23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸೋಲೇ ಗೆಲುವಿನ ಮೊದಲ ಮೆಟ್ಟಿಲು

November 9, 2010 - 7:56pm
gopinatha

ಸೋಲೇ ಗೆಲುವಿನ ಮೊದಲ ಮೆಟ್ಟಿಲು


ದಾಟುವೆನೆಂದೂ ತುಂಬಿದ ನದಿಯ

ತೀರದೆ ಕುಳಿತರೆ ದುರ್ಲಭವೇ

ಅಲ್ಪ ಸ್ವಲ್ಪವೇ ದಿನವೂ ಕಲಿಯೇ

 ಈಜಿ ದಾಟಲು ಸುಲಭವೆ


ಕಲಿಯುವ ಆಸೆ ನಿನ್ನಲಿ ಬಲಿತರೆ

 ಕಷ್ಟವೂ ಇಷ್ಟವೇ ಅನಿಸುವುದೂ

ಆಸೆಯ ನಿಗೃಹ ಬೆಳೆಸುತ ಕಲಿತರೆ

ಸಾರ್ಥಕ ಬದುಕೂ ಹನಿಸುವುದು


ಸೋಲೇ ಗೆಲುವಿನ ಮೊದಲ ಮೆಟ್ಟಿಲು

ಸಾಧಕ ಗುರಿಯನು ಮುಟ್ಟಲು

ಸತತ ಪರಿಶ್ರಮ ಸಾರ್ಥಕ ಬಟ್ಟಲು

ಯಶಸ್ಸು  ಕೀರ್ತಿಯನು ಕಟ್ಟಲು


ಕಲಿವದು ಎಂದಿಗೂ ಮುಗಿಯದ ಆಟ

ಬದುಕಿನ ಅಂತಿಮ ಘಳಿಗೆಗೂ ಪಾಠ

ದಿನದಿನ ಹೊಸತನ ಕಲಿವುದೇ ರೀತಿ

ಪ್ರಕೃತಿಯ ಅಣು ಅಣು ಕಲಿಸದೇ ನೀತಿ

 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by partha1059 on
ಸೋಲೇ ಗೆಲುವಿನ ಮೊದಲ ಮೆಟ್ಟಿಲು ಸಾಧಕ ಗುರಿಯನು ಮುಟ್ಟಲು... ಗೋಪಿನಾಥ್ ರವರಿಗೆ ನಮಸ್ಕಾರ ಸುಮ್ದರ ಕವನ ನಿಜಕ್ಕು ಕಲಿಕೆ ಎಂದಿಗು ಮುಗಿಯದ ಆಟವೆ ಪಾರ್ಥಸಾರಥಿ