20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸುಭಾಷಿತ

ಭರ್ತೃಹರಿಯ ಸುಭಾಷಿತತ್ರಿಶತಿ - ಒಂದು ಅವಲೋಕನ

August 31, 2007 - 6:29am
hamsanandi

ಭಾರತೀಯ ಸಾಹಿತ್ಯದಲ್ಲಿ ಸಂಸ್ಕೃತ ಸಾಹಿತ್ಯ ಅತಿ ಪುರಾತನವಾದದ್ದು. ಅತಿ ಮುಂಚೆಯಿಂದಲೇ ಸಂಸ್ಕೃತ ಕಾವ್ಯದಲ್ಲಿ ಸುಭಾಷಿತ ಎಂಬ ಪ್ರಕಾರ ಬೆಳೆದು ಬಂದಿದೆ. ರಾಮಾಯಣ, ಮಹಾಭಾರತಗಳಲ್ಲೂ, ನಂತರ ಬಂದ ಭಾಸ-ಕಾಳಿದಾಸಾದಿಗಳ ನಾಟಕ ಹಾಗೂ ಮಹಾಕಾವ್ಯಗಳಲ್ಲಿಯೂ ಸುಭಾಷಿತಗಳ ಗುಂಪಿಗೆ ಸೇರಬಹುದಾದಂತಹ ಅನೇಕ ಶ್ಲೋಕಗಳು ಕಂಡು ಬರುತ್ತವೆ. ಸುಭಾಷಿತಕ್ಕೆ ಅಕ್ಷರಶಃ ಒಳ್ಳೆಯ ನುಡಿ ಎಂದು ಅರ್ಥ. ಎಷ್ಟೋ ಬಾರಿ ಒಗಟುಗಳು, ಚಮತ್ಕಾರೀ ಪದ್ಯಗಳು ಮುಂತಾದುವುಗಳನ್ನೂ ಸುಭಾಷಿತಗಳ ಗುಂಪಿಗೆ ಸೇರಿಸುವುದು ಉಂಟು. ಎಷ್ಟೋ ಸುಭಾಷಿತಗಳನ್ನು ಬರೆದವರು ಯಾರು ಎಂಬುದು ತಿಳಿಯದಿದ್ದರೂ, ಅವು ಶತಮಾನಗಳ ನಂತರವೂ ಬಳಕೆಯಲ್ಲಿರುವುದು ಗಮನಿಸಬೇಕಾದ ಸಂಗತಿ. ಅವುಗಳ ವಸ್ತು ಜಳ್ಳಾಗಿಲ್ಲದೇ, ಗಟ್ಟಿಯಾಗಿರುವುದು ಇದಕ್ಕೆ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. Read more about ಭರ್ತೃಹರಿಯ ಸುಭಾಷಿತತ್ರಿಶತಿ - ಒಂದು ಅವಲೋಕನ

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಎರಡು ಕಣ್ಣು ಒಂದು ನಾಲಗೆ

April 21, 2009 - 3:19am
hamsanandi

ಎರ್ಡೆರ್ಡ್ ಸಲ ನೋಡಕ್ಮೊದಲು
ಆಡೋದ್ಬೇಡ ಮಾತು ಅಂತ್ಲೇ
ಕೊಟ್ಟಿರ್ರ್ಬೇಕು ಮನುಷ್ಯರ್ಗೆ
ಎರ್ಡ್ ಕಣ್ಣು - ಒಂದೇ ನಾಲ್ಗೆ!

 

ಸಂಸ್ಕೃತ ಮೂಲ:

ಈಕ್ಷಣಂ ದ್ವಿಗುಣಂ ಪ್ರೋಕ್ತಂ ಭಾಷಣಸ್ಯೇತಿ ವೇಧಸಾ |
ಅಕ್ಷಿಣಿ ದ್ವೇ ಮನುಷ್ಯಾಣಾಂ ಜಿಹ್ವಾ ತ್ವೈಕೇವ ನಿರ್ಮಿತಾ ||

-ಹಂಸಾನಂದಿ 

  Read more about ಎರಡು ಕಣ್ಣು ಒಂದು ನಾಲಗೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.
ಸರಣಿ: 

ಬೊಗಸೆಯ ಹೂವುಗಳು

April 22, 2009 - 5:32am
hamsanandi

ಬೊಗಸೆಯಲಿದ್ದರೆ ಹೂವುಗಳು
ಅಂಗೈಯೆರಡೂ ಘಮಘಮವು;
ಅಂತೆಯೆ ಪ್ರೀತಿಯು ಸುಜನರದು
ಎಡಬಲಕೆರಡಕು ಸರಿಸಮವು!

ಸಂಸ್ಕೃತ ಮೂಲ:

ಅಂಜಲಿಸ್ಥಾನಿ ಪುಷ್ಪಾಣಿ ವಾಸಯಂತಿ ಕರದ್ವಯಂ|
ಅಹೋ ಸುಮನಸಾಂ ಪ್ರೀತಿರ್ವಾಮದಕ್ಷಿಣಯೋಃ ಸಮಾ||

 -ಹಂಸಾನಂದಿ

 

  Read more about ಬೊಗಸೆಯ ಹೂವುಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಮನದಾಟ

April 22, 2009 - 1:49pm
anivaasi

subhashita1
ಸು-
ಸಂಸ್ಕೃತ ವ್ಯಾಕರಣದ ಮೇಷ್ಟ್ರು ‘ಮನಸ್ಸು’ ನಪುಂಸಕ
ವೆಂದ ಹಳೆಯ ಪಾಠದ ನೆನಪು ಮರುಕಳಿಸಿದ್ದೇ ಹುಂಬನಂತೆ
ಎಗ್ಗಿಲ್ಲದೆ ಅಲೆದಾಡಲು ಬಿಟ್ಟುಕೊಂಡೆ ಅವಳನ್ನು
ನನ್ನ ಮನದ

Read more about ಮನದಾಟ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (5 votes)
To prevent automated spam submissions leave this field empty.

ಪಾಣಿನಿಯ ತಪ್ಪು

April 23, 2009 - 3:28am
hamsanandi

ಮನಸು ಗಂಡಲ್ಲ ಹೆಣ್ಣಲ್ಲ
ಎನುವ ಪಾಣಿನಿಯ ನೆಚ್ಚಿ
ಮನವ ನಿನ್ನಲಿ ಕಳುಹಿ
ನಾನಂತೂ ಕೆಟ್ಟೆ ನಲ್ಲೆ!


ಮನವೇನೋ ನಲಿಯತಿದೆ
ನೆಲೆಸಿ ಅಲ್ಲೇನೇ; ಆದರೆ
ಪಾಣಿನಿಯ ತಪ್ಪಿಂದ
ನಾವಂತೂ ಸತ್ತೆವಲ್ಲೆ!

 

ಸಂಸ್ಸ್ಕೃತ ಮೂಲ (ಧರ್ಮಕೀರ್ತಿ) Read more about ಪಾಣಿನಿಯ ತಪ್ಪು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಆರದ ಗಾಯ

April 24, 2009 - 11:10pm
hamsanandi

ಕೊಡಲಿಯೇಟು ಬಿದ್ದರೂ
ಮರವು ಚಿಗುರಬಹುದು;
ಅಂಬಿನೇಟು ಬಿದ್ದ ಮೇಲೂ
ಗಾಯ ಮಾಯಬಹುದು;

ಕೆಡುಕರ ಕಹಿ ನುಡಿಯ
ಘೋರ ಮಾತಿನೇಟು
ಬಿದ್ದರೆಂದೂ ಮಾಯದು
ಮನಕೆ ಆದ ಏಟು.

 

ಸಂಸ್ಕೃತ ಮೂಲ:

ಸಂರೋಹತಿ ಶರೈರ್ವಿದ್ಧಂ ವರಂ ಪರಶುನಾ ಹತಂ |
ವಾಚಾ ದುರುಕ್ತಂ ಭೀಭತ್ಸಂ ನ ಸಂರೋಹತಿ ವಾಕ್‍ಕ್ಷತಮ್ ||

-ಹಂಸಾನಂದಿ

  Read more about ಆರದ ಗಾಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (7 votes)
To prevent automated spam submissions leave this field empty.
ಸರಣಿ: 

ಗೆಳೆತನ

April 28, 2009 - 2:05am
hamsanandi

ಬಲವುಳ್ಳವರ ಗೆಳೆತನವೋ
ಬಲವಿರುವವರಿಗೇ ಮೀಸಲು;
ದೀಪವಾರಿಸುವ ಗಾಳಿರಾಯ
ಕಾಳ್ಗಿಚ್ಚನು ಪುಟಗೊಳಿಸುವನು!

ಸಂಸ್ಕೃತ ಮೂಲ:

ಬಲಿನೋ ಬಲಿನಃ ಸ್ನಿಹ್ಯಂತ್ಯಬಲಂ ತು ನ ಗೃಹ್ಣತೇ|
ದಾವಂ ದೀಪಯತೇ ಚಂಡೋ ದೀಪಂ ವ್ಯಾಹತಿ ಮಾರುತಃ ||

-ಹಂಸಾನಂದಿ Read more about ಗೆಳೆತನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 
ಬ್ಲಾಗ್ ವರ್ಗಗಳು: 

ಮಾತು ಎನ್ನುವ ಒಂದೇ ಒಡವೆ

May 5, 2009 - 5:07am
hamsanandi


ಹೊಳೆವ ಕಡಗಗಳು ಚಂದಿರನ ಹೊಳಪಿರುವ ಹಾರಗಳು
ಸ್ನಾನವು ಪೂಸಿರುವ ಲೇಪಗಳು ಮುಡಿದಿರುವ ಹೂವುಗಳು
ಇವು ಅಲ್ಲ ಒಡವೆಗಳು! ನಿನಗಿರಲು ನಲ್ನುಡಿಯ ನಾಲಿಗೆಯು
ಮಾತಿನೊಡವೆಯ ಮುಂದುಳಿದೊಡವೆಗಳು ಸೊರಗುವುವು


ಸಂಸ್ಕೃತ ಮೂಲ - ಭರ್ತೃಹರಿಯ ನೀತಿಶತಕದಿಂದ

Read more about ಮಾತು ಎನ್ನುವ ಒಂದೇ ಒಡವೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಕೊರತೆಯಲೂ ಕಾಣುವ ಹೊಳಪು

May 6, 2009 - 1:27am
hamsanandi


ಒರೆಹಚ್ಚಿ ಕಿರಿದಾಗಿಸಿದ ರತುನ ಕಾಳಗದಲಿ ಪೆಟ್ಟುನು ಉಂಡು ಗೆದ್ದಿಹ ಯೋಧ
ಮದವಡಗಿದ ಆನೆ ಹಿಂಗಾರಿನಲಿ ಮಳಲದಂಡೆಯ ತೋರುತಾ ಹರಿವಹೊಳೆ
ಹುಣ್ಣಿಮೆಯ ಹಿಂದಿನಿರುಳ ಚಂದಿರ ಬೇಟದಲಿ ಬಸವಳಿದ ಹರೆಯದ ಹುಡುಗಿ
ಕೊರತೆಯಲೆ ಮೆರುಗುವರು ಕೊಡುಗೈಯಲಿ ನೀಡಿ ಸಿರಿಯಳಿದವರ ತೆರದಿ

Read more about ಕೊರತೆಯಲೂ ಕಾಣುವ ಹೊಳಪು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಬದ್ಕಿದ್ದಾಗ್ಲೇ ಸಾಯೋದ್‍ ಹೇಗೆ?

