ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.

— ಜಾನ್ ಅಶ್‌ಬೆರಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಟೆಕ್ ಸುದ್ದಿ

ಮಂಗಳನ ಅಂಗಳಕೆ ಇಣುಕು ನೋಟ

ಹಿತ್ತಲಲಿ ಕುಳಿತು ಮಂಗಳನ ಅಂಗಳ ನೋಡೋಣ್ವಾ?

ಹೌದು.. ಇವತ್ತು ಮಂಗಳನ ದರ್ಶನ ಸುಲಭ ಸಾಧ್ಯ... ಅವನು ಭೂಮಿಯ ಹತ್ತಿರಕ್ಕೆ ಸರಿಯುತ್ತಿದ್ದಾನೆ. ಮತ್ತೆ ಈ ಅವಕಾಶ ದೊರೆಯುವುದು ೨೦೧೪ ರಲ್ಲಿ.  ಕೆಲತಿಂಗಳುಗಳಿಂದ ಪೂರ್ವದ ಕಡೆ ಮುಖ ಮಾಡಿ ನೋಡಿದೆಡೆ ಕೆಂಬಣ್ಣದ, ನಕ್ಷತ್ರದಂತೆ ಕಾಣುವ  ಉದಯಿಸುತ್ತಿರುವ ಮಂಗಳನನ್ನು ಕಾಣಬಹುದಾಗಿದೆ.

ಇಂದು ರಾತ್ರಿ ಮಂಗಳ ಭೂಮಿಗೆ ೬೧ ಮಿಲಿಯನ್ ಮೈಲುಗಳಷ್ಟು ಬಳಿಸಾರಲಿದೆ, ಅಂದರೆ ೯೮ ಮಿಲಿಯನ್ ಕಿಲೋಮೀಟರುಗಳು. ಇಷ್ಟು ಸಾಕು, ಖಗೋಳಾಭ್ಯಾಸ ನೆಡೆಸುತ್ತಿರುವ ಹವ್ಯಾಸಿಗಳು ತಮ್ಮ ವಿಶೇಷ ಉಪಕರಣಗಳನ್ನು ಮಂಗಳನತ್ತ ತಿರುಗಿಸಿ ಅಲ್ಲಿನ ಮೇಲೈ ಬಗೆಗಿನ ವಿಷಯಗಳನ್ನು ಸೆರೆಹಿಡಿಯಲು.  ಮುಂದೆ ಓದಿ »

ಜಿಯೋಟ್ಯಾಗಿಂಗ್ - ಭೌಗೋಳಿಕ ಮಾಹಿತಿಗಾಗಿ

ಜಿಯೋಟ್ಯಾಗಿಂಗ್ ನಿಮ್ಮ ಛಾಯಾಚಿತ್ರಗಳು, ದೃಶ್ಯ, ವೆಬ್ಸೈಟು ಅಥವಾ ಆರೆಸ್ಸೆಸ್ ಫೀಡ್ ಇತ್ಯಾದಿಗಳಿಗೆ ಭೌಗೋಳಿಕ ವಿಳಾಸವನ್ನು ಸೇರಿಸುವ ಒಂದು ಕಾರ್ಯವಾಗಿದೆ ಮತ್ತು ಇದು geospatial metadata ಮಾದರಿಯಲ್ಲಿರುತ್ತದೆ. ಈ ದತ್ತಾಂಶಗಳು ಅಕ್ಷಾಂಶ, ರೇಖಾಂಶ ಕಕ್ಷೆ ಗಳನ್ನು ಒಳಗೊಂಡಿದ್ದು, ಅಲ್ಟಿಟ್ಯೂಡ್, ದತ್ತಾಂಶದ ನಿಖರತೆ ಹಾಗೂ ಸ್ಥಳದ ಹೆಸರು ಇತ್ಯಾದಿಗಳನ್ನೂ ಒಳಗೊಂಡಿರಬಹುದು. ಜಿ.ಪಿ.ಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) ಸೇವೆ ಕೊಡುವ ಉಪಗ್ರಹಗಳಿಂದ ಈ ದತ್ತಾಂಶಗಳು ನಮ್ಮ ಜಿ.ಪಿ.ಎಸ್ ಸಾಧನದ ಮಡಿಲು ಸೇರುತ್ತವೆ.

