ವರ್ಷ ೨೦೧೭ ರ ಮುಂಬಯಿ ಮಾನ್ಸೂನ್ ಮಳೆಗೆ ಆಹುತಿಯಾದ ಡಾ. ಡಾ. ದೀಪಕ್ ಆಮ್ರಾ ಪುರ್ಕರ್ !

ವರ್ಷ ೨೦೧೭ ರ ಮುಂಬಯಿ ಮಾನ್ಸೂನ್ ಮಳೆಗೆ ಆಹುತಿಯಾದ ಡಾ. ಡಾ. ದೀಪಕ್ ಆಮ್ರಾ ಪುರ್ಕರ್ !

ಮತ್ತೆ ಮರುಕಳಿಸಿದ  ಈ ವರ್ಷದ  (೨೦೧೭) ಮುಂಬಯಿನ ಮಾನ್ಸೂನ್ ಪ್ರಹಾರ  !
 
ವರ್ಷ ೨೦೦೫ ರ  ಒಂದು ದಿನದಲ್ಲಿ ಸುರಿದ ೯೦೦ + ಮಿಲಿಮೀಟರ್ ಮಳೆಯ  ಭಯಂಕರ ಘಟನೆ ಮುಂಬಯಿ ನಗರದ  ಜನರ ಮನಸ್ಸಿನಲ್ಲಿ ಸಿಂಹ ಸ್ವಪ್ನವಾಗಿದ್ದು ಎಲ್ಲರೂ  ತತ್ತರಿಸುತಿರುವ ಸಮಯದಲ್ಲೇನಡೆದ  ಮತ್ತೊಂದು  ದಾರುಣ ಘಟನೆ ನಗರದ ನಾಗರಿಕರನ್ನು ತಲ್ಲಣಗೊಳಿಸಿತು 
 
ಆಗಸ್ಟ್, ೨೯, ೩೦, ೩೧, ಸೆಪ್ಟೆಂಬರ್, ೧, ರಂದು  :
 
