ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಟಾಲ್ಸ್‌ಟಾಯ್ ಕಥೆ

ಫಾದರ್ ಸೆರ್ಗಿಯಸ್ ಅಧ್ಯಾಯ ಎಂಟು (ಕೊನೆಯ ಭಾಗ)

December 6, 2007 - 7:45am — olnswamy

ಈ ಬಾರಿ ಅವಳು ವಾಪಸ್ಸು ಬರುವುದು ಕೊಂಚ ತಡವಾಯಿತು. ಅವಳು ಬಂದಾಗ ಸ್ಟೆಪಾನ್ ಅದೇ ರೀತಿಯಲ್ಲಿ ಕೂತಿದ್ದ, ಕೈಗಳನ್ನು ಮೊಳಕಾಲುಗಳ ಮೇಲೆ ಊರಿಕೊಂಡು. ಅವನ ಚೀಲ ಆಗಲೇ ಬೆನ್ನಿಗೇರಿತ್ತು. ಕೈಯಲ್ಲಿ ದೀಪವೊಂದನ್ನು ಹಿಡಿದುಕೊಂಡು ಪಾಶೆನ್ಕಾ ಬಂದಾಗ ತನ್ನ ದಣಿದ ಸುಂದರವಾದ ಕಣ್ಣುಗಳನ್ನೆತ್ತಿ ಅವಳನ್ನೇ ದಿಟ್ಟಿಸಿ ದೀರ್ಘವಾಗಿ ನಿಟ್ಟುಸಿರುಬಿಟ್ಟ.  ಮುಂದೆ ಓದಿ »

  • ಟಾಲ್ಸ್‌ಟಾಯ್ ಕಥೆ
~.~
  • olnswamy ರವರ ಬ್ಲಾಗ್
  • Login or register to post comments
  • 393 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಫಾದರ್ ಸೆರ್ಗಿಯಸ್ ಅಧ್ಯಾಯ ಎಂಟು (೧)

