travel
ಸಾತೋಪಂಥ್ ಸರೋವರ
June 25, 2008 - 4:42pm — keerthi2kiran
ಸಾತೋಪಂಥ್ ಸರೋವರ ಹಿಮಾಲಯದ ಮಡಿಲಲ್ಲಿ ಅನೇಕ ಪರ್ವತ ಶಿಖರಗಳ ಮಧ್ಯೆ ಸ್ಥಿತವಾಗಿರುವ ಒಂದು ಸಣ್ಣ ಸರೋವರ. ಇದು ಚೌಕಂಭಾ, ನೀಲಕಂಠ್ , ಪಾರ್ವತಿ, ಸ್ವರ್ಗರೋಹಿಣಿ ಮುಂತಾದ ಅನೇಕ ಪರ್ವತಗಳ ನಡುವಿನ ಕಣಿವೆಯಲ್ಲಿರುವ ಈ ಸರೋವರ ಬಹಳ ಪವಿತ್ರ ಸ್ಥಳ. ತ್ರಿಕೋನಾಕಾರದಲ್ಲಿರುವ ಈ ಸರೋವರದ ಮೂರು ತುದಿಗಳಲ್ಲಿ ತ್ರಿಮೂರ್ತಿಗಳು ಸ್ಥಿತವಾಗಿರುವರೆಂದು ನಂಬಿಕೆ.
ಸಾತೋಪಂಥ್ ಯಾತ್ರೆ ಬದರಿನಾಥದಿಂದ ಪ್ರಾರಂಭವಾಗುತ್ತದೆ. ಅಲ್ಲಿಂದ ೩ಕಿ.ಮೀ. ದೂರದಲ್ಲಿ ಮಾನಾ ಎಂಬ ಹಳ್ಳಿ ಸಿಗುತ್ತದೆ. ಇಲ್ಲಿಂದ ಮುಂದೆ ಜನ ಸಂಚಾರ ಇರುವುದಿಲ್ಲ. ರಾತ್ರಿ ತಂಗಲು ಟೆಂಟ್ ಗಳನ್ನೂ, ತಿನ್ನಲು ಆಹಾರವನ್ನೂ ಕೊಂಡೊಯ್ಯಬೇಕಾಗುತ್ತದೆ. ೨೫ಕಿ.ಮೀ. ದೂರದಲ್ಲಿರುವ ಈ ಸರೋವರಕ್ಕೆ ಹೋಗಿಬರಲು ನಮಗೆ ಬೇಕಾಗಿದ್ದು ೫ ದಿನಗಳು.
ದಾರಿ ಬಹಳ ದುರ್ಗಮವಾಗಿದ್ದು ಕೊರೆಯುವ ಚೆಳಿಯಲ್ಲಿ ಹಿಮನದಿಗಳ ಮೇಲೆ ಜಾರುತ್ತಾ, ಬೀಳುತ್ತ, ಉರುಳುವ ಬಂಡೆಗಳ ನಡುವೆ ಸಾಗಬೇಕಾಗುತ್ತದೆ. ದಾರಿಯಲ್ಲಿ ದೂರದ ಬೆಟ್ಟಗಳಲ್ಲಿ ಆಗುತ್ತಿರುವ ಅವಲಾಂಚೆಗಳ ಸದ್ದು ಗುಡುಗಿನಂತೆ ಕೇಳಿಸುತ್ತಿರುತ್ತದೆ.
ಇನ್ನೊಂದು ವಿಶೇಷವೇನೆಂದರೆ ಪಾಂಡವರು ಸ್ವರ್ಗಕ್ಕೆ ಹೊರಟದ್ದು ಈ ದಾರಿಯಲ್ಲೇ ಅಂತೆ. ಸಾತೋಪಂಥ್ ಸರೋವರದವರೆಗೂ ತಲುಪಿದ್ದು ಬರೀ ಧರ್ಮರಾಯ ಮಾತ್ರ. ಸ್ವರ್ಗರೋಹಿಣಿ ಹಿಮನದಿಯ ಮೇಲೆ ನಡೆದು ಹೋದಾಗ ಅವನಿಗೆ ಸ್ವರ್ಗದ ಮೆಟ್ಟಿಲುಗಳು ಕಂಡವಂತೆ. ನಮಗಂತೂ ಸಾತೋಪಂಥದ ದಾರಿಯೇ ಭೂಮಿಯ ಮೇಲಿನ ಸ್ವರ್ಗ ಎನಿಸಿತು. ಮುಂದೆ ಓದಿ »

ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ಶುಭಾಶಯಗಳು...
December 11, 2007 - 4:34pm — prasadbshettyಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ಶುಭಾಶಯಗಳು...
ಧರ್ಮಸ್ಥಳ ಅಮ್ರತ ಮಹೋತ್ಸವ:
ಡಾ: ವೀರೆಂದ್ರ ಹೆಗ್ಗಡೆಯವರ ನೇತ್ರತ್ವದಲ್ಲಿ ನಡೆಯುತ್ತಿರುವ ಸರ್ವ ಧರ್ಮ ಮತ್ತು ಸಾಹಿತ್ಯ ಸಮ್ಮೇಳನದ ಅಮ್ರತ ಮಹೋತ್ಸವದಲ್ಲಿ ಪಾಲ್ಗೋಂಡ ಮುಖ್ಯ ಅತಿಥಿಗಳು...
- ಶ್ರೀ ರವಿಶಂಕರ್ ಗುರುಜಿ
- ಪೂಜ್ಯ ಎಡೆಯೂರು ಮಠಾಧೀಶ ಸಿದ್ಧಲಿಂಗ ಮಹಾಸ್ವಾಮಿ.
- ರಾಷ್ಟ್ರಕವಿ ಡಾ ಜಿ ಎಸ್ ಶಿವರುದ್ರಪ್ಪ ಮುಂದೆ ಓದಿ »

- prasadbshetty ರವರ ಬ್ಲಾಗ್
- Login or register to post comments
- 194 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಧರ್ಮಸ್ಥಳ ಪುಣ್ಯ ಕ್ಷೇತ್ರದ ಕಿರು ಪರಿಚಯ...
December 11, 2007 - 4:22pm — prasadbshettyಧರ್ಮಸ್ಥಳ ಪುಣ್ಯ ಕ್ಷೇತ್ರದ ಕಿರು ಪರಿಚಯ...
ಧರ್ಮಸ್ಥಳದ ಮೂಲನಾಮ ಕುಡುಮ.ದಾನ ಧರ್ಮಗಳಿಗೆ ಖ್ಯಾತಿಯಾದ ಈ ಸ್ಥಳ ಆಮೇಲೆ ಧರ್ಮಸ್ಥಳವಾಯಿತು. ಮುಂದೆ ಓದಿ »

- prasadbshetty ರವರ ಬ್ಲಾಗ್
- Login or register to post comments
- 170 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಚುಟ್ಟಾ ನಾಡಿನಲ್ಲಿ ಮಂಗಳೂರು ಬೀಡಿ
April 29, 2007 - 3:28pm — btrameshಆಗಿನ್ನು ಮದುವೆ ಆಗಿ ಆರೇಳು ತಿಂಗಳಾಗಿತ್ತಷ್ಟೆ. ನಾವು ಆಗ ಡೊಮಿನಿಕನ್ ರಿಪಬ್ಲಿಕ್ (Dominican Republic) ನಲ್ಲಿ ವಾಸವಾಗಿದ್ದೆವು. ಫ಼್ಲೋರಿಡ ತೀರದಿಂದ ಸುಮಾರು ಆರನೂರು ಮೈಲಿ ದೂರ ಕೆರಿಬ್ಬಿಯನ್ ಸಮುದ್ರದಲ್ಲಿದೆ. ಇಲ್ಲಿಂದ ಜಮೈಕ ಸಮುದ್ರದಾಚೆ ಸುಮಾರು ಇನ್ನೂರು ಮೈಲಿರಬಹುದು. ಮುಂದೆ ಓದಿ »


RSS: