ಈಗಿನಂತೆ 2 ಸದಸ್ಯರು ಮತ್ತು 76 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಅಂತರಜಾಲಕ್ಕೆ ಅಂಕುಶದ ವಿರುದ್ಧ ವಿಕಿಪೀಡಿಯ ಪ್ರತಿಭಟನೆ
uniquesupri's picture
ಸುಪ್ರೀತ್.ಕೆ.ಎಸ್
18
Jan
2012
ಲೇಖನ

ಅಂತರಜಾಲವನ್ನು ಪ್ರಬುದ್ಧ ಹಾಗೂ ಪರಿಣಾಮಕಾರಿ ಸುದ್ದಿ ಮಾಧ್ಯಮವಾಗಿ ಸರಕಾರಗಳು ಗುರುತಿಸಲು ಶುರುಮಾಡಿದ್ದು ಇತ್ತೀಚೆಗಷ್ಟೇ. ಅರಬ್ ಸ್ಪ್ರಿಂಗ್ ಎಂದು ಖ್ಯಾತವಾದ ಅರಬರ ನಾಡಿನ...

ಪ್ರತಿಕ್ರಿಯೆಗಳು: 8
ಹಿಟ್ಸ್ : 296
ಸುಖ- ದುಃಖ - ಖಲೀಲ್ ಗಿಬ್ರಾನನ ಕಲ್ಪನೆಯಲ್ಲಿ
gnanadev's picture
ಡಾ| ಜ್ಞಾನದೇವ್ ಮೊಳಕಾಲ್ಮುರು
19
May
2010
ಪುಟ

...

ಪ್ರತಿಕ್ರಿಯೆಗಳು: 5
ಹಿಟ್ಸ್ : 892
ಹಾವುಗಳ ಪ್ರಕರಣ
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
03
May
2011
ಬ್ಲಾಗ್ ಬರಹ

ನಮ್ಮ ಹಳ್ಳಿಮನೆಯಲ್ಲಿ ಹಾವುಗಳೆಂದರೆ, ಒಂದು ರೀತಿ ಕರೆಯದೇ ಅನಿಯಮಿತವಾಗಿಬರುವ ಅತಿಥಿಗಳೇ ಸರಿ. ಮನೆಯೊಳಗೆ ಬೆಕ್ಕುಗಳು, ಮನೆ ಮುಂದೆ ನಾಯಿ ಇದ್ದಂತೆ, ಹಾವುಗಳೂ ಮನೆಯ ಫಾಸಲೆಯ...

ಪ್ರತಿಕ್ರಿಯೆಗಳು: 6
ಹಿಟ್ಸ್ : 539
ಬಾಲಿವುಡ್‌ನ ದೊಡ್ಡಣ್ಣ ಅಮಿತಾಬ್
ವಿಶ್ವನಾಥ's picture
ವಿಶ್ವನಾಥ ಎಂ ಬಸವನಾಳಮಠ
21
Jun
2006
ಬ್ಲಾಗ್ ಬರಹ
ಸ್ವಾತಂತ್ರ್ಯ ಚಳವಳಿ ಕಾವೇರಿದ ದಿನಗಳವು. ಶಿಕ್ಷಕ, ಸಾಹಿತಿ, ವಕೀಲ, ಕಾರ್ಮಿಕರನ್ನೊಳಗೊಂಡು ಎಲ್ಲರೆದುರಿಗಿದ್ದದ್ದು ಒಂದೇ ಮಂತ್ರ; ಸ್ವಾತಂತ್ರ್ಯಕ್ಕಾಗಿ ಹೋರಾಟ - ಇನ್-ಕ್ವಿಲಾಬ್...
ಪ್ರತಿಕ್ರಿಯೆಗಳು: 4
ಹಿಟ್ಸ್ : 3,058
ಅಪ್ರಮೇಯ ಸ್ವಾಮಿ ದೇವಸ್ಥಾನ
pavu's picture
pavithra
17
Mar
2012
ಲೇಖನ

ರೇಷ್ಮೇಯ ನಾಡು ರಾಮನಗರ ಜಿಲ್ಲೆಯ,ಕರಕುಶಲ ಬೊಂಬೆಗಳ ಬೀಡು ಚನ್ನಪಟ್ಟಣ ತಾಲ್ಲೂಕಿನಿಂದ 3 ಕಿ.ಮೀ ದೂರದಲ್ಲಿರುವ ಮಳೂರು ಎಂಬ ಗ್ರಾಮದಲ್ಲಿ ಇರುವ ಅಪ್ರಮೇಯ ಸ್ವಾಮಿ ದೇವಸ್ಥಾನವು...

ಪ್ರತಿಕ್ರಿಯೆಗಳು: 24
ಹಿಟ್ಸ್ : 296
ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು!
hamsanandi's picture
ಹಂಸಾನಂದಿ
03
Feb
2010
ಬ್ಲಾಗ್ ಬರಹ

ಬಾಯಿಂದ ಹೊರಬಿದ್ದ ಮಾತೆನುವ ಅಂಬುಗಳು
ಆಯಕಟ್ಟಿಗಿರಿದು ಕೊಟ್ಟಾವು ನೋವು ಹಗಲಿರುಳು;
ಅರಿವು ನಿನ್ನಲಿ ಇರಲು ಪರರ ನೋಯಿಸುವಂಥ
ನುಡಿಯಂಬುಗಳನೆಂದೂ...

ಪ್ರತಿಕ್ರಿಯೆಗಳು: 3
ಹಿಟ್ಸ್ : 996
ಸಿಂಹಮುಖಿ - ಕಥೆ
srinivasps's picture
ಶ್ರೀನಿವಾಸ್
01
Apr
2012
ಲೇಖನ

ತುಸು ಕೆಂಪಾದ ಆ ದೊಡ್ಡ ಕಣ್ಣುಗಳು ನೂರಾರು ಟಿ.ವಿ ಪರದೆಗಳನ್ನು ಒಮ್ಮೆಲೇ ನೋಡುತ್ತಿತ್ತು ...

ಆರು ಅಡಿ ಎರಡು ಅಂಗುಲ ಎತ್ತರ...
ವಯಸ್ಸು ಐವತ್ತು ದಾಟಿದ್ದರೂ...

ಪ್ರತಿಕ್ರಿಯೆಗಳು: 6
ಹಿಟ್ಸ್ : 381
ಮನೆ ಮದ್ದು (೨) - ಅಮೃತ ಬಳ್ಳಿ
rajalaxmi's picture
ರಾಜಲಕ್ಷ್ಮಿ
18
Oct
2011
ಲೇಖನ

       ...

ಪ್ರತಿಕ್ರಿಯೆಗಳು: 9
ಹಿಟ್ಸ್ : 397
ಎಲ್ಲ ಕೊಟ್ಟವನ ವಿರುದ್ಧ ದಂಗೆ ಏಳುವದು ಹರಾಮಿಕೋರತನವಾಗುತ್ತದೆ
uday_itagi's picture
ಉದಯ್ ಇಟಗಿ
15
Mar
2011
ಲೇಖನ

ಲಿಬಿಯಾದಲ್ಲಿ ಈ ಎಲ್ಲ ಗಲಾಟೆ ಶುರುವಾಗುವದಕ್ಕೆ ಎಂಟು ದಿನ ಮುನ್ನವೇ ನಾನು ಹದಿನೈದು ದಿನದ ಮಟ್ಟಿಗೆ ನನ್ನ ಮಧ್ಯಂತರ ರಜೆಯ ಮೇರೆಗೆ ಭಾರತಕ್ಕೆ ಬಂದಿಳಿದಿದ್ದೆ. ಅಸಲಿಗೆ ನಾನು...

ಪ್ರತಿಕ್ರಿಯೆಗಳು: 14
ಹಿಟ್ಸ್ : 749
ಪತಂಜಲಿಯ ಯೋಗ
R M Rao's picture
12
Aug
2005
ಪುಟ
ಯೋಗವೆಂದರೆ ಆಸನಗಳಲ್ಲ. ಆಸನಗಳು ಪತಂಜಲಿಯ ೮ ಅಂಗಗಳುಳ್ಳ ಅಷ್ಟಾಂಗಯೋಗದ ಒಂದು ಭಾಗ ಮಾತ್ರ. ಆದರೆ ರೂಢಿಯಲ್ಲಿ ಯೋಗ ಎಂದರೆ ಆಸನಗಳು ಎಂಬ ತಪ್ಪು...
ಪ್ರತಿಕ್ರಿಯೆಗಳು: 2
ಹಿಟ್ಸ್ : 3,329

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ವ್ಯಾಲಂಟೈನ್ಸ್ ಡೇ

ವ್ಯಾಲಂಟೈನ್ಸ್ ಡೇ

.. ಪ್ರೇಮ ಜ್ವರ, ಯಾವುದೇ ಹಬ್ಬಕ್ಕೆ ಇಲ್ಲದ ಖರೀದಿ ಭರಾಟೆ ವ್ಯಾಲಂಟೈನ್ಸ್ ಡೇ ಗೆ.ಇದು ವಿಶ್ವವ್ಯಾಪಿ. ಓಹ್ ಫೆಬ್ರವರಿ ಈಸ್ "ಮಂತ್ ಆಫ್ ಲವ್" ಅಂದಳು, ನನ್ನ ಕಾಲೇಜಿನ ಓರ್ವ ಹುಡುಗಿ.  

