ಉಬುಂಟು ೧೦.೦೪ ಉಪಯೋಗಿಸಲಿಕ್ಕೆ ಶುರುಮಾಡಿದ್ದೀರಾ? ಅಥವಾ ಇನ್ನೂ ನಿಮ್ಮ ತಲೆಯಲ್ಲಿ ಅನೇಕ ಪ್ರಶ್ನೆಗಳಿವೆಯೇ?
ಉಬುಂಟುವಿನ ಹೊಸ ಆವೃತ್ತಿ ೯.೦೪ (Jaunty Jacklope) ಈಗ ಡೌನ್ಲೋಡ್ ಮಾಡ್ಕೊಳ್ಲಿಕ್ಕೆ ಲಭ್ಯವಿದೆ. ಹಳೆಯ ಆವೃತ್ತಿಯಲ್ಲಿ ಕಂಡು ಬಂದ ಅನೇಕ ದೋಷಗಳನ್ನು ಸರಿ ಪಡಿಸಿರುವುದೇ ಈ ಆವೃತ್ತಿಯ ವಿಶೇಷ. ನಾನು ಈ ಆವೃತ್ತಿಯ ಟೆಸ್ಟ್ ರಿಲೀಸ್ ಅಲ್ಪಾ (Alpha) ಸ್ಥಿತಿ ಯಲ್ಲಿದ್ದಾಗಲಿಂದಲೂ ಉಪಯೋಗಿಸುತ್ತಾ ಬಂದಿದ್ದು. ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ.
* ಹತ್ತೇ ಸೆಕೆಂಡುಗಳಲ್ಲಿ ಬೂಟ್ ಆಗುತ್ತೆ. ಯೂಟೂಬ್ ಚೆಕ್ ಮಾಡಿ ಅಲ್ಲಿ ಆಗಲೇ ಅನೇಕ ವಿಡಿಯೋಗಳಿವೆ ಇದನ್ನು ತೋರಿಸಲಿಕ್ಕೆ.
* ನೋಟಿಫಿಕೇಶನ್, ಅಂದ್ರೆ ಚಾಟ್ ಇತ್ಯಾದಿ ಮಾಡುವಾಗ ಬರುವ ಸಂದೇಶಗಳನ್ನು ಸುಂದರವಾಗಿ ತೋರಿಸುವಂತೆ ಮಾಡಲಾಗಿದೆ. ಕೆಳಗೆ ಕೊಟ್ಟಿರುವ ಚಿತ್ರಗಳನ್ನು ನೋಡಿ. ನನ್ನ ಲ್ಯಾಪ್ಟಾಪ್ ನಲ್ಲಿ ಕಂಡು ಬಂದಂತಹವು.
ಟೆಕ್ ಸಂಪದ ತಂಡ ಹೊರತಂದ ಚಿಗುರು ಗ್ನು/ಲಿನಕ್ಸ್ ಬಳಸುತ್ತಿದ್ದೀರಾ? ಹೊಸ ವಾಲ್ಪೇಪರ್ ಹುಡುಕುತ್ತಿರಬೇಕಲ್ಲಾ? ನಿಮಗೆಂದೇ ಕೆಲವು ವಾಲ್ಪೇಪರ್ ತಂದಿದ್ದೇವೆ.
ಇದರ ಜೊತೆ ಒಂದು ಸ್ವರ್ಧೆ ಇದ್ದರೆ ಚೆಂದ ಅಲ್ಲವೇ?
-> ಈ ವಾಲ್ಪೇಪರ್ಗಳಿಗೊಂದು ಶೀರ್ಷಿಕೆ ಕೊಡಿ. Read more about ಚಿಗುರು ಗ್ನು/ಲಿನಕ್ಸ್ ಪ್ರಿಯರಿಗೆ - ಚಿತ್ರಪಟಗಳು
ಇಂದು ಇಂಟರ್ನೆಟ್ ಬದುಕಿನ ಒಂದು ಭಾಗವಾಗಿದೆ, ಇದೇ ಒಂದು ಜೀವನವೂ ಆಗಿದೆ ಎನ್ನಬಹುದು. ಗೆಳೆಯರೊಂದಿಗೆ ಮಾತನಾಡುವುದರಿಂದ ಹಿಡಿದು, ಕೆಲಸ, ಮನೋರಂಜನೆ, ಕಲಿಕೆ, ಮಾಹಿತಿವಿನಿಮಯ, ವ್ಯಾಪಾರ, ವ್ಯವಹಾರ ಹೀಗೆ ಹತ್ತು ಹಲವು ಕೆಲಸಗಳು ನೆಡೆಯುತ್ತಿರುವುದು ಇಲ್ಲಿಯೇ... Read more about ಫೈರ್ಫಾಕ್ಸ್ ಗೆ ೫ನೇ ಹುಟ್ಟುಹಬ್ಬದ ಸಡಗರ
ಮಾವಿನ ಸವಿಯನ್ನು ಆಸ್ವಾದಿಸುವವರಿಗೆ ತಿನ್ನಲು ಸಿಗುವುದು ಕೇವಲ ಗೊರಟೆಗೆ ಅ೦ಟಿಕೊ೦ಡ ನವಿರಾದ ತಿರುಳು. ಗೊರಟೆಯನ್ನು ಯಾರೂ ತಿನ್ನುವುದಿಲ್ಲ ಅಥವಾ ಸುಲಭವಾಗಿ ಅದನ್ನು ತಿನ್ನಲು ಸಾಧ್ಯವೂ ಇಲ್ಲ. ಅ೦ತೆಯೇ ಗೊರಟೆ ಇಲ್ಲದೆ ಮಾವಿನಹಣ್ಣಿನ ಅಸ್ತಿತ್ವವೂ ಸಾಧ್ಯವಿಲ್ಲ. ಇದೇ ರೀತಿ ಲಿನಕ್ಸ್ ಎನ್ನುವುದು ನಾವು ಬಳಸುವ ಆಪರೇಟಿ೦ಗ್ ಸಿಸ್ಟಮ್ನ ಗೊರಟೆ ಮಾತ್ರ ಅದನ್ನು ನಾವ್ಯಾರೂ ನೇರವಾಗಿ ಬಳಸುವುದಿಲ್ಲ. ಅದು ಕೇವಲ ಬಳಕೆದಾರರು ಬಳಸುವ ಗ್ನು ಪ್ರಾಜೆಕ್ಟಿನಲ್ಲಿ ಅಭಿವೃದ್ದಿಪಡಿಸಲಾದ ಅಪ್ಲಿಕೇಷನ್ಗಳಿಗೆ ಗಣಕಯ೦ತ್ರದ ಸಾಧನಗಳನ್ನು ಹ೦ಚುವ ಕೆಲಸ ಮಾಡುತ್ತದೆ. Read more about ಇದು ಬರಿ ಲಿನಕ್ಸ್ ಅಲ್ಲ ಗ್ನು/ಲಿನಕ್ಸ್
ಗ್ನು/ಲಿನಕ್ಸ್ ಬಳಸುವವರಿಗೆ, ಕಮ್ಯಾಂಡ್ ಪ್ರಾಂಪ್ಟ್ ನಲ್ಲಿ ಕೆಲಸ ಮಾಡೋದಂದ್ರೆ ಅಚ್ಚುಮೆಚ್ಚು.. ಸ್ವಲ್ಪ ಪರಿಶ್ರಮದಲ್ಲೇ ತುಂಬಾ ಕೆಲ್ಸ ಮಾಡ್ಬೋದು ನೋಡಿ. ಅದಕ್ಕೆ.
ಗೂಗಲ್ ನ ಸೇವೆ ಬಳಸುವ ಅನೇಕ ಗ್ನು/ಲಿನಕ್ಸ್ ಬಳಕೆದಾರರಿಗೆ ಸಿಹಿ ಸುದ್ದಿ. ಗೂಗಲ್ ಬ್ಲಾಗರ್, ಕ್ಯಾಲೆಂಡರ್, ಅಡ್ರೆಸ್ ಬುಕ್, ಪಿಕಾಸ, ಯೂಟ್ಯೂಬ್ ಇತ್ಯಾದಿ ಸೇವೆಗಳನ್ನು ಇನ್ಮುಂದೆ ಸುಲಭವಾಗಿ ಗೂಗಲ್ ಸಿ.ಎಲ್ (Google Command Line or GoogleCL) ಬಳಸಿ ನಿಮ್ಮ ಕನ್ಸೋಲ್ ಮೂಲಕ ಉಪಯೋಗಿಸಿಕೊಳ್ಳಬಹುದು.
ಗೂಗಲ್ ಸಿ.ಎಲ್ ನಿಮಗೆ ಈ ಕೆಳಕಂಡ ಕೊಂಡಿಯಲ್ಲಿ ಸಿಗುತ್ತದೆ.
http://code.google.c...
Read more about ಲಿನಕ್ಸಾಯಣ - ೬೨- googlecl - ಗೂಗಲ್ ಕಮ್ಯಾಂಡ್ ಲೈನ್

Nicholas Marsh ತನ್ನ ಬ್ಲಾಗ್dontfearthecommandline.blogspot.com ನಲ್ಲಿ ಲಿನಕ್ಸ್ ಕನೋಲನ್ನು ಬಳಸಲಿಕ್ಕೆ ಬೇಕಾದ ವಿಷಯಗಳನ್ನು ಸುಲಭವಾಗಿ ತಿಳಿಸಿಕೊಡುಲು ಕೈ-ಪಿಡಿಯೊಂದನ್ನು ಉಚಿತವಾಗಿ ನೀಡಿದ್ದಾನೆ.
Introduction to the Command Line (Second Edition) ಎಂಬ ಈ ಪುಸ್ತಕ ಲುಲು ಡಾಟ್ ಕಾಮ್ ನಲ್ಲಿ ಈಗ ಲಭ್ಯವಿದೆ. ಕೆಳಗಿನ ಕೊಂಡಿಯಿಂದ ನೀವೂ ಅದನ್ನು ಪಡೆದು ಕೊಳ್ಳಬಹುದು. Read more about ಲಿನಕ್ಸಾಯಣ - ಲಿನಕ್ಸ್ ಕನ್ಸೋಲಿಗೊಂದು ಕೈಪಿಡಿ

ಲಿನಕ್ಸ್ ಬಳಸೋದು ಸುಲಭ ಎಂದು ಬಹಳ ಸಾರಿ ಲಿನಕ್ಸಾಯಣದಲ್ಲಿ ಓದಿದ್ದೀರಿ. ಆದ್ರೂ ಅದನ್ನ ತಗೊಂಡು ಒಂದು ಟೆಸ್ಟ್ ಡ್ರೈವ್ ಮಾಡ್ಲಿಕ್ಕೆ ಕಷ್ಟ ಆಗ್ತಿರ್ಬೇಕಲ್ಲಾ? ಅದಕ್ಕೂ ನಾಲ್ಕು ಬೇರೆ ಹಾದಿಗಳಿವೆ ಗೊತ್ತೇ? ಲಿನಕ್ಸ್ ಇನ್ಸ್ಟಾಲ್ ಮಾಡದೇನೆ ಅದನ್ನು ಬಳಸಿ ನೋಡಬಹುದು. ಅದಕ್ಕೆ ಈ ಲೇಖನ. ಒಮ್ಮೆ ಓದಿ, ಲಿನಕ್ಸ್ ಬಳಸಿ ನೋಡಿ.
ಲೈವ್ ಸಿ.ಡಿ
ಸಾಮಾನ್ಯವಾಗಿ ಲಿನಕ್ಸ್ ಸಿ.ಡಿ ಕೈಗೆ ಸಿಕ್ಕ ತಕ್ಷಣ ಅದನ್ನು ಉಪಯೋಗಿಸಿ ನಿಮ್ಮ ಕಂಪ್ಯೂಟರ್ ಬೂಟ್ ಮಾಡಿ ಲಿನಕ್ಸ್ ನಲ್ಲಿ ಕೆಲಸ ಮಾಡಬಹುದು. ಹೌದು, ಇನ್ಸ್ಟಾಲ್ ಮಾಡದೆಯೇ ಲಿನಕ್ಸ್ ಡೆಸ್ಕ್ಟಾಪ್ ನಿಮ್ಮ ಪರದೆಯ ಮುಂದೆ ಬರುತ್ತದೆ. ಲಿನಕ್ಸ್ ನ ಎಲ್ಲ ಮುಖ್ಯ ಡಿಸ್ಟ್ರಿಬ್ಯೂಷನ್ಗಳು ಇಂದು ಲೈವ್ ಸಿ.ಡಿ ಆವೃತ್ತಿಯಲ್ಲಿ ಸಿಗುತ್ತವೆ. Read more about ಲಿನಕ್ಸಾಯಣ :- ಲಿನಕ್ಸ್ ಟೆಸ್ಟ್ ಡ್ರೈವ್
ಗ್ನು/ಲಿನಕ್ಸ್ ಅನ್ನು ಉದ್ಯಮಗಳು ಬಹಳ ವೇಗವಾಗಿ ಅಳವಡಿಸಿಕೊಂಡು ಬರುತ್ತಿವೆ. ಇತ್ತೀಚಿನ ಲಿನಕ್ಸ್ ಫೌಂಡೇಷನ್ ನೆಡೆಸಿದ ಅಧ್ಯಯನದ ಪ್ರಕಾರ ಲಿನಕ್ಸ್ ರಾಜನಂತೆ ಮೆರೆಯುತ್ತಿದೆ, ಅದೂ ಮೈಕ್ರೋಸಾಪ್ಟ್ ನ ಪ್ಯಾಟೆ ಶೇರುಗಳನ್ನು ಕೂಡ ತನ್ನದಾಗಿಸಿಕೊಳ್ಳುತ್ತ.
ಲಂಡನ್ ಸ್ಟಾಕ್ ಎಕ್ಸ್ಚೇಂಜ್ (LSE) ಇತ್ತೀಚಿಗೆ ತನ್ನೆಲ್ಲ ವಹಿವಾಟುಗಳನ್ನು ಗ್ನು/ಲಿನಕ್ಸ್ ಸಂಭಂದಿತ ತಂತ್ರಾಂಶಗಳ ಮೇಲೆ ನೆಡೆಸುತ್ತಿರುವುದಾಗ ಹೇಳಿಕೆ ನೀಡಿತ್ತು. ಇದನ್ನು ಯಶಸ್ವಿಯಾಗಿ ಮುನ್ನೆಡೆಸಲು ಹಾಕಿಕೊಂಡಿರುವ ಎಲ್ಲ ಯೋಜನೆಗಳು ಅಂದುಕೊಂಡಂತೆ ನೆಡೆದರೆ ವಿಶ್ವದಲ್ಲೇ ಅತಿವೇಗದ ಶೇರುಮಾರುಕಟ್ಟೆಯನ್ನು ತನ್ನ ತೆಕ್ಕೆಯಲ್ಲಿ ಹುದುಗಿಸಿಕೊಂಡ ಖ್ಯಾತಿ ಗ್ನು/ಲಿನಕ್ಸ್ ಗೆ ಸಿಗಲಿದೆ. Read more about ಲಿನಕ್ಸಾಯಣ - ಲಂಡನ್ ಸ್ಟಾಕ್ ಎಕ್ಸ್ಚೇಂಜ್ ನ ವೇಗವರ್ದಕ - ಗ್ನು/ಲಿನಕ್ಸ್
ಸ್ವತಂತ್ರ ತಂತ್ರಾಂಶ ಮತ್ತು ಮಾನದಂಡಗಳನ್ನು ಕಲಿಸುವ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ FTA (Free Technology Academy) ಮತ್ತು FSF (Free Software Foundation) ಗಳು ಕೈಜೋಡಿಸಿವೆ. ಈ ವಿಷಯವನ್ನು FTAನ ಅಸೋಸಿಯೇಟ್ ಪಾರ್ಟ್ನರ್ ನೆಟ್ವರ್ಕ್ ನಲ್ಲಿ ತಿಳಿಸಲಾಗಿದೆ.
Read more about ಲಿನಕ್ಸಾಯಣ - ಸ್ವತಂತ್ರ ತಂತ್ರಾಂಶ ಶಿಕ್ಷಣಕ್ಕೆ ಪ್ರೋತ್ಸಾಹ