December 6, 2007 - 7:43am — olnswamy

ಎಂಟು
ಪಾಶೆನ್ಕಾ ಈಗ ಪುಟ್ಟ ಪಾಶೆನ್ಕಾ ಆಗಿರಲಿಲ್ಲ. ಈಗವಳು ಪ್ರಾಸ್ಕೋವ್ಯಾ ಕಿಖಾಯ್ಲೋವ್ನಾ, ಸುಕ್ಕುಗಟ್ಟಿದ ಚರ್ಮದ, ಬಡಕಲು ಮೈಯ ಮುದುಕಿ, ನಿಷ್ಪ್ರಯೋಜಕ ಕುಡುಕ ಅಳಿಯ, ಸರ್ಕಾರೀ ಗುಮಾಸ್ತ ಮಾವ್ರಿಕ್ಯೇವ್‌ನ ಅತ್ತೆ. ಅವನು ಕೆಲಸ ಕಳೆದುಕೊಳ್ಳುವ ಮುನ್ನ ಇದ್ದ ಹಳ್ಳಿಯಲ್ಲೇ ಮಗಳು, ರೋಗಿಷ್ಟ ಅಳಿಯ, ಮತ್ತು ಐದು ಮೊಮ್ಮಕ್ಕಳ ಸಂಸಾರ ನಿಭಾಯಿಸಿಕೊಂಡು ಇದ್ದಳು. ಹಳ್ಳಿಯ ವ್ಯಾಪಾರಸ್ಥರ ಹೆಣ್ಣುಮಕ್ಕಳಿಗೆ ಸಂಗೀತಪಾಠ ಹೇಳಿ ಕಾಸು ಸಂಪಾದಿಸುತ್ತಿದ್ದಳು. ಒಬ್ಬರಿಗೆ ಒಂದು ಗಂಟೆಯಹಾಗೆ ದಿನಕ್ಕೆ ನಾಲ್ಕು, ಕೆಲವೊಮ್ಮೆ ಐದು ಪಾಠ ಹೇಳುತ್ತಾ, ಒಂದು ಪಾಠಕ್ಕೆ ಐವತ್ತು ಕೊಪೆಕ್‌ನ ಹಾಗೆ ತಿಂಗಳಿಗೆ ಅರುವತ್ತು ರೂಬಲ್ ಸಂಪಾದಿಸುತ್ತಿದ್ದಳು. ಅಳಿಯನಿಗೆ ಯಾವುದಾದರೂ ಕೆಲಸ ಸಿಗುವವರೆಗೆ ಅವಳ ಈ ಸಂಪಾದನೆಯೇ ಸಂಸಾರಕ್ಕೆ ಆಧಾರ. ತನ್ನ ಅಳಿಯನಿಗೆ ಯಾವುದಾದರೂ ಕೆಲಸ ಕೊಡಿಸಿ ಎಂದು ನಂಟರಿಗೆ, ಪರಿಚಯಸ್ಥರಿಗೆ ಕಾಗದಗಳನ್ನು ಬರೆದಿದ್ದಳು. ಸೆರ್ಗಿಯಸ್‌ನಿಗೂ ಕಾಗದ ಹಾಕಿದ್ದಳು. ಆದರೆ ಅದು ತಲುಪುವಮೊದಲೇ ಅವನು ಮಠ ಬಿಟ್ಟು ಹೊರಟುಬಿಟ್ಟಿದ್ದ.
ಅವತ್ತು ಶನಿವಾರ. ರೇಸಿನ್ ಬ್ರೆಡ್ ಮಾಡಲು ಹಿಟ್ಟು ನಾದುತ್ತಿದ್ದಳು. ಅವರಪ್ಪನ ಎಸ್ಟೇಟಿನಲ್ಲಿದ್ದ ಕೆಲಸದವನೊಬ್ಬ ಬಹಳ ಚೆನ್ನಾಗಿ ರೇಸಿನ್ ಬ್ರೆಡ್ ಮಾಡುತ್ತಿದ್ದನ್ನು ನೋಡಿ ಕಲಿತಿದ್ದಳು. ಮೊಮ್ಮಕ್ಕಳಿಗೆ ಭಾನುವಾರದ ವಿಶೇಷವೆಂದು ಈಗ ಹಿಟ್ಟು ನಾದುತ್ತಿದ್ದಳು.
ಮಗಳು ಮಾಷಾ ಪುಟ್ಟ ಮಗುವನ್ನು ಆಡಿಸಿಕೊಂಡಿದ್ದಳು. ದೊಡ್ಡ ಹುಡುಗ, ಹುಡುಗಿ ಸ್ಕೂಲಿಗೆ ಹೋಗಿದ್ದರು. ರಾತ್ರಿಯೆಲ್ಲ ನಿದ್ರೆಮಾಡಿರದ ಅಳಿಯ ಈಗ ನಿದ್ದೆ ಹೋಗಿದ್ದ. ಪಾಶೆನ್ಕಾ ಕೂಡಾ ರಾತ್ರಿ ನಿದ್ರೆಮಾಡಿರಲಿಲ್ಲ. ಗಂಡನ ಮೇಲೆ ಸಿಟ್ಟು ಮಾಡಿಕೊಂಡಿದ್ದ ಮಗಳಿಗೆ ಸಮಾಧಾನ ಹೇಳುತ್ತಾ ಕೂತಿದ್ದಳು.  ಮುಂದೆ ಓದಿ »

  • ಟಾಲ್ಸ್‌ಟಾಯ್ ಕಥೆ
~.~
  • olnswamy ರವರ ಬ್ಲಾಗ್
  • ೧ ಪ್ರತಿಕ್ರಿಯೆ
  • 394 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಫಾದರ್ ಸೆರ್ಗಿಯಸ್ ಅಧ್ಯಾಯ ಏಳು (ಭಾಗ ೩)

