ಮ್ಯಾಗಿ ಪಕೋಡ

ಮ್ಯಾಗಿ ಪಕೋಡ

ತಯಾರಿಸುವ ವಿಧಾನ

ಮ್ಯಾಗಿ ಪ್ಯಾಕಿನ ಹಿಂಬದಿಯಲ್ಲಿ ಬರೆದ ಇನ್ಸ್ಟ್ರಕ್ಶನ್ಸ್ ನೋಡಿಕೊಂಡು ಮ್ಯಾಗಿ ಮಾಡಿಟ್ಟುಕೊಳ್ಳಿ. ಅದನ್ನಾರಲು ಬಿಡಿ. ಒಂದಷ್ಟು ಕಡಲೇಹಿಟ್ಟಿಗೆ (ಸ್ವಲ್ಪ ಮಾತ್ರ) ಹೆಚ್ಚಿದ ಈರುಳ್ಳಿ, ಮೆಣಸಿನಕಾಯಿ ಜೊತೆಗೆ ಬೆರೆಸಿಟ್ಟುಕೊಂಡು ಮೆಣಸಿನಪುಡಿ, ಕೊತ್ತಂಬರಿ ಸೇರಿಸಿ. ಈ ಮಿಶ್ರಣಕ್ಕೆ ತಣ್ಣಗಾದ ಮ್ಯಾಗಿ ಸೇರಿಸಿ ಚೆನ್ನಾಗಿ ಬೆರೆಯುವಂತೆ ಕದಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಪಕೋಡದಂತೆ ಕರೆಯಿರಿ. ರೆಡೆಯಾಯ್ತು ಮ್ಯಾಗಿ ಪಕೋಡ ;) ಯಾವುದಾದರೂ sauce ಅಥವಾ ಟೊಮಾಟೊ ಕೆಚಪ್ ಜೊತೆ ತಿನ್ನಬಹುದು.

ಹಳೆಯದೊಂದು ಮ್ಯಾಗಿ ಕ್ಲಬ್ ರೆಸಿಪಿ

೪ ಜನ

30

ಹೈಸ್ಕೂಲಿನಲ್ಲಿದ್ದಾಗ ಅಪ್ಪ ಅಮ್ಮ ವಾರಗಟ್ಟಲೆ ನಮ್ಮನ್ನು ಮನೆಯಲ್ಲಿ ಬಿಟ್ಟು ಊರಿಗೆ ಹೋದರೆಂದರೆ ದಿನ ನಿತ್ಯ ತಿಂಡಿಗೆ ಮ್ಯಾಗಿಯೇ ಗತಿ. :) ಆಗೊಮ್ಮೆ ಮ್ಯಾಗಿ ಕ್ಲಬ್ ಪುಸ್ತಕದಲ್ಲಿ ಈ ರೆಸಿಪಿ ಬಂದಿತ್ತು. ನಾನೂ, ನನ್ನ ಅಣ್ಣನೂ ಸೇರಿ ಪ್ರಯತ್ನಿಸಿ ಹಾಗೂ ಹೀಗು ರುಚಿಯಾದ ಪಕೋಡ ಮಾಡುವಲ್ಲಿ ಯಶಸ್ವಿಯಾಗಿದ್ದೆವು. ಆಗಿನಿಂದ ಇಂದಿನವರೆಗೂ ನಮ್ಮ ಮನೆಯಲ್ಲಿ ಒಮ್ಮೊಮ್ಮೆ ಇದನ್ನು ಅಮ್ಮ ಅಥವಾ ಅತ್ತಿಗೆಯವರು ಮಾಡುವುದುಂಟು... ನೀವೂ ಟ್ರೈ ಮಾಡಿ ನೋಡಿ.

ಮ್ಯಾಗಿ (Maggi 2 minute Noodles) - ೧ ಪ್ಯಾಕೆಟ್

ಕಡ್ಲೆಹಿಟ್ಟು ೨೦೦ ಗ್ರಾಮ್

ಈರುಳ್ಳಿ, ಕೊತ್ತಂಬರಿ, ಹಸಿರು ಮೆಣಸಿನಕಾಯಿ.

ಮೆಣಸಿನ ಪುಡಿ