ಸಂಬಂಧಗಳು

ಸಂಬಂಧಗಳು

ಕವನ

ಹುಟ್ಟಿದೊಡನೆ ಶುರುವಾಗುವ ಸಂಬಂಧ

ತಂದೆ ತಾಯಿಯ ಪ್ರೀತಿಯ ಸಂಬಂಧ

ನಂತರದಿ ಅಣ್ಣ, ಅಕ್ಕನ ನಲ್ಮೆಯ ಸಂಬಂಧ

 

ರಕ್ತ ಹಂಚಿಕೊಂಡು ಹುಟ್ಟಿದ ಸಂಬಂಧಗಳು

ಒಂದೆಡೆಯಾದರೆ ಬಂಧು ಬಾಂಧವರ

ಆತ್ಮೀಯ ಸಂಬಂಧಗಳು ಮತ್ತೊಂದೆಡೆ

 

ಮದುವೆಯೊಂದಿಗೆ ಶುರುವಾಗುವುದು

ಜೀವನ ಸಂಗಾತಿಯ ಮಧುರ ಸಂಬಂಧ

ಬೆಳೆಯುತ್ತಲೇ ಸಾಗುವುದು ಈ ಸಂಬಂಧಗಳು

 

ನೋವು ನಲಿವು ಕಷ್ಟ ಸುಖ ಎಲ್ಲವೂ ಉಂಟು ಸಂಬಂಧಗಳಲಿ

ಸ್ನೇಹ ಪ್ರೀತಿ ದ್ವೇಷ ಅಸೂಯೆ ಏನೇ ಇದ್ದರೂ ಈ ಸಂಬಂಧಗಳಲಿ

ಕಡಿದುಕೊಂಡರೂ ಕಡಿಯಲಾರದು ಈ ಸಂಬಂಧಗಳು

 

ಕಡಿದುಕೊಂಡರೂ ಕಡಿಯಲಾರದು ಈ ಸಂಬಂಧಗಳು