ಮುಂಬಯಿ ಮಹಾನಗರದ ಬಾಂಬೆ ಹಾಸ್ಪಿಟಲ್ ನಲ್ಲಿ ಗ್ಯಾಸ್ಟ್ರೋ ಎಂಟಿರ್ಯೋ ಲಾಜಿಸ್ಟ್ ಕೆಲಸಮಾಡುತ್ತಿದ್ದ ೫೮ ವರ್ಷ ಪ್ರಾಯದ ಹೆಸರಾಂತ ಡಾ. ದೀಪಕ್ ಆಮ್ರಾ ಪುರ್ಕರ್ ಮುಂಬಯಿಯ ಮಳೆಯ ಕಾರಣದಿಂದಾಗಿ ಮರಣಿಸಿದ ಸನ್ನಿವೇಶ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. 
ಆಗಸ್ತ  ೨೯ ರ ಮಂಗಳವಾರ ಸುರಿದ ಕುಂಭದ್ರೋಣ ಮಳೆಯದಿನದ ಸಾಯಂಕಾಲ ದೀಪಕ್  ನಾ ಪತ್ತೆಯಾಗಿದ್ದರು  ೩೮ ಗಂಟೆಗಳ ಪೋಲೀಸರ  ಸತತ ಹುಡುಕುವ ಕಾರ್ಯಾಚರಣೆಗಳಿಂದ ಡಾ ದೀಪಕ್ ರವರ  ಮೃತ ದೇಹ, ನಗರದ  ವರ್ಲಿಜಿಲ್ಲೆಯ  ಸಮುದ್ರದ ತೀರದಲ್ಲಿ ತೇಲಿಕೊಂಡು ಬಂದು ಬಿದ್ದಿತ್ತು 
ಡಾ  ದೀಪಕ್  ತಾವು ಕೆಲಸಮಾಡುತ್ತಿದ್ದ ಬಾಂಬೆ ಆಸ್ಪತೆಯಿಂದ ಡ್ಯೂಟಿ ಮುಗಿಸಿಕೊಂಡು ೪-೩೦ ರ ಸಮಯದಲ್ಲಿ ತಮ್ಮ ಕಾರ್ ಡ್ರೈವರ್ ಸಮೇತ  ಕಾರಿನಲ್ಲಿ ಹೊರಟರು ಲೊಯರ್  ಪರೇಲ್ ನ ಇಂಡಿಯಾ ಬುಲ್ಸ್ ಟವರ್ ಬಳಿ ಪಾರ್ಕ್ ಮಾಡಿದರು ಎಲ್ಫಿನ್ ಸ್ಟೋನ್ ಜಿಲ್ಲೆಯ ದೀಪಕ್ ಟಾಕೀಸ್ ಹತ್ತಿರ ಬಂದಾಗ  ಟ್ರಾಫಿಕ್ ಅತಿ  ಜಾಸ್ತಿ ಇತ್ತು ರಸ್ತೆಯಲ್ಲಿ ನೀರು ಹೆಚ್ಚು ಹರಿಯುತ್ತಿದ್ದು ವಾಹನಗಳು  ಮುಂದೆ ಹೋಗಲು ಆಗಲಿಲ್ಲ ದೀಪಕ್ ಕಾರಿನಿಂದ ಇಳಿದು ಸೊಂಟಮಟ್ಟದ ಎತ್ತರಕ್ಕೆ ಹರಿಯುತ್ತಿದ್ದ ನೀರಿನಲ್ಲಿ ಇಳಿದು   ಡ್ರೈವರ್ ಗೆ ಕಾರನ್ನು ಮನೆಗೆ  ತೆಗೆದುಕೊಂಡು ಹೋಗಲು  ಹೇಳಿದರು. ಕೊಡೆ ಹಿಡಿದುಕೊಂಡು ಹತ್ತಿರದಲ್ಲೇ ಇದ್ದ ಅವರ ಮನೆಗೆ (೧೦ ನಿಮಿಷದ ರಸ್ತೆ) ನೀ ರಿನಲ್ಲಿ ನಡೆಯತೊಡಗಿದರು. ೬-೩೦ ಕ್ಕೆ ಪತ್ನಿಗೆ ಫೋನ್ ಮಾಡಿ ತಾವು ನಡೆದುಕೊಂಡೇ ಮನೆಯನ್ನು ತಲುಪುತ್ತಿರುವ ವಿಷಯ ತಿಳಿಸಿದರು  
ರಸ್ತೆಯಲ್ಲಿ  ನಡೆದುಕೊಂಡು ಹೋಗುತ್ತಿದ್ದ ಜನ, ಡಾ ಆಯತಪ್ಪಿ ಮ್ಯಾನ್ ಹೋಲ್ ನಲ್ಲಿ ಬಿದ್ದು ಕೊಚ್ಚಿಹೋದದ್ದನ್ನು ಕಣ್ಣಾರೆ ನೋಡಿದರು. ಕೆಲವರು ತಮ್ಮ ಮೊಬೈಲ್ ನಲ್ಲಿ  ಅವರು ಹೋಗುತ್ತಿದ್ದ ಜಾಡನ್ನು ವಿಡಿಯೋ ಮಾಡಿಕೊಂಡು ನ್ಯೂಸ್ ಪೇಪರ್ ಗೆ ಕೊಟ್ಟರು ಅವನ್ನು ನಾವು ನೋಡಬಹುದು.   ಅವರ ಮನೆಯ ಹತ್ತಿರವೇ ಇದ್ದ ಚರಂಡಿಯ ನೀರು  ವರ್ಲಿ ಸಂಮುದ್ರಕ್ಕೆ  ಸೇರುತ್ತದೆ.  
ಅಮರಾಪುರ್ಕರ್  ಜೀವ ಭಯದಿಂದ  ಜೋರಾಗಿ ಕೂಗಿಕೊಂಡ  ದ್ವನಿ  ಜನರಿಗೆ ಅಸ್ಪಷ್ಟವಾಗಿ  ಕೇಳಿಸಿದರೂ  ಯಾರಿಗೂ ಏನು ಸಹಾಯ ಮಾಡಲು ಆಗಲಿಲ್ಲವೆಂದು, ಅಲ್ಲಿಯೇ ನೋಡುತ್ತಿದ್ದ  ಸುನಿಲ್ ದೇಶ್ ಮುಖ್ ಹೇಳಿದರು. ನಂತರ ಫೈರ್ ಬ್ರಿಗೇಡ್ ನವರು ತಕ್ಷಣ ಧಾವಿಸಿ, ಮ್ಯಾನ್ ಹೋಲ್  ಒಳಗೆ ಮತ್ತು ಸುತ್ತಲೂ ಹಲವು ಗಂಟೆಗಳ ಕಾಲ ಹುಡುಕಾಡಿದರು ಡಾ ಹಿಡಿದುಕೊಂಡಿದ್ದ ಕೊಡೆ ಮ್ಯಾನ್ ಹೋಲ್ ಬಳಿ ಸಿಕ್ಕಿದ್ದರಿಂದ  ಅವರು ಮ್ಯಾನ್ ಹೋಲ್ ನಲ್ಲಿ ಬಿದ್ದಿರಬಹುದೆಂದು ಎಲ್ಲರಿಗೂ ಖಾತ್ರಿಯಾಯಿತು 
 
ವರ್ಷ ೨೦೦೫ ರ ನಂತರ ಅತಿ ಹೆಚ್ಚು ಮಳೆ ಈ ವರ್ಷದ ಆಗಸ್ಟ್ ಕೊನೆಯಲ್ಲಿ ಬಿದ್ದಿತ್ತು ನಗರದ ಎಲ್ಲೆಡೆ ನೀರೇ ನೀರು. ಜಲಪ್ರಳಯವಾಗಿದೆಎಂದು  ಪತ್ರಿಕೆಗಳು ವರದಿಮಾಡಿದ್ದವು  ಬೆಳಿಗ್ಯೆ ೬-೩೦ ಕ್ಕೆ  ಪೊಲೀಸರಿಂದ  ಮೃತದೇಹ ಸಿಕ್ಕಿತೆಂದು ವರದಿ ಬಂತು. ತಕ್ಷಣ ಜಾಗಕ್ಕೆ ಧಾವಿಸಿ ಬಂದ ಡಾ  ಮನೆಯವರು ಅಮರ ಪುರ್ಕರ್ ರವರ ಮೃತ ದೇಹವನ್ನು  ಗುರುತುಹಿಡಿದರು. ಕೂಡಲೇ ಮೃತದೇಹವನ್ನು ನಗರದ ಸಯಾನ್ ಹಾಸ್ಪಿಟಲ್ ನಲ್ಲಿ ಪೋಸ್ಟ್ ಮಾರ್ಟಮ್ ಗೆ ಕಳಿಸಲಾಯಿತು ಸುನಿಲ್ ದೇಶ್ ಮುಖ್ ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ವರದಿ ಒಪ್ಪಿಸಿದರು 
ಪಲ್ಲವ್ ಗೋಡಬೋಲೆ ಹೇಳಿದಂತೆ  ೧೦ ನಿಮಿಷದಲ್ಲಿ ಡ್ರೈವರ್ ಮನೆಗೆ ಹೋದ ಕೈಗೆ ರೆಡೊ ವಾಚ್ ಕಟ್ಟಿಕೊಂಡಿದ್ದರು ಉದ್ದನೆಯ ಗೀರಿನ ಶರ್ಟ್ ಹಾಕಿಕೊಂಡಿದ್ದರು ಜೇಬಿನಲ್ಲಿದ್ದ  ವಾಲೆಟ್ ಕೂಡ ಸಿಕ್ಕಿದೆ  ಡಾ ದೀಪಕ್ ಆಮ್ರಾ ಪುರ್ಕರ್  ಮನೆಯವರು  ಮಳೆಯ ದಿನ  ಅವರ ನಾ ಪತ್ತೆಯಾದ ಬಗ್ಗೆ  ಪೊಲೀಸ್ ಕಂಪ್ಲೇಂಟ್  ದಾಖಲು ಮಾಡಿದ್ದರು  ವರ್ಲಿಯಲ್ಲಿದ್ದ ದೀಪಕ್ ಆಮ್ರಾ ಪುರ್ಕರ್ ರ  ಇಬ್ಬರು ಗೆಳೆಯ ಡಾಕ್ಟರ್ ಗಳೂ  ಕೂಡ ಸ್ಥಳಕ್ಕೆ ಬಂದು ದೇಹವನ್ನು ಕಂಡು ಹಿಡಿದರು. ಮೃತದೇಹ  ಅತ್ಯಂತ ಶಿಥಿಲವಾದ ಸ್ಥಿತಿಯಲ್ಲಿದ್ದು ಅದನ್ನು ಕೋಲ್ಡ್ ಸ್ಟೋರೇಜ್ ನಲ್ಲಿ  ಇಡುವುದು ಬಹಳ ಅಸಾಧ್ಯದ ಕೆಲಸವಾಗಿತ್ತು ಹಾಗಾಗಿ ಮಕ್ಕಳು ಬರುವ ಮೊದಲೇ  ಶಿವಾಜಿ ಪಾರ್ಕ್ ನ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ವಿಧಿಗಳನ್ನು ನಡೆಸಲಾಯಿತು ಅವರ  ಒಬ್ಬ ಮಗ ಹಾಗೂ ಮಗಳು ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಬ್ಬರೂ ಮುಂಬಯಿಗೆ ಈ ವಾರದ ಕೊನೆಯಲ್ಲಿ ಬರುವ ನಿರೀಕ್ಷೆ ಇದೆ ದೀಪಕ್ ಆಮ್ರಾ ಪುರ್ಕರ್ ರವರ  ಪತ್ನಿ ಅಂಜಲಿ ಮುಂಬಯಿ ನಗರದ  ನಾಯರ್ ಹಾಸ್ಪಿಟಲ್ ನಲ್ಲಿ ವರಿಷ್ಠ  ಪ್ಯಾಥೋಲಾಜಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ  
ಪ್ರತಿವರ್ಷ ಮಳೆಯಲ್ಲಿ ಕೊಚ್ಚಿ ಹೋಗಿ ಸಾಯುವ ಮುಂಬಯಿ ಜನರ ಸಂಖ್ಯೆ ಕಡಿಮೆ ಏನಿಲ್ಲ,.ಶಾಲೆಯ ಮಕ್ಕಳು ಮಹಿಳೆಯರು, ವೃದ್ಧರು ಹಾಗೂ ಮನೆಮಠವಿಲ್ಲದ ಜನ ಹೆಚ್ಚಾಗಿ ಸಾಯುವುದನ್ನು ನಾವು ವರ್ತಮಾನ ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಆಗಸ್ಟ್ ತಿಂಗಳ ಮಧ್ಯದಲ್ಲೇ ಒಬ್ಬ ಮಹಿಳೆ ರಸ್ತೆಯಲ್ಲಿ ನಡೆಯುತ್ತಿದ್ದಾಗ ಒಂದು ರಸ್ತೆಯ ಸಾಲುಮರ ಆಕೆಯ  ತಲೆಯಮೇಲೆ ಬಿದ್ದು ಮರಣಿಸಿದ್ದನ್ನು ನೆನೆಸಿಕೊಳ್ಳಬಹುದು.  ಆದರೆ  ಡಾ ಅಮರ ಪುರ್ಕರ್ ದುರ್ಮಣ ನಮ್ಮ ಮುಂಬಯಿ ಮಹಾ  ನಗರದ ಮುನಿಸಿಪಾಲಿಟಿ ಅಜಾಗರೂಕತೆಗೆ ಒಂದು ಸಾಕ್ಷಿ ಎನ್ನಬಹುದು !
 