May 7, 2009 - 8:59pm
hamsanandi

ಸಾಯೋದ್ ಹೇಗಿರತ್ತೆ ಅನ್ನೋದ್ನ
ತಿಳಿಯೋದ್ ಕಷ್ಟ ಇಲ್ಲ;

ಕೇಡ್ಗಿತ್ತಿ ಹೆಂಡ್ತಿ; ಮೋಸ್ಗಾರ ಗೆಳೆಯ
ಮಾತ್ಗೆದುರಾಡೋ ಬಂಟ, ಇಲ್ವೇ
ಹಾವ್ ಹೊಕ್ಕ್ ಮನೇಲ್ವಾಸ;

ಇಷ್ಟ್ರಲ್ ಯಾವ್ದ್ ಒಂದು ಸಿಕ್ಕಿದ್ರೂ
ನಾವಿರುವಲ್ಲೇ ಗೊತ್ತಾಗತ್ತಲ್ಲ!  

ಸಂಸ್ಕೃತ ಮೂಲ  (ಗರುಡಪುರಾಣ ೧-೧೦೮-೨೫): Read more about ಬದ್ಕಿದ್ದಾಗ್ಲೇ ಸಾಯೋದ್‍ ಹೇಗೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಸರಣಿ: 

ಯಾರೆದುರು ಹೊಗಳಿಕೊಳ್ಳಬೇಕು?

May 13, 2009 - 5:08am
hamsanandi

ಬಲ್ಲವರೆದುರು ಹಿರಿಮೆಯ ಹೇಳದಿರು
ಅರಿತೇ ಅರಿಯುವರು ತಾವಾಗೇ;
ಹೇಳದಿರು ಹಿರಿಮೆಯ ಹುಂಬರೆದುರು
ಅರಿತವರ ನುಡಿಯ ಕೇಳದವರಿಗೆ!

 

ಸಂಸ್ಕೃತ ಮೂಲ:

ಬುಧಾಗ್ರೇ ನ ಗುಣಾನ್ ಬ್ರೂಯಾತ್ ಸಾಧು ವೇತ್ತಿ ಯತಃ ಸ್ವಯಂ
ಮೂರ್ಖಾಗ್ರೇSಪಿ ಚ ನ ಬ್ರೂಯಾತ್ ಬುಧಪ್ರೋಕ್ತಂ ನ ವೇತ್ತಿ ಸಃ||

-ಹಂಸಾನಂದಿ Read more about ಯಾರೆದುರು ಹೊಗಳಿಕೊಳ್ಳಬೇಕು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಮಂಗನ ಕೈಗೆ ಮಾಣಿಕ್ಯ

May 20, 2009 - 10:09pm
hamsanandi

ಆಡುವುದು ಸವಿ ನುಡಿಗಳನು ಕಡು ಕೆಡುಕರೊಡನೆ
ನೀಡುವೊಲು ಮಿದು ಹೂ ದಂಡೆಯನು ಕೋಡಗನಿಗೆ

ಸಂಸ್ಕೃತ ಮೂಲ:

ಮಾ ದದ್ಯಾತ್ ಖಲಸಂಘೇಷು ಕಲ್ಪನಾ ಮಧುರಾಗಿರಃ |
ಯಥಾ ವಾನರಹಸ್ತೇಷು ಕೋಮಲಾಃ ಕುಸುಮಸ್ರಜಃ ||

मा दद्यात् खलसङ्घेषु कल्पनामधुरागिरः।
यथा वानरहस्तेषु कोमलाः कुसुमस्रजः॥ Read more about ಮಂಗನ ಕೈಗೆ ಮಾಣಿಕ್ಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಸಂಸಾರೊಂದಿಗರೋ? ಮನೆಗಾವಲಿನರೋ?

May 22, 2009 - 9:40pm
hamsanandi

ದೂರದಿಂದಾರ ಮನೆಗೆ
ಅತಿಥಿಗಳು ಸಂತಸದಿ
ಬರುವರೋ - ಅವನೀಗ 
ದಿಟದಿ ಸಂಸಾರೊಂದಿಗ.

ಮಿಕ್ಕವರಿಗೆ ಏನೆನಬೇಕು
ಎಂದು ಕೇಳುವೆಯಾ?
ಅಲ್ಲವೇ ಅವರು ಬರಿಯ
ಮನೆಯ ಕಾವಲಿನವರು? Read more about ಸಂಸಾರೊಂದಿಗರೋ? ಮನೆಗಾವಲಿನರೋ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಸರಣಿ: 
ಬ್ಲಾಗ್ ವರ್ಗಗಳು: 

ಕೇದಗೆಯ ಕಂಪು

May 28, 2009 - 9:42pm
hamsanandi

ದೂರದ ನೆಲೆಯಿಹ ಅಗ್ಗಳ*ಗೆ ರಾಯಸ**ಕೆಂದಿವೆ ಹಿರಿಮೆಗಳು
ಹರಡಿದ ಕಂಪಿನ ಜಾಡಿನಲೆ ಕೇದಗೆಯ ಸಂದಾವು ಜೇನ್ದುಂಬಿಗಳು

ಸಂಸ್ಕೃತ ಮೂಲ:

ಗುಣಾಃ ಕರೋತಿ ದೂತತ್ವಂ ದೂರೇsಪಿ ವಸತಾಂ ಸತಾಂ|
ಕೇತಕೀಗಂಧಮಾಘ್ರಾಯ ಸ್ವಯಮಾಯಾಂತಿ ಷಟ್ಪದಾಃ ||

*ಅಗ್ಗಳ =ಉತ್ತಮ,ಶ್ರೇಷ್ಠ
**ರಾಯಸ = ದೂತ, ಹರಿಕಾರ, ಓಲೆಕಾರ

-ಹಂಸಾನಂದಿ Read more about ಕೇದಗೆಯ ಕಂಪು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಮನೆ ಹತ್ತಿ ಉರಿವಾಗ...

June 1, 2009 - 10:22pm
hamsanandi

ಕುತ್ತೊದಗಿದರೆ ಮಾಡುವುದೇನೆಂದು ಎಣಿಸಿರಬೇಕು ಮೊದಲೆ 
ಹತ್ತಿ ಉರಿವಾಗ ಮನೆ ಬಾವಿಯ ತೋಡುವುದು ತರವೆ? 

ಸಂಸ್ಕೃತ ಮೂಲ:

ಚಿಂತನೀಯಾ ಹಿ ವಿಪದಾಂ ಆದೌ ಏವ ಪ್ರತಿಕ್ರಿಯಾ |
ನ ಕೂಪಖನನಂ ಯುಕ್ತಂ ಪ್ರದೀಪ್ತೇ ವಹ್ನಿನಾ ಗೃಹೇ ||

-ಹಂಸಾನಂದಿ Read more about ಮನೆ ಹತ್ತಿ ಉರಿವಾಗ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಋಣಂ ಕೃತ್ವಾ ಘೃತಂ ಪಿಬೇತ್

June 5, 2009 - 4:04am
hamsanandi
ಮರಳಿ ಬರುವ ದಾರಿಯಿದೆಯೆ
ಉರಿದು ಬೂದಿಯಾದ ಒಡಲು?
ಇರಲಿ ಅದಕೆ ಬಿಡದ ಜತುನ
ಎರವಲಲ್ಲೆ ತುಪ್ಪವುಣಲು!

ಉರಿದು ಬೂದಿಯಾದ ಒಡಲು
ಮರಳಿ ಬರುವ ದಾರಿಯೆಲ್ಲಿ?
ಇರಲೇಬೇಕು ಬಿಡದ ಜತುನ
ಎರವಲಲ್ಲೆ ತುಪ್ಪವುಣಲು!

ಸಂಸ್ಕೃತ ಮೂಲ (ಚಾರ್ವಾಕನದ್ದು ಎಂದು ಹೇಳುವುದುಂಟು- ಸರಿಯೋ ತಪ್ಪೋ ಕಾಣೆ): Read more about ಋಣಂ ಕೃತ್ವಾ ಘೃತಂ ಪಿಬೇತ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 
ಬ್ಲಾಗ್ ವರ್ಗಗಳು: 

ಬೆಲ್ಲದ ಕಟ್ಟೆಯ ಕಟ್ಟಿ...

June 12, 2009 - 1:43am
hamsanandi
ಬೆಲ್ಲದ ಬೆಟ್ಟದ ನಟ್ಟ ನಡು
ಬೇವಿನದೊಂದು ಬೀಜವ ನೆಟ್ಟು
ಸಾವಿರ ವರುಷ ಹಾಲ್ಮಳೆಗರೆಯಲು
ಸವಿಯಾದೀತೇ ಬೆಳೆಯುವ ಬೇವು?

ಸಂಸ್ಕೃತ ಮೂಲ:

गुलपर्वतमध्यस्थं निम्बबीजं प्रतिष्टितम्।
पयोवर्षसहस्रेण निम्बः किं मधुरं यते॥

ಕೊಸರು: ಇದೇ ತಿಳಿವುಳ್ಳ ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ ಅನ್ನುವ ಬಸವಣ್ಣನವರ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ತಾಳುವಿಕೆಗಿಂತನ್ಯ ತಪವು ಇಲ್ಲ

June 17, 2009 - 3:13am
hamsanandi

ಕೊಡುವುದಕಿಂತಲೂ ಬೇರೆ ಸಿರಿಯಿಲ್ಲ
ದಿಟವಾಡುವುದಕಿಂತ ನೋಂಪಿ ಮೊದಲಿಲ್ಲ
ನಡತೆ ಒಳ್ಳಿತಿರೆ ಒಸಗೆ ಬೇರೆ ಬೇಕಿಲ್ಲ
ತಾಳ್ಮೆಗೂ ಮೀರುವ ಸೇರಿಕೆಯು ಇಲ್ಲ

ಸಂಸ್ಕೃತ ಮೂಲ - (ಚತುರ್ವರ್ಗ ಸಂಗ್ರಹ ೧-೧೦)

ನ ದಾನತುಲ್ಯಂ ಧನಮನ್ಯದಸ್ತಿ
ನ ಸತ್ಯತುಲ್ಯಂ ವ್ರತಮನ್ಯದಸ್ತಿ |
ನ ಶೀಲತುಲ್ಯಂ ಶುಭಮನ್ಯದಸ್ತಿ
Read more about ತಾಳುವಿಕೆಗಿಂತನ್ಯ ತಪವು ಇಲ್ಲ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 
ಬ್ಲಾಗ್ ವರ್ಗಗಳು: 

ತಿಳಿಗೇಡಿಗಳ ಗುರುತು

December 11, 2009 - 2:12am
hamsanandi

ತಿಳಿಗೇಡಿಗಳ ಗುರುತಿಸುವುದು ಹೇಗೆನುವಿರಾ?
ಕೇಳಿ - ಇವೆಯಲ್ಲ ಕುರುಹುಗಳು ಐದು!
ಸಿಡುಕು; ಸೊಕ್ಕು; ಪರರ ಮಾತಲುದಾಸೀನ;
ಮೊಂಡುವಾದ ಜೊತೆಗೆ ಕೆಡುಕು ತುಂಬಿದ ಮಾತು!

ಸಂಸ್ಕೃತ ಮೂಲ:

ಮೂರ್ಖಸ್ಯ ಪಂಚ ಚಿಹ್ನಾನಿ ಗರ್ವೋ ದುರ್ವಚನಂ ತಥಾ |
ಕ್ರೋಧಶ್ಚ ದೃಢವಾದಶ್ಚ ಪರವಾಕ್ಯೇಶ್ವನಾದರಃ ||

-ಹಂಸಾನಂದಿ Read more about ತಿಳಿಗೇಡಿಗಳ ಗುರುತು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.4 (5 votes)
To prevent automated spam submissions leave this field empty.
ಸರಣಿ: 

ಸಜ್ಜನರ ಸಂಗವದು ಹೆಜ್ಜೇನ ಮೆದ್ದಂತೆ

January 5, 2010 - 12:19am
hamsanandi

ಜಡತೆ ನೀಗುವುದು; ಮಾತಿನಲಿ ದಿಟವ ಬೆರೆಸುವುದು;
ಹಿರಿಮೆ ಬೆಳೆಸುವುದು; ಉಳಿದ ಕೆಡುಕನಳಿಸುವುದು;
ಮನವ ನಲಿಸುವುದು; ಜೊತೆಗೆ ಹೆಸರ ಮೆರೆಸುವುದು!
ನಲ್ಗೆಳೆಯರೊಡನಾಟ ಅದೇನ ಮಾಡದೇ ಇಹುದು?

ಸಂಸ್ಕೃತ ಮೂಲ - (ಭರ್ತೃಹರಿಯ ನೀತಿಶತಕದಿಂದ)

ಜಾಡ್ಯಂ ಧಿಯೋ ಹರತಿ ಸಿಂಚತಿ ವಾಚಿ ಸತ್ಯಮ್
ಮಾನೋನ್ನತಿಂ ದಿಶತಿ ಪಾಪಮಪಾಕರೋತಿ |
ಚೇತಃ ಪ್ರಸಾದಯತಿ ದಿಕ್ಷು ತನೋತಿ ಕೀರ್ತಿಂ
ಸತ್ಸಂಗತಿ: ಕಥಯ ಕಿಂ ನ ಕರೋತಿ ಪುಂಸಾಮ್||

-ಹಂಸಾನಂದಿ Read more about ಸಜ್ಜನರ ಸಂಗವದು ಹೆಜ್ಜೇನ ಮೆದ್ದಂತೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (6 votes)
To prevent automated spam submissions leave this field empty.
ಸರಣಿ: 

ಬಲ್ಲವನೇ ಬಲ್ಲ ಬೆಲ್ಲದ ರುಚಿಯ

January 7, 2010 - 12:17am
hamsanandi

ಅರಿತವರ ಹೊರತು ಹೆರವರು ತಿಳಿವರೆ
ಗುಣಗಳ ನಡುವಲಿ ಇರುವ ದೂರವನು?
ಮೂಗಿನ ಹೊರತು ಕಣ್ಣು ತಿಳಿವುದೆ
ಜಾಜಿ-ಮಲ್ಲಿಗೆಯಲಿ ಕಂಪು ಬೇರೆಂಬುದನು?

ಸಂಸ್ಕೃತ ಮೂಲ:

ಗುಣಾನಾಮಂತರಂ ಪ್ರಾಯಸ್ತಜ್ಞೋ ವೇತ್ತಿ ನಾಪರಃ |
ಮಾಲತೀ* ಮಲ್ಲಿಕಾಮೋದಂ ಘ್ರಾಣಂ ವೇತ್ತಿನ ಲೋಚನಂ||

-ಹಂಸಾನಂದಿ

  Read more about ಬಲ್ಲವನೇ ಬಲ್ಲ ಬೆಲ್ಲದ ರುಚಿಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.
ಸರಣಿ: 

ಕೈಗೆಟುಕುವ ದೇವರು

January 20, 2010 - 2:39am
hamsanandi

ಕೈಯಳತೆಯಲೇ ಇರುವ ತಾಯಿ-ತಂದೆ-ಗುರುಗಳನುಳಿದು
ಕೈಯಲೆಂದೂ ನಿಲುಕದ ದೈವವೆಂಬುದನೆಂತು ನೆಚ್ಚುವುದು?

ಸಂಸ್ಕೃತ ಮೂಲ (ರಾಮಾಯಣ, ಅಯೋಧ್ಯಾಕಾಂಡ ೩೦-೩೩)

ಸ್ವಾಧೀನಂ ಸಮತಿಕ್ರಮ್ಯ ಮಾತರಂ ಪಿತರಂ ಗುರುಂ |
ಅಸ್ವಾಧೀನಂ ಕಥಂ ದೈವಂ ಪ್ರಕಾರೈರಭಿರಾಧ್ಯತೇ? ||

-ಹಂಸಾನಂದಿ Read more about ಕೈಗೆಟುಕುವ ದೇವರು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಸರಣಿ: 

ಕ್ಷಮೆ ಎಂಬ ಆಯುಧ

February 19, 2010 - 1:46am
hamsanandi

ಮನ್ನಿಸುವ ಗುಣವೆಂಬ ಆಯುಧವು ಕೈಯಲಿರೆ
ಕೆಟ್ಟವರು ಏನ ತಾ ಮಾಡಬಹುದು?
ಹುಲ್ಲು ಗಿಡಗಂಟಿಯಿರದೆಡೆ ಬಿದ್ದ ಉರಿ
ತನ್ನಿಂದಲೇ ತಾ ನಂದಿ ಹೋಗುವುದು!

ಸಂಸ್ಕೃತ ಮೂಲ:

ಕ್ಷಮಾ ಶಸ್ತ್ರಂ ಕರೇ ಯಸ್ಯ ದುರ್ಜನಃ ಕಿಂ ಕರಿಷ್ಯತಿ |
ಅತೃಣೇ ಪತಿತೋ ವಹ್ನಿಃ ಸ್ವರ್ಯಮೇವೋಪಶಮ್ಯತಿ ||

क्षमा शस्त्रं करे यस्य दुर्जनः किं करिष्यति।
अतृणे पतितो वह्निः स्वयमेवोपशाम्यति॥

-ಹಂಸಾನಂದಿ

(ಇದೇ ತಾನೇ ಫೇಸ್‍ಬುಕ್ ನಲ್ಲಿ ಗೆಳೆಯರೊಬ್ಬರ ಪುಟದಲ್ಲಿ ಓದಿದ ಸುಭಾಷಿತ ಇದು) Read more about ಕ್ಷಮೆ ಎಂಬ ಆಯುಧ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 

ಕೊಡುಗೈ ದಾನಿ

March 31, 2010 - 3:11am
hamsanandi

ಜಿಪುಣನಿಗಿಂತಲು ಕೊಡುಗೈ ದಾನಿ
ಹಿಂದಿರಲಿಲ್ಲ ಮುಂದೆ ಬರಲಾರ
ತಾ ಮುಟ್ಟದ ಹಣಕಾಸೆಲ್ಲವನೂ
ಕಂಡವರಿಗುಳಿಸಿ ಹೋಗುವನಲ್ಲ!


ಸಂಸ್ಕೃತ ಮೂಲ:

ಕೃಪಣೇನ ಸಮೋ ದಾತಾ ನ ಭೂತೋ ನ ಭವಿಷ್ಯತಿ|
ಅಸ್ಪೃಶನ್ನೇವ ವಿತ್ತಾನಿ ಯಃ ಪರೇಭ್ಯಃ ಪ್ರಯಚ್ಛತಿ ||

-ಹಂಸಾನಂದಿ Read more about ಕೊಡುಗೈ ದಾನಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕತ್ತಲ ಕಳೆಯುವ ಒಬ್ಬನೆ ಚಂದಿರ

April 20, 2010 - 11:03pm
hamsanandi

ಸದ್ಗುಣಿ ಕೂಸೊಂದಿರುವುದೆ ಮಿಗಿಲು
ಬುದ್ಧಿಗೇಡಿ ನೂರಿರುವುದಕಿಂತ;
ಚುಕ್ಕಿ ಸಾಸಿರವು ಕಳೆಯದ ಕತ್ತಲು
ಚಂದ್ರನೊಬ್ಬನೇ ಕಳೆಯುವನು!

ಸಂಸ್ಕೃತ ಮೂಲ (ಸುಭಾಷಿತ ರತ್ನ ಭಾಂಡಾಗಾರದಿಂದ):

ವರಮೇಕೋ ಗುಣೀ ಪುತ್ರೋ ನ ಚ ಮೂರ್ಖಶತಾನ್ಯಪಿ |
ಏಕಶ್ಚಂದ್ರಸ್ತಮೋ ಹಂತಿ ನತಿ ತಾರಾಗಣೋSಪಿ ಚ ॥

वरमेको गुणी पुत्रो न च मूर्खशतान्यपि।
एकश्चन्द्रस्तमो हन्ति न च तारागणोऽपि च॥

-ಹಂಸಾನಂದಿ  Read more about ಕತ್ತಲ ಕಳೆಯುವ ಒಬ್ಬನೆ ಚಂದಿರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸಲಿಗೆ ತಂದೀತು ಅನಾದರ!

April 22, 2010 - 5:02am
hamsanandi

ಸಲಿಗೆ ಹೆಚ್ಚಿದರೆ ಮೂಡುವುದಸಡ್ಡೆ;
ಹಲವು ಬಾರಿ ಹೋದರೆ ಉದಾಸೀನ.
ಮಲೆಯ ಮೇಲಿರುವ ಬೇಡತಿ ಮನೆಯಲಿ
ಒಲೆಯ ಉರಿಸಲು ಗಂಧದ ಕಟ್ಟಿಗೆ!

ಸಂಸ್ಕೃತ ಮೂಲ:

ಅತಿ ಪರಿಚಯಾದವಜ್ಞಾ ಸಂತತಗಮನಾತ್ ಅನಾದರೋ ಭವತಿ|
ಮಲಯೇ ಭಿಲ್ಲ ಪುರಂಧ್ರೀ ಚಂದನತರು ಕಾಷ್ಟಂ ಇಂಧನಂ ಕುರುತೇ||

-ಹಂಸಾನಂದಿ Read more about ಸಲಿಗೆ ತಂದೀತು ಅನಾದರ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 

ಕಮ್ಮಗೋಲನ ಚತುರ ಬಿಲ್ಗಾರಿಕೆ

April 23, 2010 - 12:11pm
hamsanandi

ಹಲವು ಬಿಲ್ಲಾರರು ಇರುವರು ಜಗದಲ್ಲಿ
ಅಂಬಿನಲಿ ಒಂದನೆರಡಾಗಿ ಸೀಳುವವರು;
ಕಮ್ಮಗೋಲ*ನೋರ್ವ  ಬೇರೆತೆರದ ಬಿಲ್ಲಾಳು
ಗುರಿಯಿಟ್ಟು ಇಬ್ಬರನು ಒಂದಾಗಿಸುವವನು!

ಸಂಸ್ಕೃತ ಮೂಲ:

ಏವಸ್ತುಂ ದ್ವಿಧಾ ಕರ್ತುಮ್ ಬಹವಃ ಸಂತಿ ಧನ್ವಿನಃ ।
ಧನ್ವೀ ಸ ಮಾರ ಏವೈಕೋ ದ್ವಯೋಃ ಐಕ್ಯಃ ಕರೋತಿ ಯಃ ॥

एकवस्तुम् द्विधा कर्तुम् बहवः सन्ति धन्विनः ।
धन्वी स मार एवैको द्वयोः ऐक्यः करोति यः ॥

-ಹಂಸಾನಂದಿ
Read more about ಕಮ್ಮಗೋಲನ ಚತುರ ಬಿಲ್ಗಾರಿಕೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಅರಿವೆನ್ನುವ ಅಂಕುಶ

May 1, 2010 - 3:29am
hamsanandi

ಸಿಕ್ಕೆಡೆ ಅಲೆವುದು ಮನಸೆನ್ನುವುದು
ಸೊಕ್ಕು ಏರಿರುವ ಆನೆಯೊಲು
ಬುದ್ಧಿಗೆ ಇರಲು ಅರಿವಿನ ಅಂಕುಶ
ಇದ್ದಲ್ಲೇ ಅದು ನಿಲಬಹುದು!

ಸಂಸ್ಕೃತ ಮೂಲ (ಸುಭಾಷಿತರತ್ನ ಭಾಂಡಾಗಾರದಿಂದ):

ಮನೋ ಧಾವತಿ ಸರ್ವತ್ರ ಮದೋನ್ಮತ್ತ ಗಜೇಂದ್ರವತ್
ಜ್ಞಾನಾಂಕುಶಸಮಾ ಬುದ್ಧಿಃ ತಸ್ಯ ನಿಶ್ಚಲತೇ ಮನಃ

-ಹಂಸಾನಂದಿ
Read more about ಅರಿವೆನ್ನುವ ಅಂಕುಶ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಸಹವಾಸ ದೋಷ

May 5, 2010 - 5:40am
hamsanandi

ಕಾದ ಕಬ್ಬಿಣದ ಮೇಲೆ ಬೀಳಲು ನೀರಹನಿ ಹೆಸರಿಲ್ಲದಂತಳಿವುದು
ಕಮಲದೆಲೆಯ ಮೇಲೆ ಬೀಳಲದುವೇ ಮುತ್ತಿನ ಹೊಳಪು ತೋರುವುದು
ಸ್ವಾತಿಯಲಿ ಕಡಲ ಚಿಪ್ಪಿನಲಿ ಬಿದ್ದರೆ ಹನಿ ತಾನೆ ಮುತ್ತಾಗಿಬಿಡುವುದು
ಮೇಲು-ನಡು-ಕೀಳೆಂಬ ಹಲವು ದೆಸೆಗಳನು ಒಡನಾಟವೇ ತರುವುದು!

ಸಂಸ್ಕೃತ ಮೂಲ:


ಸಂತಪ್ತಾಯಸಿ ಸಂಸ್ಥಿತಸ್ಯ ಪಯಸೋ ನಾಮಾಪಿ ನ ಜ್ಞಾಯತೇ
ಮುಕ್ತಾಕಾರತಯಾ ತದೇವ ನಲಿನೀಪತ್ರಸ್ಥಿತಂ ರಾಜತೇ |
ಸ್ವಾತ್ಯಾಂ ಸಾಗರ ಶುಕ್ತಿಮಧ್ಯಪತಿತಂ ಸಮ್ಮೌಕ್ತಿಕಂ ಜ್ಞಾಯತೇ
ಪ್ರಾಯೇಣೋತ್ತಮಮಧ್ಯಮಾಧಮದಶಾ ಸಂಸರ್ಗತೋ ಜಾಯತೇ ||
Read more about ಸಹವಾಸ ದೋಷ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.

ಒಳಿತು

May 6, 2010 - 11:03pm
hamsanandi

ಸಿರಿಯೆಂಬುದಕಿದೆ ಕಡಲ ಅಲೆಯಂತೆ ಹೊಯ್ದಾಟ
ಹರೆಯವೋ? ಇರಬಹುದು ನಾಲ್ಕಾರು ದಿವಸ;
ಹಿಂಗಾರ ತೆಳುಮುಗಿಲಂತೆ ವಯಸು ಕಳೆವಾಗ
ಹಣದಿಂದಲೇನು? ಪರರೊಳಿತಿನಲಿ ತೊಡಗು!

ಸಂಸ್ಕತ ಮೂಲ (ಸುಭಾಷಿತ ಸುಧಾನಿಧಿಯಿಂದ)

ಸಂಪದೋ ಜಲತರಂಗವಿಲೋಲಾ
ಯೌವನಂ ತ್ರಿಚತುರಾಣಿ ದಿನಾನಿ |
ಶಾರದಾಭ್ರಪರಿಪೇಲವಮಾಯುಃ
ಕಿಂ ಧನೈಃ ಪರಹಿತಾನಿ ಕುರುಧ್ವಮ್ ||

-ಹಂಸಾನಂದಿ

ಕೊ: ಸಂಸ್ಕೃತದ ’ತ್ರಿಚತುರಾಣಿ ದಿನಾನಿ’ ಅನ್ನುವುದನ್ನು ನಾನು ಕನ್ನಡದಲ್ಲಿ ಹೆಚ್ಚು ಬಳಕೆ ಇರುವ ’ನಾಲ್ಕಾರು ದಿವಸ’ ವಾಗಿ ಮಾರ್ಪಡಿಸಿರುವೆ.


ಕೊ.ಕೊ: ಶರತ್ಕಾಲದ ಮೋಡಗಳನ್ನು ನಾನು ’ಹಿಂಗಾರಿನ ಮೋಡ’ ವಾಗಿ ಬದಲಾಯಿಸಿದ್ದೇನೆ. Read more about ಒಳಿತು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಗ್ರಹಬಲ

May 8, 2010 - 2:52am
hamsanandi

ರಟ್ಟೆಯಲಿ ಕಸುವಿಲ್ಲದವಗೆ ಗಟ್ಟಿ ಮನಸು ಇಲ್ಲದವಗೆ
ನೆರವನು ನೀಡುವನೆಂತು ಆಗಸದಲಿರುವ ಚಂದಿರನು?


ಸಂಸ್ಕೃತ ಮೂಲ:

ಯೇಷಾಂ ಬಾಹುಬಲಂ ನಾಸ್ತಿ ಯೇಷಾಂ ನಾಸ್ತಿ ಮನೋಬಲಮ್ |
ತೇಷಾಂ ಚಂದ್ರಬಲಂ ದೇವಃ ಕಿಂ ಕರೋತಿ ಅಂಬರೇ ಸ್ಥಿತಮ್ ||

-ಹಂಸಾನಂದಿ Read more about ಗ್ರಹಬಲ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ನಾಟ್ಯಗುರುವಿಗೊಂದು ನಮನ

June 30, 2010 - 3:03am
hamsanandi

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪರೋಪಕಾರ

July 9, 2010 - 6:31am
hamsanandi

ಅರಳಿಸುವ ತಾವರೆಗಳ ಆ ನೇಸರ
ಬಿರಿಯಿಸುವ ನೈದಿಲೆಗಳನು ಚಂದಿರ
ಕೋರದೇ ಮಳೆಸುರಿಸೀತು ಮುಗಿಲು
ಹೆರವರೊಳಿತ ತಾವೇ ನಡೆಸುವರಗ್ಗಳರು


ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ):

ಪದ್ಮಾಕರಂ ದಿನಕರೋ ವಿಕಚೀಕರೋತಿ
ಚಂದ್ರೋ ವಿಕಾಸಯತಿ ಕೈರವಚಕ್ರವಾಲಮ್

ನಾಭ್ಯಾರ್ಥಿತೋ ಜಲಧರೋSಪಿ ಜಲಂ ದದಾತಿ
ಸಂತಃ ಸ್ವಯಂ ಪರಹಿತೇ ನಿಹಿತಾಭಿಯೋಗಾಃ



पद्माकरं दिनकरो विकचीकरोति
Read more about ಪರೋಪಕಾರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮದ್ದಿಲ್ಲದ ರೋಗ

July 16, 2010 - 12:17am
hamsanandi

ಬೆಂಕಿಗೆ ನೀರು, ಬಿಸಿಲಿಗೆ ಕೊಡೆ;
ನಂಜು ಏರಿದರೆ ಮಂತ್ರದ ತಡೆ;
ಮದಿಸಿದ ಆನೆಗೆ ಅಂಕುಶದಿರಿತ;
ಕತ್ತೆ ಆಕಳಿಗೆ ದೊಣ್ಣೆಯ ಗುದ್ದು,
ರೋಗ ರುಜಿನಕೆ ವೈದ್ಯನ ಮದ್ದು;
ಹುಡುಕಬಹುದು ಉಳಿದೆಲ್ಲಕು ಮದ್ದು,
ವಾಸಿಯಾಗದ್ದೊಂದೇ - ಪೆದ್ದನ ಮೊದ್ದು.

ಸಂಸ್ಕೃತ ಮೂಲ - ಭರ್ತೃಹರಿಯ ನೀತಿಶತಕದಿಂದ

ಶಕ್ಯೋ ವಾರಯಿತುಂ ಜಲೇನ ಹುತಭುಕ್ ಛತ್ರೇಣ ಸೂರ್ಯಾತಪೋ
ನಾಗೇಂದ್ರೋ ನಿಶಿತಾಂಕುಶೇನ ಸಮದೌ ದಂಡೇನ ಗೋಗರ್ದಭೌ
ವ್ಯಾಧಿರ್ಭೇಷಜ ಸಂಗ್ರಹೈಶ್ಚ ವಿವಿಧೈರ್ಮಂತ್ರಪ್ರಯೋಗೈರ್ವಿಷಂ
ಸರ್ವಸ್ಯೌಷದಮಸ್ತಿ ಶಾಸ್ತ್ರವಿಹಿತಂ ಮೂರ್ಖಸ್ಯ ನಾಸ್ತ್ಯೌಷಧಂ
Read more about ಮದ್ದಿಲ್ಲದ ರೋಗ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಬಿಲ್ಲುಗಾರ್ತಿಗೆ

July 29, 2010 - 11:41pm
hamsanandi

ಚೆಲುವೆ! ನಿನ್ನಂಥ ಬಿಲ್ಗಾರ್ತಿ
ಸುಲಭದಲಿ ಕಾಣಸಿಗುವುದಿಲ್ಲ;
ಬಾಣ ಹೂಡದೆ ಬರಿ ಸೆಳೆತದಲೇ**
ಮನಸುಗಳನು ಸೀಳಿಬಿಡುವೆಯಲ್ಲ!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)

ಮುಗ್ಧೇ ಧಾನುಷ್ಕತಾ ಕೇಯಮಪೂರ್ವಾ ದೃಶ್ಯತೇ ತ್ವಯಿ |
ಯದಾ ವಿಧ್ಯಸಿ ಚೇತಾಂಸಿ ಗುಣೇರೈವ ನ ಸಾಯಕೈಃ ||

-ಹಂಸಾನಂದಿ
Read more about ಬಿಲ್ಲುಗಾರ್ತಿಗೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಕೈ ಕೆಸರಾದರೆ ಬಾಯ್ಮೊಸರು

October 5, 2010 - 10:31pm
hamsanandi

ಬಯಕೆಯು ಇದ್ದು ಜತುನವಿಲ್ಲದಿರೆ
ಕೆಲಸವೆಂದು ಕೈಗೂಡದು;
ಮಲಗಿದ ಸಿಂಹದ ಬಾಯಲಿ ಜಿಂಕೆಯು
ತಾನಾಗೇ ಹೊಕ್ಕಾಡದು!


