20
June
2013

ಸ‌ಂವಾದ‌

August 21, 2012 - 2:30am
dayanandac

 

ನನ್ನಪ್ಪನೇನು ಪ್ರಪಂಚವನ್ನಾಳುವ ದೊರೆಯಲ್ಲ

ವಿಜ್ನಾನಿ, ವೈಧ್ಯ, ಮೇಧಾವಿ, ಇಂಜೇನಿಯರ್

ಅಥಾವ ಹೆಸರುಗಳಿಸಿದ ಅಟಗಾರನೇನಲ್ಲ

ಬಹು ಕಂಪನಿಗಳ ಒಡೆತನವಿರುವ ಮಾಲೀಕನೊ ಅಲ್ಲ!

ಅವನ ಹೆಸರನ್ನ ಎಲ್ಲಿಯಾದರೊ ಕೆತ್ತಿಸಿದ ಉದಾಹರಣೆಗಳೊ ಇಲ್ಲ

ಅದರೊ, ನನ್ನಪ್ಪ ನನ್ನನ್ನ ವ್ಯಾಪಕವಾಗಿ ಆವರಿಸಿದ್ದಾನೆ.

 

ಗದರಿದ್ದು, ಹತ್ತಲ್ಲ ನೂರು ಬಾರಿ ಬೈದದ್ದು

ಹೊಡೆದದ್ದು ಇದೆ, ಅದರೊ ಕೋಪ

ನಿಂತ ನೀರಾಗಲಿಲ್ಲ!

 

ಕಣ್ಣುಗಳಲ್ಲಿನ ಭಾವಗಳನ್ನ ಅಳೆಯುವುದನ್ನ

ಮಾತಿನ ಹಿಂದಿನ ಅರ್ಥಗಳನ್ನ, ಅನರ್ಥಗಳನ್ನ

ಮೌನ ಹಾಗೊ ಮಾತಿನ ನಡುವಿರುವ ಕಂದಕಗಳನ್ನ

ಬೆವರ ದುಡಿಮೆಯ ಅನ್ನದ ಸವಿಯನ್ನ, ಸವಿಯುವುದನ್ನ,

ಸೋತಾಗ ನಗುವುದನ್ನ, ಗೆದ್ದಾಗ ಬೀಗದಿರುವುದನ್ನ,

ಸೋತವರನ್ನ ಸಂತೈಸುವುದನ್ನ, ಕಸ್ಟಗಳಿಗೆ ಬೆನ್ನುಮಾಡದೆ

ಕನಸುಗಳೆಡೆಗೆ ಮುನ್ನುಗುವುದನ್ನ ಮನದಟ್ಟುಮಾಡಿ

ಬದುಕಿಗೆ ದಾರಿ ದೀಪವಾಗಿ ಬೆರೆತಿದ್ದಾನೆ

 

ಈಗ, ಮೈ ಕೈ ಮುದುರಿ, ಕಾಲುಗಳಲ್ಲಿ ಶಕ್ತಿ ಕುಂದಿ, ಕಣ್ಣುಗಳಲ್ಲಿ

ಮೌನದ ಮಾತುಗಳಲ್ಲಿ, ನನ್ನ ಕೆಣಕುತ್ತಾ

ಅವನ ಇರುವಿಕೆಯನ್ನ ಮತ್ತೆ ಮತ್ತೆ ದಾಕಲಿಸುತ್ತಾ

ಬೇಕು ಬೇಡಗಳನ್ನ, ನನಗಸ್ಟೇ ತಿಳಿಯುವ ಹಾಗೆ

ನನ್ನ ಆಳಕ್ಕೆ, ಅತರಂಗಕ್ಕೆ ಮುಟ್ಟಿಸುತ್ತಾನೆ, ಸಂವಾದ ನೆಡೆಸುತ್ತಾನೆ

 

