ಹಾಡಿನ ಹಾಡು

ಹಾಡಿನ ಹಾಡು

ಕವನ

ಊರಿನುದ್ದಕೂ ಮೌನವ ಕಲಿಸಿದಿ
ಸ್ವತಃ ಮೌನವನು ಕಾಣದೆ ಹೋದಿ!
ಭಾಷೆಯ ಮೀರಿದಿ ಭಿನ್ನತೆ ಮರೆಸಿದಿ
ಅರ್ಥದ ಓಘವ ರಾಗದಿ ಕಲೆಸಿದಿ.

ಜನರ ದುಃಖದಲಿ ದುಃಖಿಸಿ ಮರುಗುತ
ಸುಖದ ಸಂಭ್ರಮದಿ ಸುಖಿಸಿ ಮೆರೆಯುತ
ತಾಳಲಯದಂತೆ ಕುಣಿಸಿ ಮನೋರಥ!
ತಾಳ್ಮೆಯ ತಳಹದಿ ತಂದಿಹೆ ಸತತ

ಬಾ ಏನೆ ಬಂದಿಹೆ ಹೊಗೆನೆ ಹೋಗುವೆ
ಮನೆ ಮನದಲಿ ಸ್ಮರಿಸಿರೆ ಹರಿದಾಡುವೆ
ಗೆಳತಿಯ ಸಾಮೀಪ್ಯವನೇ ಹೊಲುವೆ!
ಆಂತರ್ಯದ ಭಾವವನೆ ಚಿತ್ರಿಸುವೆ

ಮಂದ್ರದ ಇಳಿತದಿ ಸ್ವಂತಿಕೆ ತೋರಿದಿ
ತಾರಕಕೊಯ್ಯುತ ಜಗವ ಕಾಣಿಸಿದಿ
ಅಪಸ್ವರದಲಿ ಬಿಗುಮಾನವ ಬಿಡಿಸಿದಿ
ಮನುಜ ಮತದಲ್ಲಿ ಶಾಶ್ವತ ನೆಲೆಸಿದಿ..
 

Comments

Submitted by raghumuliya Mon, 02/02/2015 - 11:30

ಸೊಗಸಾದ ರಚನೆ ವರ್ಷಾ ಶಾಸ್ತ್ರಿಯವರೆ.
ಲಯಬದ್ಧವಾಗಿ,ಅ೦ತ್ಯಪ್ರಾಸದೊ೦ದಿಗೆ ಮೂಡಿದ ಚೌಪದಿ ತೂಕದ ಶಬ್ದಗಳಿ೦ದ ಭಾವಪೂರ್ಣವಾಗಿದೆ,ಅರ್ಥಪೂರ್ಣವಾಗಿದೆ.
ಭಾಷೆಯನ್ನು ಚೆನ್ನಾಗಿ ಬಳಸಿ, ಕನ್ನಡ ಕಾವ್ಯಪ್ರಾಕಾರದಲ್ಲಿ ಇನ್ನೂ ಹೆಚ್ಚಿನ ಸೇವೆ ನಿಮ್ಮಿ೦ದ ಸಲ್ಲುವ೦ತಾಗಲಿ.

ಕೆಲವು ಕಾಗುಣಿತ ದೋಷಗಳು, ಕೆಲವು ಸಣ್ಣ ತಪ್ಪುಗಳು ಹೀಗಿವೆ.

೧. ಪ್ರಥಮ ಮತ್ತು ಅ೦ತಿಮ ಚರಣಗಳಲ್ಲಿ "ದಿ" ಕಾರದ ಬದಲು " ದೆ" ಬಳಸಿದರೆ ಉತ್ತಮ.
೨. ಪ್ರಥಮ ಚರಣ ಮೂರನೆಯ ಸಾಲು "ಭಾಷೆಯ ಮೀರುತ" ಎ೦ದಿದ್ದರೆ ಉತ್ತಮ.
೩. ಮೂರನೆ ಚರಣ ಮೊದಲನೆಯ ಸಾಲು " ಬಾ ಎನೆ ಬ೦ದಿಹೆ ಹೋಗೆನೆ ಹೋಗುವೆ"
 ಮೂರನೆ ಚರಣ ಮೂರನೆಯ ಸಾಲು " ಹೋಗುವೆ" ಎ೦ದಾಗಬೇಕು.

ಒಟ್ಟ೦ದದಲ್ಲಿ ಸೊಗಸಾದ ಕಲ್ಪನೆ. ಅಭಿನ೦ದನೆ.