ಪದ್ಯ
ಕೂತು ತಿಂದರೆ..
April 29, 2008 - 4:51pm — madhava_hsಕೂತು ತಿಂದರೆ ಕುಡಿಕೆ ಹಣ ಸಾಲದು,
ಕೂತು ತಿಂದರೆ ಕುಡಿಕೆ ಹಣ ಸಾಲದು,
ಹಾಗಾಗಿ ನಿಂತೇ ತಿನ್ನುವರು ನಮ್ಮ ಜನ
ದರ್ಶಿನಿ ಹೊಟೇಲುಗಳಲ್ಲಿ ! ![]()
(ಪ್ರೊ. ಕೃಷ್ಣೇಗೌಡರ ’ಕವಣೆ ಕಲ್ಲು’ ಕವನ ಸಂಗ್ರಹದಿಂದ ಆಯ್ದದ್ದು)

ಉಳಿದೇ ಇದೆ
April 16, 2008 - 3:49am — maheshaಬಿಟ್ಟು ಹೋದೆ, ಸರಿ!
ಅದೇ ನೋವಿನ ಗಾಯ
ಇನ್ನೂ ಆರದೆ........ತೆರೆದೇ ಇದೆ, ಉರಿದೇ ಇದೆ...
ಅದು ಮೆದುವಾಗಿ ಮಾಯುವುದೋ
ಅದೇ ಹದ್ದಾಗಿ ಹಾಯುವುದೋ
ಇನ್ನೂ ಆ ತುಮುಲ...ಕೆರಳೇ ಇದೆ, ನರಳೇ ಇದೆ...
ಈ ನಡುವೆ ಈ ಬದುಕ
ಒಣನದಿ ದಿಕ್ಕಿಲ್ಲದೇ ಉಕ್ಕಿ
ಇನ್ನೂ ಕೊರೆದು..... ಹರಿದೇ ಇದೆ, ಸುರಿದೇ ಇದೆ....
ಇದರೊಳಗೆ ಹೇಗೋ ಈ ಎದೆ
ನಿನ್ನ ಮರೆತಿಹೆನೆಂದು ಹುಸಿನಂಬಿ ಮುಂದೆ ಓದಿ »

ಕವಿತೆ ಅರ್ಥವಾಗೋದಿಲ್ಲ ಬಿಡಿ!
February 7, 2008 - 3:19pm — uniquesupriಮೊನ್ನೆಯೆರಡು ದಿನಗಳಿಂದ ಎಸ್.ಎಲ್.ಭೈರಪ್ಪನವರ "ಗ್ರಹಣ" ಕಾದಂಬರಿಯನ್ನು ಓದುತ್ತಿದ್ದೇನೆ. ಕಾದಂಬರಿಗಳೆಂದರೆ ಕೇವಲ ಮನರಂಜನೆಯ ಸರಕು. ಕಪೋಲ ಕಲ್ಪಿತ ಕಹಾನಿಗಳನ್ನು ಉದ್ದಕ್ಕೆ ಎಳೆದೆಳೆದು ನೂರಾರು ಪುಟಗಳಿಗೆ ವಿಸ್ತರಿಸಿದರೆ ಕಾದಂಬರಿಯಾಗುತ್ತದೆ ಎಂಬ ಭಾವ ಸಹಜವಾದದ್ದು. ಮುಂದೆ ಓದಿ »

- uniquesupri ರವರ ಬ್ಲಾಗ್
- Login or register to post comments
- 192 hits
- Email this blog



ದೂರ ಎಲ್ಲಿಯೋ ಬೆಂಗಳೂರು
July 18, 2007 - 7:16pm — anivaasiಹೀಗೆಲ್ಲಾ ನನ್ನ ಪ್ರೀತಿಯ ನಗರವನ್ನು ನೆನಪಿಸಿಕೊಳ್ಳುತ್ತೇನೆ-
"ನಿನ್ನ ಗಲ್ಲಿ ಬಯಲು ವನದಲ್ಲಿ ಪ್ರೀತಿಸಿದ್ದೆ
ನಿನ್ನ ಸಂಜೆ ಬೆಳಗು ನಡುಹಗಲ ಬಿಸಿಲಲ್ಲಿ ಪ್ರೀತಿಸಿದ್ದೆ
ನಿನ್ನ ಸೊಮಾರಿ ಹಾಗೂ ಗಡಿಬಿಡಿಯ ದಿನಗಳಲ್ಲಿ ಪ್ರೀತಿಸಿದ್ದೆ
ನಿನ್ನ ಜನ ನಿಬಿಡಗಳಲ್ಲಿ ಜನ ರಹಿತಗಳಲ್ಲಿ ಪ್ರೀತಿಸಿದ್ದೆ ಮುಂದೆ ಓದಿ »

ತಲುಪುವುದಕ್ಕಲ್ಲ
July 6, 2007 - 7:24pm — anivaasiಪಯಣಗಳಿಂದು ತಲುಪುವುದಕ್ಕಲ್ಲ.
ತಲುಪಿದರೂ ಮತ್ತೆ ಹೊರಡುವುದಕ್ಕೆ
ತಂಗುದಾಣಗಳೇ ಎಲ್ಲ ಚಣ ನಿಂತು
ಕಾಫಿ ಹೀರಿ, ಎಲೆಯಡಿಕೆ ಅಗಿದು ಉಗಿಯಲಿಕ್ಕೆ.
ಗಂಟು ಮೂಟೆ ಇಳಿಸಿ ಬಂಧುಮಿತ್ರರ ಅಪ್ಪಿ
ಉಸ್ಸಪ್ಪ ನಿಲ್ದಾಣಗಳಲ್ಲ ದಾರಿಗುಂಟ ಸಿಕ್ಕುವುದೆಲ್ಲ.
ಇಲ್ಲಿರುವರಿಗೆ ಅಲ್ಲಿರುವ ಕನಸು, ಅಲ್ಲಿರುವರಿಗೆ ಇನ್ನೆಲ್ಲಿಯೋ ಕಣ್ಣು ಮುಂದೆ ಓದಿ »

- anivaasi ರವರ ಬ್ಲಾಗ್
- Login or register to post comments
- 238 hits
- Email this blog




RSS: