ಶ್ರೀಮಾತೆ

ಶ್ರೀಮಾತೆ

ಕವನ

ಸುಮ್ಮನಿರುವುದು ತರವೇ ಶ್ರೀಮಾತೆ 
ಕಂದ ನಿನ್ನ ಬೇಡುವೆನು ಕನಿಕರಿಸದೆ ಎನ್ನ ||

ಸಾವಿರ ನಾಮ ಪೇಳಿ ಸ್ತುತಿಸುವೆನಮ್ಮ ನಿನ್ನ 
ಸಲಹೆನ್ನ ಸಾಲವಿತ್ತು ಭಕ್ತಿ ಜ್ಞಾನವನ್ನ 
ತೀರಿಪೆ ನಿನ್ನ ಸಾಲ ತೊದಲುತ್ತ ನಿನ್ನ ನಾಮ 
ಧ್ಯಾನಿಪೆ ನಿನ್ನ ಮೂರ್ತಿ ಧರಿಸುತ್ತಾ ಮನದಲ್ಲಿ ||೧||

ಬಡವನು ನಾನಿಂದೂ ಬೇಡುತಿಹೆನು ತಾಯೆ 
ಜ್ಞಾನ ಭಿಕ್ಷವ ನೀಡಿ ಗುರಿಯ ತೋರಿಸು ಮಾಯೆ 
ಅಡಿಗಡಿಗೆರಗುವೆ ಅಜ್ಞಾನಿ ಮೂಢ ನಾನು 
ಆಶ್ರಿತಜನವತ್ಸಲೆ ಆಶ್ರಯ ನೀಡು ನೀನು ||೨||
ಅಂಬಾಸುತ