ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಪ್ರಚಲಿತ

ಯಾಕಿಂಗಾಡ್ತಾರೋ ಈ ಹುಡುಗಿರು...

ಆರ್ಕುಟ್ ಎಂಬ ಸಾಮಾಜಿಕ ಸಂಪರ್ಕ ಜಾಲ ಯಾರಿಗೆ ತಾನೇ ಗೊತ್ತಿಲ್ಲ? ಕೆಲಸ ನಿಮಿತ್ತ ದೂರದ ಊರಿನಲ್ಲಿರುವವರೊಂದಿಗೆ ಅಥವಾ ನಮ್ಮ ಗೆಳೆಯರ ಜೊತೆ ಸಂಪರ್ಕ ಸಾಧಿಸುವಂತಹ ಈ ಸಾಮಾಜಿಕ ಸಂಪರ್ಕ ಜಾಲದಲ್ಲ್ಲಿ ಖಾತೆ ತೆರೆಯದವರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಕೆಲಸದಲ್ಲಿ ಬ್ಯುಸಿ (ಕಚೇರಿಯಲ್ಲಿ ನಿರ್ಬಂಧಿತ ಸೈಟ್ :)) ಆಗಿರುವುದರಿಂದ ಆರ್ಕುಟ್್ಗೆ ಭೇಟಿ ನೀಡುವುದೇ ಅಪರೂಪವಾಗಿಬಿಟ್ಟಿದೆ.  ಮುಂದೆ ಓದಿ »

ಅಂತಿಂಥಾ ಗಂಡು...ನೀನೇನಾ?

ದೋಸೆಯನ್ನು ಕಾವಲಿಯಿಂದ ತೆಗಿಬೇಕಾದರೆ ಎಲ್ಲಾ ಪುಡಿ ಪುಡಿ, ಚಪಾತಿಯ ಆಕೃತಿ ಆಸ್ಟ್ರೇಲಿಯಾ ಅಥವಾ ಶ್ರೀಲಂಕಾದ ಭೂಪಟದಂತಿರುತ್ತದೆ. ನಂಗೇ ಇಡೀ ದೋಸೆ ಬೇಕು, ರೌಂಡ್ ಆಗಿರುವ ಚಪಾತಿ ಬೇಕು ಅಂತಾ ಕೇಳಿದರೆ ತಿನ್ನುವಾಗ ಹೊಟ್ಟೆಯೊಳಗೆ ಅದೇ ಶೇಪ್್ನಲ್ಲಿ ಹೋಗುತ್ತದೇನೋ ಎಂದು ಅಪ್ಪನ ಪ್ರಶ್ನೆ. ಹೌದು ಅಪ್ಪ ಅಡುಗೆ ಮಾಡುವುದೆಂದರೆ ಹೀಗೇನೆ. ಅಮ್ಮನಿಗೆ ಸೌಖ್ಯವಿಲ್ಲದೇ ಇದ್ದಾಗ ಅಥವಾ ಅಮ್ಮ ಅಲ್ಲದೇ ಇರುವಾಗ ಅಪ್ಪನೇ ಅಮ್ಮನ ಸ್ಥಾನವನ್ನು ವಹಿಸಿಕೊಳ್ಳಬೇಕಾಗುತ್ತದೆ. ಅಡುಗೆ ಮನೆಯಲ್ಲಿ ತಿಂಡಿ ತಯಾರು ಮಾಡಬೇಕು, ಜಡೆ ಹೆಣೆದು ಕೊಡಬೇಕು, ಟಿಫಿನ್ ಬಾಕ್ಸ್ ತುಂಬಿಸಿಕೊಡಬೇಕು ಹೀಗೆ ಎಲ್ಲದಕ್ಕೂ ಅಪ್ಪನೇ ಬೇಕು. ಅಪ್ಪ ಅಡುಗೆ ಮಾಡುತ್ತಿದ್ದರೆ ಪಾತ್ರೆಗಳ ಸದ್ದು ಗಟ್ಟಿಯಾಗಿ ಕೇಳಿಸುತ್ತದೆ, ದೋಸೆ ಕಾವಲಿಯಿಂದ ಏಳುವುದೇ ಇಲ್ಲ, ಚಟ್ನಿಗೆ ಉಪ್ಪು ಜಾಸ್ತಿ, ಹೆಣೆದ ಜಡೆ ಹೇಗೋ ಇರುತ್ತದೆ... ಅದ್ರೂ ಅಪ್ಪ ಎಲ್ಲವನ್ನೂ ಮಾಡುತ್ತಾನೆ. ಆವಾಗ ಅಪ್ಪನಲ್ಲಿ ಅಮ್ಮ ಜಾಗೃತವಾಗುತ್ತಾಳೆ. ಅಮ್ಮ ಮಾಡಿದಂತೆ ಎಲ್ಲವೂ ಮಾಡಬೇಕೆಂದು ಹಠ ಹಿಡಿಯುವ ಮಕ್ಕಳ ನಡುವೆ ಮುದ್ದಿನ ಅಪ್ಪ 'ಅಮ್ಮ'ನಾಗುತ್ತಾನೆ.   ಮುಂದೆ ಓದಿ »

