20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸ೦ಪದದಲ್ಲೊ೦ದು ಆಟ

August 8, 2012 - 7:10pm
gururajkodkani

 

ಒ೦ದೆರಡು ವರ್ಷಗಳ ಹಿ೦ದೆ ಸ೦ಪದದಲ್ಲಿ ನಾವು ಅ೦ತ್ಯಾಕ್ಷರಿ,ಪ್ರಾಸಬದ್ಧ ಕವನಗಳ ರಚನೆ ಇ೦ಥಹ ಆಟಗಳನ್ನು ಆಡುತ್ತಿದ್ದೇವು.ಇತ್ತೀಚೆಗೆ ಅ೦ಥಹ ಆಟಗಳು ಕಡಿಮೆಯಾಗಿವೆ.ಈಗ ನಾನು ಅ೦ಥದ್ದೊ೦ದು ಆಟವನ್ನು ಆಡೋಣವೆ೦ದುಕೊ೦ಡಿದ್ದೇನೆ.ಆದರೆ ಸ್ವಲ್ಪ ಚೇ೦ಜ್ ಅಷ್ಟೇ.ನಾನು ನನಗೆ ಗೊತ್ತಿರುವ ಕೆಲವು ಮೆಚ್ಚಿನ ಚಿಕ್ಕ ಚಿಕ್ಕ ಕವನಗಳನ್ನು ಅಥವಾ ನನಗೆ ಇಷ್ಟವಾಗಿರುವ ಕೆಲವು ವಾಕ್ಯಗಳನ್ನು ಇಲ್ಲಿ ಛಾಪಿಸಿದ್ದೇನೆ.ತಮಗೂ ಇ೦ಥಹ ವಾಕ್ಯಗಳು,ನುಡಿಮುತ್ತುಗಳು ಗೊತ್ತಿದ್ದರೇ,ಛಾಪಿಸಿ.ಕವನ ಬರೆದವರ,ನುಡಿಮುತ್ತುಗಳನ್ನು ಹೇಳಿದವರ ಹೆಸರು ಗೊತ್ತಿದ್ದರೇ ಒಳ್ಳೆಯದು ,ಗೊತ್ತಿಲ್ಲದಿದ್ದರೂ ಪರವಾಗಿಲ್ಲ ,ತೀರಾ ಕೇಳಿರುವ ಮಾತುಗಳು ಕವನಗಳು ಬೇಡ.ಹಾಗಿದ್ದರೆ ಆಟ ಶುರು ಮಾಡೋಣವಾ...?
....................................................................................................................................................................................................................................
ಸುಖಕ್ಕಾಗಿ ಕಾತರಿಸುವ ಕೋಟ್ಯಾ೦ತರ ಜನರಲ್ಲಿ ಕೆಲವರಿಗೆ ಪ್ರೀತಿ,ಕೆಲವರಿಗೆ ಹಣ,ಎಲ್ಲೋ ಕೆಲವರಿಗೆ ಕುಗ್ರಾಮದ ಹಿತ್ತಲೊ೦ದರ ಹೂವು,ಬಡ ಜೋಗಿಯ ಹಾಡು -- ಪಿ.ಲ೦ಕೇಶ್ (ನೀಲು ಕಾವ್ಯ)
 
 
ಯಾವುದೋ ಮಹತ್ತರವಾದ ಸ೦ತೋಷದ ನೀರೀಕ್ಷೆಯಲ್ಲಿ ನಾವು ಜೀವನದ ಸಣ್ಣ ಸಣ್ಣಾ ಸ೦ತೋಷಗಳನ್ನು ಕಳೆದುಕೊ೦ಡು ಬಿಡುತ್ತೇವೆ --- ಪರ್ಲ್ ಎಸ್ ಬಕ್
 
 
ಮನುಷ್ಯ ಯೋಚಿಸುವುದನ್ನು ರೂಢಿಸಿಕೊಳ್ಳುವುದಕ್ಕೂ ಮುನ್ನ,ಬದುಕುವುದನ್ನು ರೂಢಿಸಿಕೊ೦ಡು ಬಿಡುತ್ತಾನೆ.ಯಾವುದೋ ಹ೦ತದಲ್ಲಿ ಜೀವನ ಬೇಸರವೆನಿಸಿ ತಾನು ಹೀಗೆಕೆ ಬದುಕುತ್ತಿದ್ದೇನೆ ಎ೦ದು ಯೋಚಿಸುತ್ತಾನೆ,ಆದರೆ ಕಾಲ ಮಿ೦ಚಿಹೋಗಿರುತ್ತದೆ. --- ಆಲ್ಬರ್ಟ್ ಕ್ಯಾಮುಸ್ ( ಮಿಥ್ ಆಫ್ ದಿ ಸಿಸಿಫಸ್)
 
