ಈಗಿನಂತೆ 2 ಸದಸ್ಯರು ಮತ್ತು 73 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಸೃಷ್ಟಿಕರ್ತನಾಗುವ ಹಾದಿಯಲ್ಲಿ...
naasomeswara's picture
ನಾ.ಸೋಮೇಶ್ವರ
26
May
2010
ಬ್ಲಾಗ್ ಬರಹ

ಮೇ ೨೦, ೨೦೧೦.

ಅಮೆರಿಕದ ಕ್ಯಾಲಿಫೋರ್ನಿಯದಲ್ಲಿರುವ ಜೆ.ಕ್ರೈಗ್ ವೆಂಟರ್ ಇನ್ಸ್ಟಿಟ್ಯೂಟ್ ತಾನು ಸ್ವ-ವಿಭಜಿಸುವ ಸಂಯೋಜಿತ ಬ್ಯಾಕ್ಟೀರಿಯವನ್ನು ಸೃಜಿಸಿರುವುದಾಗ...

ಪ್ರತಿಕ್ರಿಯೆಗಳು: 11
ಹಿಟ್ಸ್ : 860
ಪಕ್ಷಿನೋಟ - ಸೆಪ್ಟೆಂಬರ (೨೦೧೧) ಮಾಸದಲ್ಲಿ ಸಂಪದ
partha1059's picture
ಪಾರ್ಥಸಾರಥಿ
01
Oct
2011
ಲೇಖನ

     ...

ಪ್ರತಿಕ್ರಿಯೆಗಳು: 51
ಹಿಟ್ಸ್ : 221
ಗುರುವಿನ ಗುಲಾಮನಾಗುವವರೆಗೂ ದೊರೆಯದಾ ’ಕ್ರಿಯೆಟಿವಿಟಿ’? --ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ: ಭಾಗ ೮
anilkumar's picture
ಎಚ್.ಎ. ಅನಿಲ್ ಕುಮಾರ್
02
Jun
2010
ಪುಟ

                      ...

ಪ್ರತಿಕ್ರಿಯೆಗಳು: 3
ಹಿಟ್ಸ್ : 875
ನಾಲ್ಕನೆಯ ದೀಪಾವಳಿ
suchara's picture
26
Jan
2007
ಪುಟ
ಮಾವನ ಮನೆಯಲ್ಲಿ ಅಳಿಯನ ಮೊದಲ ದೀಪಾವಳಿ ಬಗ್ಗೆ ನೀವೆಲ್ಲ ಕೇಳಿರುವುದು ಸಾಮಾನ್ಯ. ಇಲ್ಲವೇ ನೀರು ತುಂಬುವ ಹಬ್ಬದ ದಿನ ಹಂಡೆ ಕದೆಯಲು ಹೋಗಿ 'ಮಾವನ' ಮನೆಯಲ್ಲಿ ದೀಪಾವಳಿ ಕಳೆಯುವವರ...
ಪ್ರತಿಕ್ರಿಯೆಗಳು: 6
ಹಿಟ್ಸ್ : 1,693
ಛಂದ ಪುಸ್ತಕ ಆಹ್ವಾನ
ಸುಮ ನಾಡಿಗ್'s picture
ಸುಮ ನಾಡಿಗ್
27
Dec
2011
ಲೇಖನ

ಛಂದ ಪುಸ್ತಕದ ವಸುಧೇಂದ್ರ ಅವರು ಕಳುಹಿಸಿದ ಮೈಲ್ ನಿಂದ:

ಳೆದ ಏಳು ವರುಷಗಳಿಂದ...