ಈ ಪ್ರೇಮಿಗಳ ದಿನ ಉತ್ತರ ಕೊರಿಯಾದಲ್ಲಿ ಏಪ್ರಿಲ್ ೧೪ ರಂದು, ಚೀನಾದಲ್ಲಿ ಅವರ ಚಾಂದ್ರಮಾನ ಪಂಚಾಂಗದ ಪ್ರಕಾರ ಏಳನೇ ತಿಂಗಳ ಏಳನೇ ದಿನ, ದಕ್ಷಿಣ ಕೊರಿಯಾದಲ್ಲಿ ನವೆಂಬರ್ ೧೧ ರಂದು ಆಚರಿಸುತ್ತಾರೆ. ಹೃದಯದ ಜೊತೆಗೆ,  ಗ್ರೀಟಿಂಗ್ ಕಾರ್ಡ್, ಟೆಡ್ಡಿ ಬೇರ್ ವಿನಿಮಯ ಎಲ್ಲೆಡೆಯಲ್ಲೂ ಮಾಮೂಲು.

ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ ಎಂದು ಹಲುಬುವ ಬದಲು ಪ್ರೇಮಿಗಳು ತಮ್ಮ ಪ್ರೇಮದ ಪರಿಯನ್ನು ತಿಳಿಸಲು ಕಾತುರತೆಯಿಂದ ಕಾಯುವ ದಿನವಿದು. ನಿರ್ಭೀತಿಯಿಂದ ವಿಲ್ ಯು ಬಿ ಮೈ ವ್ಯಾಲಂಟೈನ್ ಎಂದು ಕೇಳುವ ಕಾಲವಿದು. ಮೆಚ್ಚಿದ ನಲ್ಲ/ನಲ್ಲೆಯರು ಐ ಲವ್ ಯೂ ಎಂದು ಕೆಂಪು ಗುಲಾಬಿ ಹೂವಿನ ವಿನಿಮಯದೊಂದಿಗೆ ತನು-ಮನಗಳ ಸಮ್ಮಿಲನದ ಕಾಲವಿದು. ಅಂದು ಪ್ರತಿಯೊಬ್ಬ ಪ್ರೇಮಿಯೂ ರೋಮಿಯೋ-ಜೂಲಿಯೆಟ್, ದೇವದಾಸ್-ಪಾರೂ, ಲೈಲಾ-ಮಜ್ನುರ ಪ್ರೇಮದಂತೆ ನಮ್ಮ ಪ್ರೇಮವೂ ಅಮರ ಎಂದು ಅಂದುಕೊಳ್ಳುವ ಯುವ ಪ್ರೇಮಿಗಳಿಗೆ ಕೊರತೆ ಏನಿಲ್ಲ ಬಿಡಿ. ಅದ್ಯಾಕೆ ಇದೇ ದಿನಕ್ಕಾಗಿ ಕಾಯಬೇಕು ಎಂದು ಕೇಳಿದ ನನ್ನ ಪ್ರಶ್ನೆಗೆ ಸಿಕ್ಕ ಉತ್ತರ " ಅವತ್ತು ಪ್ರೀತಿಸುತ್ತೇವೆ ಎಂದು ಹೇಳಿಕೊಂಡರೆ ಅದು ಸಕ್ಸಸ್ ಆಗುತ್ತೆ", ಸಂತ ವಾಲೆಂಟೈನ್ ಹರಸುತ್ತಾನೆ ಎಂಬ ನಂಬಿಕೆ.