 
ನೀವು ಈ ಸಮಾಜವನ್ನು ,ಅದರ ಆಚರಣೆಗಳನ್ನು ನಿಮ್ಮ ವರ್ತನೆಯಿ೦ದ ತೃಪ್ತಿಪಡಿಸದಿದ್ದರೇ ಈ ಸಮಾಜ ನಿಮ್ಮಲ್ಲೇನೋ ಲೋಪವಿದೆ ಎ೦ದು ಭಾವಿಸುತ್ತದೆ -- ಆಲ್ಬರ್ಟ್ ಕ್ಯಾಮುಸ್ ( ದಿ ಔಟ್ ಸೈಡರ್)
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Soumya Bhat on

ಗುರುರಾಜ್ ರವರೆ ನನ್ನ ಸಂಗ್ರಹದಲ್ಲಿದ್ದ ಕೆಲವೊಂದು ನನಗಿಷ್ಟವಾದ ಮಾತುಗಳನ್ನು ಹಂಚಿಕೊಳ್ಳ ಬಯಸುತ್ತೇನೆ.
> " ವಿಧಿ "
ಯಾರ ಲೀಲೆಗೋ ಯಾರೋ ಏನೋ ಗುರಿಯಿರದೆ ಬಿಟ್ಟ ಬಾಣ -ಗೋಪಾಲ ಕೃಷ್ಣ ಅಡಿಗರು

>ಮುಳುಗುವ ದೋಣಿ ಎಂಬ
ಖಚಿತ ಧಾವಂತದಲ್ಲಿ
ಬಂದುಗಳೆಲ್ಲ ಹೊರ ಜಿಗಿದಾಗ,
ಭಾರ ಕಡಿಮೆಯಾಗಿ
ದೋಣಿ ಮುಳುಗಲೇ ಇಲ್ಲ...!!!
-ಡಾ। ಶಾಂತಲಕ್ಷ಼್ಮೀ

>"ನಿನಗೆ ಬೇಡವೆಂದಾಗ ಸಾಯಲಿಕ್ಕೇನು ನನ್ನ ಪ್ರೀತಿ ಇಚ್ಛಾ ಮರಣಿಯಲ್ಲ- ಜಯಸುದರ್ಶನ"
~~~*~~~*~~~
ಉತ್ತಮ ಪ್ರಯತ್ನ,ಶುಭವಾಗಲಿ,
>ಸೌಮ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by suraj_murthy on

ನಾವು ಯಾರೂ ರಾಜರಾಗದೆ ಹೋಗಬಹುದು. ಸೈನಿಕರಲ್ಲಿ ದಿ ಬೆಸ್ಟ್ ಅನ್ನಿಸಿಕೊಳ್ಳೋಣ.
ಗುಲಾಬಿ ಹೂಗಳು ಸಿಗದಿರಬಹುದು. ದಾಸವಾಳದ ಅಂದವನ್ನು ಆಸ್ವಾದಿಸೋಣ.
ಜೀವನ ಒಂದು ಹಾಡಿನಂತೆ. ದೇವರು ಪದಗಳನ್ನು ಜೋಡಿಸಿದರೂ ಟ್ಯೂನ್ ಮಾತ್ರ ನಮ್ಮದೇ...

(ಯಂಡಮೂರಿ ವೀರೇಂದ್ರನಾಥರ "ವಿಜಯಕ್ಕೆ ಐದು ಮೆಟ್ಟಿಲು" ಪುಸ್ತಕದಿಂದ ತೆಗೆದದ್ದು...)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ksraghavendranavada on

ಬುಧ್ಧ, ಗಾ೦ಧಿ, ಅಕ್ಕ, ಬಸವ ಎಲ್ಲರೂ ನಡೆದರು
ಅವರದೇ ಆಯ್ಕೆಯ ಅವರದೇ ದಾರಿಗಳಲ್ಲಿ;
ಭಿನ್ನ ದಾರಿಗಳ ಹಿಡಿದರೂ ಮುಟ್ಟಿದರು ಸಮಾನಗಮ್ಯವ,
ನಡೆದವರು ಉಳಿದವರಿಗೆ ದಾರಿಯ ತೋರಿದರು,
ನಡೆಯಲಾಗದವರೆಲ್ಲಾ ಇದರ ಬಗ್ಗೆ ಬರೀ ಹೇಳಿದರು,
ಆದವರು ನಡೆದರು, ಉಳಿದವರು ಸುಮ್ಮನೇ ಉಳಿದರು;

ನಾವಡ ಉವಾಚ- http://sampada.net/b...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಮನುಷ್ಯ ಸುಳ್ಳು ಹೇಳಿದರೆ ಯಾವಾಗಲು ನಂಬುತ್ತಾನೆ
ಅದೆ ನಿಜ ಹೇಳಿದರೆ ನಗುತ್ತಾನೆ.

==================================

ಏಕೊ ಈ ಆಟದ ಅಂಕಣಕ್ಕೇನಾದರು ಪಾಯಿಂಟ್ ಗಳ ಮೇಲೆ ನಿರ್ದರಿಸುವ ಹಾಗಿದ್ದಲ್ಲಿ
ನಿಸಂಶಯವಾಗಿ ನಾವಡರು ಚಿನ್ನದ ಪದಕ ಗಳಿಸುತ್ತಾರೆ ಅನ್ನಿಸುತ್ತೆ
ಇದು ಅವರದೆ ಅಂಕಣದಂತಿದೆ
:)))

ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

@ಪಾರ್ಥಸಾರಥಿಗಳೆ, ಇದರಲ್ಲಿ ನಾವಡರಿಗೆ ನೂರಕ್ಕೆ ನೂರು ಗ್ಯಾರಂಟಿ ಅದಕ್ಕಾಗಿ ಒಂದಿಷ್ಟೂ ಯೋಚಿಸುವ ಅಗತ್ಯವಿಲ್ಲ :))

ನಗುವಾಗ ಎಲ್ಲ ನೆಂಟರು; ಅಳುವಾಗ ಒಬ್ಬನೇ ಅಳಬೇಕು...ಅನಾಮಿಕ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by saraswathichandrasmo on

ಆಟ ಚೆನ್ನಾಗಿದೆ. ಇಷ್ಟ ಆಯಿತು. ಪ್ರತಿದಿನ ಒಂದೊಂದು ವಿಷಯದ ಮೇಲೆ ನುಡಿಗಟ್ಟು, ಕವಿತೆ ಹಾಗು ಹಾಡಿನ ಸಾಲು ಇರುವಂತಾದರೆ ಚೆನ್ನ ಅಂತ ನನ್ನ ಅನಿಸಿಕೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಕೆಲವೊಮ್ಮೆ ಬೇರೆಯವರು ನಮಗೆ ಮಾಡುತ್ತಿರುವ ಸಹಾಯದ ಹಾಗು ಸೇವೆಯ ಅರಿವೆ ನಮಗಿರುವದಿಲ್ಲ
.
ಅವರು ಅದನ್ನು ನಿಲ್ಲಿಸುವವರೆಗು

(ಓದಿದ್ದು ಪೇಸ್ ಬುಕ್ ನಲ್ಲಿ )

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gururajkodkani on

ನಾನೂ ಮತ್ತೊ೦ದು ಮಾತು ಸೇರಿಸುತ್ತೇನೆ "ಜ್ನಾನೋದಯವೆ೦ದರೇ ವಿಶೇಷವೇನಿಲ್ಲ.ಯಾವಾಗ ನಿಮ್ಮಲ್ಲಿ ಯಾರ ಬಗ್ಗೆಯೂ ದೂರಿಲ್ಲವೋ,ಯಾರ ಬಗ್ಗೆಯೂ ನೀವು ದೋಷಿಸುತ್ತಿಲ್ಲವೋ,ಯಾರ ಬಗ್ಗೆಯೂ ತೀರ್ಮಾನಿಸುತ್ತಿಲ್ಲವೋ ,ನೀವು ಎಲ್ಲಿಗೂ ಹೋಗುತ್ತಿಲ್ಲವೋ ಆಗ ನಿಮಗೆ ಜ್ನಾನೋದಯವಾಗಿದೆ ಎ೦ದು ಅರ್ಥ.ನೀವು ಕೇವಲ ಅಸ್ಥಿತ್ವದಲ್ಲಿದ್ದೀರಿ ಮತ್ತು ಪ್ರಪ೦ಚವನ್ನು ಅದು ಇರುವ ಹಾಗೆಯೇ ಒಪ್ಪಿಕೊ೦ಡಿದ್ದೀರಾದರೇ ಅದುವೇ ಜ್ನಾನೋದಯ" ---- ಒಶೊ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.