ಪ್ರತಿಕ್ರಿಯೆಗಳು: 0
ಹಿಟ್ಸ್ : 132
ಸ್ಕಲ್ ಮಂತ್ರ ಮತ್ತು ಜುಗಾರಿ ಕ್ರಾಸ್
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
25
Jan
2006
ಪುಟ
ಇತ್ತೀಚೆಗೆ ಎರಡು ಪುಸ್ತಕ ಓದಿದೆ . ಒಂದು ಇಂಗ್ಲೀಷಿನಿಂದ ಶ್ರೀ ಬೇಳೂರು ಸುದರ್ಶನರವರು ಮಾಡಿರುವ ಅನುವಾದ - ಸ್ಕಲ್ ಮಂತ್ರ ( ನೋಡಿ...
ಪ್ರತಿಕ್ರಿಯೆಗಳು: 1
ಹಿಟ್ಸ್ : 1,686
ಅಲ್ಲಿಸಾಬ್ ಅವರ ನಲ್ನುಡಿ ನಿಘಂಟು
olnswamy's picture
ಓ. ಎಲ್. ನಾಗಭೂಷಣ ಸ್ವಾಮಿ
28
Dec
2005
ಪುಟ
ಎಚ್. ಅಲ್ಲೀ ಸಾಬ್ ಕನ್ನಡ ಪ್ರಾಥಮಿಕ ಶಾಲೆಯ ಉಪಾಧ್ಯಾಯರಾಗಿದ್ದರು. ೧೯೩೦ ರಿಂದ ೧೯೫೫ರವರೆಗೆ ಶ್ರಮಪಟ್ಟು ಸಿದ್ಧಪಡಿಸಿದ ಕನ್ನಡ ಕನ್ನಡ ನಿಘಂಟು ೨೦೦೫ರಲ್ಲಿ ಶ್ರೀ ಬೆಳಗೆರೆ...
ಪ್ರತಿಕ್ರಿಯೆಗಳು: 7
ಹಿಟ್ಸ್ : 2,084
ಹಂಸ ಹಾಡುವ ಹೊತ್ತು - ೨
karababu's picture
Kurnool Ramesh Babu
09
Jun
2011
ಲೇಖನ
ಶೃತಿ ಸೇರಿದ ಸಮಯ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮೂರ್ತಿಯವರು ತಮ್ಮ ಸ್ವಸಾಮರ್ಥ್ಯದಿಂದಲೇ ಮೇಲೆ ಬಂದಿದ್ದರು. ಸರ್ಕಾರಿ ಕೆಲಸದಲ್ಲಿದ್ದು ಸಂಬಳವೊಂದೇ ಅವರಿಗೆ ಸಂಪಾದನೆಯ...
ಪ್ರತಿಕ್ರಿಯೆಗಳು: 16
ಹಿಟ್ಸ್ : 631
ಸಾವೆಂಬ ಬದುಕಿನ ಚರಮಗೀತೆಯ ಸುತ್ತ ( ಲೇಖನ )
H A Patil's picture
ಹನುಮಂತ ಪಾಟೀಲ
21
Jan
2012
ಲೇಖನ

ಹುಟ್ಟು ಸಾವುಗಳು ಈ ಜಗದ ಜೀವಶಾಶಿಗಳ ಎರಡು ಮುಖಗಳು, ಮನುಷ್ಯ ಜೀವಿಯೂ ಇದಕ್ಕೆ ಹೊರತಲ್ಲ. ಈ ಸಾವಿನ ಛಾಯೆ ಮತ್ತು ಅದರ ಭಯ ಪ್ರತಿಯೊಬ್ಬನಲ್ಲೂ ಅವ್ಯಕ್ತವಾಗಿ ಮನೆ ಮಾಡಿರುತ್ತದೆ....

ಪ್ರತಿಕ್ರಿಯೆಗಳು: 5
ಹಿಟ್ಸ್ : 111
ಅನನ್ಯ ಅಲ್ಲಮ ೫ (೨)
csomsekraiah's picture
ಸಿ ಸೋಮಶೇಖರಯ್ಯ
26
Jun
2010
ಪುಟ

 

