ಮೆಂತ್ಯದ ಪಲಾವ್ ‍

ಮೆಂತ್ಯದ ಪಲಾವ್ ‍

ಬೇಕಿರುವ ಸಾಮಗ್ರಿ

ತೊಳೆದಿಟ್ಟು ಸಣ್ಣಗೆ ಹೆಚ್ಚಿರುವ ಮೆಂತ್ಯದ ಸೊಪ್ಪು
ಬಟಾಣಿ (ಹಸಿ ಬಟಾಣಿ ಇದ್ದರೆ ಉತ್ತಮ)
ಬಾಸ್ಮತಿ ಅಕ್ಕಿ (ಒಬ್ಬರಿಗೆ ಅರ್ಧ ಅಥವ ಮುಕ್ಕಾಲು ಕಪ್ ಲೆಕ್ಕದಲ್ಲಿ)
ಹಸಿರುಮೆಣಸಿನಕಾಯಿ
ಶುಂಠಿ

ತಯಾರಿಸುವ ವಿಧಾನ

ನಮಗೆ ಬೇಕಿರುವ ಖಾರಕ್ಕೆ ತಕ್ಕಂತೆ ಹಸಿರುಮೆಣಿಸಿನಕಾಯಿ ಮತ್ತು ಶುಂಠಿಯ ಪೇಸ್ಟ್ ಮಾಡಿ ತೆಗೆದಿಟ್ಟುಕೊಳ್ಳಬೇಕು. ಬಾಸ್ಮತಿ ಅಕ್ಕಿಯನ್ನು ತೊಳೆದು ಒಂದರ್ಧ ತಾಸು ನೆನೆಸಿಟ್ಟುಕೊಳ್ಳುವುದು ಉತ್ತಮ.

ಮೆಂತ್ಯದ ಸೊಪ್ಪನ್ನು ಕುದಿಯಲು ಬಂದಿರುವ ನೀರಿನಲ್ಲಿ ಒಂದಷ್ಟು ಹೊತ್ತು ನೆನೆಸಿ ಬ್ಲಾಂಚ್ ಮಾಡಿಟ್ಟುಕೊಳ್ಳಬೇಕು. ಕುಕ್ಕರಿನಲ್ಲಿ ಸ್ವಲ್ಪ ಮಾತ್ರ ಎಣ್ಣೆಯನ್ನು ಕಾಯಿಸಿ ಅದರಲ್ಲಿ ಹಸಿರುಮೆಣಸಿನಕಾಯಿ ಮತ್ತು ಶುಂಠಿಯ ಪೇಸ್ಟ್, ಪಲಾವ್ ಎಲೆ ಹಾಕಿ ಹುರಿದಿಟ್ಟುಕೊಳ್ಳಬೇಕು. ತದನಂತರ ಮೆಂತ್ಯದ ಸೊಪ್ಪು, ಬಟಾಣಿ, ಬಾಸ್ಮತಿ ಅಕ್ಕಿಯನ್ನು ಸೇರಿಸಿ ಒಂದೆರಡು ನಿಮಿಷ ಹುರಿದಿಟ್ಟುಕೊಳ್ಳಬೇಕು. ಅಳತೆಗೆ ತಕ್ಕಂತೆ ಬಾಸ್ಮತಿಗೆ ನೀರು ಬೆರೆಸಿ, ಕುಕ್ಕರ್ ಮುಚ್ಚಳ ಮುಚ್ಚಿಟ್ಟು ಎರಡು ಸಾರಿ ಕುಕ್ಕರ್ ವಿಸಲ್ ಬರುವ ತನಕ ಇಡಬೇಕು.