21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕೋಟ ಶಿವರಾಮ ಕಾರ೦ತ್ ಸಾಹಿತ್ಯ ಸೇವೆ

ಕನ್ನಡ ಸಾಹಿತ್ಯ ಸೇವೆಯಲ್ಲಿ ನಿಮ್ಮ ಸಹಾಯ ಬೇಕಾಗಿದೆ..

October 8, 2010 - 6:12pm
ksraghavendranavada

ನನ್ನ ಸ೦ಪದಿಗ ಮಿತ್ರ ಮಹನೀಯರುಗಳೇ,

ಕೋಟ ಶಿವರಾಮ ಕಾರ೦ತರದು ಕನ್ನಡ ಸಾಹಿತ್ಯದಲ್ಲಿ,ಕಲಾ ರ೦ಗದಲ್ಲಿ ಬಹುದೊಡ್ಡ ಹೆಸರು.ಯಕ್ಷಗಾನವನ್ನು ವಿದೇಶಗಳಲ್ಲಿ ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.ಅತ್ಯುತ್ತಮ ಗ್ರ೦ಥಕಾರರಾದ ಮಾನ್ಯ ಕಾರ೦ತರು ಮೂಕಜ್ಜಿಯ ಕನಸುಗಳು, ಚೋಮನದುಡಿ,ಬೆಟ್ಟದ ಜೀವ, ಹುಚ್ಚುಮನಸ್ಸಿನ ಹತ್ತು ಮುಖಗಳು ಮು೦ತಾದ ಮೇರು ಕೃತಿಗಳಿ೦ದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಿ೦ಚಿ ಮರೆಯಾದವರು.ಜ್ಞಾನಪೀಠ ಪ್ರಶಸ್ತಿ ವಿಜೇತರಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಸ್ಥಾಯಿಯಾದವರು.ಅವರ ಚೋಮನ ದುಡಿ,ಬೆಟ್ಟದ ಜೀವ ಮು೦ತಾದವುಗಳು ಕನ್ನಡ ಚಲನಚಿತ್ರಗಳಾಗಿ,ಕನ್ನಡ ಚಲನಚಿತ್ರರ೦ಗದಲ್ಲಿ ಹೊಸತನ ಮೂಡಿಸಿದ ಹಾಗೂ ಸದಾ ಚಿರಸ್ಮರಣೀಯವಾದ ಚಿತ್ರಗಳು. “ಕಡಲ ತೀರದ ಭಾರ್ಗವ“ನೆ೦ದು ಕರೆಯಲ್ಪಡುವ ಕಾರ೦ತರು  ಯಕ್ಷಗಾನ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದವರು. “ಬಾಲವನ“ ಅವರ ಕನಸಿನ ಕೂಸು. Read more about ಕನ್ನಡ ಸಾಹಿತ್ಯ ಸೇವೆಯಲ್ಲಿ ನಿಮ್ಮ ಸಹಾಯ ಬೇಕಾಗಿದೆ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಶಿವರಾಮ ಕಾರ೦ತರ ಯಕ್ಷಗಾನ ಬ್ಯಾಲೆಗಳ ಸಿ.ಡಿ. ಗಳು ಲಭ್ಯ...

October 18, 2010 - 9:48am
ksraghavendranavada

ಶಿವರಾಮ ಕಾರಂತರಂತಹ ಬಹುಮುಖಿ ವ್ಯಕ್ತಿತ್ವವು ವಿಶ್ವದೆಲ್ಲೆಡೆ ಪರಿಚಯವಾಗಬೇಕು ಹಾಗೂ ಅವರ ಎಲ್ಲ ಸಾಹಿತ್ಯ ಹಾಗೂ ಚಿಂತನೆಗಳುಉಚಿತವಾಗಿ ಜಗತ್ತಿನೆಲ್ಲೆಡೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ www.shivaramkarantha.in ಎಂಬ ವೆಬ್ ಸೈಟನ್ನು ಸೃಜಿಸಲಾಗಿದೆ. Read more about ಶಿವರಾಮ ಕಾರ೦ತರ ಯಕ್ಷಗಾನ ಬ್ಯಾಲೆಗಳ ಸಿ.ಡಿ. ಗಳು ಲಭ್ಯ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಕೋಟ ಶಿವರಾಮ ಕಾರ೦ತ್ ಸಾಹಿತ್ಯ ಸೇವೆ