December 5, 2007 - 7:29pm — olnswamy

'ನಾನು ಮನೇಗೆ ಹೋಗಬೇಕು, ಅಪ್ಪನ ಹತ್ತಿರ ಹೋಗಬೇಕು' ಅಂದಳು.
'ಹೆದರಬೇಡ. ನಿನಗೇನು ತೊಂದರೆ?' ಫಾದರ್ ಸೆರ್ಗಿಯಸ್ ಕೇಳಿದ.
'ಎಲ್ಲವೂ ತೊಂದರೆಯೇ, ಮೈಯೆಲ್ಲ ನೋವು' ಅಂದಳು. ಮುಗಳು ನಗು ತಟ್ಟನೆ ಅವಳ ಮುಖವನ್ನು ಬೆಳಗಿತು.
'ವಾಸಿಯಾಗುತ್ತದೆ, ಪ್ರಾರ್ಥನೆಮಾಡು' ಅಂದ.
'ಪ್ರಾರ್ಥನೆ ಮಾಡಿದರೆ ಏನು ಉಪಯೋಗ? ಬೇಕಾದಷ್ಟು ಪ್ರಾರ್ಥನೆ ಮಾಡಿದ್ದೇನೆ. ಏನೂ ಅಗಿಲ್ಲ' ಮುಗುಳು ನಗುತ್ತಾ ಮಾತನಾಡಿದಳು. 'ನನ್ನ ಪರವಾಗಿ ನೀವು ಪ್ರಾರ್ಥನೆಮಾಡಿ. ನನ್ನ ಮೇಲೆ ಕೈ ಇಡಿ. ಕನಸಿನಲ್ಲಿ ನಿಮ್ಮನ್ನು ಕಂಡಿದ್ದೆ' ಅಂದಳು.
'ನಾನು ಹೇಗೆ ಕಂಡಿದ್ದೆ?'
'ನನ್ನ ಎದೆಯಮೇಲೆ ಕೈ ಇಟ್ಟಿದ್ದಿರಿ, ಇಲ್ಲಿ, ಹೀಗೆ' ಅನ್ನುತ್ತಾ ಅವನ ಕೈ ಹಿಡಿದೆಳೆದು ಎದೆಯಮೇಲಿಟ್ಟುಕೊಂಡಳು.  ಮುಂದೆ ಓದಿ »

  • ಟಾಲ್ಸ್‌ಟಾಯ್ ಕಥೆ
~.~
  • olnswamy ರವರ ಬ್ಲಾಗ್
  • Login or register to post comments
  • 345 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಫಾದರ್ ಸೆರ್ಗಿಯಸ್ ಅಧ್ಯಾಯ ಏಳು (ಭಾಗ ೨)

