದರೂ ಅನ್ನಿಸಿದ್ದಿದೆ
ಕೊಂಚ ನಿನ್ನಿಂದ ಬಿಡುವು ಬೇಕೆಂದು.
ಅದ ತಿಳಿದು ನೀನು
ನನ್ನನ್ನು ಬಿಡದೇ ಅಪ್ಪಿದ್ದೂ ಇದೆ.
 
೩ :
ನಿನ್ನ ರೂಪದ ಬಗ್ಗೆ
ಬೇರೆಯವರು ಏನು ತೊದಲುವರೋ ತಿಳಿದಿಲ್ಲ.
ಕತ್ತೆ ಕಸ್ತುರಿಯ ಗಾದೆ ಅವರಿಗೆ ತಿಳಿದಿಲ್ಲ.
ನಿನ್ನ ಕಣ್ತುಂಬಿಕೊಳ್ಳಲು
ನಾ ಕಾದ ಗಳಿಗೆಗೆ ಲೆಕ್ಕವಿಲ್ಲ.
ನಿನ್ನ ತವರ ಬಣ್ಣ ಕಪ್ಪಾದಾಗ
ಏನೋ ಆನಂದ.