23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಹೊತ್ತು ಸಾಗಿಸಬೇಕು

August 19, 2012 - 1:54pm
viru

ಹೆಂಡ್ತಿ ಮಕ್ಕಳ ಸಾಕಬೇಕು, ಬದುಕಬೇಕು

ಹೊಟ್ಟೆಪಾಡಿಗಾಗಿ ಸಿಕ್ಕ ಕೆಲಸ ಮಾಡಬೇಕು

ಹೊತ್ತು ಸಾಗಿಸಬೇಕು ಪ್ರಯಾಣಿಕರ ಒಂದು ಜಾಗದಿಂದ

ಮತ್ತೊಂದು ಜಾಗಕ್ಕೆ, ಚಾಲಕನಾಗಿ ನಾ ನನ್ನ ಪ್ರಾಣ ಲೆಕ್ಕಿಸದೆ.

 

ನಾ ಬಸ್ಸಿನ ಚಾಲಕನಾಗಿ ಬಸ್ಸಾ ಚಲಿಸುವೆನು

ನನ್ನ ಪ್ರಯಾಣಿಕರ ಸುರಕ್ಷಿತ  ಸ್ಥಳಕ್ಕೆ ತಲುಪಿಸುವೆನು

ಹಗಳಿರುಳು ಎನ್ನದೆ, ನಾ ನನ್ನ ಬಸ್ಸಿನ ಪ್ರಯಾಣಿಕರ

ಕಾಲ ಕಾಲಕ್ಕೆ ಅವರವರ ಸ್ಥಳಕ್ಕೆ ಮುಟ್ಟಿಸುವೆನು.

 

ಗುಡುಗು ಸಿಡಿಲು ಮಳೆ ಬಿಸಿಲು ಚಳಿ ಎನ್ನದೆ

ನಾ ದುಡಿಯುವೆನು, ನನ್ನ ಜೀವದ ಹಂಗ ತೋರೆದು

ನನಗೆ ನಾನಾಗಿರದೆ, ನನ್ನ ಪ್ರಯಾಣಿಕರಿಗಾಗಿ ನಾನಿರುವೆನು

ಅವರೆಲ್ಲರ ಪ್ರಾಣವ ಕಾಪಾಡುವ ಧರ್ಮ ನನ್ನದು .

 

ಬೇಧ ಭಾವವು ನನಗಿಲ್ಲ ಎಲ್ಲಾ ಪ್ರಯಾಣಿಕರು ನನ್ನವರು

ಕಳ್ಳರು ಸುಳ್ಳರು ಸತ್ಯವಂತರು ನನ್ನ ಬಸ್ಸಿನಲ್ಲಿ ಪ್ರಯಾಣಿಸುವರು

ನಾ ನನ್ನ ಬಸ್ಸಿನಲ್ಲಿ ನನ್ನ ಕಾಯಕ ಮಾಡುವೆನು ಅಷ್ಟೆ

ಹೊತ್ತು ಸಾಗಿಸುವೆನು ಪ್ರಯಾಣಿಕರ ಹೊತ್ತು ಹೊತ್ತಿಗೆ ಅಷ್ಟೆ.

 

                                                           - ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.

 

 

 

 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by viru on
ಹೊತ್ತು ಸಾಗಿಸಬೇಕು ಎಂಬ ಕವನವು ಬಸ್ಸಿನ ಚಾಲಕನ ಕುರಿತಾಗಿ ಮತ್ತು ಪ್ರಯಾಣಿಕರ ಕುರಿತು ಸರಳವಾಗಿ ಕವನದ ಮೂಲಕ ಬರೆಯಲಾಗಿದೆ.

Submitted by gurudutt_r on
ಚಾಲಕನೊಬ್ಬ ಕವನ ವಸ್ತುವಾಗಿರುವುದು ವಿರಳ...ಬಹಳ ಖುಷಿ ಆಯ್ತು. ಸಮಾಜದಲ್ಲಿ ಎಲ್ಲರನ್ನು ವಿಭಿನ್ನವಾಗಿ ಪರಿಗಣಿಸುವ ಕವಿಗಳು ಒಳ್ಳೆಯ ಕವನಗಳಿಗೆ ಮೂಲ. ಇನ್ನಷ್ಟು ಕವನವನ್ನು ನಿಮ್ಮಿಂದ ಮುನ್ನೋಡುತ್ತೇನೆ.