26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಹಾರುವ ಹಕ್ಕಿಗಳೇ

June 28, 2012 - 7:14am
muneerahmedkumsi

 ಹಾರಿ  ಹಾಡುವ  ಹಕ್ಕಿಗಳೇ,

ಆಡುವ  ದುಂಬಿಗಳೇ,

ಭಯವಿಲ್ಲವೇ  ನಿಮಗೆ,  ಹಾಳಗುವ

ಈ ಆನಂದವನ  ಕಂಡು ?

 

ಗಾಳಿಗೆ  ತಲೆತೂಗಿ , ಮೋಡಸಳೆದು,

ಮಳೆರಾಯನ  ಕರೆತರುವ.

ಹಸಿರುಮರಗಿಡಗಳೇ,  ಅಳಕು

ಇಲ್ಲವೇ  ನಿಮಗೆ , ನಾಶದಂಚಿನಲ್ಲಿದ್ದು

 

ಹಸಿರು ಹಾಸಿನ  ಸೌಂದರ್ಯರಮಣಿ

ಧರೆ  ನಿನ್ನಂಗಳ  ಬರಿದಾಗಿ,

ಬಿಸಿಲತಾಪಕ್ಕೆ  ಬಿರಿದಾಗ   ನೊಂದ  ನಿನ್ನ

ಮನವು  ಶಾಪವಿಯದೇ ಈ  ಮನುಜನಿಗೆ ?

 

ಕಣ್ಣಿಗೆ  ಕಾಣದೆ , ಬಿಸಿಲಿಗೆ  ಬೇಯದೆ

ಉಸಿರಲ್ಲಿ ಜೀವಚೇತನ  ತುಂಬುವ

ಗಾಳಿ ನಿನಗೆ  ಗಾಬರಿಯಾಗದೆ

ಈ  ಮಲೀನ  ಹೊಗೆಯ  ಉಂಡು ?

 

  ಜುಳು  ಜುಳು  ಹರಿದು,ಭಾವಕ್ಕೆ  ಜೀವತುಂಬಿ

ತಿಳಿಯಂತರಾಳದಲ್ಲಿ  ಅದ್ಭುತಗಳ  ತುಂಬಿ

ಆಗಸ  ಪಾತಾಳದ  ಪವಿತ್ರ  ನಿಧಿ  ನೀರೆ

ಬೇರೆ  ಮಾಡಲಾರೆಯ  ಕೊಚ್ಚೆ  ನಿನ್ನೊಡಲಿಂದ ?

 

ಮನುಜನೀನು  ಈ  ವಿಶ್ವ

ನಿನಗಾಗಿ  ಈ  ಅದ್ಭುತಗಳು  ಇಲ್ಲಿ

ಸೂರ್ಯ ಚಂದ್ರ,  ಈ  ಗಾಳಿ  ನೀರು ಧರೆ

ಕಲುಶಿತಗೊಳಿಸಿ  ನಾಶದಂಚಿಗೆ  ಏಕೆ  ಓಡುವೆ  ನೀನು ?

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.