ಲವ್‌ ಜಿಹಾದ್‌ ಎಂಬ ಹಳೇ ಯುದ್ಧ

ನಾನಾಗ ಧಾರವಾಡದಲ್ಲಿ ಪ್ರಜಾವಾಣಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ. ಆಗ ಎಂದರೆ, ೨೦೦೬ರಲ್ಲಿ ಒಂದು ಪ್ರಕರಣ ನಡೆಯಿತು. ಜಂಗಮ ಸಮುದಾಯಕ್ಕೆ ಸೇರಿದ ಯುವತಿಯೊಬ್ಬಳು ಇದ್ದಕ್ಕಿದ್ದಂತೆ ನಾಪತ್ತೆಯಾದಳು. ಧಾರವಾಡ ಸಣ್ಣ ನಗರವಾಗಿದ್ದರಿಂದ, ಪೊಲೀಸರಿಗೆ ದೂರು ಹೋಗುವ ಮುನ್ನವೇ ಪತ್ರಕರ್ತರಿಗೆ ವಿಷಯ ಗೊತ್ತಾಗಿತ್ತು. ಪ್ರೇಮ ಪ್ರಕರಣಗಳು ಸಾಮಾನ್ಯವಾಗಿದ್ದರಿಂದ, ಈ ಕುರಿತು ನಾವ್ಯಾರು ತಲೆ ಕೆಡಿಸಿಕೊಳ್ಳಲಿಲ್ಲ.
 
ಆದರೆ, ಒಂದೆರಡು ದಿನಗಳಲ್ಲಿ ಬೆಳವಣಿಗೆಗಳು ತೀವ್ರಗೊಂಡವು. ನಾಪತ್ತೆಯಾಗಿದ್ದ ಹುಡುಗಿ ಮುಸ್ಲಿಂ ಯುವಕನೊಂದಿಗೆ ಓಡಿಹೋಗಿದ್ದಳು. ಈಕೆ ಬಿ.ಬಿ.ಎ. ಅಂತಿಮ ವರ್ಷದಲ್ಲಿ ಓದುತ್ತಿದ್ದ ಹುಡುಗಿ. ಆತ, ಗ್ಯಾರೇಜೊಂದರಲ್ಲಿ ಕೆಲಸ ಮಾಡುತ್ತಿದ್ದ ಮೆಕ್ಯಾನಿಕ್‌. ಹುಡುಗಿಯ ತಂದೆ ಮಿಲಿಟರಿಯಲ್ಲಿ ಕೆಲಸ ಮಾಡುತ್ತಿದ್ದುದರಿಂದ, ಅವರಿಗೆ ರಜೆ ಸಿಗುವುದು ವರ್ಷದಲ್ಲಿ ಒಂದೆರಡು ಸಲ ಮಾತ್ರ. ಹೀಗಾಗಿ, ಮನೆ ನೋಡಿಕೊಳ್ಳುವ ಜವಾಬ್ದಾರಿ ಹುಡುಗಿಯ ತಂದೆ ಮತ್ತು ಅವರ ಸೋದರರ ಮೇಲಿತ್ತು.  ಮುಂದೆ ಓದಿ »

ಹಸಿರು ಕಾನನದೂರಿನಿಂದ...

ಊರಿಗೆ ಹೋದಾಗ, ದೋಸ್ತರ ಜೊತೆ ಇದ್ದಾಗಾಗ್ಲಿ, ಬಳಗದೋರಿಗಾಗಿ ಎಲ್ರಿಗೂ ಐ ಟಿ ರಿಸೆಶನ್ ಬಗ್ಗೆ ಹೇಳಿ ಹೇಳಿ ಸಾಕಾಗಿತ್ತು , ಹಾಗೆ ಪ್ರತಿಸಲ ಹೇಳ್ಬಾಕಾದ್ರೆ ಕೆಲವೊಂದು ಸರ್ತಿ ನನಗೆ ನಾನು ಏನು ಹೇಳ್ತಾ ಇದಿನಿ ಅಂತ ಗೊತ್ತಾಗ್ತಿರ್ಲಿಲ್ಲ.  ಮುಂದೆ ಓದಿ »

ಕಲ್ಪನಾ ವಿಲಾಸ

ನನ್ನ ಕಲ್ಪನೆ ಹರಿಬಿಡುವನಿದ್ದೇನೆ ನಾನು ಜ್ಯೋತಿಷಿ ಅಲ್ಲ ಆದರೂ ಮೇ ೧೭ ರಂದು ಪತ್ರಿಕೆಗಳ ಹೆಡ್ ಲೈನ್ ಏನಿರುತ್ತೆ
ಗೊತ್ತಿಲ್ಲ ಕಲ್ಪನೆ ಸಹ ಮಾಡಲಾಗುತ್ತಿಲ್ಲ ಏಕೆಂದರೆ ರಾಜಕೀಯ ಹಾಗೆ ತಾನೇ...! ಇರಲಿ ನಾನು ನಮ್ಮ ನೇತಾರರ ಪ್ರತಿಕ್ರಿಯೆ ಹೇಗಿರಬಹುದು ನಾ ಸಂದರ್ಶನ ಮಾಡಿದೆ ಅವರ ಹೇಳಿಕೆ ಹೀಗಿವೆ....!  ಮುಂದೆ ಓದಿ »

ಹೀಗೊಂದು ಬಲಾತ್ಕಾರದ ಕತೆ.. Rape!! They Cried..

8075.jpg

ಬಲಾತ್ಕಾರ ಅತ್ಯಂತ ಹೀನಾತಿಹೀನ ಅಪರಾಧ ಅನ್ನುವುದರಲ್ಲಿ ಸಂಶಯವೇ ಇಲ್ಲ. ಬಲಾತ್ಕಾರದಂತಹ ಹೇಯ ಕೃತ್ಯವನ್ನೆಸಗಿದ ವ್ಯಕ್ತಿಗೆ, ಭಾರತೀಯ ಪೀನಲ್ ಕೋಡ್ ನ ಸೆಕ್ಷನ್ ೩೭೫ ರ ಅನ್ವಯ ಅತ್ಯಂತ ಕಠಿಣ ಶಿಕ್ಷೆಯನ್ನು ನೀಡಲಾಗುತ್ತದೆ. ಹೆಂಗಸೊಬ್ಬಳ ಅನುಮತಿ ಇಲ್ಲದೇ ಅವಳನ್ನು ಸಂಭೋಗಕ್ಕೀಡು ಮಾಡುವುದು ರೇಪ್/ ಬಲಾತ್ಕಾರ ಎನಿಸಿಕೊಳ್ಳುತ್ತದೆ.  ಮುಂದೆ ಓದಿ »

ಮಗಳ ಪ್ರಶ್ನೆ..

ಹಿಂಗ್ಯಾಕ ನಮ್ಮ ದೇಶದಾಗ ? ೮ ವರ್ಷದ ಮಗಳು ಕೇಳಿದ್ಲು ಆಫೀಸ ಮುಗಿಸಿ ಟಿವಿ ಹಚ್ಚಿದಾಗ ಚಾನಲ್ ನವರು ಕಸಬ್ ನ ಡಿಮಾಂಡ್ ಬಗ್ಗೆ ಹೇಳುತ್ತಿದ್ದರು. ಓದಲು ಪಾಕಿಸ್ತಾನಿ ಪತ್ರಿಕೆ ಬೇಕಂತೆ ಅವನಿಗೆ ಕೊಡೋಣ ಆದರೆ ನಾಳೆ ಮಲ್ಲಿಕಾ ಶೇರಾವತ್ ಬೇಕು ಎಂದು ಹಟ ಹಿಡಿದರೆ ಏನು ಮಾಡೋದು....ಇಷ್ಟಕ್ಕೂ ಅವ ನಮ್ಮ ಅತಿಥಿ ಅಲ್ಲ ಬಂಧು ಮೊದಲೇ ಅಲ್ಲ.  ಮುಂದೆ ಓದಿ »

ವಿರೋಧಿ ಗೆ ಸ್ವಾಗತ...

ಬರುವ ಸಂವತ್ಸರದ ಹೆಸರೇ ವಿರೋಧಿ ಅಂತೆ..ಕೇಳಬೇಕೆ ಎಲ್ಲಿ ನೋಡಿದರೂ ವಿರೋಧಿಗಳದೇ ಕಾರುಬಾರು...
.ವಾಟಾಳ ನಾಗರಾಜ ಗೇ ಸಕತ್ ಡಿಮಾಂಡ್ ಈಗ.. ನಿಮ್ಮ ಮನೆಯಲ್ಲಿ ನೀರು ಬರಲಿಲ್ಲವೋ ಅವರು ಬರಬಹುದು
ತಮ್ಮಟೆ ಬಾರಿಸುತ್ತ ಎಮ್ಮೆ ಮೇಲೆ ಕೂತು ಕೊಂಡು....!  ಮುಂದೆ ಓದಿ »

ಬರಲಿರುವ ನಾಳೆಗಳು....

ಈ ಬ್ಲಾಗ್ ಅನ್ನಬಹುದಾ , ಬರೆಯುವಾಗ ಸ್ವಲ್ಪ ಹಿಂಜರಿಕೆ ಇದೆ.ಕಾರಣ ಮಿತ್ರನೋರ್ವ ಬರೆಯುತ್ತಿದ್ದಾರೆ... "ಸಂಪದ"
ಈಗ ಪ್ರಬುದ್ಧ ಆಗಿದೆ ವಿವಾದದ ವಿಶಯ ಬೇಡ..ಆದರೆ ಬರಲಿರುವ ಆ ನಾಳೆಗಳು ವಿವಾದಾತ್ಮಕವಾಗಿಯೆ ಇರುತ್ತವೆ.
ಗಾದೆ ಮಾತಿದೆ ಅಲ್ಲ "ಅಪ್ರಿಯ ಸತ್ಯ ಯಾವಾಗಲೂ ಅಪಥ್ಯ" ಅಂತ.ಮೊನ್ನೆ ವರುಣ ಗಾಂಧಿ ಹೇಳಿದ್ದು ಎಂಬ ಸಂಗತಿ  ಮುಂದೆ ಓದಿ »

ತೊಣಚಿ ಡೈರಿ

ಪಕ್ಷದೊಳಗೆ ಭಿನ್ನ ಮತ- ಶಮನಕ್ಕೆ ಯತ್ನ

ಒಂದ್ ಪಕ್ಷದಾಗೇ ಭಿನ್ನಮತ, ಜಗಳ, ವೈಮನಸ್ಸು ಇಟ್ಕಂಡು ಕೆಲ್ಸ ಮಾಡೋಕೆ ಸಾಧ್ಯ
ಇರೋವಾಗ, ಚುನಾವಣೆ ಎದ್ರಿಸಿ ಅಧಿಕಾರ ಹಿಡಿಯೋಕ್ ಆಗೋವಾಗ, ಈ ನೂರಾರ್ ಹೆಸ್ರು
ಹೇಳ್ಕಂಡು ಬೇರ್ ಬೇರೆ ಸಿದ್ಧಾಂತದ್ ನೆಪ ಮಾಡ್ಕಂಡ್ ರಾಜ್ಕೀಯ ಮಾಡೋದ್ಯಾಕೆ? ಎಲ್ಲಾ  ಮುಂದೆ ಓದಿ »

Syndicate content