ಹಳ್ಳಿ ದೇವರು

ಹಳ್ಳಿ ದೇವರು

ಕವನ

ಊರ ರಕ್ಷಿಸೋ ದೇವರು,
ಜನರ ಸಂಕಷ್ಟಹರಣ ಮಾಡೋ ದೇವರು,
ಭಕ್ತರನ ಆಶಿರ್ವದಿಸೋ ದೇವರು,
ಧರ್ಮ ಜಾತಿ ಅನ್ನದೆ ದೇಹಿ ಅನ್ನುವವರ ಕಾಪಾಡೋ ದೇವರು,
ವರುಕ್ಷ್ಕೆ ಒಮ್ಮೆ ವೈಭೋಗದಿಂದ ಮೆರೆಯುವ ದೇವರು,
ಭಕ್ತಿ ಭಾವದಿಂದ ಕರೆದು ಊರಿಗೆ ಹೋಗಿ ಆಶಿರ್ವದಿಸೋ ದೇವರು,

ಅಂದು ಎಂಥ ಭಕ್ತಿ ,
ಎಂಥ ಭಯ,
ಎಂಥ ಮರೆಯದೆ ಈ ದೇವರಿಗೆ,
ಈ ದೇವರಿಗೊಸ್ಕರ ಆದ ಬಲಿದಾನ ಗಳು ಎಷ್ಟೋ,

ಇಂದು ಎಲ್ಲಿಯ ಭಕ್ತಿ ,
ಎಲ್ಲಿಯ ಭಯ,
ಕಂಡ ಕಂಡ ಕಡೆ ಈ ದೇವರ ಹೆಸರಲಿ ನಡೆಯೋ ಹರಜಕತೆ,
ಈ ದೇವರ ಹೆಸರಲಿ ನಡೆಯೋ ಮತ ಬೇಡಿಕೆ,
ಈ ದೇವರ ಹೆಸರಲಿ ನಡೆಯೋ ನಂಗ ನಾಚು,
ಈ ದೇವರ ಹೆಸರಿನಲ್ಲಿ ನಡೆಯೋ ಆಣೆ ಪ್ರಮಾಣ,
ಸಾಕಪ್ಪ ಸಾಕು ,
ಯಾರಿಗೆ ಹೇಳಬೇಕು ಈ ದೇವರ ಸಂಕಟವ

ಇದು ದೇವರಿಗೆ ಆಗುತ ಇರೋ ಅನ್ಯಾಯವೇ ,
ಇಲ್ಲ ಮನುಷ್ಯನ ಅಲ್ಪತನವೇ ,

ಓ ದೇವರೇ ಎಲ್ಲ ನಿನ್ನೆ ಬಲ್ಲೆ.

                               ಬರೆದ ಬಡಪಾಯಿ
                              
         ಹರೀಶ್ ಎಸ್ ಕೆ