'ಬೀchi'ಯವರ ಜೋಕುಗಳು
September 24, 2011 - 8:45pm
ಇತ್ತೀಚೆಗೆ "ಸಂಪದಿಗ" ಮಿತ್ರರೊಬ್ಬರು ಕನ್ನಡದ ಕಾದಂಬರಿ ಪಿತಾಮಹರೆನಿಸಿದ ಅ.ನ.ಕೃ. ರವರ ಸಂಧ್ಯಾರಾಗದ ಬಗ್ಗೆ ಬರೆಯುತ್ತಾ 'ಬೀchi'ಯವರ ಬಗ್ಗೆ ಪ್ರಸ್ತಾಪಿಸಿದ್ದರು. ಅವರನ್ನು ಕರ್ನಾಟಕದ ಬರ್ನಾರ್ಡ ಷಾ ಎಂದು ಅವರು ಅಭಿವರ್ಣಿಸಿದ್ದರು. ಇಂಥಹ 'ಬೀchi'ಯವರು ನನ್ನ ತವರು ಜಿಲ್ಲೆಯಾದ ಬಳ್ಳಾರಿಗೆ ಸೇರಿದವರು ಹಾಗಾಗಿ ಹೆಮ್ಮೆಯಿಂದ ಅವರ ಬಗ್ಗೆ ನನಗೆ ತಿಳಿದ ಒಂದೆರಡು ಒಂದೆರಡು ಮಾತುಗಳನ್ನು ಇಲ್ಲಿ ಬರೆಯಬೇಕೆನಿಸುತ್ತದೆ. 'ಬೀchi'ಯವರ ಮೆನೆಮಾತು ತೆಲುಗಾಗಿದ್ದರೆ ಅವರ ಶ್ರೀಮತಿಯವರದು ಕನ್ನಡ. ಅವರಿಬ್ಬರೂ ಒಮ್ಮೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಶ್ರೀಮತಿಯವರು ಅ.ನ.ಕೃ. ರವರ ಸಂಧ್ಯಾರಾಗ ಕಾದಂಬರಿಯನ್ನು ಓದುವುದರಲ್ಲಿ ಮಗ್ನರಾಗಿದ್ದರಂತೆ. Read more about 'ಬೀchi'ಯವರ ಜೋಕುಗಳು
ಸರಣಿ:
ಲೇಖನ ವರ್ಗ (Category):