ಇಂದು, ನಾನು ನನ್ನ ಮಗನನ್ನ

ಕೈ ಹಿಡಿದು ಶಾಲೆಗೆ ದಾಕಲಿಸಲು ನೆಡೆವ ಹೆಜ್ಜೆ ಹೆಜ್ಜೆಗಳಲ್ಲಿ

ನನ್ನಪ್ಪ ನನಗೆ ನೆನಪಾಗುತ್ತಾನೆ, ಕಾಡುತ್ತಾನೆ

ಪುಸ್ತಕದಲ್ಲಿ ಸಿಗದ, ಯಾವ ಭಾಶೆಗೊ ನಿಲುಕದ

ನನ್ನಪ್ಪನ ಭಾಶೆ, ಅಪ್ಪನ ಭಾಶೆ

ನನ್ನ ಮತ್ತು ನನ್ನ ಮಗನ ನಡುವೆ ಸಂವಾದಕ್ಕಿಳಿದಿದೆ

ಎಲ್ಲರೊಡನೆಯೊ ತೆರೆದುಕೊೞಲ್ಲು  ಬೇರೆಯದೇ ಭಾಶೆಯಿದೆ.

 

 

 

 

 

 

 

 

 

 

 

 

 

 

 

 

 

 

 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Rajendra Kumar ... on
ಆತ್ಮೀಯ ದಯಾನ೦ದ ಚ೦ದ್ರಪ್ಪ ಅವರೆ, ಉತ್ತಮ ಮತ್ತು ಮನಮುಟ್ಟುವ ಕವನ. ಧನ್ಯವಾದಗಳು.

Submitted by dayanandac on
ನಿಮ್ಮ ಅನಿಸಿಕೆಗಳಿಗೆ ಹಾಗೊ ಪ್ರೊತ್ಸಕ್ಕೆ ಧನ್ಯವಾದಗಳು

Submitted by S.NAGARAJ on
ಆತ್ಮೀಯ ದಯಾನಂದ್ ಅವರೆ, ಅಪ್ಪ ಮಗನ ಸಂವಾದ ಮನ ಕಲಕುವಂತ್ತಿದೆ . ಧನ್ಯವಾದಗಳು.

Submitted by dayanandac on
ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು

Submitted by venkatb83 on
"ಪುಸ್ತಕದಲ್ಲಿ ಸಿಗದ, ಯಾವ ಭಾಶೆಗೊ ನಿಲುಕದ ನನ್ನಪ್ಪನ ಭಾಶೆ, ಅಪ್ಪನ ಭಾಶೆ ನನ್ನ ಮತ್ತು ನನ್ನ ಮಗನ ನಡುವೆ ಸಂವಾದಕ್ಕಿಳಿದಿದೆ ಎಲ್ಲರೊಡನೆಯೊ ತೆರೆದುಕೊೞಲ್ಲು ಬೇರೆಯದೇ ಭಾಶೆಯಿದೆ." ಸಖತ್ ..ಸುಪರ್... ತಂದೆ ಮಗನ ಬಾಂಧವ್ಯದ ಬಗ್ಗೆ ಸಂಬ್ಬಂಧದ ಬಗ್ಗೆ ತುಂಬಾ ಸೊಗಸಾಗಿ ಮನ ಮುಟ್ಟುವಂತೆ ತಟ್ತುವಂತೆ ಬರೆದಿರುವಿರಿ.... ನಿಮ್ಮ ಒಪ್ಪಿಗೆಯಿದ್ದರೆ ಇದನ್ನು ಫೆಸ್ಬುಕ್ನಲ್ಲಿ ಹಾಕುವೆ... ಒಳಿತಾಗ್ಲಿ.. \|/

Submitted by dayanandac on
ನಿಮ್ಮ ಮೆಚ್ಚಿಗೆಗಳಿಗೆ ನನ್ನ ವಂದನೆಗಳು ಸಲ್ಲುತ್ತವೆ ಸಪ್ತಗಿರಿಗಳೆ, ಈ ಸಾಲುಗಳನ್ನ ಮತ್ತಸ್ಟು ಜನಕ್ಕೆ ತಲುಪಿಸಲು ನೀವು ನಿಮ್ಮ ಸಮಾಜಿಕ ತಾಣಗಳಲ್ಲಿ ಬಳಸಿಕೊಳ್ಳಿ. ನಿಮ್ಮವ‌ ದ‌

Submitted by gurudutt_r on
ನನಗೆ ನನ್ನ ಮತ್ತು ನನ್ನ ಅಪ್ಪನ ಒಡನಾಟ ತುಂಬಾ ವಿಶೇಷ. ಎಲ್ಲರಂತೇ ನನಗೂ ಮನೆಯೇ ಮೊದಲ ಪಾಠಶಾಲೆಯಾದರೂ, ಮೊದಲ ಗುರು ಆಗಿದ್ದು ಮಾತ್ರ ತಂದೆ. ನನಗೆ ಜೀವನ ಎಂಬ ಓಡುವ ನದಿಯುದ್ದಗಲದ ಮಿತಿ, ಆಳ ಹಾಗು ಹರಿವಿಕೆಯ ಪರಿಯ ಅರಿವು ತಿದ್ದಿ ತೀಡಿದಾತ ನಮ್ಮಪ್ಪ. ಅದೇನೋ ಪ್ರೀತಿ ಅವನ ಮೇಲೆ...ನಿಮ್ಮ ಕವನ ಓದಿದ ನನ್ನ ಕಣ್ಣುಗಳಲ್ಲಿ ಅದೆಷ್ಟೋ ಚಿತ್ರಣಗಳು ಹಾಯ್ದು ಹೋಯ್ತು. ಇಂಥ ಒಂದು ಕವನ ಬರೆದು ಮನೋಲ್ಲಾಸಗೊಳಿಸಿದ ನಿಮ್ಮ ಭಾವನೆ, ನೆನಪು ಹಾಗು ಬೆರಳುಗಳಿಗೆ ಅನಂತ ವಂದನೆಗಳು

Submitted by dayanandac on
ನಿಮ್ಮ ಪ್ರತಿಕ್ರಿಯೆಗಳಿಗೆ ನನ್ನ ನಮಸ್ಕಾರಗಳು ಸಲ್ಲುತ್ತವೆ, ನಿಮ್ಮ ಅನಿಸಿಕೆ ಸತ್ಯ, ಅಪ್ಪ ಸಾಮಾನ್ಯವಾಗಿ ಬಾವನೆಗಳಲ್ಲಿ ಭಾಗಿಯಾಗದೆ ಬದುಕಿನ ದುರಂತಗಳ ಬಗ್ಗೆ ಹಾಗೊ ಪ್ರಪಂಚದ ವ್ಯವಹಾರಗಳ ಬಗ್ಗೆ ಸೊಕ್ಸ್ಮವಾಗಿ ಮತ್ತು ನಿಶ್ಟುರವಾಗಿ ಹೇಳಬಲ್ಲ ಮಿತ್ರ, ಒಮ್ಮೊಮ್ಮೆ ಶತ್ರುವಿನ ಹಾಗೆ ಕಂಡರೊ ಅಚ್ಚರಿಯಿಲ್ಲ, ಅದರೆ ಆತನ ಗುರಿ ಯಾವಾಗಲೊ ಬದುಕಿನ ಸೊಕ್ಶ್ಮಗಳ ಬಗ್ಗೆ ಕಣ್ ತೆರೆಸುವ ಕಡೆಗೆ ನೆಟ್ಟಿರುತ್ತದೆ ಎನ್ನಲ್ಲು ಅಡ್ಡಿಯಿಲ್ಲ ಅಲ್ಲವೇ.

Submitted by partha1059 on
ಚಂದ್ರಪ್ಪನವರೆ ಉತ್ತಮ ಕವನ‌ ತನ್ನ ಮಕ್ಕಳು ಮಾಡುವ ಪ್ರತಿ ತಪ್ಪಿಗು ಕೋಪಿಸಿಕೊಳ್ಳುವಾಗ ಬಹುಷಹ ಅಪ್ಪನ ಮನದಲ್ಲಿ ತನ್ನ ಮಗ ಮುಂದೆ ಎದರಿಸುಬೇಕಿರುವ ಬದುಕಿನ‌ ಸವಾಲುಗಳ ಆತಂಕ ಮನೆಮಾಡಿರುತ್ತದೆ ಅದಕ್ಕಾಗಿಯೆ ಅವನು ಯಾವಾಗಲು ತನ್ನ ಮಗ/ಮಗಳು ಸೋಲುವದನ್ನು ಬಯಸುವದಿಲ್ಲ ಪಾರ್ಥಸಾರಥಿ

Submitted by dayanandac on
ಪ್ರತಿಕ್ರೆಯೆಗಳಿಗೆ ಹಾಗೊ ನಿಮ್ಮ ಅನಿಸಿಕೆಗಳಿಗೆ ನನ್ನ ವಂದನೆಗಳು ಪಾರ್ಥಸಾರಥಿಯವರೆ ದ‌