ಲೇಖನ: ಕಿಲಾರದ ಕಿಲಾಡಿ ಜಲಯೋಧರು
ಕವನ
ಖಾಲಿ ಬಾಟಲಿ
January 9, 2009 - 11:49am — mahesha
ಮರೆಯಾದ ಒಲುಮೆಯ
ಮರೆಯಲು ಕುಡಿದೆನಾ
ಸುರೆ ಬಾಟಲಿ ಎಷ್ಟೋ
ಸುರಿದೆ ಎತ್ತಿ ಅಪ್ಪಿಕೊಂಡು
.................ಈ ಹಾಳು ಖಾಲಿ ಬಾಟಲಿ ||
ಕುಡಿದ ಗುಟುಕಿಳಿದು
ಮಿಡಿವುದು ನೆನೆಪು
ತುಣುಕು ತುಣುಕು
ಇಣುಕಿ ಜೀವಹಿಂಡಿ
.................ಈ ಹಾಳು ಖಾಲಿ ಬಾಟಲಿ ||
ಮುಗಿದ ಬಾಟಲಿ
ಖಾಲಿ ಖಾಲಿಯಾಗಿ
ಅಣಕಿಸುವುದು ನನ್ನೀ
ತಿಣುಕು ಜೀವನವನು ಮುಂದೆ ಓದಿ »

ಮೌನ ಎದೆ
January 9, 2009 - 8:03am — mahesha
ಅಂದು ನೀ ಹೀಗೇ ನನ್ನ ಕಂಡಿದ್ದೆ
ಚಂದು ಹೊಂಗೊಂಬೆಯಂತೆ ಕೂತಿದ್ದೆ
ತಲೆಬಾಗಿ ಮೇಲ್ಗಣ್ಣಿಂದೆನ್ನ ನೋಡಿ
ನಾಚಿ ಹಾಗೇ ಸುಮ್ಮನೆ ನಸುನಕ್ಕಿದ್ದೆ
..... ನನ್ನ ಎದೆಯಲಿಂದು ಕೊನೆಗೆ ತಣ್ಣನೆ ಮೌನ!
ನಿನ್ನ ನೋಡಿ ನನ್ನೀ ಎದೆ ಹೇಳಿತ್ತು
ಇವಳೇ ಸಾವುಬದುಕಿನ ಜೊತೆಗಾತಿ
ನೀನು ನಿನ್ನ ಮನಸ್ಸಲ್ಲೆ ಹೂಂ ಎಂದೆ ಮುಂದೆ ಓದಿ »

ಆಕಾಶದ ಮೋಡದಲ್ಲಿ
January 8, 2009 - 11:16pm — Nagaraj.G"ಆಕಾಶದ ಮೋಡದಲ್ಲಿ ಮರೆಯಾಗುತ್ತಿರುವ ಚಂದ್ರನಂತೆ
ನೀನು ನನ್ನ ಬಾಳಲ್ಲಿ ಯಾಕೆ ಮರೆಯಾಗುತ್ತಿರುವೆ"
"ನಿನ್ನನ್ನು ನೋಡಿದಾಗ ಮತ್ತೊಮ್ಮೆ ನೋಡಬೇಕು ಅನಿಸುತ್ತದೆ
ಆ ನಿನ್ನ ಕಣ್ಣುಗಳು, ಒಂದು ಕಣ್ಣಲ್ಲಿ ಸೂರ್ಯನಂತೆ ಬೆಂಕಿ ಕಾರುತ್ತಿದೆ
ಇನ್ನೊಂದು ಕಣ್ಣಲ್ಲಿ ಚಂದ್ರನ ತಂಪು ಚೆಲ್ಲುತ್ತೀಯಾ"
"ನಿನ್ನ ಎಷ್ಟು ನೋಡಿದರು ಸಾಲದು
ಈ ಕವನ ಬರೆಯುವೆ ಪ್ರತಿದಿನ ಮುಂದೆ ಓದಿ »

ಚಂದ್ರ ಚೆಲ್ಲುವ ಬೆಳದಿಂಗಳು
January 7, 2009 - 10:46pm — Nagaraj.G"ಚಂದ್ರ ಚೆಲ್ಲುವ ಬೆಳದಿಂಗಳು
ಚಂದ್ರನಿಗಾಗಿ ಅಲ್ಲ ಪ್ರೇಮಿಗಳಿಗಾಗಿ"
"ಹೂ ಸೂಸುವ ಪರಿಮಳ
ಹೂವಿಗಾಗಿ ಅಲ್ಲ ದುಂಬಿಗಾಗಿ"
"ನಿನ್ನಲ್ಲಿರುವ ಸೌಂದರ್ಯ
ನಿನಗಾಗಿ ಅಲ್ಲ ನನಗಾಗಿ"

ಒಲವಿಲ್ಲದೆ
January 7, 2009 - 10:41am — maheshaಬಾನ್ನೀಲಿಯಲಿ ತೇಲಿದ
ಬಾನಾಡಿ ಮೋಡದಂತ
ಚಲುವಿನ ಒಲವೇ
ತಿಳಿನೀರಲಿ ಚಿಮ್ಮಿ
ಈಜಿದ ಮೀನಿನಂತ
ಪುಳಕದ ಒಲವೇ
ಹಸಿನೆಲದಲಿ ಅಲರಿದ
ಇನಿಮಲರ ಬನದಂತ
ಕಂಪಿನ ಒಲವೇ
ಹೂಗಾಲದಲಿ ಹಣ್ಣಾಗಿ
ಮಾಗಿದ ಮಾವಿನಂತ
ಸಿಹಿಸವಿಯ ಒಲವೇ
ನೀನಿಲ್ಲದೇ ಪುಳಕದ ಚಲುವಿಲ್ಲ
ಕಂಪಿನ ಸಿಹಿಯ ಸವಿಯಿಲ್ಲ
ಬರೀ ಒಣಬರಕಲು
ತೀರದ ಬಿರುಹಸಿವು


RSS: