ಶಿವರಾತ್ರಿಯಲ್ಲಿಷ್ಟು ಶಿವ ಸ್ಮರಣೆ
ಶಿವರಾತ್ರಿಯ ಸಂದರ್ಭದಲ್ಲಿ ಈ ಹಿಂದೆ ಅನುವಾದಿಸಿದ್ದ ಕೆಲವು ಸ್ತುತಿಗಳನ್ನು ಹಾಕುತ್ತಿದ್ದೇನೆ. ಮತ್ತೆ ಯಾಕೆ ಅಂದಿರಾ? ಇವತ್ತಿಗೆ ಸಂಪದದ ನನ್ನ ಬ್ಲಾಗಿಗೆ ನಾಲ್ಕು ವರ್ಷಗಳು ಆದವು - ಈ ದಿನ ಏನನ್ನಾದರೂ ಹಾಕಬೇಕೆಂದು :) . ಅಷ್ಟೇ! ನಾಲ್ಕು ವರ್ಷಗಳಿಂದ ನನ್ನ ಬರಹಗಳನ್ನು ಓದಿದ, ಅಭಿಪ್ರಾಯ ತಿಳಿಸಿದ, ಸಲಹೆಗಳನ್ನು ಕೊಟ್ಟ ಎಲ್ಲ ಸಂಪದಿಗರಿಗೂ ನಾನು ಆಭಾರಿ.
ಹಣೆಬರಹ
ತಾನೆ ಲೋಕಕ್ಕೊಡೆಯ ಮಾವ ಬೆಟ್ಟಗಳೊಡೆಯ
ಗೆಳೆಯ ಸಿರಿಗೊಡೆಯ ಮಗನು ಗಣಗಳೊಡೆಯ
ಅದಕೇನು? ತಿರಿದು ತಿಂಬುದು ತಪ್ಪಲಿಲ್ಲವು ಶಿವಗೆ
ಅದಕೆ ಹೇಳುವೆನಿಂದು ವಿಧಿಯೆ ಬಲವೆಂದು!
ಸಂಸ್ಕೃತ ಮೂಲ: Read more about ಶಿವರಾತ್ರಿಯಲ್ಲಿಷ್ಟು ಶಿವ ಸ್ಮರಣೆ





