ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.

— ಜಾನ್ ಅಶ್‌ಬೆರಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ತಿರುಮಕೂಡಲು ನರಸೀಪುರ

'ಸಾವಿರದ ಶರಣ' ರಾಜ್ ನೆನಪಿಗೆ ನುಡಿ ನಮನ

Courtesy: wikipedia

ಇಪ್ಪತ್ತನೇ ಶತಮಾನದ ಭಾಷೆಯೆಂದೇ ಜನಪ್ರಿಯವಾದ ಸಿನಿಮಾದೊಂದಿಗೆ ಮನುಷ್ಯ ತನ್ನನ್ನು ಯಾವ ರೀತಿಯಲ್ಲಿ ಗುರುತಿಸಿಕೊಂಡಿದ್ದಾನೆಂದರೆ, ತಾನು ಮೊದಲು ನೋಡಿದ ಚಿತ್ರ, ನನ್ನ ಗೆಳೆಯನೊಂದಿಗೆ, ಗೆಳತಿಯೊಂದಿಗೆ, ಪ್ರೇಯಸಿಯೊಂದಿಗೆ, ಮದುವೆಯಾದ ನಂತರ ನೋಡಿದ್ದು, ನನ್ನ ಮಗನೊಂದಿಗೆ ನೋಡಿದ ಮೊದಲ ಚಿತ್ರ ಹೀಗೆ...ಜೀವನದ ಪ್ರತಿಯೊಂದು ಅಮೂಲ್ಯ ಕ್ಷಣವನ್ನೂ ಸಿನಿಮಾದೊಂದಿಗೆ ಬೆಸೆಯುವಷ್ಟು. ಹಾಗಾಗಿ, ಸಿನಿಮಾ ಎಂದಾಕ್ಷಣ ನನ್ನ ಕಣ್ಣ ಮುಂದೆ ಮೊದಲಿಗೆ ಕಾಣಿಸಿಕೊಳ್ಳುವುದು ಡಾ.ರಾಜ್ ಕುಮಾರ್. ಅವರಿಲ್ಲದ ಸಿನಿಮಾ ಪ್ರಪಂಚವನ್ನು ನಾನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಇಂದು ರಾಜ್ ಕುಮಾರ್ 80ನೇ ಹುಟ್ಟುಹಬ್ಬ. ಆದರೆ, ಅವರು ಭೌತಿಕವಾಗಿ ಇಂದು ನಮ್ಮೊಂದಿಗಿಲ್ಲ, ನಿಜ. ಆದರೆ, ಕನ್ನಡ ಚಿತ್ರ ರಸಿಕರ ಮನದಾಳದಲ್ಲಿ ಸದಾ ಕಾಲ ಜೀವಂತವಾಗಿರುತ್ತಾರೆ. ಕನ್ನಡ ನಾಡು ನುಡಿ ಸಂಸ್ಕೃತಿ ಜೀವಂತವಾಗಿರುವವರೆಗೂ ಚಿರಂಜೀವಿಯಾಗಿರುತ್ತಾರೆ. ಆ ಚಿರಂಜೀವಿ ರಾಜ್ ಕುಮಾರನಿಗೆ ನನ್ನ ಈ ನುಡಿ ನಮನ.  ಮುಂದೆ ಓದಿ »

Syndicate content