ಹೃದಯದ ಬದಲಿಗೆ...

ಹೃದಯದ ಬದಲಿಗೆ...

ಕವನ

ಗಂಡು: ಹೃದಯದ ಬದಲಿಗೆ ಕೊಡಲು ಬೇರೇನಿದೆ,

          ಏನಿದೆ ಏನಿದೆ, ನನ್ನ ಬಳಿಯಲಿ ಏನಿದೆ ?

ಹೆಣ್ಣು : ಜೀವಕೆ ಜೀವವು ಕೊಡುವ ಪ್ರೀತಿಯಿದೆ,

          ಕಣ್ಣಿಗೆ ಕಾಣದ ಆದರ್ಶ ಪ್ರೀತಿಯಿದೆ.

1) ಗಂಡು: ದೇವರು ಬೆಸೆದ ನಮ್ಮೀ ಪ್ರೀತಿಯ ಬಂಧನಾ

              ಬಿಡಲಾರೆ ನಿನ್ನ ನಾ

    ಹೆಣ್ಣು: ಬಾಳಿನ ಆಸರೆ ಬಯಸುತ ನಿನ್ನಲಿ ಬಂದೆ ನಾ,

             ಸ್ವೀಕರಿಸು ಈ ಕ್ಷಣ..

   ಗಂಡು: ಪ್ರೀತಿ ಹುಟ್ಟೋದೆ ಕಣ್ಣಲಿ / ಹೂವು ಅರಳೋದೆ ಮುಳ್ಳಲಿ

    ಹೆಣ್ಣು: ಅರಿತೆ ನಾ ಅರಿತೆ ನಾ / ನಿನ್ನ ಪ್ರೀತಿಯ ಸ್ಪಂದನಾ..

             ನಿನ್ನ ಈ ಪ್ರೇಮಕೆ ಶರಣು ಶರಣೆಂದೆನಾ..

               // ಹೃದಯದಾ ಬದಲಿಗೆ //

2) ಹೆಣ್ಣು: ಈ ನನ್ನ ಜೀವ ನಿನಗೆ ಅರ್ಪಿಸುವೆ ಪ್ರಿಯ..

            ಅರ್ಪಿಸುವೆ ಪ್ರಿಯ...

   ಗಂಡು: ಪ್ರೀತಿಯ ಮಾತಿದು ಹೃದಯದಿ ಬಚ್ಚಿಡುವೆ ಪ್ರಿಯೆ..

            ಬಚ್ಚಿಡುವೆ ಪ್ರಿಯೆ...

   ಹೆಣ್ಣು: ಸಾವಿರ ಜನುಮ ಬೇಡುವೆ  / ನಿನ್ನನೆ ನಾನು ಕೇಳುವೆ

   ಗಂಡು: ಗೊತ್ತಿದೆ ಗೊತ್ತಿದೆ ನಿನ್ನ ಮಾತದು ಗೊತ್ತಿದೆ..

             ತಿಳಿದಿದೆ ತಿಳಿದಿದೆ ಅದರರ್ಥವು ತಿಳಿದಿದೆ..

                 // ಹೃದಯದಾ ಬದಲಿಗೆ //