ಯಥಾ ದೃಷ್ಟಿ,ತಥಾ ಸೃಷ್ಟಿ

ಯಥಾ ದೃಷ್ಟಿ,ತಥಾ ಸೃಷ್ಟಿ

ಕವನ
ಚಿತ್ರಕೃಪೆ:ಅಂತರ್ಜಾಲ ಮನಸ್ಸಿಗೂ ನಿಸರ್ಗಕ್ಕೂ ಅದೆಂತದೋ ನಂಟು ಬೇಸರಿಸೇ ಮನ ಚೆಲುವಸೂಸುವ ಕಾನನವೂ ಬೇಡವಾಗುತ್ತದೆ. ಜೀವನೋತ್ಸಹ ಚಿಮ್ಮಿಸೋ ಅರುಣೋದಯವು ಬೇಸರ ತರಿಸುತ್ತದೆ. ಜುಳುನಾದದ ತೊರೆ,ಮಾಮರದ ಕೋಗಿಲೆಯ ಗಾನ, ಬಿರಿದು ಕಂಪ ಬೀರುವ ವನಸುಮ ಎಲ್ಲವೂ ನಿಸಾರವೇನಿಸಿ ಬದುಕೇ ಮಂಕಾದಂತೇ ಅನಿಸುತ್ತದೆ. ಅದೇ ಕಾಡು,ಅದೇ ಪುಷ್ಪ,ಅದೇ ಸೂರ್ಯೋದಯ. ಒಮ್ಮೆ ಚೆಲುವಿನ ಗಣಿಯಂತೇ ಕಂಡಿದ್ದು, ಮತ್ತೊಮ್ಮೆ ನೋಡಲು ಚೆಂದವೆನಿಸದಿರಲು ಕಾರಣವೇನು? ಬಹುಶಃ ಚೆಲುವು ನೋಡುವ ಕಣ್ಣಿನಲ್ಲಿರಬೇಕು, ಸವಿಯುವ ಮನಸಿನಲ್ಲಿರಬೇಕು.

Comments