ನಾನು ಸೋತಿಲ್ಲ. ಪ್ರಯೋಗ ಸಾಧ್ಯವಗದಂತಹ 10000 ದಾರಿಗಳನ್ನು ಕಂಡು ಕೊಂಡಿದ್ದೇನೆ.

— ಥಾಮಸ್ ಅಲ್ವಾ ಎಡಿಸನ್ (ತಮ್ಮ ವಿದ್ಯುತ್ ಬಲ್ಪ್ ಪ್ರಯೋಗ 1000

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಹಾಗೇ ಸುಮ್ಮನೆ

ಮನಸ್ಸನ್ನು ಕಾಡಿದ ಆ ನಗು..

ನಿನ್ನನ್ನು ನೋಡಿದಾಗ...ಹುಂ ಏನು ಹೇಳ್ಬೇಕು ಅಂತಾ ತಿಳಿತಾ ಅಲ್ಲ. ಸಂಥಿಂಗ್ ಲೈಕ್ ನನ್ನ ಮನಸ್ಸಲ್ಲಿ.... ಕುಛ್ ಕುಛ್ ಹೋತಾ ಹೈ. ನಾವಿಬ್ಬರೂ ಈವರೆಗೆ ಮಾತನಾಡಿಲ್ಲ. ಆದರೂ ನೀನು ಯಾವಾಗಲೂ ನನ್ನತ್ತ ನೋಡಿ ಚಿಕ್ಕದೊಂದು ಸ್ಮೈಲ್ ಕೊಟ್ಟಾಗ ನನಗೇನೋ ಪುಳಕ. ಆಫೀಸಿನಲ್ಲಿ ನೀನು ಏನೋ ನೆಪ ಮಾಡಿಕೊಂಡು ನನ್ನ ಕ್ಯಾಬಿನ್ ಪಕ್ಕ ಬರುವಾಗ ಇವ ಇಂದು ನನ್ನಲ್ಲಿ ಮಾತಾಡಿಯೇ ಮಾತಾಡುತ್ತಾನೆ ಎಂದು ನಾನು ಅಂದುಕೊಳ್ಳುತ್ತೇನೆ. ಆದ್ರೆ ನೀನು...ಅದೇ ಮುಗುಳ್ನಗು ಕೊಟ್ಟು ಮತ್ತೆ ಮತ್ತೆ ನನ್ನನ್ನು ಚಡಪಡಿಸುವಂತೆ ಮಾಡ್ತಿಯಾ... ನಿಜ ಹೇಳಲಾ? ನಿನ್ನ ಆ ನಗುವಿನಲ್ಲಿ ಅದೇನು ಜಾದೂ ಇದೆಯಂತ ನಂಗೊತ್ತಿಲ್ಲ ಕಣೋ. ನಿನ್ನ ನಗುವಿನ ಮುಂದೆ ನಾನಂತೂ ಕ್ಲೀನ್ ಬೌಲ್ಡ್ ...  ಮುಂದೆ ಓದಿ »

ನಾವ್ಯಾಕೆ ತಪ್ಪು ಮಾಡುತ್ತೇವೆ?

ಮನುಷ್ಯನೆಂದೂ ಪರಿಪೂರ್ಣನಲ್ಲ. ಆತನಲ್ಲಿ ತಪ್ಪುಗಳು, ಒಪ್ಪುಗಳು ಇದ್ದೇ ಇರುತ್ತವೆ. ತಪ್ಪು ಮಾಡುವುದು ಸಹಜ ಆದರೆ ಅದನ್ನು ತಿದ್ದಿ ಸರಿದಾರಿಯಲ್ಲಿ ನಡೆಯುವುದು ಜಾಣತನ. ಮನುಷ್ಯ ಹುಟ್ಟಿದಾಗಿನಿಂದ ಸಾಯುವ ವರೆಗೂ ಒಂದಲ್ಲ ಒಂದು ತಪ್ಪನ್ನು ಮಾಡಿಯೇ ಮಾಡುತ್ತಾನೆ. ಇಲ್ಲಿ ತಪ್ಪು ಯಾರು ಹೇಗೆ ಮಾಡಿದ್ದಾರೆ ಎಂಬುದು ಪ್ರಶ್ನೆಯಲ್ಲ ಯಾಕಾಗಿ ಆ ತಪ್ಪು ಆಗಿ ಹೋಯಿತು? ಅದನ್ನು ತಿದ್ದುವುದಾದರೂ ಹೇಗೆ ಎಂಬುದು ಚಿಂತಿಸಬೇಕಾದ ವಿಷಯ. ಚಿಕ್ಕವರಿರುವಾಗ ನಾವು ಅದೆಷ್ಟೋ ತಪ್ಪುಗಳನ್ನು ಮಾಡುತ್ತೇವೆ. ಆವಾಗ ನಮ್ಮ ಹೆತ್ತವರು, ಹಿರಿಯರು, ಟೀಚರ್್ಗಳು ಕೆಲವೊಮ್ಮೆ ಗುದ್ದು ನೀಡಿ ಮತ್ತೊಮ್ಮೆ ಮುದ್ದು ಮಾಡಿ ಆ ತಪ್ಪುಗಳನ್ನು ತಿದ್ದಲು ಸಹಕರಿಸುತ್ತಾರೆ. ನಮ್ಮ ಅಪ್ಪ ಅಮ್ಮ ನಾವು ಚಿಕ್ಕದಿರುವಾಗ ಮಾಡಿದ ಅದೆಷ್ಟೋ ತಪ್ಪುಗಳನ್ನು ಕ್ಷಣ ಮಾತ್ರದಲ್ಲಿ ಕ್ಷಮಿಸಿ ಬಿಡುತ್ತಾರೆ. ಆದರೆ ನಾವು ದೊಡ್ಡವರಾದಾಗ ನಮ್ಮ ಅಪ್ಪ ಅಮ್ಮ ( ವೃದ್ಧರಾಗಿರುತ್ತಾರೆ) ಯಾವುದಾದರೂ ಚಿಕ್ಕ ತಪ್ಪು ಮಾಡಿದರೆ ಗುರ್ರ್ ಅನ್ನುತ್ತೇವೆ. ಇದ್ಯಾಕೆ ಹೀಗೆ?  ಮುಂದೆ ಓದಿ »

ನಾವು ಕನ್ನಡ ಎಷ್ಟು ಕಲ್ತಿದ್ದೀವಿ?


