22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಹೊರಟು ಬಿಡು...

August 4, 2012 - 9:55pm
Soumya Bhat

 ಹೊರಟು ಬಿಡು ಗೆಳೆಯಾ

ನಿನ್ನೆಲ್ಲ ನೆನಪುಗಳೊಡನೆ...

 

ನನ್ನ ಬದುಕಿನ ನಿನ್ನ ಪುಟಗಳು

ನಿನ್ನ ಮಡಿಲಲ್ಲಿನ ನನ್ನ ದಿನಗಳು

ಹುಸಿ ಮುನಿಸಿನ ಪಿಸು ಮಾತುಗಳು

ಮರೆಯ ಬೇಕಿದೆ ಇ೦ದು ಎಲ್ಲವನ್ನೂ...

 

ಭರವಸೆಯೇ ಇಲ್ಲದ ಬದುಕಿಗೆ ನಿನ್ನ

ಪ್ರೀತಿಯ ಸಮಾಧಿ ಬೇಕಿದೆ...

ನೋವೇ ತು೦ಬಿದ ಬಾಳಿಗೆ ನಗು

ನಗುತ್ತಲೇ ಮುನ್ನುಡಿ ಬರೆಯ ಬೇಕಿದೆ...

 

ನಿನ್ನೊ೦ದಿಗಿನ ನಿನ್ನೆ ಮರೆಯಾಗಲಿದೆ

ನಿನ್ನೊಟ್ಟಿಗೆ ನೆಡೆದ ಹಾದಿ ಕವಲಾಗಲಿದೆ

ನೀನಿಲ್ಲದ ನಾಳೆ ಶುರುವಾಗಲಿದೆ

ಹೊಸ ಜೀವನಕ್ಕೆ ನಾ೦ದಿ ಹಾಡಲಿದೆ...

 

ಕೈ ಮುಗಿವೇ ನನ್ನ ಮರೆತು ಬಿಡು

ಮತ್ತೆ೦ದೂ ನೆನಪಾಗದ೦ತೆ...

ನಿನ್ನೆಲ್ಲ ನೆನಪುಗಳೊಡನೆ ಹೊರಟು ಬಿಡು

ಇನ್ನೆ೦ದೂ ತಿರುಗಿ ಬಾರದ೦ತೆ...

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Rajendra Kumar ... on
ಕವಿತೆ ಓದಿ ಹೃದಯ ಭಾರ ಮಾಡಿಕೊಂಡು ಹೊರಟುಬಿಟ್ಟಿದ್ದೇನೆ. ಇನ್ನಾದರು ಅಗಲಿಕೆಯ ಕಾರಣ ಹೇಳಬಹುದೇನೋ.....!!! ಅದ್ಭುತ ಕವನ ಸೌಮ್ಯ....

Submitted by Soumya Bhat on
ರಾಜೇ0ದ್ರ ಕುಮಾರ್ ರವರೆ ಕವಿತೆಯ ನೋವು ನಿಮ್ಮ ಹ್ರುದಯ ಭಾರ ಮಾಡಿದ್ದಕ್ಕೆ ಕ್ಷಮೆಯಿರಲಿ ಆದರೆ ಕವಿತೆ ತಮ್ಮ ಮನ ಮುಟ್ಟುವಲ್ಲಿ ಯಶಸ್ವಿಯಾಗಿದ್ದಕ್ಕೆ ಸ0ತೋಷವಿದೆ. ಧನ್ಯವಾದಗಳು, ಸೌಮ್ಯ‌

Submitted by chukki on
very nice kavana. ನೀನಿಲ್ಲದ ನಾಳೆ ಶುರುವಾಗಲಿದೆ ಹೊಸ ಜೀವನಕ್ಕೆ ನಾ೦ದಿ ಹಾಡಲಿದೆ... I like these lines very positive.

Submitted by nanjunda on
ಬೇಡದ ಕಾಡುವ ನೆನಪುಗಳನ್ನು ಬಿಸಾಕಿಬಿಡುವ ಕವಿತಾಸೃಷ್ಟಿ ಅದ್ಭುತವಾಗಿದೆ. ಶುಭವಾಗಲಿ.

Submitted by venkatb83 on
ನೀನಿಲ್ಲದ ನಾಳೆ ಶುರುವಾಗಲಿದೆ ಹೊಸ ಜೀವನಕ್ಕೆ ನಾ೦ದಿ ಹಾಡಲಿದೆ... ========================== ನಿಮ್ಮ ಈ ಬರಹ ಓದಿ ನನಗೆ ನನ್ನ ಈ ಬರಹ ನೆನಪಿಗೆ ಬಂತು.... http://sampada.net/blog/%E0%B2%A4%E0%B3%8B%E0%B2%9A%E0%B2%BF%E0%B2%A6%E0%B3%8D%E0%B2%A6%E0%B3%81-%E0%B2%97%E0%B3%80%E0%B2%9A%E0%B2%BF%E0%B2%A6%E0%B3%8D%E0%B2%A6%E0%B3%81/15/04/2012/36393 ಬರಹ ಹ್ರುದಯದಲ್ಲಿ .................. ಅಲೆ ಎಬ್ಬಿಸಿತು..... \|/

Submitted by Soumya Bhat on
ಸಪ್ತಗಿರಿಯವರೆ ತಮ್ಮ ಪ್ರತಿಕ್ರಿಯೆ ಓದಿ ಕವನ ಬರೆದದ್ದಕ್ಕೆ ಸಾರ್ಥಕವಾಯಿತು ಎಂದೆನಿಸಿತು ಧನ್ಯವಾದಗಳು, >ಸೌಮ್ಯ

Submitted by srimiyar on
ಯಾವುದೋ ಕಾರಣಕ್ಕೆ ಹಳೆಯದನ್ನೆಲ್ಲಾ ಮರೆಯಲೇ ಬೇಕು, ಹೊಸ ಜೀವನ ಕಟ್ಟಿಕೊಳ್ಳಲೇಬೇಕು. ಸುಂದರ ಕವನ

Submitted by Soumya Bhat on
ನಿಮ್ಮ ಮಾತು ನಿಜ ಶ್ರೀನಿವಾಸ್ ರವರೆ, ಪ್ರತಿಕ್ರಿಯೆಗೆ ಧನ್ಯವಾದಗಳು, >ಸೌಮ್ಯ

Submitted by gurudutt_r on
ಪ್ರೀತಿಯನ್ನು ಕಳೆದುಕೊಂಡಿರುವ ಎಲ್ಲರಿಗೂ ಹತ್ತಿರವಾದ ಸನ್ನಿವೇಷಗಳು..ಸಾಲುಗಳು ಈ ಭಘ್ನ ಪ್ರೇಮಿಯ ಪಾಡು ಅದೇ ನಿಮ್ಮ ಹಾಡು ಸಿಲ್ಲಿ ಲಲ್ಲಿ ಧಾರಾವಾಹಿಯಲ್ಲಿ ಡಾ||ವಿಠಲ್ ರಾವ್ ವೆರಿ ಫ಼ೇಮಸ್ ಇನ್ ಸರ್ಜರಿ ಆಂಡ್ ಭರ್ಜರಿ ಹೇಳೊ ಹಾಗೆ, ಜೇಡ ಕಟ್ಟಿದ ಮೂಲೆ ನೋಡುತ್ತ ಈ ನಿಮ್ಮ ಕವನ ಓದಿ ನನ್ನ ನೆನಪಿನಂಗಳದಲ್ಲಿ ನೋವುಗಳ ಮರುಕಳಿಕೆಯ ಅನುಭವ ಆಯ್ತು. ರಾ.ಗುರುದತ್.

Submitted by Soumya Bhat on
ಗುರುದತ್ ರವರೆ ಕವನದ ಸಾರ್ಥಕತೆಯು ಓದುವವರು ಅದನ್ನ ಅನುಭವಿಸಿದಾಗ ಆಗುತ್ತದೆ ಎಂಬುದು ನನ್ನ ಅಭಿಪ್ರಾಯ. ತಮ್ಮ ಅನಿಸಿಕೆಯಿಂದ ಖುಷಿಯಾಯಿತು. ಮರೆತೆನೆಂದರೂ ಮರೆಯಲಾಗದ ಮಧುರ ನೆನಪುಗಳಿಗೆ ವಿದಾಯ ಹೇಳುವ ಪ್ರಯತ್ನ ಮಾಡಿದ್ದೇನೆ .ಮೆಚ್ಚುಗೆಗೆ ಅಭಾರಿ, ಧನ್ಯವಾದಗಳು, >ಸೌಮ್ಯ

Submitted by chandana.rupa on
ನಿಮ್ಮ ಕವನ ನನ್ನ ಜೀವನದ ಹೊಸ ಹಾದಿಗೂ ಬಹಳ ಹತ್ತಿರ. ಮನ ಮುಟ್ಟಿತು.

Submitted by Soumya Bhat on
ಚಂದನರವರೆ ಕವನ ತಮ್ಮ ನಿಜ ಜೀವನಕ್ಕೆ ಹತ್ತಿರವಾಗಿದೆ ಎಂದು ತಿಳಿಸಿದ್ದೀರಿ ಕಲ್ಪನೆಯಲ್ಲಿ ನೋವನುಭವಿಸಿ ಕವನ ಬರೆಯುವುದು ಸುಲಭ ಆದರೆ ನಿಜ ಜೀವನದಲ್ಲಿ ಕಷ್ಟ. ನೀವಾಯ್ದ ಹೊಸದಾರಿ ಒಳ್ಳೆಯದಿರಲಿ, ಪ್ರತಿಕ್ರಿಯೆಗೆ ಧನ್ಯವಾದಗಳು,ಶುಭವಾಗಲಿ >ಸೌಮ್ಯ