ಹೂವು ಪ್ರೇಮದ ಸಂಕೇತ ಅದು ಸರಿ. ಗುಲಾಬಿಯೇ ಏಕೆ, ಮಲ್ಲಿಗೆ, ಸಂಪಿಗೆ ಏಕೆ ಆಗಬಾರದು ಎಂಬ ಪ್ರಶ್ನೆಗೆ " ಉದ್ದ ಜಡೆಯವಳೇ, ಮಲ್ಲಿಗೆ ಮುಡಿದವಳೇ" ನಿಮ್ಮ ಕಾಲ. ಮಲ್ಲಿಗೆ ಹೂವು ಔಟ್ ಡೇಟೆಡ್,  ಸಂಬಳ ಬಂದ ದಿನ ಅಪ್ಪ ಒಂದು ಮೊಳ ಮಲ್ಲಿಗೆ ಅಮ್ಮನಿಗಾಗಿ ತರುತ್ತಿದ್ದ ಕಾಲ -ಹಳೆಯ ಕಾಲ. ಈಗ ಬಾಬ್‍ಕಟ್ ಕಾಲ, ಹೂವು ಮುಡಿಗೇರದ ಕಾಲ.  ಮಾರುದ್ದ ಹೂವು ಮುಡಿದರೆ ಹಸು ಹಿಂದೆ ಬಂದೀತು, ಕೂದಲು ಉದುರೀತು ಎಂಬ ಚಾಟಿ ಏಟಿನ ಉತ್ತರ ಸಿಕ್ಕಿತು. ಆಗ ನನಗೆ ಅರ್ಥವಾಯಿತು ನಾವು ಹಳೆಯ ಕಾಲಕ್ಕೆ ಸಲ್ಲ-ಹೊಸ ಕಾಲಕ್ಕೆ ಒಲ್ಲ ಎಂದು. ಎಡಬಿಡಂಗಿಗಳು ಸಾರ್, ನಾವು ಎಡಬಿಡಂಗಿಗಳು ಎಂದು.>

ಪ್ರೀತಿಗೆ ಬಣ್ಣ ಇದೆಯೇ ಎಂಬ ಪ್ರಶ್ನೆ ಮೂಡಿತೇನೋ ನಿಜ, ಕೆಂಪು ಗುಲಾಬಿ ಪ್ರೇಮದ ಸಂಕೇತ, ಹಳದಿ ಗುಲಾಬಿ ಸ್ನೇಹದ ಸಂಕೇತ, ನೀಲಿ ಗುಲಾಬಿ ಕಾಮವಾಂಛೆಗೆ, ಪಿಂಕ್ ಗುಲಾಬಿ ಪ್ರೇಮಭಿಕ್ಷೆ ಇನ್ನು ಬಿಳಿಯ ಗುಲಾಬಿ ಪ್ರೀತಿ ಬೇಡ, ಶಾಂತಿ ಇರಲಿ, ಮುಂದೆ ನೋಡೋಣ ಎಂದರ್ಥವಂತೆ.

ಪ್ರೀತಿ ಎಂಬ ಎರಡಕ್ಷರ ಅವರವರ ಭಾವದ್ದು. ಅದು ಸಂಪೂರ್ಣ ಸ್ವಯಂಪ್ರೇರಿತ ಪ್ರತಿಕ್ರಿಯೆ. ಮತ್ತೊಬ್ಬ ವ್ಯಕ್ತಿಯ ಪರೋಕ್ಷ, ಅಪರೋಕ್ಷ ಬೇಡಿಕೆಗಳಿಗೆ ನೀಡುವ ಪ್ರತಿಕ್ರಿಯೆ. ಪ್ರೀತಿಯ ಅರಿವು ಹೊರವಲಯದ್ದಲ್ಲ. ತಾನು ತನ್ನ ಬಗೆಗಿನ ಆಸಕ್ತಿಯನ್ನು ಮೀರಿ ಇನ್ನೊಬ್ಬನ ನಿಜವಾದ ಗುಣ, ಸ್ವಭಾವಗಳನ್ನು ಅರಿತುಕೊಳ್ಳುವುದು. ಪ್ರೇಮಕ್ಕೆ ಕಾಲ, ದೇಶ, ಭಾಷೆ, ವಯಸ್ಸಿನ ದಿಗ್ಬಂಧವಿಲ್ಲ. ಪ್ರೀತಿ, ಪ್ರೇಮ ಎಂಬುದು ಏಕ ಮುಖವೂ ಅಲ್ಲ. ಅದು ಜೀವನದಿ ಜೊತೆಗೂಡಿ ನಡೆಯುವ ಸಂಗಾತಿ.

ಖ್ಯಾತ ಸಮಾಜಶಾಸ್ತ್ರಜ್ಞ ಎರಿಕ್ ಫ್ರಾಮ್ ಅವರ ಪ್ರಕಾರ ಪ್ರೀತಿ ಭಾವುಕ ಸಂಗತಿಯಲ್ಲ. ಮನುಷ್ಯ ತನ್ನ ಸಮಗ್ರ ವ್ಯಕ್ತಿತ್ವ ಬೆಳೆಸಿಕೊಳ್ಳಲು ಕ್ರಿಯಾಶೀಲನಾಗಿ ಪ್ರಯತ್ನಿಸದೇ ಇದ್ದರೆ ಪ್ರೀತಿಯಲ್ಲಿ ಇಡುವ ಪ್ರತಿ ಹೆಜ್ಜೆ ವಿಫಲ. ಪ್ರೀತಿ ಕೊಡುವುದೇ ಹೊರತು ತೆಗೆದುಕೊಳ್ಳುವುದಲ್ಲ. ಕೊಡುವುದು ಎಂದಾಕ್ಷಣ ತ್ಯಾಗ, ದಾನ, ಹಂಚಿಕೊಳ್ಳುವುದಲ್ಲ. ತನ್ನ ಸಾಮರ್ಥ್ಯದ ಅಭಿವ್ಯಕ್ತಿ ಕೊಡುವ ಕ್ರಿಯೆಯಲ್ಲಿ ಜೀವಂತಿಕೆ ಕಂಡುಕೊಳ್ಳುವುದು.

ಪ್ರೀತಿಯ ಬಗ್ಗೆ ಮಾತನಾಡುವಾಗ ಕೃಷ್ಣ-ರಾಧೆಯ ಉದಾಹರಣೆ ಬರುತ್ತದೆ. ಲೋಕೋದ್ಧಾರಕ, ಭಗವದ್ಗೀತೆಯನ್ನು ಬೋಧಿಸಿದ ಶ್ರೀಕೃಷ್ಣ ಪರಮಾತ್ಮನ ಪ್ರೀತಿ ಆರಾಧಿಸಲ್ಪಡುತ್ತದೆ. ಪ್ರೀತಿ-ಪ್ರೇಮ-ಪ್ರಣಯ ಅಂದಾಗ ಪುರಾಣದ ದುಶ್ಯಂತ-ಶಾಕುಂತಲೆ ಗೋಚರವಾಗುತ್ತಾರೆ. ತನ್ನ ಪ್ರೀತಿಯ ಕುರುಹಾಗಿ ಮುಮ್ತಾಜ್ ಕಟ್ಟಿಸಿದ, ಜಗತ್ತಿನ ಅಚ್ಚರಿಯಾಗಿ ನಿಂತಿರುವ ಭವ್ಯವಾದ, ಅತಿ ಸುಂದರವಾದ ತಾಜ್ ಮಹಲ್ ಶಹಜಹಾನ್-ಮುಮ್ತಾಜ್ ಪ್ರೇಮವನ್ನು ಸಾರುತ್ತಿದೆ. ಉದಯನ-ವಾಸವದತ್ತ ನೆನಪಾಗುತ್ತಾರೆ.

-->

 

Average: 4 (8 votes)
426 ಹಿಟ್ಸ್

ಪ್ರತಿಕ್ರಿಯೆಗಳು

sunilkgb's picture
15
Feb
2012
7:02

ಅರ್ಥಪೂರ್ಣ ಬರಹ .

ramvani's picture
20
Feb
2012
9:46

ವಂದನೆಗಳು, ಸುನೀಲ ದಾಸಪ್ಪನವರಿಗೆ.

abdul's picture
16
Feb
2012
3:42

ಮನದಲ್ಲಿ ಪ್ರೀತಿ ಪ್ರೇಮ ಸ್ಫುರಿಸುವ ಲೇಖನ, ವಾಣಿ. ಧನ್ಯವಾದಗಳು.

ramvani's picture
20
Feb
2012
9:44

ವಂದನೆಗಳು...ಅಬ್ದುಲ್ ಲತೀಫ್ ಸಯ್ಯದ್ ಅವರಿಗೆ.

ಸೀಮಾ.'s picture
18
Feb
2012
4:28

ನಿಮ್ಮ ಲೇಖನ ತುಂಬಾ ಚೆನ್ನಾಗಿದೆ ವಾಣಿಯವರೇ.

ನಿಮ್ಮ ಕಣತಪ್ಪಿನಿಂದಾಗಿ "ತನ್ನ ಪ್ರೀತಿಯ ಕುರುಹಾಗಿ ಷಹಜಹಾನ ಕಟ್ಟಿಸಿದ,ತಾಜಮಹಲ್" ಎಂದಾಗಬೇಕಾಗಿದ್ದು, "ತನ್ನ ಪ್ರೀತಿಯ ಕುರುಹಾಗಿ ಮಮತಾಜ್ ಕಟ್ಟಿಸಿದ,ತಾಜಮಹಲ್" ಎಂದಾಗಿದೆ.

-ಸೀಮಾ.

ramvani's picture
20
Feb
2012
9:43

ನಮಸ್ಕಾರ ಸೀಮಾ, ಕ್ಷಮಿಸಿ, ಮಮ್ಟಾಜ್^ಗೆ ಎಂದು ಇರಬೇಕಿತ್ತು. ತಿದ್ದಿದ್ದಕ್ಕೆ ಧನ್ಯವಾದಗಳು.