22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸಾವು

July 19, 2012 - 1:57pm
Sheshadri.CV

 

ಹಕ್ಕಿ ಹಾರಿದ ಕೂಡಲೆ

ಮರ  ಬಿದ್ದು ಹೋಗುತ್ತದೆ.

ಆಗಾಗ ರೆಕ್ಕೆ ಬಡಿದಾಟ.

ಮರಕ್ಕಿಲ್ಲ ನೋಟ.

 

ನದಿ ಒಣಗಿದ ಕೂಡಲೆ

ದೋಣಿ ಸುಟ್ಟು ಹೋಗುತ್ತದೆ.

ಯಾವ ದಿಕ್ಕು..?

ಯಾವ ದಡ...?

ಸಮುದ್ರ ಹುಸಿ.

ದಡ ದಂಡ.

 

ಗಾಳಿ ನಿಂತ ಕೂಡಲೆ

ಗಾಳಿ ಪಟ ಕುಸಿಯುತ್ತದೆ.

ಯಾವ ತ್ತಂತಿ ಮೇಲೆ..?

ಯಾವ ಮಹಡಿ ಮೇಲೆ..?

ಗಾಳಿ ಮುಂದೆ ಹೋಗುತ್ತದೆ.

 

ತಬಲಕೆ ತೂತು ಬಿದ್ದು

ಕಛೇರಿ ನಿಲ್ಲುತ್ತದೆ.

ಶ್ರೋತೃಗಳು  ಏನೆಂದರು..?

ವೇದಿಕೆಯ ವಕಾಲತ್ತು ಏನಿತ್ತು..?

 

--------------------------------

c v sheshadri holavanahalli

( ರೆಕ್ಕೆ ಗೂಡು ಆಕಾಶ ಸಂಕಲನದಿಂದ.)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.