ಜಿಯೋಟ್ಯಾಗಿಂಗ್ ಬಳಕೆ

ಜಿಯೋಟ್ಯಾಗಿಂಗ್ ಬಳಕೆದಾರರಿಗೆ ತಮ್ಮಲ್ಲಿರುವ ಚಿತ್ರದ ಅಥವಾ ಇನ್ಯಾವುದೇ ರೂಪದಲ್ಲಿರುವ ಮಾಹಿತಿಯ ನಿಖರ ವಿಳಾಸವನ್ನು ತಿಳಿಯಲು, ಹಾಗೂ ಮಾಧ್ಯಮ ವೇದಿಕೆ (media platform) ತಂತ್ರಾಂಶಗಳು(ಉದಾ: ಗೂಗಲ್ ಅರ್ಥ್)ತೋರಿಸುವ ಯಾವುದೇ ಒಂದು ಸ್ಥಳದ ಬಗ್ಗೆ ಹೆಚ್ಚಿನ ವಿವರವನ್ನು ನೀಡಲು ಬಳಸಬಹುದಾಗಿದೆ. ಮೊಬೈಲ್ ತಂತ್ರಾಶಗಳಲ್ಲಿ ಈ ತಂತ್ರಜ್ಞಾನದ ಬಳಕೆ ಸುಲಭ ಸಾಧ್ಯವಾಗಿದೆ.  ಮುಂದೆ ಓದಿ »

ಗೂಗಲ್ ವಾಯ್ಸ್ ಸರ್ಚ್ ವಿಶ್ವ ಸುತ್ತಿ ನೋಕಿಯಾ ಹುಡುಕಿ, ಚೈನೀಸ್ ಕಲಿತ ಕಥೆ

google-mobile-app-movie-times

ಗೂಗಲ್ ಸರ್ಚ್ ನ ವಾಯ್ಸ್ ಆವೃತ್ತಿ ಇಂಗ್ಲಿಷ್ ಮಾತನಾಡುವವರ ಪ್ರಪಂಚವನ್ನೆಲ್ಲಾ ಸುತ್ತಿ ಎಲ್ಲರ ಮಾತನಾಡುವ ಪರಿಯನ್ನು ಅರಿತು, ಬೆಳೆದು ನಿಂತಿದೆ. ಅಮೇರಿಕಾ, ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ, ಭಾರತ ಹೀಗೆ ಹಲವು ದೇಶಗಳಲ್ಲಿ ಮಾತನಾಡುವ ಇಂಗ್ಲೀಷ್ ಅಸ್ಸೆಂಟ್ ಅನ್ನು ಇದು ಅರ್ಥ ಮಾಡಿಕೊಳ್ಳಬಲ್ಲದು. ಈಗ ಹೊಸ ಸುದ್ದಿ ಹೊರ ಬಿದ್ದಿದೆ. ನೋಕಿಯಾ ಎಸ್ ೬೦ ಮೊಬೈಲ್ ಗೂಗಲ್ ವಾಯ್ಸ್ ಸರ್ಚ್ ಹೊಂದಿದ್ದು, ಮ್ಯಾಂಡ್ರಿನ್ ಚೈನೀಸ್ ಅರ್ಥ ಮಾಡಿಕೊಳ್ಳುತ್ತದಂತೆ. ಗೂಗಲ್ ಬ್ಲಾಗ್ ಈ ವಿಷಯವನ್ನು ಹೊರಹಾಕಿದೆ.

ನೋಕಿಯಾದ ಎಸ್ ೬೦ ಫೋನ್ಗಳು ವಿಶ್ವದಾದ್ಯಂತ ಅತ್ಯಂತ ಪ್ರಸಿದ್ದಿ ಪಡೆದಿವೆ.  ನೀವೇನಾದರೂ ನೋಕಿಯಾ ಎನ್-ಸೀರೀಸ್ ಅಥವಾ ಇ-ಸೀರೀಸ್ ಫೋನ್ ಬಳಸುತ್ತಿದ್ದರೆ, ನೀವೂ ಕೂಡ ಎಸ್-೬೦ ಬಳಸುತ್ತೀರಿ ಎಂದರ್ಥ. ೧೨ ಗುಂಡಿಗಳ ಕೀ-ಪ್ಯಾಡ್ ಹೊಂದಿರುವ ಈ ಫೋನ್ ಗಳು ಕಾಲ್ ಮಾಡ್ಲಿಕ್ಕೆ ಸಮರ್ಥ ಆದ್ರೆ ಟೈಪ್ ಮಾಡ್ಲಿಕ್ಕೆ ಸ್ವಲ್ಪ ಕಷ್ಟ ಅಂತ್ಲೇ ಹೇಳಬಹುದು. ಅದರಿಂದಲೇ ಗ್ರಾಹಕರ ಆಗ್ರಹದ ಮೇರೆಗೆ ಗೂಗಲ್ ಸರ್ಚ್ ಅನ್ನು ವಾಯ್ಸ್ ಅಂದ್ರೆ ಧ್ವನಿಯ ಮೂಲಕ ಕೆಲಸ ಮಾಡುವಂತೆ ಮಾಡ್ಲಿಕ್ಕೆ ಆ ಒಂದು ಹೊಸ ತಂತ್ರಾಂಶವನ್ನು ತನ್ನ ಫೋನ್ ನಲ್ಲಿ ಅಳವಡಿಸಲು ನೋಕಿಯಾ ಶ್ರಮಪಡುತ್ತಿದೆ.  ಮುಂದೆ ಓದಿ »

ಟೆಕ್ ಸುದ್ದಿ - ವರ್ಚುಅಲ್ ಬಾಕ್ಸ್ ನಲ್ಲೀಗ ಆಟ ಆಡಿ, ಮಜಾ ಮಾಡಿ

ವರ್ಚುಅಲ್ ಬಾಕ್ಸ್

  ವರ್ಚುಅಲ್ ಬಾಕ್ಸ್ - ಈಗಾಗಲೆ ಕಂಪ್ಯೂಟರಿನಲ್ಲಿ ನಡೀತಿರೋ ಆಪರೇಟಿಂಗ್ ಸಿಸ್ಟಂನ ಮೇಲೆ ಮತ್ತೊಂದು ಆಪರೇಟಿಂಗ್ ಸಿಸ್ಟಂ ಅನ್ನು, ಬೇರೆಯದೇ ಕಂಪ್ಯೂಟರ್ನಲ್ಲಿ ನೆಡೆಸಿ ಅದನ್ನು ನಮ್ಮ ಕಂಪ್ಯೂಟರ್ ತೆರೆಯ ಮೇಲೆಯೇ ಮೂಡುವಂತೆ ಮಾಡಬಲ್ಲ ತಂತ್ರಾಂಶ.  ಮುಂದೆ ಓದಿ »

ಹ್ಯಾಕರ್ ಅಂದ್ರೆ ಯಾರು?

"ಹ್ಯಾಕರ್" ಗಳು ಅತಿಬುದ್ದಿವಂತರೂ, ಅಸಾಧಾರಣ ಕೌಶಲ್ಯವನ್ನು ಹೊಂದಿದಂತವರೂ, ಅವುಗಳನ್ನು ಬಳಸಿ, ಕಂಪ್ಯೂಟರ್ ಇತ್ಯಾದಿ ಏಲೆಕ್ಟ್ರಾನಿಕ್ ಉಪಕರಣಗಳನ್ನು ಹ್ಯಾಕ್ ಮಾಡಿ ಅಮೂಲ್ಯ ದತ್ತಾಂಶಗಳನ್ನು, ಮಾಹಿತಿಗಳನ್ನು ಕೊಳ್ಳೆಹೊಡೆಯುವವರೆಂದು ನಮ್ಮಲ್ಲನೇಕರು ತಿಳಿದು ಕೊಂಡಿದ್ದೇವೆ ಅಲ್ಲವೇ?   ಮುಂದೆ ಓದಿ »

Syndicate content