ಹಕ್ಕಲ್ಬೆರಿ ಫಿನ್
೧೭. ಪಾಲಿ ಆಂಟಿ ಬಿಡಿಸಿದ ರಹಸ್ಯ
February 23, 2007 - 12:34pm — modmaniಅಂದು ಬೆಳಿಗ್ಗೆ ತಿಂಡಿಗೂ ಮುಂಚೆ ಒಮ್ಮೆ ಸಿಲಾಸ್ ಚಿಕ್ಕಪ್ಪ ಪೇಟೆಗೆ ಹೋಗಿ ನೋಡಿ ಬಂದರು. ಆದರೆ ಸಮಾಚಾರವೇನೂ ಸಿಕ್ಕಿರಲಿಲ್ಲ. ತಿಂಡಿ ತಿನ್ನುವ ಮುಂಚೆ ಚಿಕ್ಕಪ್ಪ ಚಿಕ್ಕಮ್ಮನಿಗೆ "ನಾನು ನಿನಗೆ ಬಂದ ಪತ್ರ ಕೊಟ್ಟೆನಾ?" ಎಂದು ಕೇಳಿದರು ಮುಂದೆ ಓದಿ »

- Login or register to post comments
- 658 hits
- Email this book



೧೬. ಜಿಮ್‍ನ ಜೀತವಿಮುಕ್ತಿ.
February 23, 2007 - 12:29pm — modmaniಮರುದಿನ ಬೆಳಿಗ್ಗೆ ತಿಂಡಿ ತಿಂದು ನಮ್ಮ ಚಿಟ್ಟುದೋಣಿಯ ಬಳಿ ಹೋದೆವು. ಮಧ್ಯಾಹ್ನದ ಊಟವನ್ನೂ ಜೊತೆಯಲ್ಲಿ ಕೊಂಡೊಯ್ದದ್ದರಿಂದ ಸಂಜೆಯಾಗುವವರೆಗೂ ಮೀನು ಹಿಡಿಯುತ್ತಾ ಇಲ್ಲವೇ ಸುಮ್ಮನೇ ಹೊಳೆಯಲ್ಲಿ ಸುತ್ತುತ್ತಾ ಕಾಲ ಹಾಕಿದೆವು. ಮಧ್ಯೆ ಒಮ್ಮೆ ಹೋಗಿ ನಮ್ಮ ತೆಪ್ಪದ ಕ್ಷಮತೆಯನ್ನೂ ಪರೀಕ್ಷಿಸಿದೆವು. ಸಂಜೆ ಮನೆಗೆ ಹಿಂತಿರುಗಿದಾಗ ಅಲ್ಲಿ ನಮ್ಮನ್ನು ಸೀದಾ ಮಲಗುವ ಕೋಣೆಗೆ ಕಳಿಸಲಾಯಿತು. ಏಕೆ ಎಂದು ಕೇಳಿದ ಪ್ರಶ್ನೆಗೆ ಯಾರೂ ಉತ್ತರ ಕೊಡಲಿಲ್ಲ. ಆದರೆ ಅವರೆಲ್ಲಾ ತುಂಬಾ ಹೆದರಿದ್ದರೆನ್ನುವುದು ನಮಗೆ ಗೊತ್ತಾಗುತ್ತಿತ್ತು. ಸ್ವಲ್ಪ ಸಮಯಯದ ನಂತರ ಮೆಲ್ಲನೆ ಕೆಳಗಿಲಿದು ಬಂದು ಅಡಿಗೆ ಕೋಣೆಗೆ ಹೋಗಿ ನಮ್ಮ ಮಧ್ಯರಾತ್ರಿಯ ಅಲ್ಪಾಹಾರವಾಗಿ ಸ್ವಲ್ಪವನ್ನು ತೆಗೆದುಕೊಮ್ದು ಮತ್ತೆ ಮೇಲಿನ ನಮ್ಮ ಮಲಗುವ ಕೋಣೆಗೆ ಹೋಗಿ ಮಲಗಿಬಿಟ್ಟೆವು. ಮತ್ತೆ ನಾವೆದ್ದಾಗ ರಾತ್ರಿ ಹನ್ನೊಂದೂವರೆಯಾಗಿತ್ತು. ನಮ್ಮ ಸಾಹಸಕ್ಕೆ ಬೇಕಾದ ಸಿದ್ದತೆಗಳೊಂದಿಗೆ ಹೊರಡುವಾಗ ಟಾಮ್ ಕೇಳಿದ "ಬೆಣ್ಣೆ ಎಲ್ಲಿ" ನಾನು ಅಡಿಗೆಮನೆಯಲ್ಲಿ ಬೆಣ್ಣೆ ತೆಗೆದಿಟ್ಟದ್ದು ನೆನಪಿನಲ್ಲಿತ್ತು. ಅಂದರೆ ಅಲ್ಲೇ ಬಿಟ್ಟು ಬಮ್ದಿರಬೇಕು. ಅದನ್ನೇ ಟಾಮ್‍ಗೆ ಹೇಲಿದೆ. ಮುಂದೆ ಓದಿ »