...
ಪ್ರತಿಕ್ರಿಯೆಗಳು: 0
ಹಿಟ್ಸ್ : 794

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಸಖೀಗೀತ - ಒಂದು ಹೊಸ ಓದು

ಸಖೀಗೀತ - ಒಂದು ಹೊಸ ಓದು

          ಶ್ರೇಷ್ಠ ಕಾವ್ಯಗಳ ಮರು ಓದು ನಿಂತಾಗ ಅವು ಗೊಡ್ಡು ಅಕಾಡೆಮಿಕ್ ವಿಶ್ಲೇಷಣೆ, ಕಸರತ್ತುಗಳಲ್ಲಿ ನವೆಯುತ್ತವೆ ಇಲ್ಲವೆ ವಸ್ತು ಪ್ರದರ್ಶನಾಲಯದ ಸ್ಪೆಸಿಮನ್ ಆಗಿಬಿಡುತ್ತವೆ. ಬೇಂದ್ರೆಯವರ ಸಖೀಗೀತದ ಇಂದಿನ ಪ್ರಸ್ತುತತೆಯನ್ನು ಮತ್ತೆ ನೆನೆಯುವ ಅನುಮತಿಗಾಗಿ ಈ ಪೂರ್ವಪೀಠಿಕೆಯನ್ನು ಹೇಳಬೇಕಾಯಿತು. ಬೇಂದ್ರೆಗೆ ಕನ್ನಡ ಮೇಘದೂತವನ್ನು ಬರೆದೂ ತೃಪ್ತಿಯಾಗದೇ ಸಖೀಗೀತವನ್ನು ಕೈಗೆತ್ತಿಕೊಂಡಿರಬಹುದು ಎಂದು ಒಮ್ಮೊಮ್ಮೆ ಅನುಮಾನ ಉಂಟಾಗುತ್ತದೆ (ಕಾಲಾನುಕ್ರಮಣಿಕೆಯ ದೃಷ್ಟಿಯಿಂದಲೂ ಮೊದಲು ರಚನೆಯಾದದ್ದು ಕನ್ನಡ ಮೇಘದೂತವೇ, ಅನಂತರ ಸಖೀಗೀತದ ರಚನೆಯಾಯಿತು. ಪ್ರಕಟಣೆಯಾದ ಇಸವಿಗಳಲ್ಲಿ ವ್ಯತ್ಯಾಸವಿದೆ).

          ಈವರೆಗಿನ ಎಲ್ಲ ಪ್ರೇಮಕಾವ್ಯಗಳೂ ವಿಪ್ರಲಂಭ ಶೃಂಗಾರವನ್ನು (ವಿಪ್ರಲಂಭ ಶೃಂಗಾರ: ಗಂಡು-ಹೆಣ್ಣುಗಳು ಬೇರ್ಪಟ್ಟ ಸ್ಥಿತಿಯ ವರ್ಣನೆ, ಸಂಭೋಗ ಶೃಂಗಾರ: ಗಂಡು ಹೆಣ್ಣುಗಳು ಸೇರಿದ ಸ್ಥಿತಿಯ ವರ್ಣನೆ) ವರ್ಣಿಸುವ ಕಾವ್ಯಗಳಾಗಿವೆ. ಗಂಡು ಹೆಣ್ಣುಗಳು ಬೇರ್ಪಟ್ಟಾಗ ಮಾತ್ರ ಅವರ ನಡುವಿನ ಪ್ರೀತಿ ದೊಡ್ಡದಾಗಿ ಕಾಣಿಸಿಕೊಳ್ಳುವುದು ಎಂದು ಹಿಂದಿನ ಕವಿಗಳು ಭಾವಿಸಿದರು. ಕಾವ್ಯದಲ್ಲಿ ಒಂದು ವೇಳೆ ಗಂಡು ಹೆಣ್ಣುಗಳು ಸೇರಿಬಿಟ್ಟರೆ ಅಲ್ಲಿಂದಾಚೆ ಸ್ವಾರಸ್ಯವಿರುವುದಿಲ್ಲ. ಸಂಭೋಗ ಶೃಂಗಾರದಲ್ಲಿಯೂ ಸ್ವಾರಸ್ಯ ಇರುವುದಾದರೂ ಅದು ವೈಯಕ್ತಿಕ ನೆಲೆಯದ್ದಾಗಬಹುದು ಎಂದು ಭಾವಿಸಿದ ಹಿಂದಿನ ಎಲ್ಲ ಕವಿಗಳೂ ಅದನ್ನು ಕಾವ್ಯದ ವಸ್ತುವನ್ನಾಗಿ ಮಾಡಿಕೊಳ್ಳಲು ಹಿಂಜರಿದರು. ಇದುವೆ ಬೇಂದ್ರೆಗೆ ಕಾಳಿದಾಸನ ಮೇಘದೂತದಲ್ಲಿ ಕಂಡು ಬಂದ ಲೋಪ. ಈ ಲೋಪವನ್ನು ತುಂಬಿಕೊಡಲೆಂದೇ ಅವರು ’ಸಖೀಗೀತ’ವನ್ನು ಬರೆದದ್ದು. ಸಾಮಾನ್ಯ ಕವಿಗಳು ಅನ್ಯಭಾಷೆಯ ಕಾವ್ಯದ ಚೆಲುವನ್ನು ಕಂಡು ಬೆರಗಾಗಿ ಅದನ್ನು ಕನ್ನಡಕ್ಕೆ ತರಲು ಆಶಿಸಿದರೆ, ಕುವೆಂಪು, ಬೇಂದ್ರೆಯಂತಹ ಕವಿಗಳು ಆ ಉದ್ದೇಶಕ್ಕಾಗಿ ಕಾವ್ಯಗಳನ್ನು ಅನುವಾದಿಸಲಿಲ್ಲ. ಕನ್ನಡದ ಮೂಲಕವೇ ಅನ್ಯಭಾಷೆಯ ಕಾವ್ಯಗಳ ಲೋಪದೋಷಗಳನ್ನು ಸರಿಪಡಿಸಲು ಪ್ರಯತ್ನಿಸಿದರು (ಕುವೆಂಪು ಅವರ ರಾಮಾಯಣ ದರ್ಶನಂ ಕೂಡ ವಾಲ್ಮೀಕೀ ರಾಮಾಯಣದ ದಾರ್ಶನಿಕ ಕೊರತೆಗಳನ್ನು ನಿವಾರಿಸುವ ಪ್ರಯತ್ನವಾಗಿದೆ). ಹಾಗೆಯೇ ಬೇಂದ್ರೆಯವರು ಕಾಳಿದಾಸನ ಮೇಘದೂತವನ್ನು ಸಂಭೋಗ ಶೃಂಗಾರದ ನೆಲೆಯಲ್ಲಿ ಮುಂದುವರೆಸಲು ಸಖೀಗೀತವನ್ನು ಬರೆದದ್ದು. ಸಖೀಗೀತವು ’ಯಕ್ಷ-ಯಕ್ಷಿ’ಯರು ಸೇರುವ ಘಟನೆಯಿಂದ ಆರಂಭವಾಗುತ್ತದೆ. ’

