22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮೋಹ - ಮಾಯೆ

July 4, 2012 - 11:09am
KUDLI.S.MADVESH

ಬೇಕು ಬೇಕೆನಗಿನ್ನು

ಬೇಡದಿಹದೆನಿಲ್ಲಿನ್ನು

ಬೇಕೆನುತ ಬೊಬ್ಬಿಡುತಿಹೆ

ಮೋಹದ, ಬಲೆಯಲ್ಲಿ ಸಿಲುಕುತ

 

ಸಿಗದು ಸಿಗದೇನಿನ್ನು,

ನೀ ತಂದಿಹುದಿರದು ಏನನ್ನು

ಬಯಸಿದರು ಬರದು

ಮಾಯೆಯ ವಿಚಿತ್ರ ಮೆರಗು

 

ಈ ದಾರಿಯದು ನನದಿನ್ನು

ನಾ ಪಯಣಿಸುವೆ ಆಧುನಿಕತೆಯಲಿನ್ನು

ಹಾರುತ, ಓಡುತ ಹಿಡಿಯಲಿರುವೆ

ಮೋಹದ ಬಲೆಯಲ್ಲಿ ಸಿಲುಕುತ

 

ನಿನದಾವುದು ತಿಳಿಯದಿಲ್ಲ

ನಿನಗಾಗಿ ಏನು ನಡೆಯುವುದಿಲ್ಲ

ಹರಿಯುವುದು, ಮುರಿಯುವುದು

ಮಾಯೆಯ ವಿಚಿತ್ರ ಮೆರಗು

 

ಮಿಂಚಾಗಿ, ಮುಂಚಿತವಾಗಿ

ಮುಂಚೂಣಿಯಲ್ಲಿ ನಿಲ್ಲುವೆ ನಾ ಎಲ್ಲವ ಮೆಟ್ಟಿ,

ಹೊಂದಿಸುವೆ, ಮೆಚ್ಚಿಸುವೆ ಕನಸ ನಾ ಕಟ್ಟಿ

ಮೋಹದ ಬಲೆಯಲ್ಲಿ ಸಿಲುಕುತ

 

ಮಿಂಚು ಮಾಯವಾಗಿ,

ಓಟದ ಆಟದಲ್ಲಿ ಹಿಮ್ಮೆಟ್ಟಿ

ಹೂಂದದೆ, ಸಂದಿಸದೆ ನನಸಾಗದು

ಮಾಯೆಯ ವಿಚಿತ್ರ ಮೆರಗು

 

ವಂದಿಸುವೆ, ಚಿಂತಿಸುವೆ

ಚಿನ್ಮತೆಯ ಕಡೆ ನಾ ಹೊರಡುವೆ

ಮಾಯೆಯ ನಮಿಸುತ ನಾ ನಡೆವೆ

ತನ್ಮತೆಯ ಮೋಹದ ಬಲೆಯಲ್ಲಿ ಜಯಿಸುವೆ

 

ಸಿಗುವುದು ನಡೆವುದು

ನೆನೆದುದೆಲ್ಲಾ, ನನಸಾಯಿತು

ಬದುಕಾಯಿತು, ಬವಣೆ ನೀಗಿತು

ಮಾಯೆಯ ವಿಚಿತ್ರ ಮೆರಗು.

 

                                   ಮಧ್ವೇಶ್

ಕವನ

 

 

 

 

 

 

 

 

ಮೋಹ - ಮಾಯೆ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.