ಸುನಾಮಿಯಲ್ಲಿ ತಾಯಿಯನ್ನ ಕಳೆದುಕೊಂಡ ಬಾಲಕ

ಸುನಾಮಿಯಲ್ಲಿ ತಾಯಿಯನ್ನ ಕಳೆದುಕೊಂಡ ಬಾಲಕ

ಕವನ

ಇಂದು ಅದೇಕೊ ಸಾಗರ ಎಷ್ಟು ಆತ್ಮೀಯನೆನೀಸುತ್ತಿದ್ದಾನೆ
ಪ್ರತಿ ಸಾರಿ ಪಾದ ಸ್ಪರ್ಶಿಸಿ ಕ್ಷಮೆಯಾಚಿಸುತ್ತಿರುವ ಅಲೆಗಳು
ತಪಿಸ್ತ ಭಾವ ಹೊತ್ತು ಬೀಸುತ್ತಿರುವ ತಂಗಾಳಿ

ಏನೂ ತಿಳಿಯದಂತೆ ಕುಂಟನೆಪವೇಳಿ ಮರೆಯಾಗುತ್ತಿರುವ ಸೂರ್ಯ
ಮರೆಯಲೆತ್ನಿಸಿದರೂ ಬಿಡದ ದಡದ ಮರಳ ಹೆಜ್ಜೆ

ಮನದಾಳಕ್ಕಿಳಿದು ಮನವೊಲಿಸುವ ಅಲೆಗಳ ಗುಡುಗು

ಪ್ರತಿ ಸಂಜೆ ನಾ ಇಲ್ಲಿ ಬರುವುದು ಇವೆಲ್ಲವನ್ನ ನೋಡಲಿಕ್ಕಲ್ಲ,

ಆ ಅಲೆಯನ್ನ ಪ್ರಶ್ನಿಸಲು,
ತನ್ನಿಂದ ತನ್ನ ತಾಯಿಯನ್ನ ಕೊಂಡೊಯ್ದ ಆ ಅಲೆಯನ್ನ ಪ್ರಶ್ನಿಸಲು,

ಏ ಅಲೆಯೆ,
ನಿನ್ನಿಂದ ಬರೀ ದೇಹವನ್ನ ಮಾತ್ರ ಕೊಂಡಯ್ಯಲು ಸಾಧ್ಯ
ನನ್ನ ತಾಯಿಯ ನೆನಪನ್ನ, ಪ್ರೀತಿಯನ್ನ ಕೊಲ್ಲುವ ಶಕ್ತಿ ನಿನಗಿಲ್ಲ
ಮತ್ತೆ ನಾಳೆ ನಿನಗಾಗಿ ಬರುವೆ ಎಂದು ಎದ್ದು ನಿಂತೆ

"ಜೊಪಾನ" ಕಡಲಿಂದ ಬಂದ ಶಬ್ದ,
ಅಮ್ಮನದ?

- ನಿಮ್ಮ ಗೆಳೆಯ ಮುರಳಿ