                 ಇದು ಹದುಳ ಇದು ಕುಶಲ
              ಇದು ಕಳಶ ಕುಂಭಗಳ ಮಂಗಳ ಮೇಳ
 
ಈ ರೀತಿಯಾಗಿ, ಪ್ರಾರಂಭವಾಗೋ ಈ ಕವಿತೆಯನ್ನು ಇತ್ತೀಚಿಗೆ ಓದಿದೆ.
’ಹದುಳ’ ಅನ್ನೋದು ಅರ್ಥ ಆಗಲಿಲ್ಲ. ’ಸಂಧರ್ಭಕ್ಕೆ ತಕ್ಕಂತೆ ಹೊಂದಿಸಿ’ ಮಾಡಿದೆನಾದರೂ ಸಮಾಧಾನವಾಗಲಿಲ್ಲ. ಅದೃಷ್ಟವಶಾತ್ ಆ ಸಂಕಲನದ ಮುನ್ನುಡಿಯಲ್ಲಿ ಇದೇ ಕವಿತೆಯ ವಿಷಯ ಬರೋದರಿಂದ ಮತ್ತು ಹದುಳದ ಬಗ್ಗೆ ವಿವರಿಸಿರೋದರಿಂದ ಅರ್ಥ ಆಯ್ತು.
 
ನನ್ನಂತಹ ಪಾಮರರಿಗೆ ಅರ್ಥ ಆಗಲೀಂತ ಮುನ್ನುಡಿಯಿಂದ ಕೆಳಗಿನದನ್ನು ಯಥಾವತ್ತಾಗಿ ಕದ್ದಿದ್ದೀನಿ.
   ಮುಂದೆ ಓದಿ »

ರಾಜ್ಯೋತ್ಸವದ ಹೊತ್ತಿಗೆ ಬಂದ ಒಂದು ಒಳ್ಳೇ ಸುದ್ದಿ

ಕೆಲವು ದಿನಗಳಿಂದ ಮನಸ್ಸಿನ ಒಂದು ಮೂಲೆಯೇ ಖಾಲಿಯಾದಂತಾಗಿತ್ತು. ಸಂಪದದ ಬೀಟಾ ಆವೃತ್ತಿಯನ್ನು ನೋಡಿ ಎಷ್ಟು ಸಂತೋಷ ಆಯ್ತೆಂದರೆ, ಹೇಳೋದಕ್ಕೇ ಆಗೋದಿಲ್ಲ.

ಅದು ಹೇಗೋ ಇಲ್ಲಿರೋ ಕಡೇ ಬ್ಲಾಗ್ ಎಂಟ್ರೀ - ವಸಂತಪುರಿ, ಕ್ಯಾಲಿಫೋರ್ನಿಯ - ದಲ್ಲಿ ಇರೋ ಲಿವರ್ ಮೋರ್ ದೇವಾಲಯಕ್ಕೆ ಇವತ್ತು ಹೋಗಿ ಬರುತ್ತಿರುವ ಹಾಗೇ ಈ ಒಳ್ಳೇ ಸುದ್ದಿಯನ್ನೂ ನೋಡಿ, ಶಮ್ಮಿ ಕಪೂರ್ ತರಹ ಯಾಹೂ....ಅಂತ ಕೂಗಲೇ? ಅನ್ನಿಸ್ತಿದೆ!

-ಹಂಸಾನಂದಿ

ಹೃದಯದೊಂದಿಗೆ ಒಂದು ಸಲ್ಲಾಪ...

ನಾನು: ಏ ಹೃದಯಾ... ಏನು ಯೋಚನೆ ಮಾಡ್ತಾ ಇದ್ದೀಯಾ...?

ಹೃದಯ: ಹಾಗೇ ಸುಮ್ಮನೆ ಇದ್ದೇನೆ.

ನಾನು: ಇಲ್ಲಾ ಏನೋ ಯೋಚನೆ ಮಾಡುವಂತಿದೆ...ನನ್ನಲ್ಲಿ ಹೇಳಲಾರೆಯಾ?

ಹೃದಯ: ಏನಿಲ್ಲಾ ಬಿಡು...

ನಾನು: ಹೇಳೇ...

ಹೃದಯ: ಹೂಂ. ನೋಡು ಈ ಲಾಲ್್ಬಾಗ್ ಎಷ್ಟು ಸುಂದರವಾಗಿದೆಯಲ್ಲಾ..

ನಾನು: ಹೌದು

ಹೃದಯ: ಎಷ್ಟೊಂದು ಸಸ್ಯ, ಹೂಗಳು ಮತ್ತೆ..

ನಾನು: ಮತ್ತೆ (?)

ಹೃದಯ: ಪ್ರೇಮಿಗಳು!

ನಾನು: ಹೂಂ..  ಮುಂದೆ ಓದಿ »

Syndicate content