          ಕರುಳಿನ ತೊಡಕನ್ನು ಕುಸುರಾಗಿ ಬಿಡಿಸಿಟ್ಟು ತೊಡವಾಗಿ ತಿರುಗೊಮ್ಮೆ ನಾ ಧರಿಸಲೇ?’ ಎಂಬ ತರಹದ ಸಾಲಗಳನ್ನು ಮೆಚ್ಚಿಕೊಳ್ಳುವಾಗಲೂ ತುಂಬ ಸಲ ’ತೊಡವು’ (ಒಡವೆ) ಎಂಬ ಪದ ನಮ್ಮ ಲೋಭ ಹಾಗು ಕೃಪಣ ಪ್ರವೃತ್ತಿಗಳನ್ನು ಜಾಗೃತಗೊಳಿಸಿರುತ್ತದೆ. ಇಂದು ಈ ಲೋಭಬುದ್ಧಿಯೇ ಬಹುತೇಕ ಗಂಡು ಹೆಣ್ಣುಗಳ ಸಂಬಂಧದ ಗೌರವವನ್ನು ಸುಲಭವಾಗಿ ಛಿದ್ರಗೊಳಿಸುತ್ತಿರುವುದು. ’ಸಖೀಗೀತ’ ಕಾವ್ಯದುದ್ದಕ್ಕೂ ಬಡತನದ ನಿರೂಪಣೆ ಬರುವುದಾದರೂ ಅಲ್ಲಿ ಬಡತನ ಸಂಬಂಧದ ವ್ಯವಸಾಯಕ್ಕೆ ಬಾಧಕವಾಗುವುದಿಲ್ಲ. ನಾವಿಂದು ಬದುಕುತ್ತಿರುವ ಕಾಲಮಾನದಲ್ಲಿ ’ಸಖೀಗೀತ’ದಿಂದ ಏನನ್ನು ಕಲಿಯಬಹುದು ಎಂಬುದು ನಮಗೆ ಮುಖ್ಯವಾಗಬೇಕು. ಬೇಂದ್ರೆ ತನ್ನ ಕೈಹಿಡಿದವಳನ್ನು ಸತಿ ಎನ್ನದೆ ’ಸಖಿ’ ಎಂದು ಏಕೆ ಕರೆಯುತ್ತಾರೆ ಎಂಬ ಜಿಜ್ಞಾಸೆ ತುಂಬ ಕುತೂಹಲಕಾರಿ. ಲೋಕದ ಜನ ’ಗರ್ಲ್‌ಫ್ರೆಂಡ್’ನ್ನು ಹೆಂಡತಿಯರನ್ನಾಗಿಸಿಕೊಳ್ಳುತ್ತಿದ್ದರೆ ಸಖೀಗೀತದಲ್ಲಿ ಬೇಂದ್ರೆ ಹೆಂಡತಿಯನ್ನೇ ’ಗರ್ಲ್‌ಫ್ರೆಂಡ್’ ಆಗಿಸಿಕೊಳ್ಳಲು ಪ್ರಯತ್ನಿಸುತ್ತಾರೆ’ ಸಖೀಗೀತಕ್ಕೆ ಇದು ತುಂಬ ಲಘುವಾದ ವ್ಯಾಖ್ಯಾನ ಅನ್ನಿಸಬಹುದಾದರೂ ಬೇಂದ್ರೆಯ ಈ ಸಖಿಯನ್ನಾಗಿಸಿಕೊಳ್ಳುವ ಪ್ರಯತ್ನದ ಹಿಂದೆ ಗಹನವಾದ ತಾತ್ವಿಕ ಸ್ಪಷ್ಟತೆ ಹಾಗು ನಿಷ್ಟೆ ಇದೆ.

