22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ವಿದ್ವತ್ತಿನ ತವರು

September 11, 2012 - 4:11pm
jayaprakash M.G

 ಮಾಹಿತಿ ಜಾಲದ ತಾಂತ್ರಿಕ ಪುತ್ರರ

ತಾರ್ಕಿಕ ಯುಗದ ಯಾಂತ್ರಿಕ ಶರಣರ

ತರ್ಕಕೆ ಸಿಗದ ತತ್ರಾಂಶ  ಸಂಭೂತರ

ನಿಃಸ್ತಂತು ಲೋಕದ ಲೌಕಿಕ ನಿಪುಣರ

ನಮ್ಮಯ ನಾಡು ಹೆಮ್ಮೆಯ ಚತುರರ

ವಿಶ್ವದ ವಿಸ್ಮಯ ವಿದ್ವತ್ತಿನ ತವರು

ಜೈವಿಕ ತಂತ್ರದ ಮಾಂತ್ರಿಕ ಮಿತ್ರರ

ಹೊಸಹೊಸ ಸೃಷ್ಟಿಯ ನವ ಹರಿಕಾರರ

ಬ್ರಹ್ಮನ ಸೃಷ್ಟಿಗೆ ಪ್ರತಿ ಸೃಷ್ಟಿಯ ಗೈಯುವ

ಅವಿರತ ಶ್ರಮದ ನವ ವಿಶ್ವಾಮಿತ್ರರ

ನಮ್ಮಯ ನಾಡು ಹೆಮ್ಮೆಯ ಚತುರರ

ವಿಶ್ವದ ವಿಸ್ಮಯ ವಿದ್ವತ್ತಿನ ತವರು  

ವರ್ಷಾಕಾಲದ ಹರ್ಷದ ಮಳೆಯನು

ಹರಿಯಲು ಬಿಡದೆ ಆಣೆಯ ಕಟ್ಟಿ

ಕುಡಿಯಲು ತೊಳೆಯಲು ಬಳಸಲು ಬೆಳೆಸಲು

ಗಂಗೆಯ ಹರಿಸುವ  ಭಗೀರಥ ಪುತ್ರರ

ನಮ್ಮಯ ನಾಡು ಹೆಮ್ಮೆಯ ಚತುರರ

ವಿಶ್ವದ ವಿಸ್ಮಯ ವಿದ್ವತ್ತಿನ ತವರು

ಹರಿಯುವ ನೀರಲಿ ಬೀಸುವ ಹವೆಯಲಿ

ಉರಿಯುವ ಬಿಸಿಲಲಿ  ನೀರಿನ ಹಬೆಯಲಿ

ಹುದುಗಿದ ಶಕ್ತಿಯ ಬಯಲಿಗೆ ತೆಗೆದು

ಇರುಳಲಿ ಬೆಳಕಿನ ಜೀವನ ಥಳುಕಿಗೆ

ಶಕ್ತಿಯ ನೀಡುವ ನವ ಶಾಕ್ತೇಯರ

ನಮ್ಮಯ ನಾಡು ಹೆಮ್ಮೆಯ ಚತುರರ

ವಿಶ್ವದ ವಿಸ್ಮಯ ವಿದ್ವತ್ತಿನ ತವರು

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.