ಸಹನೆ

ಸಹನೆ

ಕವನ

 ನೂವಿನಿಂದ  ಮಡುಗಟ್ಟಿದ  ಮನಸ್ಸು,

ಜ್ವಾಲೆ  ಉಗುಳುವ  ಮುನ್ನ,

ಶಮನಗೊಳಿಸಲಿ   ಸಹನೆ ,

ಜ್ನ್ಯಾನದ   ಜಲಸುರಿದು ,

ತೃಪ್ತಿ  ಸಾವಿಗೆ   ಸ್ವಾಗತಿಸಲಿ.

.

 

ಹಸಿವಿನ  ಶಮನಕ್ಕೆ   ಸಾಂತ್ವನ  ಮದ್ದಲ್ಲ,

ಬರಡು   ಮಾತು   ಸಲ್ಲ, ಕೊಡಿಗೆನೀಡಿ

ಮುದ್ದಿಸಿ ನೋಡು  ನೂವುಂಡ  ಬದುಕಿಗೆ,

ಅಮೃತ  ಅದುವೇ  ಆದೀತು,

ಕಾಲಗತಿಯ  ಗೆಲ್ಲಬಲ್ಲ  ಆ  ಮಲ್ಲನಂತಿರುವುದು.

 

ಜೀವನದ  ಅನುಭವಗಳ

ಬಿಗಿದಪ್ಪಿ ಕೊೞುವ   ಕಾಲಗತಿಯಿದು

ಇದಕ್ಕೆ  ನಿಟ್ಟುಸಿರು,  ನಿರೀಕ್ಷೆ  ಸಲ್ಲ,

ಧೈರ್ಯ  ದಹಿಸಿ ಹಾಕುವುದು  ನೂವುಗಳ,

ಬಲ್ಲವನ  ಬದುಕು  ಮಲ್ಲನಂತಿರುವುದು.

 

ನೂವು ನಲಿಯುವಾಗ

ಹಾರೈಕೆ  ಹಾಡು  ಹಾಡಬೇಡ

ವಿಭುವಿನ  ವಿಭೂತಿ ಚೆಲ್ಲಿ  ಪಥ  ವಿಮುಖನಾಗಿ

ಕಾಲ ಚಿಂತನೆಗೆ   ಚಿತೆ  ಕಟ್ಟಿ,

ಬದುಕಿನಿಂದ  ಪಾಲಾಯನ  ಗೈಯಬೇದ.

 

ಭೋದನೆಗಳು  ಬದಕು  ಕಟ್ಟಲಾರವು,

ಕನಸ್ಸು  ನೆನಸಾಗಲು  ಕಾಯಕದ  ಬೀಜ  ನೆಟ್ಟಿ

ವಿಶ್ವಾಸದ ನೀರುಹರಿಸಿ,  ಭರವಸೆಯ  ನೆರಳಲ್ಲಿ

ವಿಭುವಿಗೆ  ಮೋರೆಹೋಗು,

ಮೇರೆ  ಮೀರಿ  ಮೆರೆಯುವೆ  ಬದುಕಿನಲ್ಲಿ.

 

ಮೇರೆಗಳು  ಮೆರೆದಾಗ  ನೂವಿನಲ್ಲೆ,

ಹಾಲಿನ  ತೊರೆ  ಹರಿದೀತು

ತ್ರುಪ್ತಿ  ಸಾಗರದಲ್ಲಿ  ಮುತ್ತು ಉಕ್ಕಿ

ಬದುಕು  ಬವಣೆಯಲ್ಲೇ  ತೃಪ್ತಿ  ಕಂಡೀತು.......