ಮುಂಬಯಿ ಮಹಾನಗರ :
 
* ಭಾರತದಲ್ಲೇ ಅತ್ಯಂತ ಹೆಚ್ಚು ವರಮಾನ ತೆರಿಗೆ ಗಳಿಸುತ್ತಿರುವ ನಗರದಲ್ಲಿ ರಸ್ತೆಗಳು ಸರಿಯಾಗಿಲ್ಲ. ಎಲ್ಲಿನೋಡಿದರು ಹಳ್ಳಗಳು ಮತ್ತು ತೆರೆದ ಮ್ಯಾನ್ ಹೋಲ್ ಗಳನ್ನು ಎಲ್ಲರೂ  ನೋಡುತ್ತೇವೆ. ಪ್ರತಿದಿನ ದಿನಪತ್ರಿಕೆಗಳಲ್ಲಿ ಎಷ್ಟೋ ಕಂಪ್ಲೇಂಟ್ ಗಳು  ದಾಖಲಾಗಿದ್ದರೂ ಶಿವಸೇನ- ಬಿಜೆಪಿ ಗಟಬಂಧನದ ಸರಕಾರ  ಇಚ್ಛೆತ್ತಿಲ್ಲ ! 
* ಬಿ.ಎಂ.ಸಿ. ರಾಷ್ಟ್ರ ನಾಯಕರ ಪುಥಳಿಗಳನ್ನು ಸ್ಥಾಪಿಸುವ ನೆಪದಲ್ಲಿ ಕೋಟಿಗಟ್ಟಲೆ ಹಣವನ್ನು ತಮ್ಮ ಜೇಬಿಗೆ ಸೇರಿಸುತ್ತಿದ್ದಾರೆ  ಉದಾ ಹರಣೆಗೆ  : ನಮ್ಮ ಶಿವಾಜಿ ಮಹಾರಾಜರ ಪ್ರತಿಮೆ ಮಾಡುವ ಕೆಲಸ ನಿಜವಾಗಿಯೂ ಆವಶ್ಯಕವೇ  ? ನಮ್ಮ ದೇಶದ ಇತಿಹಾಸದಲ್ಲಿ ಶಿವಾಜಿ ಮಹಾರಾಜರದು ಅತ್ಯಂತು ಉಚ್ಚ ಸ್ಥಾನವೆನ್ನುವುದನ್ನು ಇಡೀ ಭಾರತೀಯರೆಲ್ಲಾ ಬಲ್ಲರು. ಹೋಗಲಿ ಅವರ ಪ್ರತಿಮೆಗೆ ಅದೆಷ್ಟು ಕೋಟಿ ಖರ್ಚು ನ್ಯಾಯಾವೇ  ?
 
