23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಹೊಸೆಯಬೇಕಿದೆ ಹೊಸ ಬದುಕು

June 20, 2012 - 9:31pm
lpitnal@gmail.com

 ಹೊಸೆಯಬೇಕಿದೆ ಹೊಸ ಬದುಕು 

                             _ಲಕ್ಷ್ಮೀಕಾಂತ ಇಟ್ನಾಳ
ಓ ಉಸಿರೇ,
ಏರಿಳಿತದ ಈ ಪಯಣದಲಿ
ನಾ ನಡೆವ ದಾರಿಯೂ ನೀನೇ
ದಾರಿಹೋಕನೂ ನೀನೇ
ನೀನಿಲ್ಲದಲ್ಲಿ,
ದಾರಿ ಎಲಿ,್ಲ  ದಾರಿಹೋಕ ನೆಲ್ಲಿ
ಕೊಳೆವ ನಾನೆಲ್ಲಿ, ಕಳೆಯ ದೇವರಿನ್ನೆಲ್ಲಿ
ನೆನಪುಗಳೆಲ್ಲ
ನನ್ನಲ್ಲಿ
 ಮಣ್ಣಲ್ಲಿ
 
ಅನಿವಾರ್ಯ ತೊಡುಗೆ
ಈ ಉಸಿರಾಟವೆನಗೆ
ಕಾರಣ ತಿಳಿಸಲೇ ನಿನಗೆ
ಅವಳ ನೆನಪಲಿ ಮೀಂವುದೇ
ಉಸಿರಿಗೂ ಮಿಗಿಲೆನಗೆ
 
ಅದೊಂದು ಆ  ಕ್ಷಣವೇ
ಅವಳ ನೆನಪಾಗುವುದು ನನಗೆ
ಉಸಿರ ಹೀರುವ ಕ್ಷಣವೇ
ಆ  ಗಳಿಗೆ ನನಗೆÉ
 
ಉಸಿರ ಉಸಿರಲಿ ಬೆರೆಸಿ
ನೆನಪುಗಳ ಮಾಲೆಯನು
ಹಸಿರ ಹಸಿರಾಗಿ
ಇರಿಸಿರುವೆ ನಾನು
ನಾಳಿನ ನೆನಪಿಗೆ
ಉಳಿಸಿರುವೆ ನಾನು
 
ಉಸಿರು ಬಸಿದ ಗಳಿಗೆ
ಕಳೇವರ ನಾನು
ನೆನಪುಗಳೇ ಕವಳ
ಮೆಲ್ಲಲು
 
ಉಳಿಸಿರುವ ನೆನಪುಗಳ
ಉರಿಸುವೆನು ನಾನು
ಸಾಗಬೇಕಿದೆ ನೆನಪಿನ ವೇಗದಲಿ
ಬಹುದೂರ ಸಾಗಿರುವ
ನನ್ನವಳ ಜೊತೆಗೂಡಿ
ಹೊಸೆಯಬೇಕಿದೆ
ಹೊಸ ಬದುಕೊಂದನು
ಹೊಸ ಹಾಡೊಂದನು
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by H A Patil on
ಲಕ್ಷ್ಮಿಕಾಂತ ಇಟ್ನಾಳರಿಗೆ ವಂದನೆಗಳು ನಿಮ್ಮ ಕವನ " ಹೊಸೆಯಬೇಕು ಹೊಸ ಬದುಕು " ಓದಿದೆ, ಬಹಳ ಚೆನ್ನಾಗಿದೆ. > ಬಹಳ ಅರ್ಥಪೂರ್ಣ ಮುಕ್ತಾಯ.

Submitted by lpitnal@gmail.com on
ಧನ್ಯವಾದಗಳು ಪಾಟೀಲರವರಿಗೆ, ಸಂಗಾತಿಗಳನ್ನು ಕಳೆದುಕೊಂಡ ಬದುಕಿನ ಸಂಜೆಯಲ್ಲಿ ಕಾಲ ಕಳೆಯುವ ಜೀವಗಳಿಗೊಂದು ನಮನದ ಕವನವಿದು.ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.