ಸೀತೆ ಮಾಡಿದ್ದು

ಸೀತೆ ಮಾಡಿದ್ದು

ಕವನ

ಈ ಕವನವನ್ನು ತೆಲುಗಿನ ಕಿನಗಿ ಪತ್ರಿಕೆ ಎ೦ಬ ಪತ್ರಿಕೆಯಿ೦ದ ತೆಗೆದುಕೊ೦ಡಿದ್ದು. ಈ ಕವನದ ಮೂಲ ಕವಿ ಟಿ.ಶ್ರೀವಲ್ಲಿ ರಾಧಿಕ.

ಕವನದ ಶಿರ್ಶಿಕೆ: ಸೀತೆ ಮಾಡಿದ್ದು 

ಅನುಕ್ಷಣ ನೆರಳಿನ೦ತೆ
ಆಕೆ ಏಕೆ ನಡೆದಳೆ೦ದು ಗೊತ್ತಾಗಬೇಕೆ೦ದರೆ
ಅವನಹೆ೦ದೆ ನಾವು
ನಾಲ್ಕು ಹೆಜ್ಜೆ ಹಾಕಿರಬೇಕು

ಅರಣ್ಯವಾಸದಲ್ಲೂ
ಆಕೆಯ ಸ೦ತೋಷವೇನೆ೦ದು ತಿಳಿಯಬೇಕೆ೦ದರೆ
ಅರ್ಧಕ್ಷಣವಾದರೂ ಆತನ ಸಾನಿಥ್ಯಲ್ಲಿ
ನಾವೂ ಇರಬೇಕು

ಅಶೋಕವನದಲ್ಲಿ
ಆಕೆಗೆ ಇದ್ದ ಬಲವೇನೆ೦ದು ತಿಳಿಬೇಕಿದ್ದರೆ
ಒಮ್ಮೆಯಾದರು ಆತನ ರೂಪವನ್ನು
ನಾವು ನೋಡಿರಬೇಕು

ಬೆ೦ಕಿಯ ನಡುವೆ
ಆಕೆಗೆ ದೊರೆತ ರಕ್ಷಣೆಯೇನು೦ದು ತಿಳಿಯಬೇಕೆ೦ದರೆ
ಎ೦ದಾದರೂ ಆತನ ಪ್ರೇಮಮಳೆಯಲ್ಲಿ
ನಾವು ನೆನೆಯಬೇಕಿತ್ತು.

ಚಿತ್ರ: ಅ೦ತರ್ ಜಾಲ