* ರಸ್ತೆಗಳ ದುರಸ್ತಿ, ಹಳೆಯ ನೀರಿನ ಪೈಪ್ ಬದಲಾಯಿಸುವುದು,  ಒಳ್ಳೆಯ ಉದ್ಯಾನಗಳ ರಚನೆ, ಏಕೆ ಮಾಡಬಾರದು  ? ಭೈಕಲ್ಲ ದಲ್ಲಿರುವ ಪೇಂಗ್ವಿನ್ ಪಾರ್ಕ್ ಏಕೆ ಬೇಕು  ?
* ಉಷ್ಣದೇಶವಾದ ನಮ್ಮ ಭಾರತದಲ್ಲಿ  ಮಂಜುಗೆಡ್ಡೆಯ ಉಷ್ಣತೆಯಲ್ಲಿ ಜೀವಿಸುವ ಪೇಂಗ್ವಿನ್ ಉಳಿಯುವ ಸಾಧ್ಯತೆ ಇದೆಯೇ  ?  ಅದರ ವೆಚ್ಚ ನಿಜಕ್ಕೂ ನ್ಯಾಯಯುತವೇ  ?
* ಆನೆ, ರೈನೋ ಸೆರಿಸ್ , ಹುಲಿ ಸಿಂಹ, ಮೊದಲಾದ ಪ್ರಾಣಿಗಳನ್ನು ಸಾಕಲಾರದೆ  ಭೈಖಲ್ಲ ಜೂ ಅಧಿಕಾರಿಗಳು  ಅವನ್ನು ಮೈಸೂರು ಜೂ ಗೆ ಕಳಿಸಿದ ನಂತರ ಮತ್ತೇಕೆ ಇಂತಹ ವ್ಯರ್ಥ ಪ್ರಯತ್ನ ? ಹಣ ಲಪಟಾಯಿಸಲು ಅಲ್ಲವೇ ?
* ಮೇಯರ್ ಭವನ್ ಮತ್ತು ಹಳೆಯ ಬ್ರಿಟಿಷ್ ನಿರ್ಮಿತ ಕಟ್ಟಡಗಳ ಮರು ನಿರ್ಮಾಣ, ಏಕೆ ಬೇಕು  ? ವರ್ಲ್ಡ್ ಹೆರಿಟೇಜ್ ಕೋಟ್ಯಾಂತರ  ರೂಪಾಯಿ ಸುರಿಯುತ್ತಿದ್ದರೆ ಮತ್ತೆ ಬಿ. ಎಂ. ಸಿ. ಅದೇ ಕೆಲಸವನ್ನು ಏಕೆ ಮಾಡಬೇಕು  ? 
* ಒಟ್ಟಿನಲ್ಲಿ ಹಣ ಲಪಟಾಯಿಸುವ ಕೆಲಸದಲ್ಲಿ ಬಿ.ಎಂ. ಸಿ ಯ ಅಧಿಕಾರಿಗಳು ಯಾವಾಗಲು ಹೆಚ್ಚು ಹೆಚ್ಚು ಆಸಕ್ತಿ ವಹಿಸುತ್ತಾರೆ. ಇದನ್ನು ಯಾವ ಮುಂಬಯಿಕರನಿಗೆ  ಕೇಳಿದರೂ ನಾನು ದಾಖಲಿಸಿದ ಉತ್ತರವೇ ದೊರೆಯುತ್ತದೆ  ! 
 
ಇಂತಹ ಭಯಂಕರ ಮರಣ ಸಂಭವಿಸಿದಮೇಲೂ ಬಿ. ಎಂ. ಸಿ. ಕಣ್ಣು ತೆರೆಯುವುದೇ  ? ಇಂತಹ ಅಪ್ರಿಯ ಘಟನೆ ಯಾರಿಗೆ ಬೇಕಾದರೂ ಸಂಭವಿಸಬಹುದು  !