          ಪುಸ್ತಕ ಓದುವುದರಿಂದ, ದೇಶ ಸುತ್ತುವುದರಿಂದ ಮನುಷ್ಯನ ಉದ್ಧಾರವಾಗುವುದಿಲ್ಲ (ಜಿಜ್ಞಾಸೆ - ಗಂಗಾವತರಣ), ಬದಲಿಗೆ ತಂದೆ, ತಾಯಿ, ಹೆಂಡತಿ, ಮಗ, ಇತ್ಯಾದಿ ಸಂಬಂಧಗಳ ವ್ಯವಸಾಯದಲ್ಲಿ, ಈ ಸಂಬಂಧಗಳನ್ನು ಸರಿಯಾಗಿ ನಡೆಸಿಕೊಳ್ಳುವುದರಲ್ಲಿ ಮನುಷ್ಯನ ನಿಜವಾದ ವಿಕಾಸವಿದೆ ಎಂದು ಬೇಂದ್ರೆ ನಂಬಿದ್ದರು. ಇಲ್ಲಿ ’ಸರಿಯಾಗಿ’ ಎಂದರೆ ನೈತಿಕವಾಗಿ, ಕೌಟುಂಬಿಕವಾಗಿ ’ಸರಿಯಾಗಿ’ ಎಂದರ್ಥವಲ್ಲ. ಎಲ್ಲ ಕೌಟುಂಬಿಕ, ಸಾಮಾಜಿಕ, ಆಧ್ಯಾತ್ಮಿಕ ಸಂಬಂಧಗಳೂ ಕೊನೆಗೆ ಸಖ್ಯವಾಗಿ ಮಾರ್ಪಡಬೇಕು ಎಂದು ಬೇಂದ್ರೆ ತಿಳಿದಿದ್ದರು. ಅವರ ದೃಷ್ಟಿಯಲ್ಲಿ ಸಖ್ಯ ಎಂಬುದು ಅಸಾಮಾಜಿಕವಾದುದು, ಅದು ಎಲ್ಲ ಮಾನವೀಯ ಸಂಬಂಧಗಳ ಅಂತಿಮ ಸ್ವರೂಪವಾಗಿದೆ. ಗಂಡ-ಹೆಂಡತಿ, ತಂದೆ-ಮಗ, ಗುರು-ಶಿಷ್ಯ ಇವೇ ಮೊದಲಾದ ಸಂಬಂಧಗಳು ಕೊನೆಯವರೆಗೂ ಅದದೇ ರೂಪದಲ್ಲಿ ಉಳಿದುಕೊಂಡಿದ್ದರೆ ಆಂತಹ ಸಂಬಂಧಗಳು ಬೆಳವಣಿಗೆ ನಿಲ್ಲಿಸಿ ಕೊಳೆತು ನಾರುತ್ತಿವೆ ಎಂದು ಬೇಂದ್ರೆ ಭಾವಿಸುತ್ತಾರೆ. ಕೊನೆಗೆ ಭಕ್ತ-ಭಗವಂತನ ಸಂಬಂಧವೂ ಸಖ್ಯವಾಗಬೇಕು ಎಂಬುದು ಬೇಂದ್ರೆ ಕಾವ್ಯದ ಅಂತಿಮ ವಿವೇಕವಾಗಿದೆ. ಏಕೆಂದರೆ ಸಖ್ಯವಲ್ಲದ ಎಲ್ಲ ಮಾನವ ಸಂಬಂಧಗಳೂ ಆಂತರ್ಯದಲ್ಲಿ ಕೆಲವು ಬಗೆಹರಿಯದ ವೇದನೆಗಳನ್ನು ಹೊಂದಿರುತ್ತವೆ. ಪ್ರಾಮಾಣಿಕನಾದ ಪ್ರತಿಯೊಬ್ಬ ತಂದೆಗೂ, ಮಗನಿಗೂ, ಗಂಡನಿಗೂ, ಗುರುವಿಗೂ ತನ್ನ ಸಂಬಂಧಿಗೆ ತನ್ನಿಂದ ಸಲ್ಲಬೇಕಾದ್ದು ನ್ಯಾಯವಾಗಿ ಸಂದಿಲ್ಲ ಎಂದು ತಿಳಿದಿರುತ್ತದೆ. ಈ ವೇದನೆಯೇ ಅವರ ನಡುವೆ ಬಗೆಹರಿಯದ ಘರ್ಷಣೆ ಉಂಟು ಮಾಡುವುದು. ಸಖೀಗೀತದಲ್ಲಿಯೂ ತಂದೆ, ಮಗ, ತಾಯಿ, ಹೆಂಡತಿ, ಇತ್ಯಾದಿ ಪಾತ್ರಗಳು ವಿವಿಧ ಸಂಬಂಧಗಳಲ್ಲಿ ಸಿಗುವ ಸುಖದ ತೃಪ್ತಿಗೆ ತಣಿಯದೇ, ದುಃಖದ ಜಿಗುಪ್ಸೆಗೆ ಹೇಸದೆ, ಸುಖದುಃಖವಲ್ಲದ ಇನ್ನಾವುದೇ ಸ್ಥಿತಿಯಲ್ಲೂ ಸ್ಥಾವರಗೊಳ್ಳದೇ ಒಂದೇ ಸಮನೆ ಸಂಚಾರೀ ಸ್ಥಿತಿಯಲ್ಲಿ ಇರುತ್ತದೆ.

          ಎಲ್ಲ ಸಾಮಾಜಿಕ, ಕೌಟುಂಬಿಕ ಸಂಬಂಧಗಳೂ ಮನುಷ್ಯ ಸಹಜ ಪ್ರೀತಿಯ ಜೊತೆಗೆ ಕೆಲವು ಹೊಣೆಗಾರಿಕೆಗಳನ್ನು ಕೂಡ ಹೊರಿಸಿ ಹೃದಯಗಳ ನಡುವೆ ಯಾರಿಗೂ ಗೆಲುವಿರದ ಯುದ್ಧಗಳನ್ನು ಘೋಷಿಸಿಬಿಟ್ಟಿರುತ್ತವೆ. ಆದರೆ ಸಖ್ಯ ಹಾಗಲ್ಲ. ಅದು ಮಾನವ ಸಹಜ ಪ್ರೀತಿಯನ್ನು ಈ ಕೊನೆಯಿರದ ಯುದ್ಧದಿಂದ ಪಾರು ಮಾಡುತ್ತದೆ. ಸಖ್ಯದಲ್ಲಿ ಮನುಷ್ಯನು ಹಂಗು, ಹೊಣೆಗಾರಿಕೆಗಳಿಂದ ಬಿಡುಗಡೆ ಪಡೆದು ಮೊದಲ ಬಾರಿಗೆ ಸಹಜ ಪ್ರೀತಿಯ ರುಚಿ ನೋಡುತ್ತಾನೆ. ಹೀಗೆ ಲೋಕದ ಹಂಗು, ಹೊಣೆಗಾರಿಕೆಗಳಿಂದ ಮುಕ್ತನಾದ ಮನುಷ್ಯನ ಪಾಲಿಗೆ ಇಡೀ ಅಸ್ತಿತ್ವವೇ ಸಖ್ಯಭಾವದ್ದಾಗುತ್ತದೆ. ಈ ದೃಷ್ಟಿಯಿಂದ ’ಸಖೀಗೀತ’ ಬೇಂದ್ರೆಯ ಆಧ್ಯಾತ್ಮಿಕ ಸಾಧನೆಯ ಒಂದು ಅನಿವಾರ್ಯವಾದ ಹಂತವಾಗಿದೆ. ಬುದ್ಧ ಕಠೋರ ಮನಸ್ಸಿನಿಂದ ಹೆಂಡತಿಯನ್ನು ತೊರೆದು ಅವಳಿಂದ ಬಿಡುಗಡೆ ಪಡೆದರೆ, ಬೇಂದ್ರೆ ಸಖ್ಯದ ನೆರವಿನಿಂದ ಹೆಂಡತಿಯಿಂದ ಬಿಡುಗಡೆ ಪಡೆಯಲು ಪ್ರಯತ್ನಿಸುತ್ತಾರೆ. ಸಖೀಗೀತ ಕವಿಯಾದವನು ಹೆಂಡತಿಗೆ ಬರೆಯುವ ’ಡೈವೋರ್ಸ್ ನೋಟೀಸ್’ ಆಗಿದೆ. ಅದು ಲೀಗಲ್ ಅಲ್ಲ, ಬಟ್ ಎ ಪೊಯೇಟಿಕ್ ನೋಟೀಸ್.

          ಈ ಸಖ್ಯವನ್ನು, ಈ ಬಿಡುಗಡೆಯನ್ನು ಬೇಂದ್ರೆ ಸಖೀಗೀತದಲ್ಲಿ ಸಾಧಿಸಿಕೊಂಡರೇ ಇಲ್ಲವೇ ಎಂಬುದನ್ನು ಇನ್ನೂ ವಿವರವಾಗಿ ಬಗೆಯಬೇಕಿದೆ. ಏಕೆಂದರೆ ನಾವು ಯಾವುದನ್ನು ಸಂಭೋಗ ಶೃಂಗಾರ ಎಂದು ಕರೆಯುವೆವೋ ಅಲ್ಲಿಯೂ ಗಂಡು ಹೆಣ್ಣುಗಳ ಐಕ್ಯ ಸಂಭವಿಸುವುದಿಲ್ಲ ಅವರ ನಡುವೆಯೂ ಅಂತರ (ಸ್ಪೇಸ್) ಇದ್ದೇ ಇರುತ್ತದೆ ಎಂಬುದು ಸಖೀಗೀತದ ನಿಲುವಾಗಿದೆ. ಇದು ವಿಷಾದಕರ ನಿಲುವಲ್ಲ, ಸ್ಪೇಸ್ ಇಲ್ಲದೇ ಯಾವುದೇ ಬೆಳವಣಿಗೆ ಸಂಭವಿಸದು. ಹಾಗಾಗಿ ಸಖೀಗೀತ ಹಿಂದಿನ ವಿಪ್ರಲಂಭದ ಶೃಂಗಾರದ ಮುಂದುವರೆದ ರೂಪವಾಗಿದೆ, ವಿಪ್ರಲಂಭದ ಆಧ್ಯಾತ್ಮಿಕ ಆಯಾಮವಾಗಿದೆ. ಆದರೆ ’ಸಖೀಗೀತ’ ಒಂದು ಅಪೂರ್ಣಕಾವ್ಯ ಎಂದು ಹೇಳುವ ಮೂಲಕ ಬೇಂದ್ರೆ ಇಂತಹ ಗೊಡ್ಡು ತೀರ್ಮನಗಳಿಗೆ ಕೂಡ ಆಸ್ಪದ ನೀಡದೇ ಹೋಗುತ್ತಾರೆ. * ೨೦೧೧, ಡಿಸೆಂಬರ್ ಕೊನೆಯ ವಾರದಲ್ಲಿ ಚಳ್ಳಕೆರೆಯ ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ಬೇಂದ್ರೆ ಕುರಿತು ನೀಡಿದ ಉಪನ್ಯಾಸದ ಕೆಲವು ಟಿಪ್ಪಣಿಗಳು.

Average: 4.9 (7 votes)
246 ಹಿಟ್ಸ್

ಪ್ರತಿಕ್ರಿಯೆಗಳು

ಭಾಗ್ವತ's picture
11
Feb
2012
8:27

ಡಾ. ವಾಸುದೇವ ಮೂರ್ತಿಯವರಿಗೆ ವಂದನೆಗಳು.
'ಸಖಿಗೀತ'ದ ಹೊಸ ಓದು ಹೊಸತನ ತುಂಬಿತು. ಅಭಿನಂದನೆಗಳು.

vasudeva.tn's picture
14
Feb
2012
6:38

thank you very much,..

sasi.hebbar's picture
14
Feb
2012
11:35

ಸಖಿಗೀತದ ವಿಮರ್ಶೆಯನ್ನು ಕೆಲವೇ ವಾಕ್ಯಗಳಲ್ಲಿ ಓದಿ ತುಂಬಾ ಸಂತಸವಾಯಿತು. ಈ ಕಾವ್ಯದ ಬಗ್ಗೆ ಜನಸಾಮಾನ್ಯರಾದ ನಮಗೆ ವಿವರಿಸಿದ್ದಕ್ಕಾಗಿ ಧನ್ಯವಾದಗಳು. ಕಾಳಿದಾಸನ ಕಾವ್ಯದಲ್ಲಿ ಕಂಡುಬಂದ ಲೋಪವನ್ನು ಸಖಿಗೀತವು ತುಂಬಿಕೊಡಲು ಯತ್ನಿಸುತ್ತದೆ ಎಂಬ ವಿಚಾರವಂತೂ, ಸಖೀಗೀತವನ್ನು ಹೊಸದಾಗಿ ಓದಲು ಸ್ಪೂರ್ತಿ ನೀಡಿದೆ. ಆದರೆ, ಆ ಮೂಲಕ ಬೇಂದ್ರೆಯವರು ಆಧ್ಯಾತ್ಮಿಕ ಸಾಧನೆಯ ಹಾದಿಯಲ್ಲಿದ್ದರು ಎಂಬ ವಿಚಾರ ಓದಿದಾಗ, ಅವೆಲ್ಲಾ ನಮಗೆ ಸುಲಭ‌ವಾಗಿ ಅರ್ಥವಾಗುತ್ತದೋ, ದಕ್ಕುತ್ತದೋ ಎಂಬ ಅನುಮಾನವೂ ಉಂಟಾಯಿತು. <ಸಖೀಗೀತ ಕವಿಯಾದವನು ಹೆಂಡತಿಗೆ ಬರೆಯುವ ’ಡೈವೋರ್ಸ್ ನೋಟೀಸ್’ ಆಗಿದೆ. ಅದು ಲೀಗಲ್ ಅಲ್ಲ, ಬಟ್ ಎ ಪೊಯೇಟಿಕ್ ನೋಟೀಸ್> ‍ ಈ ಒಬ್ಸರ್ವೇಷನ್ ಮಾತ್ರ ತುಂಬಾ ಹೊಸದಾಗಿ ನನಗೆ ಕಂಡಿದೆ. ಕವನಗೊಂದರ ಕುರಿತು ಈ ರೀತಿ ಬರೆದದ್ದನ್ನು ಓದಲಿಕ್ಕೇ ಒಂದು ಖುಷಿ; ಎ ಪೋಯೆಟಿಕ್ ನೋಟಿಸ್ ಎಂಬ ನುಡಿಗಟ್ಟು, ಎಲ್ಲಾ ಸಣ್ಣ/ದೊಡ್ಡ ಕವಿಗಳಿಗೆ ಒಂದು ಕ್ರೆಡಿಟ್ ನೀಡಿದಂತಿದೆ. ಧನ್ಯವಾದಗಳು ಸಾರ್.ಇನ್ನೂ ಈ ರೀತಿಯ ಟಿಪ್ಪಣಿ ರೂಪದ ಬರಹಗಳನ್ನು ಇದೇ ಬ್ಲಾಗ್ ನಲ್ಲಿ ದಯವಿಟ್ಟು ಪ್ರಕಟಿಸಿ.

vasudeva.tn's picture
14
Feb
2012
6:37

ಆತ್ಮೀಯರಾದ ಶಶಿಧರ್ ಅವರೆ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

hamsanandi's picture
14
Feb
2012
8:53

ಸಖೀಗೀತದ ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು. ಬಹಳ ಚೆನ್ನಾಗಿ ಬರೆದಿದ್ದೀರಿ.

ramvani's picture
15
Feb
2012
9:35

ನಮಸ್ಕಾರ,
ಸಖಿಗೀತದ ಬಗ್ಗೆ ಸರಳ-ಸುಂದರ ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು.

ವಾಣಿ ರಾಮದಾಸ್, ಸಿಂಗಪುರ

sunilkgb's picture
16
Feb
2012
6:17

"ಗಂಡ-ಹೆಂಡತಿ, ತಂದೆ-ಮಗ, ಗುರು-ಶಿಷ್ಯ ಇವೇ ಮೊದಲಾದ ಸಂಬಂಧಗಳು ಕೊನೆಯವರೆಗೂ ಅದದೇ ರೂಪದಲ್ಲಿ ಉಳಿದುಕೊಂಡಿದ್ದರೆ ಆಂತಹ ಸಂಬಂಧಗಳು ಬೆಳವಣಿಗೆ ನಿಲ್ಲಿಸಿ ಕೊಳೆತು ನಾರುತ್ತವೆ" ವೆಂಬ ಮಾತು ಇಸ್ಟವಾಯಿತು