ಅಟ್ಟ ಹತ್ತಿದ ಮೇಲೆ ಏಣಿ ಏಕೆ?’, ‘ಹೊಗಳಿ ಹೊಗಳಿ ಅಟ್ಟಕ್ಕೇರಿಸಿದರಂತೆ’- ಈ ಗಾದೆಗಳು ಎಲ್ಲರಿಗೂ ಗೊತ್ತು. ನಲವತ್ತು-ಐವತ್ತು ೩೦/೪೦ ದಶಕದ ಹಿಂದೆ ಮನೆ ಮುಂದೆ ಬೃಂದಾವನಕ್ಕೆ...
ಸಂಪದ ›
ಮೋಡ ...
ಮೋಡ ...
Badari Narayana Thyamagondlu
Sydney, Australia
March 2, 2012 - 6:17am
ಬಗೆ ಬಗೆಯಾಗಿ ಕಾಣುವ ಮೋಡ ನೋಡಿ ಆಶ್ಚರ್ಯದಿಂದ ಅದರ ಹಲವಾರು ರೂಪಗಳನು ಕಂಡು ಮನದಲ್ಲಿ ರೂಪಗೊಂಡ ಮೋಡದ ಬಗ್ಗೆ ಈ ಕವಿತೆ. ನಿಮ್ಮ ಅನಿಸಿಕೆಗೆ ಸ್ವಾಗತ
---------------------
ಹತ್ತಿಯ ಉಂಡೆಯಂತೆ ಎದ್ದು ಬಂದಿದೆ ಮೋಡ
ಕಣ್ತುಂಬ ತುಂಬಿಕೊಂಡು ನೀ ನೋಡ
ಬೆಳಗಿನ ಜಾವದಲಿ
ರವಿ ಕಾಣುವ ಆತುರದಲಿ
ಲಜ್ಜೆ ಬಿಟ್ಟು ಕುಣಿಯುವುದ ನೋಡ
ಕೆಂಪಾಗಿ ನಾಚುವುದ ನೋಡ
ಹಗುರಾದ ಮೈಯಲ್ಲಿ
ಆಗಸದ ಜೊತೆಗೂಡಿ
ಸರಸಾಟವ ಆಡಿ
ಮುಗಿಲನು ಚುಂಬಿಸುವುದ ನೋಡ
ಪ್ರೀತಿಯ ತುಂಬಿಕೊಂಡು
ನಲಿದಾಡುವ ಮೋಡ
ಆಗಸವ ಬಿಡಲೊಲ್ಲೆ ಎಂದು
ಅಳುವುದ ನೋಡ
ಎದೆಯ ಭಾರವ ಹೆಚ್ಚಿಸಿ
ಶ್ಯಾಮವರ್ಣವಾಗಿ
ಗುಡುಗುವುದ ನೋಡ
ರೋಚಕವಾಗಿ ಮಿಂಚುವುದ ನೋಡ
ಪ್ರೇಮದ ವರ್ಷ ಧಾರೆ
ಸುರಿಸುವುದ ನೋಡ
ಕಾಮನ ಬಿಲ್ಲಲಿ
ಭುವಿಗೆ ಮುತ್ತಿಡುವ ಮೋಡ ನೋಡ
---------------------
33 ಹಿಟ್ಸ್
- Login or register to post comments
- 33 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version
ಎಲ್ಲ ಪುಟಗಳು
ನನ್ನ ಬರಹಗಳು
ಇತ್ತೀಚಿನ ಪ್ರತಿಕ್ರಿಯೆಗಳು
ಉ: ಕವಿಕಲ್ಪನೆಯ ಶಿಲ್ಪಗಳ ನೋಡೋಣ ಬನ್ನಿ - ಸಪ್ತಗಿರಿವಾಸಿ
ಉ: ನಮ್ಮೂರ ಪ್ರತಿಭೆಗೆ ಶುಭಾಶಯಗಳು - ಸಪ್ತಗಿರಿವಾಸಿ
ಉ: ಕಣ್ಣ ಅಂಚಿನಲಿ - Ajjappa sarver
ಉ: ಕತೆ ಬರೆಯುವ ತಂತ್ರಾಂಶದ ಕತೆ ಕೇಳಿ - ಸಪ್ತಗಿರಿವಾಸಿ
ಉ: ಕಣ್ಣ ಅಂಚಿನಲಿ - ಸಪ್ತಗಿರಿವಾಸಿ