- Login or register to post comments
- 650 hits
- Email this book



೧೫. ಸಂಚಿನ ಸುಳಿ.
February 23, 2007 - 12:26pm — modmaniಇಲ್ಲಿವರೆಗೂ ನಾವು ಜಿಮ್‍ನನ್ನು ಕಂಡಿರಲಿಲ್ಲ. ಅಲ್ಲದೇ ನಮಗೆ ಜಿಮ್ ಗೊತ್ತೆಂದೂ ಸಿಲಾಸ್‍ನಿಗೂ ತೋರಿಸಿಕೊಂಡಿರಲಿಲ್ಲ. ಈ ಕಾರಣದಿಂದ ನಮ್ಮ್ ಮಾತುಕತೆ ಸುತ್ತಾಟ ಎಲ್ಲಾ ಜಿಮ್ ಎಲ್ಲಿದ್ದಾನೆಂದು ಹುಡುಕುವುದರಲ್ಲಿಯೇ ಕಲೆಯಿತು. ಕಡೆಗೂ ಬೇಲಿಗೆ ಹೊಂದಿಕೊಂಡ ಮರದ ಕ್ಯಾಬಿನ್ನಿನಲ್ಲಿ ಜಿಮ್ ಇದ್ದಾನೆಂದು ತಿಳಿದಾಗ ಅವನ ಬಿಡುಗಡೆಯ ಯೋಜನೆಯ ತಯ್ಯಾರಿ ನಡೆಯಿತು. ಜಿಮ್ ಇದ್ದಾನೆಂದು ನಮಗೆ ತಿಳಿದದ್ದು, ಆ ಕ್ಯಾಬಿನ್ನಿಗೆ ಸಮಯಕ್ಕೆ ಸರಿಯಾಗಿ ಸೇವಕರು ಊಟ ತಿಂಡಿಗಳನ್ನು ತೆಗೆದುಕೊಂಡು ಹೋಗುತ್ತಿದ್ದುದರಿಂದ. ಜಿಮ್‍ನನ್ನು ನಾವಿನ್ನೂ ಕಂಡಿರಲಿಲ್ಲ. ನಾನು "ಅಡಗಿಸಿಟ್ಟಿರುವ ತೆಪ್ಪವನ್ನು ಹತ್ತಿರಕ್ಕೆ ತಂದು ಸಿದ್ದವಾದರೆ, ಚಿಕ್ಕಪ್ಪನ ಜೇಬಿನಿಂದ ಕ್ಯಾಬಿನ್ನಿನ ಬೀಗ ಕದ್ದು, ಜಿಮ್‍ನನ್ನು ಬಿಡಿಸಿ ಕರೆದುಕೊಂಡು ಓಡಿ ಬಿಡುವುದು. ಹಗಲೆಲ್ಲಾ ಅಡಗಿ ಕುಳಿತು, ರಾತ್ರಿ ಪ್ರಯಾಣ ಮಾಡಿದರೆ ಸಾಕಲ್ಲವಾ?" ಎಂದೆ. ಮುಂದೆ ಓದಿ »

- Login or register to post comments
- 591 hits
- Email this book



೧೩. ಜಿಮ್ ಮತ್ತೆ ಬಂಧಿ.
February 23, 2007 - 12:04pm — modmaniಅವರಿಬ್ಬರೂ ದೋಣಿ ಹತ್ತಿದಾಗ, ರಾಜ ನನ್ನ ಬಳಿಗೆ ಬಂದು ಕೊರಳ ಪಟ್ಟಿಯನ್ನು ಹಿಡಿದು "ತಪ್ಪಿಸಿಕೊಂಡು ಹೋಗಬೇಕಂತಿದ್ದೀಯಾ, ನಾಯಿ. ನಾವೆಂದರೆ ಬೇಜಾರಾಯಿತೇನು?" ಎಂದ. ಮುಂದೆ ಓದಿ »

- Login or register to post comments
- 553 hits
- Email this book



೧೦. ಶೇಕ್‍ಸ್ಪಿಯರ್ ನ ಪುನರುಥ್ಥಾನ.
February 23, 2007 - 11:55am — modmaniಸಂತೆಯಲ್ಲಿ ಜನಗಳಿಗೆ ಟೋಪಿ ಹಾಕಿದ ಮಾರನೇ ದಿನ ರಾಜನೂ, ಪಾಳೇಗಾರನೂ ಎದ್ದಿದ್ದು, ಹೊತ್ತು ಮೂರು ಮಾರು ಏರಿದ ಮೇಲೆಯೇ. ಏಕೆಂದರೆ ಹಿಂದಿನ ರಾತ್ರಿ ಅವರು ಹೊಟ್ಟೆ ತುಂಬಾ ಗುಂಡು ತುಂಬಿಕೊಂಡು ತಮ್ಮ ಚೋರವಿಜಯವನ್ನಾಚರಿಸಿದ್ದರು. ನದಿಯಲ್ಲಿ ಒಂದೆರಡು ಸುತ್ತು ಈಜಿದ ನಂತರವೇ ಅವರ ಪ್ರಙ್ಞೆ ಮರಳಿ ಬಂದಿದ್ದು. ತಿಂಡಿ ತಿಂದು ಹೊಳೆಯಲ್ಲಿ ಕಾಲಾಡಿಸುತ್ತಾ ತೆಪ್ಪದಲ್ಲಿ ಹೊರಟ ಅವರ ತಲೆಗಳಲ್ಲಿ ಹೊಸ ಹೊಸ ಹಣ ಸಂಪಾದಿಸುವ ಯೋಚನೆಗಳೊ-ಯೋಜನೆಗಳೂ ಮೂಡಲಾರಂಭಿಸಿದವು. ಮುಂದಿನ ಪಟ್ಟಣದಲ್ಲಿ ಏನು ಮಾಡಬೇಕೆಂಬ ನಿಸಿತ ಆಲೋಚನೆಯಲ್ಲಿ ಅವರಿಗೆ ಹೊಳೆದದ್ದು "ನಾಟಕ ಪ್ರದರ್ಶನ" ಏರ್ಪಡಿಸಬೇಕೆಂದು......! ಮುಂದೆ ಓದಿ »

- Login or register to post comments
- 621 hits
- Email this book




RSS: