ಸ್ಟೀಲ್ ಫ್ಲೈ-ಓವರ್ ಬೇಡ - ಕಿರುಚಿತ್ರ

ಸ್ಟೀಲ್ ಫ್ಲೈ-ಓವರ್ ಬೇಡ - ಕಿರುಚಿತ್ರ

ಸರ್ಕಾರ ನಿರ್ಮಿಸಲು ಹೊರಟ ಸ್ಟೀಲ್ ಫ್ಲೈ-ಓವರ್ ಬೇಡ, ಅದು ಪರಿಸರಕ್ಕೆ ಮಾರಕ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಾಡಿದ ಕಿರುಚಿತ್ರ, ಮರವೇ ಬಂದು ಮುಖ್ಯಮಂತ್ರಿಗಳ ಜೊತೆ ಮಾತನಾಡಿದರೆ ಹೇಗಿರಬಹುದು, ಅದು ತನ್ನ ನೋವನ್ನು ಹೇಳಿಕೊಂಡು "ನಮ್ಮನ್ನು ಬದುಕಲು ಬಿಡಿ" ಎಂದು ಕೇಳಿಕೊಂಡರೆ ಹೇಗಿರಬಹುದು ಎಂಬ ಚಿಕ್ಕ ನೋಟ . 
 
https://www.youtube.com/watch?v=mN6UUe5PhU4
 
ಭಾರತ ಕಲುಷಿತವಾಗುತ್ತಿದೆ, ನಗರಗಳು ಆಧುನಿಕತೆಯ ನೆಪದಲ್ಲಿ ಪ್ರಕೃತಿಯನ್ನು ಕೊಳ್ಳೆಹೊಡೆಯುತ್ತಿವೆ, ಪ್ರಕೃತಿಯನ್ನು ನಂಬಿದ ಪ್ರಾಣಿ ಪಕ್ಷಿಗಳ ಸಂಕುಲ ನಾಶವಾಗುತ್ತಿದೆ, ಹೀಗಾದರೆ ಪ್ರಕೃತಿಯ ಸಮತೋಲನ ಕಳೆದು ಹೋಗಿ, ಭೂಮಿ ಸಿಡಿಯಬಹುದು ಚಂದ್ರನಲ್ಲಿ, ಮಂಗಳದಲ್ಲಿ ನೀರಿದೆಯಾ ! ಗಾಳಿ ಇದೆಯಾ ! ಮರ ಇದೆಯಾ ! ಎಂದು ಕಂಡು ಹಿಡಿಯುವ ಭರದಲ್ಲಿ ನಮ್ಮಲ್ಲೇ ಇರುವ ಪ್ರಕೃತಿಯನ್ನು ಮುಲಾಜಿಲ್ಲದೆ ಕೊಲ್ಲುವ ಪರಿಗೆ ಬೆರಗಾಗುತ್ತಿದೆ, ಇತ್ತೀಚಿನ  ವರ್ಷಗಳಲ್ಲಿ ಪ್ರಕೃತಿ ಮುಕ್ಕಾಲು ಪಾಲು ಹದಗೆಟ್ಟಿದೆ 
 
ಮುಂದಾಗುವ ಅನಾಹುತಕ್ಕೆ ನಾವೇ ಹೊಣೆಗಾರರು,,,,,,
 
ಹಾಗಾಗಿ ಚಿಕ್ಕ ಚಿಕ್ಕ ಹೆಜ್ಜೆಗಳನ್ನಿಟ್ಟು ಪ್ರಕೃತಿಯನ್ನು  ದೊಡ್ಡ ಮಟ್ಟದಲ್ಲಿ ಕಾಪಾಡೋಣ,,,,,
 
ದಯವಿಟ್ಟು ಮರ ಕಡಿದು ಸ್ಟೀಲ್ ಫ್ಲೈಓವರ್ ಮಾಡೋದು ಬೇಡ, ಟ್ರಾಫಿಕ್ ಸಮಸ್ಸೆ ತಡೆಗಟ್ಟಲು ನೂರಾರು ದಾರಿಗಳಿವೆ  ತಜ್ಜ್ಞರ ಜೊತೆ ಸಮಾಲೋಚಿಸಿ ಬೇರೊಂದು ವ್ಯವಸ್ಥೆ ಮಾಡೋಣ
 
-ಜಿ.ಕೆ. ನವೀನ್ ಕುಮಾರ್ 

Comments