ಸಂಸ್ಕೃತ ಮೂಲ (ಪಂಚತಂತ್ರದ ಮಿತ್ರ ಸಂಪ್ರಾಪ್ತಿ ಯಿಂದ)


ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ|
ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾಃ||

-ಹಂಸಾನಂದಿ Read more about ಕೈ ಕೆಸರಾದರೆ ಬಾಯ್ಮೊಸರು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಬಾಳಿನಿಂದ ಬೆಂಕಿಗೆ!

October 28, 2010 - 12:58am
hamsanandi

ಮದನನೆಂಬ ಬೆಸ್ತ ಭರದಿ ಹಾಕಿಹನು
ಹೆಣ್ಣೆಂಬ ಗಾಳವನು ಬಾಳಗಡಲಿನಲಿ;
ಅವಳ ತುಟಿಗಳ ಸೆಳೆತಕ್ಕೀಡಾದವರನು
ಹಾಕಿ ಹುರಿಯುವನು ಒಲವ ಬೆಂಕಿಯಲಿ!


ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)

ವಿಸ್ತಾರಿತಂ ಮಕರಕೇತನಧೀವರೇಣ
ಸ್ತ್ರೀಸಂಜ್ಞಿತಂ ಬಡಿಶಮತ್ರ ಭವಾಂಬುರಾಶೌ
ಯೇನಾಚಿರಾತ್ತಧರಾಮಿಷಲೋಲ ಮರ್ತ್ಯ-
ಮತ್ಸ್ಯಾಸ್ವಿಕೃಷ್ಯ ಸ ಪಚತ್ಯನುರಾಗವಹ್ನೋ

 

-ಹಂಸಾನಂದಿ

 

ಕೊ: ಮೂಲದಲ್ಲಿರುವ ’ಮಕರಕೇತನ’ = ಮೊಸಳೆಬಾವುಟದವನು = ಮನ್ಮಥ ಅನ್ನುವುದನ್ನು ಸುಲಭವಾಗಿ ತಿಳಿಯಲೆಂದು ’ಮದನ’ನೆಂದೇ ಇರಿಸಿದ್ದೇನೆ. Read more about ಬಾಳಿನಿಂದ ಬೆಂಕಿಗೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಹೊಟ್ಟೆ ತುಂಬಿಸದ ಭಾಷೆ

January 28, 2011 - 11:17pm
hamsanandi

ಈಚೀಚೆಗೆ ಏನ್ಗುರುನವರು ಕನ್ನಡ ಅನ್ನದ ಭಾಷೆಯಾಗಬೇಕು, ಅನ್ನದ ಭಾಷೆಯಾಗಬೇಕು ಅಂತ ಹೇಳ್ತಾ ಇರೋದನ್ನ ಕೇಳೇ ಇರ್ತೀರ. ಅದು ಸರಿ, ಎಲ್ಲರ ಗುರಿಯೂ ಒಂದೇ ಆಗಿರೋದಿಲ್ಲ ನೋಡಿ. ಒಬ್ಬರಿಗೆ ಕ್ರಿಕೆಟ್ ಅಂದ್ರೆ ಜೀವ. ಇನ್ನೊಬ್ಬರಿಗೆ ಅದು ಕಂಡರಾಗದು. ಒಬ್ಬರಿಗೆ ಸಂಗೀತ ಅಂದ್ರೆ ಆಗದು. ಇನ್ನೊಬ್ಬರಿಗೆ ಹಾಡನ್ನ ಕೇಳ್ದೇ ಇದ್ರೆ ತಲೆನೋವು ಬರುತ್ತೆ. ಈ ಯಾರಿಗೂ ಕ್ರಿಕೆಟ್ಟೇ ಆಗಲೀ, ಹಾಡು ಕೇಳೋದೇ ಆಗಲಿ, ಅನ್ನ ಕೊಡುವ ಕೆಲಸಗಳಲ್ಲ. ಆದರೂ ಅವರವರ ಸಂತೋಷಕ್ಕೆ ಅವರವರು ಮಾಡುವುದಷ್ಟೇ. ಎಷ್ಟೋ ಬ್ಲಾಗರುಗಳ ತುಂಬಾ ಒಳ್ಳೇ ಬರಹಗಳನ್ನ ಓದಿದೀನಿ. ಅದರಲ್ಲಿ ಎಷ್ಟು ಜನಕ್ಕೆ ಬರವಣಿಗೆ ಅನ್ನ ಕೊಡ್ತಿದೆಯೋ ಇಲ್ಲವೋ ನಾ ಕಾಣೆ. ಆದರೆ ನಾನು ಓದಿದಾಗ, ನನಗಂತೂ ಖುಷಿ ಅಂತೂ ಆಗ್ತಿದೆ. Read more about ಹೊಟ್ಟೆ ತುಂಬಿಸದ ಭಾಷೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಗಟ್ಟಿಗರ ಸೋಲು

February 19, 2011 - 2:23am
hamsanandi


ಸೊಕ್ಕಿದಾನೆಯ ಅಮಲನ್ನು ಇಳಿಸುವ ವೀರರು;
ಮೃಗರಾಜ ಸಿಂಹವ ಮಡುಹುವಲೂ ನಿಪುಣರು.
ಅಂಥ ಗಟ್ಟಿಗರೆದುರೇ ಸಾರಿ ಹೇಳುವೆ ನಾನು
ಆ ಮನ್ಮಥನ ಸೊಕ್ಕನ್ನು ಅಡಗಿಸುವರು ಸಿಗರು!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)

ಮತ್ತೇಭಕುಂಭದಲನೇ ಭುವಿ ಸಂತಿ ಶೂರಾಃ
ಕೇಚಿತ್ಪ್ರಚಂಡ ಮೃಗರಾಜವಧೇSಪಿ ದಕ್ಷಾಃ |
ಕಿಂತು ಬ್ರವೀಮಿ ಬಲಿನಾಂ ಪುರತಃ ಪ್ರಸಹ್ಯ
ಕಂದರ್ಪದರ್ಪದಲನೇ ವಿರಲಾ ಮನುಷ್ಯಾಃ||

-ಹಂಸಾನಂದಿ Read more about ಗಟ್ಟಿಗರ ಸೋಲು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮಾಡಲಾರದ ಕೆಲಸ

April 14, 2011 - 5:19am
hamsanandi

ಮರಳ ಹಿಂಡುತ ನೀವು ಎಣ್ಣೆಯನೂ ತೆಗೆದೀರಿ
ಬಿಸಿಲುಗುದುರೆ ನೀರಲ್ಲೇ ದಾಹವ ನೀಗಿಸೀರಿ;
ಅಲೆದಾಡುತ ಕಂಡೀರಿ ಕೊಂಬಿರುವ ಮೊಲವನ್ನೂ
ಕಡುಮರುಳರ ಮನವನೆಂತು ಮಣಿಸಿ ಮೆಚ್ಚಿಸುವಿರಿ?

ಸಂಸ್ಕೃತ ಮೂಲ - ಭರ್ತೃಹರಿಯ ನೀತಿಶತಕದಿಂದ

ಲಭೇತ ಸಿಕತಾಸು ತೈಲಮಪಿ ಯತ್ನತಃ ಪೀಡಯನ್
ಪಿಬೇತ್ಚ ಮೃಗತೃಷ್ಣಿಕಾಸು ಸಲಿಲಂ ಪಿಪಾಸಾರ್ದಿತಃ ||
ಕದಾಚಿದಪಿ ಪರ್ಯಟನ್ಶಶವಿಷಾಣಮಾಸಾದಯೇನ್ನತು
ಪ್ರತಿನಿವಿಷ್ಟಮೂರ್ಖಜನಚಿತ್ತಮಾರಾಧಯೇತ್ ||

-ಹಂಸಾನಂದಿ Read more about ಮಾಡಲಾರದ ಕೆಲಸ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮಾಡಲಾರದ ಕೆಲಸ -೨

April 30, 2011 - 6:01am
hamsanandi

ಮೊಸಳೆ ಹಲ್ಲಿಗೆ ಸಿಲುಕಿದ ರತುನವ ಹೆಕ್ಕಿ ತರಬಹುದು
ಉಬ್ಬರದಿ ಮೊರೆವ ಕಡಲನ್ನು ಹಾಯಾಗಿ ದಾಟಬಹುದು;
ಭುಸುಗುಡುವ ನಾಗರವ ಹೂವಂತೆ ಮುಡಿಯಬಹುದು
ಕಡುಮರುಳರ ಮನವನು ಮಣಿಸಿ ಮೆಚ್ಚಿಸಲಾಗದು!

ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)

ಪ್ರಸಹ್ಯ ಮಣಿಂ ಉದ್ಧರೇತ್ ಮಕರ ವಕ್ತ್ರದಂಷ್ಟ್ರಾಂತರಾತ್
ಸಮುದ್ರಮಪಿ ಸಂತರೇತ್ ಪ್ರಚಲದೂರ್ಮಿ ಮಾಲಾಂಕುಲಾಮ್|
ಭುಜಂಗಮಪಿ ಕೋಪಿತಂ ಶಿರಸಿ ಪುಷ್ಪವತ್ ಧಾರಯೇನ್ನತು
ಪ್ರತಿವಿಷ್ಟ ಮೂರ್ಖಜನ ಚಿತ್ತಮಾರಾಧಯೇತ್ ||

-ಹಂಸಾನಂದಿ Read more about ಮಾಡಲಾರದ ಕೆಲಸ -೨

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಜೀವದ ಗೆಳೆಯರು

May 17, 2011 - 1:36am
hamsanandi

ಹಾಲದು ತನ್ನೊಳು ಬೆರೆಸಿದ ನೀರಿಗೆ
ತನ್ನ ನಡತೆಯನೆಲ್ಲವ ನೀಡುವುದು
ಹಾಲ ಕಾಯಿಸಿರೆ ನೀರು ಗೆಳೆಯನ
ನೋವಿಗೆ ಮರುಗಿ ಹಬೆಯಾಡುವುದು

ನೀರಿನ ಗತಿಯ ನೋಡಿದ ಹಾಲು
ಉಕ್ಕಿ ಬೆಂಕಿಗಾಹುತಿಯಾಗುತಿರಲು
ಬೆರೆಸಲು ಅದಕೆ ತುಸುವೇ ನೀರನು
ಕೂಡಲೆ ತಣಿವನು ಹೊಂದುವುದು!

ಒಳ್ಳೆಯ ಗೆಳೆಯರ ಗೆಳೆತನವೆಂದರೆ
ಇರುವುದು ಇಂತಹ ರೀತಿ;
ನೋವಲಿ ನಲಿವಲಿ ಹೇಗೇ ಇರಲಿ
ಜೊತೆಯನು ಬಿಡದಿಹ ರೀತಿ!

ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)
Read more about ಜೀವದ ಗೆಳೆಯರು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ದಂಡದ ಕೆಲಸಗಳು

May 18, 2011 - 10:14pm
hamsanandi

ಸೊಕ್ಕಿದ ಸಲಗವ ಕಮಲದ ದಂಟಿನಲಿ
ಕಟ್ಟಿ ಹಿಡಿಯಲುಜ್ಜುಗಿಸುವಂತೆ

ಗಟ್ಟಿ ವಜ್ರವನು ಹೂವಿನ ದಳದಲಿ
ಪಟ್ಟೆನಿಸಿ ಮುರಿಯ ತೊಡಗುವಂತೆ

ಉಪ್ಪಿನ ಕಡಲನು ಜೇನ ಹನಿಯಿಂದ
ಹೆಚ್ಚು ರುಚಿಗೊಳಿಸ ಬಯಸುವಂತೆ

ಒಳ್ಳೆ ಮಾತಿನಲಿ ಮೂಳರ ದಾರಿಗೆ
ಜಗ್ಗಿಸಿ ತರಹೋಗುವುದು ದಂಡವಂತೆ!


ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)

ವ್ಯಾಲಂ ಬಾಲ ಮೃಣಾಲ ತಂತುಭಿರಸೌ ರೋದ್ಧುಂ ಸಮುಜ್ಜೃಂಭತೇ
ಭೇತ್ತುಮ್ ವಜ್ರಮಣಿಂ ಶಿರೀಶಕುಸುಮ ಪ್ರಾಂತೇನ ಸನ್ನಹ್ಯತೇ||
ಮಾಧುರ್ಯಂ ಮಧುಬಿಂದುನಾ ರಚಯಿತುಂ ಕ್ಷಾರಾಂಬುಧೇರೀಹತೇ Read more about ದಂಡದ ಕೆಲಸಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಮೇಲೆ - ಕೆಳಗೆ

June 7, 2011 - 4:32am
hamsanandi

ಕೊಡುವುದರಲ್ಲಿರುವಂಥ ಮೇಲ್ಮೆ
ಕೂಡಿಡುವುದರಲ್ಲಿಲ್ಲವೆ ಇಲ್ಲ;
ಮೋಡವು ನೀರ ನೀಡುತ ಮೇಲಿರೆ
ಕೂಡಿಡುವ ಕಡಲು ಕೆಳಗಿಹುದಲ್ಲ !

ಸಂಸ್ಕೃತ ಮೂಲ:

ಗೌರವಂ ಪ್ರಾಪ್ಯತೇ ದಾನಾನ್ನ ತು ವಿತ್ತಸ್ಯ ಸಂಚಯಾತ್ |
ಸ್ಥಿತಿರುಚ್ಚೈಃ ಪಯೋದಾನಾಂ ಪಯೋಧೀನಾಧಮಃ ಸ್ಥಿತಿಃ ||

-ಹಂಸಾನಂದಿ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಕೊಂಕು ನೋಟದವಳ ಜಾಣ್ಮೆ

August 2, 2011 - 10:19am
hamsanandi

 ಮೋಡಿಗೊಳಿಸುವರು ಅಮಲೇರಿಸುವರು
ಮೇಲೆ ಕಟಪಟೆಯ ಕಟಕಿಯಾಡುವರು; Read more about ಕೊಂಕು ನೋಟದವಳ ಜಾಣ್ಮೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಕೊರತೆ ಮರೆಯಿಸುವ ಗುಣಗಳು

August 5, 2011 - 7:24am
hamsanandi

ಎಣಿಯಿರದ ರತುನಗಳ ಹೆತ್ತ ಪರ್ವತದ
ಸುತ್ತ ತುಂಬಿರುವ ಭಾರಿ ಹಿಮರಾಶಿಯೂ
ಅದರ ಹಿರಿಮೆಯ ಇನಿತೂ ಕುಂದಿಸದು;

ಒಳಿತಾದ ಗುಣಗಳೇ ತುಂಬಿ ತುಳುಕಿರಲು
ಮರೆಸಿ ಹೋದೀತು ಇರಲೊಂದು ಕುಂದು
ಬೆಳುದಿಂಗಳು ಚಂದಿರನ ಕಲೆ ಮರೆಸುವಂತೆ!


ಸಂಸ್ಕೃತ ಮೂಲ (ಕಾಳಿದಾಸನ ಕುಮಾರ ಸಂಭವದಿಂದ):

ಅನಂತರತ್ನ ಪ್ರಭವಸ್ಯ ಯಸ್ಯ
ಹಿಮಂ ನ ಸೌಭಾಗ್ಯವಿಲೋಪಿ ಜಾತಂ |
ಏಕೋ ಹಿ ದೋಷೋ ಗುಣಸನ್ನಿಪಾತೇ
ನಿಮಜ್ಜತೀಂದೋಃ ಕಿರಣೇಷ್ವಿವಾಂಕಃ ||

-ಹಂಸಾನಂದಿ
  Read more about ಕೊರತೆ ಮರೆಯಿಸುವ ಗುಣಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಉಳಿಸಬಾರದವುಗಳು

August 10, 2011 - 7:28am
hamsanandi

ಆರಿಸದೇ ಉಳಿದುರಿ ತೀರಿಸದ ಕಡ
ಮನದಲುಳಿದ ವೈರ ಇವು ಮೂರು
ಇರುವಲ್ಲೇ ಬೆಳೆಯುತ ಹೋಗುವುವು
ಅದಕೇ ಇವುಗಳ ಉಳಿಸದಿರು


ಸಂಸ್ಕೃತ ಮೂಲ:

ಅಗ್ನಿ ಶೇಷಂ ಋಣಃ ಶೇಷಂ
ಶತ್ರು ಶೇಷಂ ತಥೈವ ಚ |
ಪುನಃ ಪುನಃ ಪ್ರವರ್ಧಂತೇ
ತಸ್ಮಾತ್ಛೇಷಂ ನ ರಕ್ಷಯೇತ್ ||

-ಹಂಸಾನಂದಿ Read more about ಉಳಿಸಬಾರದವುಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ವಸಂತನ ತಪ್ಪು

August 25, 2011 - 5:19am
hamsanandi

 ವಸಂತದಲಿಂಪಾದ ಕೋಗಿಲೆಗಳ ಗಾನ
ಮಲೆನಾಡ ಗಿರಿಗಳಲಿ ಸುಳಿವ ತಂಗಾಳಿ
ಅಗಲಿ ನೊಂದವರ ಜೀವವನೇ ಸೆಳೆದಾವು
ಕೇಡುಗಾಲದಲಮೃತವೂ ಆದೀತು ನಂಜು!


ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ )

ಮಧುರಯಂ ಮಧುರೈರಪಿ ಕೋಕಿಲಾ-
ಕಲರವೈರ್ಮಲಯಸ್ಯ ಚ ವಾಯುಭಿಃ |
ವಿರಹಿಣಃ ಪ್ರಹಿಣಸ್ತಿ ಶರೀರಿಣೋಂ
ವಿಪದಿ ಹಂತ ಸುಧಾSಪಿ ವಿಷಾಯತೇ ||

-ಹಂಸಾನಂದಿ
Read more about ವಸಂತನ ತಪ್ಪು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಕಾರ್ಗಾಲದ ಹಂಬಲ

August 26, 2011 - 1:38am
hamsanandi

ಕಾರಮೋಡಗಳು ; ನೆಲಮರೆಸಿರುವ ಹೂವುಗಳಹಾಸು;
ಅರಳಿದ ಕದಂಬ ಕಾಡುಮಲ್ಲೆಗಳ ಕಂಪ ಬೀರುವ ಗಾಳಿ;
ಮಾರುದನಿಸುವ ಕುಣಿವ ನವಿಲುಗಳ ಕೇಕೆಯ ಸೊಲ್ಲು -
ತರುವುವು ಹಂಬಲವ ಕೊರಗು ಸಂತಸದಲ್ಲಿಹರೆಲ್ಲರಿಗು

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)

ವಿಯದುಪಚಿತ ಮೇಘೋ ಭೂಮಯಃ ಕಂದಲಿನ್ಯೋ
ನವಕುಟಜ ಕದಂಬಾಮೋದಿನೋ ಗಂಧವಾಹಾಃ |
ಶಿಖಿಕುಲಕಲ ಕೇಕಾರವರಮ್ಯಾ ವನಾಂತಾಃ
ಸುಖಿನಮಸುಖಿನಂ ವಾ ಸರ್ವಮುತ್ಕಂಠಯಂತಿ ||

-ಹಂಸಾನಂದಿ Read more about ಕಾರ್ಗಾಲದ ಹಂಬಲ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹಂಸನಾದ - ಪುಸ್ತಕ ಪರಿಚಯ, ಕನ್ನಡ ಪ್ರಭದಲ್ಲಿ ಇಂದು

August 28, 2011 - 8:55am
hamsanandi

 ಇವತ್ತಿನ ಕನ್ನಡ ಪ್ರಭದ ಸಾಪ್ತಾಹಿಕ ಪ್ರಭದಲ್ಲಿ (೨೮ ಆಗ್ನ್ನಸ್ಟ್ ೨೦೧೧ ಸಂಚಿಕೆ) ನನ್ನ ಪುಸ್ತಕ "ಹಂಸನಾದ"ದ ಪರಿಚಯ ಮತ್ತು ವಿಮರ್ಶೆ ಓದಿನ ಮನೆ ಅಂಕಣದಲ್ಲಿ ಪ್ರಕಟವಾಗಿದೆ. ಬರೆದವರು ಡಾ.ವಾಸುದೇವ ಶೆಟ್ಟಿ ಅವರು.
Read more about ಹಂಸನಾದ - ಪುಸ್ತಕ ಪರಿಚಯ, ಕನ್ನಡ ಪ್ರಭದಲ್ಲಿ ಇಂದು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನೆರವಿಗೆ ಬರುವವರು

September 2, 2011 - 6:45am
hamsanandi

ಕಿರಿಯರಾದರೇನು? ನೆರವಾದಾರು;
ಹಿರಿಯರಿಂದಾಗದಿದ್ದರೆ ಏನು?
ದಾಹವಾರಿಸಲು ಆಗದು ಕಡಲಿಗೆ
ಬಾವಿನೀರದನು ತಣಿಸದೇನು?


ಸಂಸ್ಕೃತ ಮೂಲ:

ಉಪಕರ್ತುಂ ಯಥಾ ಸ್ವಲ್ಪಃ ಸಮರ್ಥಾ ನ ತಥಾ ಮಹಾನ್ ।
ಪ್ರಾಯಃ ಕೂಪಸ್ತೃಷಾಂ ಹಂತಿ ನ ಕದಾಪಿ ತು ವಾರಿಧಿಃ ॥

उपकर्तुं यथा स्वल्पः समर्थो न तथा महान् ।
प्रायः कूपस्तृषां हन्ति न कदापि तु वारिधिः ॥

-ಹಂಸಾನಂದಿ Read more about ನೆರವಿಗೆ ಬರುವವರು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ತಂಗಾಳಿಯಂತಹ ನಲ್ಲ!

September 7, 2011 - 11:28am
hamsanandi
ತುರುಬ ಕೆಡಿಸೀತು
ಕಂಗಳ ಮುಚ್ಚಿಸೀತು 
ಅರಿವೆಗಳನೊತ್ತಾಯದಲಿ ಸೆಳೆದೀತು;

ಮೈಯ ನವಿರೇಳಿಸೀತು
ಮೆಲ್ಲನ್ನ ನಡುಕವನು ತಂದೀತು
ತುಟಿಗಳ ಬಿಡದೆ ಕಿರುಕುಳವ ಕೊಟ್ಟೀತು;

ಬೀಸುತಿಹ ಕುಳಿರುಗಾಲದ
ತಂಗಾಳಿಯೆಂಬುದು ಪೆಣ್ಗಳಲಿ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ವಿಷವಾಗುವ ಅಮೃತ

September 12, 2011 - 10:33pm
hamsanandi

ಕಣ್ಣ ಮುಂದಿರುವ ತನಕ ಈಕೆ
ಅಮೃತ ತುಂಬಿದ ಬಿಂದಿಗೆ;
ಕಣ್ಣ ಹಾದಿಯಲಿರದೆ ಹೋದರೆ 
ವಿಷಕ್ಕಿಂತಲೂ ಹೆಚ್ಚಿಗೆ!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ):

ತಾವದೇವಾಮೃತಮಯೀ ಯಾವಲ್ಲೋಚನ ಗೋಚರಾ |
ಚಕ್ಷುಶ್ಪಥಾತ್ ಅತೀತಾ ತು ವಿಷಾದಪಿ ಅತಿರಿಚ್ಯತೇ ||

-ಹಂಸನಾದ

ಕೊ:ಮೂಲದಲ್ಲಿಲ್ಲದ "ಬಿಂದಿಗೆ" ಅನ್ನುವ ಪದವು ಮೂಲದಲ್ಲಿ ಇಲ್ಲದಿದ್ದರೂ, ಅರ್ಥವನ್ನು ಹೊಮ್ಮಿಸುತ್ತದೆಂದು ಬಳಸಿದ್ದೇನೆ. Read more about ವಿಷವಾಗುವ ಅಮೃತ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ದೊಣ್ಣೆ ಹಿಡಿಯದ ದೇವರು

September 28, 2011 - 2:40am
hamsanandi

ಆವ ಕಾಯ್ವ ಗೊಲ್ಲನಂತೆ
ದೈವ ಕೋಲನು ಹಿಡಿಯದು ;
ಯಾವನ ಕಾಪಿಡಲು ಬೇಕೋ
ಅವಗೆ ಬುದ್ಧಿಯ ಈವುದು!

ಸಂಸ್ಕೃತ ಮೂಲ (ಮಹಾಭಾರತ : ೫-೩೫-೫೧)

ನ ದೇವಾ ದಂಡಮಾದಾಯ ರಕ್ಷಂತಿ ಪಶುಪಾಲವತ್|
ಯಂ ತು ರಕ್ಷಿತುಮಿಚ್ಛಂತಿ ಬುದ್ಧ್ಯಾ ಸಂಯೋಜಯಂತಿ ತಮ್|| 

-ಹಂಸಾನಂದಿ

ಕೊ: ಆವು = ಹಸು; ಆಕಳು ಎಂಬ ಬಹುವಚನವನ್ನು ನೆನೆಸಿಕೊಳ್ಳಿ

ಕೊ.ಕೊ: ಸಂಸ್ಕೃತದಲ್ಲಿ ಪಶು ಎಂದರೆ ಯಾವ ಪ್ರಾಣಿಗೆ ಬೇಕಾದರೂ ಹೇಳಬಹುದು. ಇಲ್ಲಿ ನಾನು ಬಳಸಿದ "ಆವು" ಪದದಿಂದ ಅದರ ಹರಹು ಕಡಿಮೆ ಆಗಿರಬಹುದೆನಿಸಿದರೂ, ಅರ್ಥಕ್ಕೆ ಅಂತಹದ್ದೇನೂ ಅಡ್ಡಿ ಬಂದಿಲ್ಲ ಎಂದು ಭಾವಿಸಿರುವೆ.

  Read more about ದೊಣ್ಣೆ ಹಿಡಿಯದ ದೇವರು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಇನಿಯೆ?

October 19, 2011 - 7:04am
hamsanandi

ಬೇಗುದಿ ತರುವಳು ನೆನಪಿನಲೆ

ಮರುಳು ಹಿಡಿಸುವಳು ನೋಡಿದರೆ;

ಸೋಕಲು ಇವಳು ಮೈ ಮರವೆ!

ಇವಳಿಗಿನಿಯೆ ಎನ್ನುವ ಹೆಸರೆ? 
 
 
ಸಂಸ್ಕೃತ ಮೂಲ  (ಭರ್ತೃಹರಿಯ ಶೃಂಗಾರಶತಕದಿಂದ):
 

ಸ್ಮೃತಾ ಭವತಿ ತಾಪಾಯ ದೃಷ್ಟಾ ಚೋನ್ಮಾದಕಾರಿಣೀ |

ಸ್ಪೃಷ್ಟಾ ಭವತಿ ಮೋಹಾಯ ಸಾ ನಾಮ ದಯಿತಾ ಕಥಮ್ ||
 
-ಹಂಸಾನಂದಿ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹುಬ್ಬೆನುವ ಬಿಲ್ಲಿನ ಚುರುಕು ಬಾಣಗಳು

October 20, 2011 - 1:18am
hamsanandi

ಗಂಡು ಸರಿದಾರಿಯಲಿ ನಡೆವನು  ಇಂದ್ರಿಯಗಳನಂಕೆಯಲಿಡುವನು
ನಾಚಿಕೆಯನು ಬಿಡನು ವಿನಯದಾಸರೆಯಲಿರುವನು;  ಯಾವತನಕ?
ಬೆಡಗಿಯರ ಸೆಳೆವ ಕುಡಿಹುಬ್ಬು ಬಿಲ್ಲಿನಲಿ ಹೂಡಿದ ಬಟ್ಟಲು ಕಣ್ಣಿನಾ
ನೋಟದಂಬುಗಳು  ತಗುಲಿ ಅವನೆದೆಗಾರಿಕೆಯನೇ ಕದಿವ ತನಕ  ! 


ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ*) :

ಸನ್ಮಾರ್ಗೇ ತಾವದಾಸ್ತೇ ಪ್ರಭವತಿ ಚ ನರಸ್ತಾವದೇವೇಂದ್ರಿಯಾಣಾಂ
ಲಜ್ಜಾಂ ತಾವದ್ವಿಧತ್ತೇ ವಿನಯಮಪಿ ಸಮಾಲಂಭತೇ ತಾವದೇವ |
ಭ್ರೂಚಾಪಾಕೃಷ್ಟ ಮುಕ್ತಾಃ ಶ್ರವಣಪಥಗತಾ ನೀಲ ಪಕ್ಷ್ಮಾಣ ಏತೇ
ಯಾವಲ್ಲೀಲಾವತೀನಾಂ ಹೃದಿ ನ ಧೃತಿ ಮುಷೋ ದೃಷ್ಟಿಭಾಗಾಃ ಪತಂತಿ ||


-ಹಂಸಾನಂದಿ
Read more about ಹುಬ್ಬೆನುವ ಬಿಲ್ಲಿನ ಚುರುಕು ಬಾಣಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮಳೆಗಾಲದ ಅಗಲಿಕೆ

October 25, 2011 - 8:18am
hamsanandi
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮಳೆಗಾಲದ ಅಗಲಿಕೆ

October 25, 2011 - 8:19am
hamsanandi
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಆಸೆ

October 26, 2011 - 3:06am
hamsanandi

ಕಾಣದಿರಲವಳ ನೋಟವೊಂದರ ಆಸೆ
ಕಂಡರಾಗುವುದು  ಅಪ್ಪಿ ಸುಖಿಸುವ ಆಸೆ ;
ಸೊಗಸುಗಣ್ಣಿಯನೊಮ್ಮೆ ಅಪ್ಪಿ ಮುದ್ದಿಡಲು
ಬರುವುದು ಒಡನೆಯೇ ಒಂದಾಗುವಾಸೆ!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ) :

ಅದರ್ಶನೇ ದರ್ಶನಮಾತ್ರ ಕಾಮಾ
ದೃಷ್ಟಾ ಪರಿಷ್ಟಂಗ ಸುಖೈಕ ಲೋಲಾ |
ಆಲಿಂಗಿತಾಯಾಂ ಪುನರಾಯತಾಕ್ಷ್ಯಾ
-ಮಾಶಾಸ್ಮಹೇ ವಿಗ್ರಹಯೇರಭೇದಮ್ ||

-ಹಂಸಾನಂದಿ

ಕೊ: ಈ ಅನುವಾದವನ್ನು ನೋಡಿದ ನನ್ನ ಗೆಳೆಯರೊಬ್ಬರು ಇದನ್ನ ಯಾವುದೋ ಸಿನೆಮಾದಲ್ಲಿ ಇಂತಹದ್ದೇ ಸಾಲುಗಳನ್ನ ಕೇಳಿದ ಹಾಗಿದೆ ಅಂದರು. ಇದ್ದರೂ ಇರಬಹುದು - ಜೈ ಭರ್ತೃಹರಿ! ಪಾಪ ಕ್ರೆಡಿಟ್ ಸಿಕ್ಕಿತೋ ಇಲ್ಲವೋ ಗೊತ್ತಿಲ್ಲ.

Read more about ಆಸೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಆಸೆ

October 26, 2011 - 3:06am
hamsanandi

ಕಾಣದಿರಲವಳ ನೋಟವೊಂದರ ಆಸೆ
ಕಂಡರಾಗುವುದು  ಅಪ್ಪಿ ಸುಖಿಸುವ ಆಸೆ ;
ಸೊಗಸುಗಣ್ಣಿಯನೊಮ್ಮೆ ಅಪ್ಪಿ ಮುದ್ದಿಡಲು
ಬರುವುದು ಒಡನೆಯೇ ಒಂದಾಗುವಾಸೆ!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ) :

ಅದರ್ಶನೇ ದರ್ಶನಮಾತ್ರ ಕಾಮಾ
ದೃಷ್ಟಾ ಪರಿಷ್ಟಂಗ ಸುಖೈಕ ಲೋಲಾ |
ಆಲಿಂಗಿತಾಯಾಂ ಪುನರಾಯತಾಕ್ಷ್ಯಾ
-ಮಾಶಾಸ್ಮಹೇ ವಿಗ್ರಹಯೇರಭೇದಮ್ ||

-ಹಂಸಾನಂದಿ

ಕೊ: ಈ ಅನುವಾದವನ್ನು ನೋಡಿದ ನನ್ನ ಗೆಳೆಯರೊಬ್ಬರು ಇದನ್ನ ಯಾವುದೋ ಸಿನೆಮಾದಲ್ಲಿ ಇಂತಹದ್ದೇ ಸಾಲುಗಳನ್ನ ಕೇಳಿದ ಹಾಗಿದೆ ಅಂದರು. ಇದ್ದರೂ ಇರಬಹುದು - ಜೈ ಭರ್ತೃಹರಿ! ಪಾಪ ಕ್ರೆಡಿಟ್ ಸಿಕ್ಕಿತೋ ಇಲ್ಲವೋ ಗೊತ್ತಿಲ್ಲ.

Read more about ಆಸೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನಂದನ ಕಂದನಿಗೆ

October 27, 2011 - 6:10am
hamsanandi

ಪೊಂಗೊಳಲ ರಂಧ್ರಗಳ
ಚೆಂಬೆರಳ ತುದಿಗಳಲಿ
ಮುಚ್ಚುತಾ ತೆರೆಯುತಿಹನ

ತಿರುತಿರುಗಿ ಮರಮರಳಿ
ತನ್ನುಸಿರ ಗಾಳಿಯನು
ಕೊಳಲಿನಲಿ ತುಂಬುವವನ

ಅರಳಿದ ತಾವರೆಯ
ಹೋಲುವಾ ಕಂಗಳಿಹ
ಚೆಂದದಾ ನಿಲುವಿನವನ

ವಂದಿಸುವೆ ನಾನೀಗ
ಬೃಂದಾವನದಿ ನಲಿವ
ನಂದಗೋಪನ ಕಂದನ
 

 

 
ಸಂಸ್ಕೃತ ಮೂಲ ( ಲೀಲಾ ಶುಕನ ಕೃಷ್ಣಕರ್ಣಾಮೃತದಿಂದ):
 

ಅಂಗುಲ್ಯಗ್ರೈಃ ಅರುಣಕಿರಣೈಃ ಮುಕ್ತಸಂರುದ್ಧರಂಧ್ರಂ Read more about ನಂದನ ಕಂದನಿಗೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಬಗೆ ಬಗೆಯ ಜನರು

November 2, 2011 - 9:15pm
hamsanandi

ಯೋಗ್ಯರಿವರು ತಮ್ಮೊಳಿತನೂ ಕಡೆಗಣಿಸಿ ಪರಹಿತವನೆಸಗುವವರು;
ನಾಡಾಡಿಗಳು ಸ್ವಾರ್ಥವನು ಬಿಡದೇ ಉಳಿದವರಿಗೊಳಿತು ಮಾಡಿಯಾರು.
ತಮಗೋಸುಗ ಹೆರವರೊಳಿತಿಗೆ ತಡೆಯಾದವರು ಮನುಜ ರಕ್ಕಸರು;
Read more about ಬಗೆ ಬಗೆಯ ಜನರು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮೆಲ್ಲ ಮೆಲ್ಲನೆ ಬಂದು ಗಲ್ಲಕೆ ಮುತ್ತು ಕೊಟ್ಟು...

November 6, 2011 - 12:48am
hamsanandi

ಮಗುವೆಂದು ತಿಳಿಯುತ್ತ

ಮುತ್ತಿಟ್ಟ ಗೋಪಿಯರ

ತುಟಿಕಂಪ  ಸವಿಯುವನು ಈತ!

 

ಮಗುವೆಂದು ಅಪ್ಪಿದರೆ

ಬರಸೆಳೆದು ಕುತ್ತಿಗೆಯ

ಬಣ್ಣ ಕೆಂಪೇರಿಸಿದ ಈತ!

 

ಮಗುವೆಂದು  ಮುದ್ದಿನಲಿ

ತೊಡೆಮೇಲೆ ಏರಿಸಲು

ಮುಟ್ಟುತಲೆ ನಾಚಿಸುವ ಈತ!

 

ಕೇಡಿಗನು ಈ ಮಗುವೆ

ಕಳುಹಿಸಲಿ ಬಲುದೂರ

ನಮ್ಮೆಲ್ಲ  ಕೇಡುಗಳ ಈಗ!

 

 

ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣಕರ್ಣಾಮೃತ 2-68 ):

 

ಓಷ್ಟಂ ಜಿಘ್ರನ್ ಶಿಶುರಿತಿ ಧಿಯಾ ಚುಂಬಿತೋ ವಲ್ಲವೀಭಿಃ

ಕಂಠಂ ಗೃಹ್ಣನ್ ಅರುಣಿತ ಪದಂ ಗಾಢಮಾಲಿಂಗಿತಾಂಗಃ |

ದೋಷ್ಣಾ ಲಜ್ಜಾಪದಮಭಿಮೃಶನ್  ಅಂಕಮಾರೋಪಿತಾತ್ಮಾ Read more about ಮೆಲ್ಲ ಮೆಲ್ಲನೆ ಬಂದು ಗಲ್ಲಕೆ ಮುತ್ತು ಕೊಟ್ಟು...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ದಿಟದ ಒಡವೆಗಳು

November 7, 2011 - 11:28am
hamsanandi
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಚಿಗರೆಗಣ್ಣಿಯ ಸಿಟ್ಟು

February 14, 2012 - 7:30am
hamsanandi

ಗೆಳತಿ! ನನ್ನೆದೆ
ಒಡೆದರೂ ಸರಿ ;

ಎನ್ನೊಡಲ ಆ ಮದನ
ಸೊರಗಿಸಿದರೂ ಸರಿ ;

ಒಂದೆಡೆ ನಿಲ್ಲದವನಲ್ಲಿ
ನಾನದೆಂತು
ಒಲವನಿಡಲೇ?

ಹೀಗೆಂದು ಸಿಟ್ಟಿನಲಿ
ಸೆಡವಿನಲಿ ನುಡಿಯುತ್ತಲೇ
ನಲ್ಲನ ದಾರಿಯ

ಕಳವಳದಲಿ
ಬಿಡದೇ ನೋಡಿದಳು
ಚಿಗರೆಗಣ್ಣಿ!

ಸಂಸ್ಕೃತ ಮೂಲ (ಅಮರುಕನ ಅಮರು ಶತಕದಿಂದ):

ಸ್ಫುಟತು ಹೃದಯಂ ಕಾಮಃ ಕಾಮಂ ಕರೋತು ತನುಮ್ ತನುಮ್
ನ ಸಖಿ ಚಪಲಪ್ರೇಮ್ನಾ ಕಾರ್ಯಮ್ ಪುನರ್ದಯಿತೇನ ಮೇ |
ಇತಿ ಸರಭಸಂ ಮಾನಾಟೋಪಾದ್ ಉದೀರ್ಯ ವಚಸ್ತಯಾ
ರಮಣಪದವೀ ಸಾರಂಗಾಕ್ಷ್ಯಾ ಸಶಂಕಿತ*ಮೀಕ್ಷಿತಾ ||

-ಹಂಸಾನಂದಿ

ಕೊ: ಕಡೆಯ ಸಾಲಿನಲ್ಲಿ ಸಶಂಕಿತಮೀಕ್ಷಿತಾ ಎಂಬುದಕ್ಕೆ ನಿರಂತರಮೀಕ್ಷಿತಾ ಎಂಬ ಪಾಠಾಂತರವೂ ಇರುವಂತೆ ತೋರುತ್ತದೆ. ಅನುವಾದದಲ್ಲಿ ಎರಡೂ ಅರ್ಥಗಳನ್ನು ತಂದಿದ್ದೇನೆ. Read more about ಚಿಗರೆಗಣ್ಣಿಯ ಸಿಟ್ಟು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಇಷ್ಟು ದೊರಕಿದರೆ ....

April 18, 2012 - 11:12pm
hamsanandi

 

ಇರುವುದೇ ಮುಗಿತಾಯ ಮನದಾಸೆಗಳಿಗಿಲ್ಲಿ

ವರುಷ ಕಳೆದಿರಲೇನು ಸಾವಿರವೊ ಲಕ್ಷ ?

ನೆರವೇರಿರಲು ಒಮ್ಮೆ ಬಯಕೆಗಳ  ಸಾಲೊಂದು

ಮರಳಿ ಹುಟ್ಟುವುವಲ್ಲ ಮಗದೊಂದು ಸಾಲು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.

ವ್ಯತ್ಯಾಸ

June 5, 2012 - 1:18am
hamsanandi

 ಹಿಗ್ಗುತ ಕಾಲವ ಕಳೆಯುವರು

ಕಬ್ಬ-ಕಲಿಕೆಯಲಿ ತಿಳಿದವರು
ಕೆಟ್ಟ ಚಟಗಳಲಿ ಜಗಳದಲಿ
ಮತ್ತೆ ನಿದ್ದೆಯಲಿ ಕಡುಮೂಳರು
 
 
ಸಂಸ್ಕೃತ ಮೂಲ:
 
ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಮ್
ವ್ಯಸನೇನ ಚ ಮೂರ್ಖಾನಾಂ ನಿದ್ರಯಾ ಕಲಹೇನ ವಾ
 
काव्यशास्त्रविनोदेन कालो गच्छति धीमताम् ।
व्यसनेन च मूर्खाणां निद्रया कलहेन वा ॥
 
-ಹಂಸಾನಂದಿ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕೇಳಬಾರದ್ದು

October 6, 2012 - 5:10am
hamsanandi

 

 

ಮೇಲ್ಮೆಯನು ಕೇಳು ನೀ ಚೆಲುವನಲ್ಲ

ನಡತೆಯೆಂಬುದ ಕೇಳು ಕುಲವನಲ್ಲ;

ಕೈಗೂಡಿಸಿದ ಕೇಳು ಕಲಿಕೆಯಲ್ಲ

ನಲಿವು ಪಡೆದುದ  ಕೇಳು ಗಳಿಕೆಯಲ್ಲ!

 

ಸಂಸ್ಕೃತ ಮೂಲ:

 

ಗುಣಂ ಪೃಚ್ಛಸ್ವ ಮಾ ರೂಪಂ ಶೀಲಂ ಪ್ರಚ್ಛಸ್ವ ಮಾ ಕುಲಂ

ಸಿದ್ಧಿಂ ಪೃಚ್ಛಸ್ವ ಮಾ ವಿದ್ಯಾ ಸುಖಂ ಪೃಚ್ಛಸ್ವ ಮಾ ಧನಂ

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ವರುಷತೊಡಕಿನ ದಿನ

January 3, 2013 - 3:43am
hamsanandi

ಯುಗಾದಿಯಂಥ ವರ್ಷಾವಧಿ ಹಬ್ಬದ ಮರುದಿನವನ್ನ ವರ್ಷತೊಡಕಿನ ದಿನ ಅಂತ ಕರೆಯೋ ರೂಢಿ. ಚಿಕ್ಕವನಿರುವಾಗ, ಈ ವರ್ಷತೊಡಕಿನ ದಿನ ಏನು ಮಾಡಿದರೆ, ವರ್ಷವಿಡೀ ಅದನ್ನೇ ಮತ್ತೆ ಮತ್ತೆ ಮಾಡ್ತಿರ್ತೇವೆ ಅಂತ ಮನೆಯಲ್ಲಿ ಹೇಳುತ್ತಿದ್ದರು. ಅಂದ್ರೆ ಆ ದಿನ ಸಿನೆಮಾಗೆ ಹೋಗೋದು ಇತ್ಯಾದಿ ಚಟುವಟಿಕೆಗಳು ಮನ್ನಾ. Read more about ವರುಷತೊಡಕಿನ ದಿನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಸುಭಾಷಿತ