ಕವಿತೆ
ಹರವಬೇಡ ಕೂದಲು
April 6, 2008 - 7:05am — keshavಇದು ನಾನು ಬರೆದ ಶಾಯ್ರಿ ಅಲ್ಲ, ನನ್ನ ತಂದೆ ಬರೆದದ್ದು. ಅವರ ೭೦ನೇ ವರ್ಷದ ನೆನಪಿನಲ್ಲಿ ಅವರು ಆಗಾಗ ಬರೆದ ಸಾಲುಗಳನ್ನು ಜೋಡಿಸಿ ನನ್ನ ಅಣ್ಣ ಪುಸ್ತಕ ಮಾಡಿಸುತ್ತಿದ್ದಾನೆ. ಅದರಲ್ಲಿನ ಒಂದು ಶಾಯ್ರಿ ಇಲ್ಲಿದೆ, ನನಗೆ ಇಷ್ಟವಾಯಿತು.
ಹೀಗೆ ಹರವ ಬೇಡ ನಿನ್ನ ಕೇಶರಾಶಿ ಮುಂದೆ ಓದಿ »

ಯುಗಾದಿ
April 4, 2008 - 6:18pm — arunasirigereಯುಗಾದಿ
ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ
ಅಹುದು ಬಂದೀತು, ಬಂದರೇನು? ಅದು ತಂದದ್ದಾರೂ ಏನು?
ಮೈತುಂಬ ಚಿಗುರು ಹೂಗಳ ಹೊತ್ತ ಮರಗಳು??
ಅದ ಕಂಡು ಕುಣಿದು ಹಾಡುವ ಕೋಗಿಲೆಯು?
ಪಡೆದೆವೇನು ಹೊಸತನು? ಎಲ್ಲವೂ ಹಳೆಯದೆ.
ಇದು ಮತ್ತದೇ ವಸಂತವೋ ಗೆಳೆಯ.
ಮತ್ತೆ ಯುಗಗಳ ಯುಗಾದಿ ತಂದದ್ದಾದರೂ ಏನು?
ತರುವುದಿಲ್ಲ ಅದು ಏನನ್ನೂ ಮುಂದೆ ಓದಿ »

- arunasirigere ರವರ ಬ್ಲಾಗ್
- Login or register to post comments
- 153 hits
- Email this blog



ಕಲ್ಪನೆಯ ಹುಡುಗಿ
March 26, 2008 - 10:11am — arunasirigereಕಲ್ಪನೆಯ ಹುಡುಗಿ
ನನ್ನ ಕಲ್ಪನೆಯ ಹುಡುಗಿ,
ಆಭರಣಗಳ ಹಂಗಿಲ್ಲದವಳು
ನಿರಾಭರಣೆಯೇನಲ್ಲ!
ತುಂಟನಗೆ, ಮಿಂಚನೋಟ ತೊಟ್ಟವಳು
ನನ್ನ ಕಲ್ಪನೆಯ ಹುಡುಗಿ,
ಹಮ್ಮುಬಿಮ್ಮುಗಳ ಸೋಂಕಿಲ್ಲದವಳು
ಮುಗ್ಧ ಬೆಡಗಿಯೇನಲ್ಲ!
ಒನಪು ವೈಯ್ಯಾರಗಳ ಉಟ್ಟವಳು
ನನ್ನ ಕಲ್ಪನೆಯ ಹುಡುಗಿ
ಜೀನ್ಸ್ ಸ್ಕರ್ಟ್, ನೈಟಿಗಳೆಂದರೆ
ಮೂಗ ಮುರಿವವಳು
ನನ್ನ ಕಣ್ಣ ನೋಟಗಳು ನೇಯ್ದ ಮುಂದೆ ಓದಿ »

ಬಿಂದಾಸ್ ಬೇಡಿಕೆ
March 13, 2008 - 4:14pm — nithyagiriನನ್ನ ಕನಸ.....ಕವನದ
ಗಗನ ಕು.ಸುಮ ನೀನು
ನೀ ನನ್ನ ಮನದ ಮದರಂಗಿ
ಆದರು ನಾ ಏಕಾಂಗಿ.................
ಸುಮ ನೀ..ಬಳುಕುವ ಬಳ್ಳಿ
ಬೆಳಕಾಗು ನನ್ನ ಬದುಕಿನಲ್ಲಿ
ಆರದ ಹಣತೆಯಾಗಿ..............
ಕಾಯುತಿರುವೆ...ನಿನ್ನ ಕಣ್ಣ
ಸನ್ನೆಗೆ ಸ್ವಲ್ಪ ಸಣ್ಣಗೆ........
ಬರಡಾದ ಇ-ನನ್ನ ಬದುಕಿಗೆ
ನೀನಾಗಬೇಕು "ಸ್ನೇಹ" ಎಂಬ
ನೀರಿನ ಚಿಲುಮೆ................
ಕಾಯುತಿರುವೆ...ನೀ ಬರುವ ಹಾದಿಯಲ್ಲಿ ಮುಂದೆ ಓದಿ »

- nithyagiri ರವರ ಬ್ಲಾಗ್
- Login or register to post comments
- 131 hits
- Email this blog



ಹೇಗೆ ತೊರೆಯಲಿ...?
February 22, 2008 - 9:52pm — poornimasಹೇಗೆ ತೊರೆಯಲಿ ...?
**********
ಹೇಗೆ ಒಡೆಯಲಿ ಹೈಯ ಬಳೆಯನು ?
ನಿನ್ನ ಸವಿನುಡಿ ಇಂಪು ದನಿಯನು
ಕಿಣಿಕಿಣಿ ಸದ್ದಲಿ ನೆನಪಿಸಿದೆ.
ಹೇಗೆ ತರಿಯಲಿ ಹೆರಳ ಹೂವನು?
ನಿನ್ನ ಉಸಿರೇ ತೇಲಿ ಬರುತಿದೆ,
ನನ್ನ ಉಸಿರಲಿ ನೆಲಸಿದೆ.
ಹೇಗೆ ಅಳಿಸಲಿ ಹಣೆಯ ಕುಂಕುಮ?
ನಿನ್ನ ಮುತ್ತಿನ ಹಚ್ಚೆ ಗುರುತಾಗಿ
ಶಾಶ್ವತ ಸಂಭ್ರಮ ಶೋಭಿಸಿದೆ.
ಹೇಗೆ ಬಿಸುಡಲಿ ಬಣ್ಣದುಡುಗೆಯ? ಮುಂದೆ ಓದಿ »

- poornimas ರವರ ಬ್ಲಾಗ್
- Login or register to post comments
- 170 hits
- Email this blog




RSS: