ಸುಲಭವಲ್ಲ ಆದರೆ ಜೀವನ ತುಂಬಾ ಸರಳ

ಸುಲಭವಲ್ಲ ಆದರೆ ಜೀವನ ತುಂಬಾ ಸರಳ

ಕವನ

ಚೆನ್ನಾಗಿದೀನಿ ಎಂಬುದು ಮೋಸ ನಮಗೆ
ಸತ್ಯ ತಳ ಸೇರುವುದು ಒಳ ಒಳಗೆ
ಜಗವೆಲ್ಲ ತೋರದು ನಿನ್ನ ಸಣ್ಣ ಕಿಡಕಿ
ಆಗಲಿ ನಿಜದೊಂದಿದೆ ಮುಖಾ ಮುಖಿ

ಸುಲಭವಲ್ಲ ಆದರೆ ಜೀವನ ತುಂಬಾ ಸರಳ
ಏನು ಬೇಕು? ಆಯ್ಕೆ ಮಾಡಿಕೊಳ್ಳುವುದೇ ವಿರಳ
ಕಣ್ಣ ನೇರಕ್ಕಿರಲು ಮುಟ್ಟಬೇಕಿರುವ ಗುರಿ
ಒಂದುಗೂಡಿಸಲು ಎಲ್ಲ ಬಲ, ಸರಳ ಸಾಗುವ ದಾರಿ

ಎದ್ದ ಕ್ಷಣದಿಂದ ಶುರು ಮನ ದೇಹಗಳ ಹೋರಾಟ
ದೇಹ ಬಯಸುವುದು ದಿನವೂ ಆಡುವ ಆಟ
ಕೊಡಿ ಮನಕ್ಕೆ ಹೆಚ್ಚಿನ ಬಲ, ದೇಹವಾಗಲೀ ಚಕಿತ
ಬರಲು ನಿಮ್ಮ ಜಗದ ಆಚೆ, ವಿಜಯಲಕ್ಷ್ಮಿ ಖಚಿತ