19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಹನಿಮುತ್ತುಗಳು.....

July 4, 2012 - 11:48am
vishwanath B. H

              *ನಿರೀಕ್ಷೆ *

      ಯಾರಿಗೂ ಹೇಳಬೇಡ ಅಂತ 
      ಕೆನ್ನೆಗೆ ಮುತ್ತಿಟ್ಟು ಹೋದೆಯಲ್ಲ ಗೆಳತಿ,
      ಆ ಮುತ್ತಿಗೆ ಜೋಡಿಯಾಗುವ ಬಯಕೆ.
      ಯಾವಾಗ ಬರುವೆ,
      ಇನ್ನೊಂದು ಮುತ್ತ ನೀಡಲು 
      ನಿನ್ನ ನಿರೀಕ್ಷೆಯಲ್ಲಿ 
      ನಾನು ಮತ್ತು ನೀ ಕೊಟ್ಟ ಮುತ್ತು..!!
 
 
                *ದೀಪಾವಳಿ*
     ನನ್ನೆದೆಯಲಿ 
     ನೀ ಹಚ್ಚಿಟ್ಟ ದೀಪ 
     ಆರುವ ಮುನ್ನ 
     ಒಮ್ಮೆ ನಕ್ಕು ಬಿಡೇ
     ಕೊನೆಯ ದಿನ ದೀಪಾವಳಿಯಾಗಲಿ..!
 
  
                *ನೀನಾ*
     ಪ್ರತಿ ದಿನದಂತೆ 
     ಟೆರಸ್ ಮೇಲೆ ಕುಳಿತು 
     ನಕ್ಷತ್ರ ಎಣಿಸುತ್ತಿದ್ದೆ.
     ಯಾರೋ ಬಂದು ಹೇಳಿದರು 
     ಒಂದು ನಕ್ಷತ್ರ 
     ಭುವಿಗೆ ಬಂದಿದೆ ಎಂದು.
     ಗೆಳತಿ ಅದು ನೀನಾ..?!
                             ---- ವಿಶ್ವನಾಥರಡ್ಡಿ. ಬಿ. ಎಚ್
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ashoka_15 on
ತುಂಬಾ ಚೆನ್ನಾಗಿದೆ ನಿಮ್ಮ ಹನಿಮುತ್ತುಗಳು..... ಅದರ ಜೊತೆಗೊಂದಿಷ್ಟು ಮಸಾಲೆ ಆಕಾಶದಿಂದ ತಂದೆ ಕಿತ್ತು ಸಾಗರದಿಂದ ತಂದೆ ಹೊತ್ತು ಕೊಡುವೆ ನಿನಗೆ ಈ ಒತ್ತು ಒಂದು ಸಿಯಿಯಾದ ಮುತ್ತು.