December 5, 2007 - 7:27pm — olnswamy

[ಏಳನೆಯ ಅಧ್ಯಾಯ ಮುಂದುವರೆದಿದೆ.]
'ಸರಿ, ಸರಿ, ನಾನೇನೂ ಅವರನ್ನು ಓಡಿಸುತ್ತಾ ಇಲ್ಲ, ದೊಡ್ಡವರ ಹತ್ತಿರ ಹೇಗೆ ಇರಬೇಕು ಎಂದು ಹೇಳುತ್ತಿದ್ದೆ. ಈ ಜನಕ್ಕೆ ಕರುಣೆ ಅನ್ನುವುದೇ ಇಲ್ಲ, ಜೀವ ತಿಂದುಬಿಡುತ್ತಾರೆ. ತಮ್ಮ ಕೆಲಸವಾದರೆ ಸಾಕು, ಬೇರೆಯವರ ಗತಿ ಏನು ಅನ್ನುವ ಯೋಚನೆಯೇ ಇಲ್ಲ. ಏಯ್, ನೀನು, ಎಲ್ಲಿಗೆ ಹೋಗುತ್ತಿದ್ದೀ? ಇವತ್ತು ಮುಗೀತು, ನಾಳೆ ಬಾ ಹೋಗು.' ವ್ಯಾಪಾರಿಯಂತೂ ಎಲ್ಲರನ್ನೂ ಕಳಿಸಿಬಿಟ್ಟ.
ಎಲ್ಲವೂ ವ್ಯವಸ್ಥಿತವಾಗಿರಬೇಕು ಅನ್ನುವ ಆಸೆ, ಜನರಮೇಲೆ ದಬ್ಬಾಳಿಕೆ ಮಾಡುವುದರಿಂದ ಬರುವ ಖುಷಿ, ಜೊತೆಗೆ ಫಾದರ್ ಸೆರ್ಗಿಯಸ್‌ನಿಂದ ಅವನಿಗೆ ಆಗಬೇಕಾಗಿದ್ದ ಕೆಲಸ ಇವೆಲ್ಲ ಸೇರಿ ಆ ವ್ಯಾಪಾರಿ ಅಷ್ಟು ಮುತುವರ್ಜಿಯಿಂದ ಜನರನ್ನು ಚದುರಿಸಿದ್ದ. ಅವನಿಗೆ ಒಬ್ಬಳೇ ಮಗಳು. ಹೆಂಡತಿ ಸತ್ತು ಹೋಗಿದ್ದಳು. ಮಗಳಿಗೆ ಖಾಯಿಲೆ. ಮದುವೆಯಾಗಿರಲಿಲ್ಲ. ಅವಳ ಖಾಯಿಲೆ ವಾಸಿಯಾಗಲೆಂದು ಎಂಟು ನೂರು ಮೈಲು ಪ್ರಾಯಾಣಮಾಡಿಕೊಂಡು ಅವಳನ್ನೂ ಕರೆದುಕೊಂಡು ಬಂದಿದ್ದ. ಎರಡು ವರ್ಷಗಳಿಂದ ಏನೇನೋ ಪ್ರಯತ್ನಪಟ್ಟಿದ್ದರೂ ಕಾಯಿಲೆ ಮಾತ್ರ ಹಾಗೇ ಇತ್ತು. ತನ್ನ ಪ್ರಾಂತ್ಯದಲ್ಲಿದ್ದ ಯೂನಿವರ್ಸಿಟಿಯ ಆಸ್ಪತ್ರೆಗೆ ಹೋಗಿದ್ದ. ಉಪಯೋಗವಾಗಿರಲಿಲ್ಲ. ಆಮೇಲೆ ಸಮಾರಾ ಪ್ರಾಂತ್ಯದಲ್ಲಿದ್ದ ರೈತನೊಬ್ಬನ ಹತ್ತಿರ ನಾಟಿ ಔಷಧಿ ಕೊಡಿಸಿದ್ದ. ಕೊಂಚ ಗುಣವಾಯಿತೇನೋ ಅನ್ನಿಸಿತ್ತು. ಮತ್ತೆ ಮಾಸ್ಕೋದಲ್ಲಿದ್ದ ಡಾಕ್ಟರ ಹತ್ತಿರ ಹೋಗಿ ಹೇರಳವಾಗಿ ಹಣ ಖರ್ಚುಮಾಡಿದ್ದ. ಏನೇನೂ ಫಲ ದೊರೆಯಲಿಲ್ಲ. ಫಾದರ್ ಸೆರ್ಗಿಯಸ್ ರೋಗಿಗಳ ಮೇಲೆ ಕೈ ಇಟ್ಟು ಪ್ರಾರ್ಥನೆಮಾಡಿದರೆ ಸಾಕು ಕಾಯಿಲೆ ವಾಸಿಯಾಗುತ್ತದೆ ಎಂದು ಜನ ಹೇಳುವುದು ಕೇಳಿ ಈಗ ಇಲ್ಲಿಗೆ ಬಂದಿದ್ದ. ಜನರನ್ನೆಲ್ಲ ಕಳಿಸಿಬಿಟ್ಟು ಫಾದರ್ ಸೆರ್ಗಿಯಸ್‌ನ ಬಳಿಗೆ ಬಂದು ದೊಪ್ಪನೆ ಅವನ ಕಾಲ ಬಳಿ ಕುಸಿದು ಕುಳಿತು ಜೋರಾಗಿ ದನಿತೆಗೆದು ಮಾತಾಡಿದ:
'ಓ ಪವಿತ್ರಾತ್ಮಾ, ಸಂತ ಮಹಾನುಭಾವಾ! ನನ್ನ ಕರುಳಿನ ಕುಡಿ ರೋಗಪೀಡಿತಳಾಗಿ ವೇದನೆಯಿಂದ ನರಳುತ್ತಿದ್ದಾಳೆ. ನಿಮ್ಮ ಕಾಲು ಹಿಡಿದು ಬೇಡಿಕೊಳ್ಳುವ ಧೈರ್ಯಮಾಡಿದ್ದೇನೆ. ಅವಳನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ. ದಯವಿಟ್ಟು ನನ್ನ ಮಗಳು ಗುಣಮುಖಳಾಗುವಂತೆ ಆಶೀರ್ವದಿಸಿ' ಎಂದು ಬೊಗಸೆಗೈಯಾಗಿ ಬೇಡಿಕೊಂಡ. ಮಗಳ ಖಾಯಿಲೆ ವಾಸಿಯಾಗಬೇಕಾದರೆ ಹೀಗಲ್ಲದೆ ಬೇರೆಯ ರೀತಿಯಲ್ಲಿ ಬೇಡಬಾರದು ಎಂಬ ನಿಯಮವಿದೆಯೋ ಎಂಬಂತೆ ಮಾತನಾಡಿದ ಅವನು. ಅವನು ಎಂಥ ವಿಶ್ವಾಸದಿಂದ ಮಾತನಾಡಿದನೆಂದರೆ ಮಾತನಾಡಬೇಕಾದ್ದೇ ಹೀಗೆ, ಕೋರಿಕೊಳ್ಳಬೇಕಾದ್ದೇ ಹೀಗೆ ಎಂದು ಸ್ವತಃ ಫಾದರ್ ಸೆರ್ಗಿಯಸ್‌ನಿಗೂ ಅನ್ನಿಸಿಬಿಟ್ಟಿತು. 'ಏಳಪ್ಪಾ, ನಿನ್ನ ತಾಪತ್ರಯವೇನು ಹೇಳು' ಎಂದು ಕೇಳಿದ. ಆಗ ಆ ವ್ಯಾಪಾರಿ--ನನಗೆ ಒಬ್ಬಳೇ ಮಗಳು, ಎರಡು ವರ್ಷದ ಹಿಂದೆ ಅವಳ ತಾಯಿ ಇದ್ದಕ್ಕಿದ್ದಹಾಗೆ ತೀರಿ ಹೋದಳು, ಆವಾಗಿನಿಂದ ಸುಮ್ಮನೆ ವರಾತ (ಅದು ಅವನದೇ ಮಾತು) ಮಾಡುತ್ತಿದ್ದಾಳೆ, ಮೈಮೇಲೆ ಪರಿವೆಯೇ ಇರುವುದಿಲ್ಲ, ಬುದ್ಧಿಭ್ರಮಣೆಯಾಗಿರಬೇಕು, ಎಂಟು ನೂರು ಮೈಲು ಪ್ರಯಾಣಮಾಡಿಕೊಂಡು ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ, ಇಲ್ಲೇ ವಸತಿ ಗೃಹದಲ್ಲಿದ್ದಾಳೆ, ಫಾದರ್ ಸೆರ್ಗಿಯಸ್ ಹೇಳಿಕಳಿಸುವವರೆಗೂ ಅಲ್ಲೇ ಇರುತ್ತಾಳೆ, ಹಗಲು ಹೊತ್ತಿನಲ್ಲಿ ಹೊರಗೆ ಬರುವುದಿಲ್ಲ, ಅವಳಿಗೆ ಬೆಳಕನ್ನು ಕಂಡರೆ ಭಯ, ಸೂರ್ಯಮುಳುಗಿದಮೇಲೆ ಮಾತ್ರ ಬರುತ್ತಾಳೆ ಅಂದ.  ಮುಂದೆ ಓದಿ »

  • ಟಾಲ್ಸ್‌ಟಾಯ್ ಕಥೆ
~.~
  • olnswamy ರವರ ಬ್ಲಾಗ್
  • Login or register to post comments
  • 315 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಫಾದರ್ ಸೆರ್ಗಿಯಸ್ ಅಧ್ಯಾಯ ಏಳು (ಭಾಗ ೧)

December 5, 2007 - 7:23pm — olnswamy

ಏಳು
ಕೆಲವು ವಾರಗಳಿಂದ ಫಾದರ್ ಸೆರ್ಗಿಯಸ್‌ನನ್ನು ಒಂದೇ ಯೋಚನೆ ನಿರಂತರವಾಗಿ ಕಾಡುತ್ತಿತ್ತು: ನಾನು ಈಗಿರುವ ಸ್ಥಿತಿಯನ್ನು ಒಪ್ಪಿಕೊಳ್ಳುವುದು ಸರಿಯೇ? ಇದು ನನ್ನ ಇಚ್ಛೆಯಿಂದ ದೊರೆತದ್ದಲ್ಲ, ಬದಲಾಗಿ ಆರ್ಕಿಮಾಂಡ್ರೈಟ್* ಮತ್ತು ಮಠದ ಗುರುಗಳ ಇಚ್ಛೆಯಂತೆ ದೊರೆತಿರುವ ಸ್ಥಾನ ಇದು. ನಾನು ಮಾಡುತ್ತಿರುವುದು ಸರಿಯೇ ಅನ್ನುವ ಯೋಚನೆ ಅದು. ಹದಿನಾಲ್ಕು ವರ್ಷದ ಹುಡುಗನ ಕಾಯಿಲೆ ವಾಸಿಯಾದಾಗಿನಿಂದ ಅವನಿಗೆ ಈ ಸ್ಥಾನಮಾನ ದೊರೆತಿದ್ದವು. ಅಂದಿನಿಂದ ತಿಂಗಳು, ವಾರ, ದಿನ ಕಳೆದಂತೆಲ್ಲಾ ಅಂತರಂಗದ ಬದುಕು ಕ್ಷೀಣಿಸಿ ವ್ಯರ್ಥವಾಗುತ್ತಿದೆ, ಮನಸ್ಸಿನೊಳಗೆಲ್ಲ ಹೊರಗಿನ ಲೋಕವೇ ತುಂಬಿಕೊಳ್ಳುತ್ತಿದೆ ಅನ್ನಿಸುತ್ತಿತ್ತು ಅವನಿಗೆ. ಒಳಗು ಹೊರಗಾಗಿ, ಹೊರಗು ಒಳಗಾದಂತೆ ಅನ್ನಿಸುತ್ತಿತ್ತು.
ಮಠಕ್ಕೆ ಜನರನ್ನು ಆಕರ್ಷಿಸುವ, ಅವರಿಂದ ದಾನ ಧರ್ಮ ಪಡೆಯುವ ಉಪಕರಣವಾಗಿ ಬಳಕೆಯಾಗುತ್ತಿದ್ದೇನೆ ಎಂದು ಅರಿವಾಗುತ್ತಿತ್ತು. ಆದ್ದರಿಂದಲೇ ಅವನಿಂದ ಸಾಧ್ಯವಾದಷ್ಟೂ ಲಾಭ ಪಡೆಯುವುದಕ್ಕೆ ಅನುಕೂಲವಾಗುವಂತೆ ಮಠದ ಒಡೆಯರು ಅವನ ಬದುಕನ್ನು ತಿದ್ದಿಬಿಟ್ಟಿದ್ದರು. ಅಂದರೆ, ಅವನು ಒಂದಿಷ್ಟೂ ದೇಹಶ್ರಮದ ಕೆಲಸ ಮಾಡಬೇಕಾಗಿಯೇ ಇರಲಿಲ್ಲ. ಅವನಿಗೆ ಬೇಕಾದುದೆಲ್ಲ ದೊರೆಯುವಂತೆ ವ್ಯವಸ್ಥೆಮಾಡಿದ್ದರು. ಇದಕ್ಕೆ ಪ್ರತಿಯಾಗಿ ಅವನ ದರ್ಶನ ಕೋರಿ ಬಂದವರಿಗೆಲ್ಲ ದರ್ಶನನೀಡಿ ಆಶೀರ್ವಾದ ಮಾಡಬೇಕು ಅನ್ನುವುದಷ್ಟೇ ಅವರ ಬಯಕೆ. ಅವನಿಗೆ ಅನುಕೂಲವಾಗಲೆಂದು ದರ್ಶನಕ್ಕೆ ವಾರದ ಕೆಲವು ದಿನ ನಿಗದಿ ಮಾಡಿದ್ದರು. ಗಂಡಸು ಭಕ್ತರು ಕಾಯುವುದಕ್ಕೆ ಒಂದು ಕೋಣೆ, ಹೆಣ್ಣು ಭಕ್ತಾದಿಗಳ ಗುಂಪು ಒಟ್ಟಾಗಿ ಮೈಮೇಲೆ ಮುಗಿಬೀಳುವುದನ್ನು ತಪ್ಪಿಸಲು ಸರಳುಗಳ ಕಟಕಟೆ, ಅದರ ಹಿಂದೆ ನಿಂತು ಫಾದರ್ ಸೆರ್ಗಿಯಸ್ ಆಶೀರ್ವಾದಮಾಡುವ ವ್ಯವಸ್ಥೆ ಎಲ್ಲವೂ ರೂಪುಗೊಂಡವು. ಜನಕ್ಕೆ ತಮ್ಮನ್ನು ಕಾಣುವ ಅಗತ್ಯವಿದೆ, ಜನರ ಬಗ್ಗೆ ಪ್ರೀತಿ ಇರಬೇಕು ಎಂದು ಸ್ವತಃ ಏಸುವೇ ವಿಧಿಸಿರುವಾಗ ತಾವು ಜನಕ್ಕೆ ದರ್ಶನ ನೀಡದೆ ಹೋದರೆ ಅದು ಕ್ರೌರ್ಯವಾಗುತ್ತದೆ ಎಂಬ ಮಠದ ವಾದಕ್ಕೆ ಶರಣಾಗದೆ ಬೇರೆ ದಾರಿಯಿರಲಿಲ್ಲ. ಈ ಬಗೆಯ ಬದುಕಿಗೆ ಒಗ್ಗಿಕೊಂಡಷ್ಟೂ ತನ್ನೊಳಗಿನ ಅಂತರಂಗವನ್ನೆಲ್ಲ ಬಹಿರಂಗದ ಲೋಕವೇ ವ್ಯಾಪಿಸಿಕೊಳ್ಳುತ್ತಿದೆ, ಒಳಗಿನ ಜೀವ ಜಲ ಬತ್ತಿಹೋಗುತ್ತಿದೆ, ಮನುಷ್ಯರಿಗಾಗಿ ಬದುಕುತ್ತಿದ್ದೇನೆಯೇ ಹೊರತು ದೇವರಿಗಾಗಿ ಅಲ್ಲ ಅನ್ನುವ ಭಾವ ಮೂಡುತ್ತಿತ್ತು.  ಮುಂದೆ ಓದಿ »

  • ಟಾಲ್ಸ್‌ಟಾಯ್ ಕಥೆ
~.~
  • olnswamy ರವರ ಬ್ಲಾಗ್
  • Login or register to post comments
  • 280 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
123ಮುಂದಿನ ›ಕೊನೆಯ »
Syndicate content

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Jayalaxmi.Patil
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 3:22pm
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 3:00pm
  • savithasr
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 2:56pm
  • srinivasps
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 2:35pm
  • Chamaraj
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 1:37pm
  • savithasr
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 12:56pm
  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:16pm
ಇನ್ನಷ್ಟು


ಪ್ರಗತಿಯೇ ಜೀವನದ ವ್ಯಾಪಾರ!

— ಸ್ಯಾಮುಯೆಲ್ ಜಾನ್ಸನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator