August 11, 2012 - 8:49pm
ಶೀಟಿ ಹೊಡೆಯೋದು. ಬಸ್ಸಿನಿಂದ ಇಳಿಯುವಾಗ ತಡಮಾಡಿದ ಇಳಿವಯಸ್ಸಿನ ಮುದುಕಿಗೆ ಕಂಡಕ್ಟರ್ ಜೋರು ಮಾಡುತ್ತಾ " ಅದೆಷ್ಟು ಹೊತ್ತು ಇಳಿತಿಯಾ? ನಾನು ಶೀಟಿ ಹೊಡೆದದ್ದು ಕೇಳಲ್ಲಿಲ್ಲವೇನು? ಇಳಿ ಬೇಗ. " ಇಳಿದ ಮುದುಕಿ, ಕಂಡಕ್ಟರ್ನನ್ನು ದುರುಗುಟ್ಟಿ ನೋಡಿ " ಶೀಟಿ ಹೊಡೆದರೆ ತಿರುಗಿನೋಡೋ ಕಾಲಎಲ್ಲ ಆಗಲೇ ಮುಗಿದು ಹೋಯಿತು. ಈಗ ಏನಿದ್ದರು ಶೀಟಿ ಹೊಡೆಯೋದು ಅಷ್ಟೇ ಬಾಕಿ ಇರೋದು " ಎಂದು ತೋರು ಬೆರಳನ್ನು ಮೇಲಕ್ಕೆ ತೋರಿಸಿದಳು. ತನ್ನ ತಪ್ಪಿನ ಅರಿವಾಗಿದ್ದರು ಏನೂ ಮಾಡಲು ಸಾಧ್ಯವಿರಲಿಲ್ಲ, ಕಾಲ ಮಿಂಚಿ ಹೋಗಿತ್ತು. ಬಾಯಿಂದ ತಪ್ಪು ಮಾತು ಉದುರಿತ್ತು. ತಲೆ ತಗ್ಗಿಸಿ ರೈಟ್ .......ಎಂದು ಬಾಗಿಲು ಎಳೆದುಕೊಂಡ ಕಂಡಕ್ಟರ್.
ಲೇಖನ ವರ್ಗ (Category):
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಶೀಟಿ ಹೊಡೆಯೋದು.
:) :)
ಉ: ಶೀಟಿ ಹೊಡೆಯೋದು.
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಚೇತನ್ ರವರೆ
ಉ: ಶೀಟಿ ಹೊಡೆಯೋದು.
ಶೀಟಿ ಹೊಡೆಯುವುದಕ್ಕೆ ಬಹಳ ಅರ್ಥವಿದೆ! ಹಲವಾರು ತರದ ಶೀಟಿಗಳಿವೆ!! ಧನ್ಯವಾದ, ಪ್ರಕಾಶರೇ.
ಉ: ಶೀಟಿ ಹೊಡೆಯೋದು.
ಆತ್ಮೀಯ ನಾಗರಾಜರೆ,
ಒಂದು ಶೀಟಿ ಯುವಕರು ಚುಡಾಯಿಸಲು ಹೊಡೆಯುವ ಶೀಟಿಯಾದರೆ, ಇನ್ನೊಂದು ಅಂತಿಮ ಶೀಟಿ. ಆದರೆ ಕೊನೆಯಲ್ಲಿ ಇಳಿವಯಸ್ಸಿನ ಮುದುಕಿ ಹೇಳಿದ ಶೀಟಿ ನೇರ ಹೃದಯಕ್ಕೆ ತಟ್ಟುತ್ತದೆ.
ಧನ್ಯವಾದಗಳು