ಪ್ರಶ್ನೆಮಾಡುವುದನ್ನು ನಿಲ್ಲಿಸದಿರುವುದು ಅತ್ಯಂತ ಮುಖ್ಯ.

— ಅಲ್‌ಬರ್ಟ್ ಐನ್‌ಸ್ಟೀನ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಪುರಂದರ ದಾಸರು

ಶೃಂಗಾರ ರಸಮಂಜರಿ

ಕರ್ನಾಟಕ ಸಂಗೀತ ದೇವಾಲಯಗಳಲ್ಲಿ ಬೆಳೆಯಿತು, ಅದಕ್ಕಾಗಿ ಅದು ಭಕ್ತಿ ಪ್ರಧಾನ ಮತ್ತು ರಾಜರ ಆಸ್ಥಾನಗಳಲ್ಲಿ ಬೆಳೆದ ಹಿಂದೂಸ್ತಾನಿ ಸಂಗೀತ ಶೃಂಗಾರ ರಸ ಪ್ರಧಾನ ಎಂಬ ಮಾತಿದೆ. ತುಸುಮಟ್ಟಿಗೆ ಇದು ನಿಜವೇ ಹೌದು. ಆದರೆ, ನವರಸಗಳಲ್ಲಿ ಮುಖ್ಯವಾದ ಶೃಂಗಾರವನ್ನು ನಮ್ಮ ವಾಗ್ಗೇಯಕಾರರು ಹಾಗೇನೂ ಕಡೆಗಣಿಸಿಲ್ಲ. ಕೆಲದಿನಗಳ ಮೊದಲು ಅಂಗಳದೊಳಗೆ ಬೆಳದಿಂಗಳು ತುಂಬಿತು ಎನ್ನುವ ಬರಹದಲ್ಲಿ ಪದ, ಜಾವಳಿಗಳ ಬಗ್ಗೆ ಸ್ವಲ್ಪ ಹರಟಿದ್ದೆ. ಇಷ್ಟೇ ಅಲ್ಲದೆ, ವರ್ಣಗಳು ಎನ್ನುವ ರಚನೆಗಳಲ್ಲೂ ಶೃಂಗಾರರಸವೇ ಪ್ರಧಾನ. ಆದರೆ, ಅವುಗಳಲ್ಲಿ ಸಾಹಿತ್ಯ ಗೌಣ. ಸಂಗೀತ ಮುಖ್ಯ.

ಹಿಂದಿನಿಂದಲೂ ರಸಗಳ ಪಟ್ಟಿ ಮಾಡುವಾಗ ಶೃಂಗಾರವೇ ಮೊದಲಿನದು. ಅಮರಕೋಶ ರಸಗಳನ್ನು "ಶೃಂಗಾರ ವೀರ ಕರುಣಾ ಅಧ್ಬುತ ಹಾಸ್ಯ ಭಯಾನಕಾ: ಭೀಭತ್ಸ ರೌದ್ರೋ ಚ ರಸಾ:" ಎಂದು ಎಂಟು ರಸಗಳನ್ನು ಪಟ್ಟಿಮಾಡುತ್ತದೆ. ಭರತನ ನಾಟ್ಯಶಾಸ್ತ್ರದಲ್ಲಿ, ಈ ಎಂಟರ ಜೊತೆಗೆ ಒಂಬತ್ತನೆಯದಾದ ’ಶಾಂತ’ವೆಂಬ ರಸವೂ ದೊರೆಯುತ್ತೆ. ಒಟ್ಟಿನಲ್ಲಿ ಶೃಂಗಾರವೇ ಮೊದಲ ರಸವಾಗಿತ್ತು ಎಂದು ನಾವಂದುಕೊಳ್ಳುವುದರಲ್ಲಿ ತಪ್ಪಿಲ್ಲ.  ಮುಂದೆ ಓದಿ »

ಕೃಷ್ಣನ ಕೊಳಲಿನಾ ಕರೆ

ಭಾರತೀಯ ಸಂಗೀತ ಸಾವಿರಾರು ವರ್ಷಗಳ ಪರಂಪರೆಯನ್ನು ಹೊಂದಿರುವುದು ತಿಳಿದ ವಿಷಯವೇ. ರಾಮಾಯಣದ ರಾವಣ ವೀಣೆ ನುಡಿಸುತ್ತಿದ್ದನೆಂದೂ, ಹನುಮಂತ ಗುಂಡಕ್ರಿಯ ರಾಗವನ್ನು ಹಾಡಿ ಕಲ್ಲು ಬಂಡೆಯನ್ನೇ ಕರಗಿಸಿದನೆಂಬುದು ಪ್ರತೀತಿ. ಅಲ್ಲದೇ, ಕುಶಲವರು ವೀಣೆಯನ್ನು ನುಡಿಸುತ್ತ, ರಾಮನ ಮುಂದೆ ರಾಮಾಯಣವನ್ನು ಹಾಡಿದರೆಂಬ ಸಂಗತಿ ರಾಮಾಯಣದ ಉತ್ತರಕಾಂಡದಲ್ಲಿದೆ. ಹಾಗಾಗಿ, ನಮ್ಮ ಸಂಗೀತದ ಆದಿಯನ್ನು ಕಡಿಮೆಯೆಂದರೆ ಎರಡುಸಾವಿರ ವರ್ಷಗಳ ಹಿಂದೆ ಎಂದಾದರೂ ಊಹಿಸಬೇಕಾಗುತ್ತೆ. ಏಕೆಂದರೆ, ವಾಲ್ಮೀಕಿರಾಮಾಯಣದ ಪ್ರಕ್ಷಿಪ್ತಭಾಗಗಳೂ (ಬಾಲಕಾಂಡ, ಉತ್ತರಕಾಂಡ) ಸುಮಾರು ಕ್ರಿಸ್ತನ ಕಾಲದ ಆಸುಪಾಸಿನವು ಎಂಬುದು ಗೊತ್ತಿರುವ ವಿಚಾರವೇ.

ಆದರೆ ಪುರಾಣ-ಪ್ರಸಿದ್ಧರಲ್ಲಿ ಸಂಗೀತಗಾರನೆಂದು ಜನಜನಿತವಾಗಿರುವುದು ಕೃಷ್ಣ. ಕೃಷ್ಣನ ಕೊಳಲು ವಾದನದ ಕೌಶಲ ಮಹಾಭಾರತದಲ್ಲಿ (ನನಗೆ ತಿಳಿದ ಮಟ್ಟ್ಟಿಗೆ) ಹೆಚ್ಚಾಗಿಲ್ಲವಾದರೂ, ನಂತರ ಬಂದ ಭಾಗವತ - ಗೀತಗೋವಿಂದದಿಂದ ಹಿಡಿದು ಕಳೆದ ಶತಮಾನದ ಗೋಕುಲನಿರ್ಗಮನ (ಪುತಿನ) ದ ವರೆಗೂ ಹಲವಾರು ಕವಿಗಳು ಕೃಷ್ಣನ ಕೊಳಲಿನ ಕರೆಯನ್ನು ಬಣ್ಣಿಸಿದ್ದಾರೆ.  ಮುಂದೆ ಓದಿ »

Syndicate content