ಭ್ರಮಾವಿಲಾಸ
ಕವಿಕಾಯಚೂಡಾಮಣಿ - ಒಂದು ನೆನಪು
May 3, 2007 - 6:29pm — anivaasiನಾನು ಚಿಕ್ಕವನಿದ್ದಾಗಿನಿಂದಲೂ ನಮ್ಮ ಮನೆಗೆ ಬರುತ್ತಿದ್ದ ಒಬ್ಬ ಮಾವನವರು ನನಗೆ ಹೇಗೆ ಮಾವನವರು ಎಂಬುದೇ ಮರೆತುಹೋಗಿದೆ. ದೂರದ ಸಂಬಂಧಿ. ಸಂಬಂಧದಲ್ಲಿ ಮಾವ ಎಂಬುದಕ್ಕಿಂತ ಅವರು ನನ್ನೊಡನೆ ನಡೆದುಕೊಳ್ಳುತ್ತಿದ್ದ ರೀತಿಗೆ ಅವರನ್ನು ಮಾವ ಎಂದು ಕರೆಯತೊಡಗಿದೆ ಎಂದು ಕಾಣುತ್ತದೆ. ಅದಕ್ಕೆ ಯಾರೂ ಅಕ್ಷೇಪಣೆ ಎತ್ತಿರಲಿಲ್ಲ. ಅವರ ಹೆಸರು ಅರಳೆ ಪುಟ್ಟಣ್ಣ ಎಂದು ಎಲ್ಲರೂ ಕರೆಯುತ್ತಿದ್ದುದು. ಆದರೆ ತನ್ನ ಹೆಸರು ಅರಳಿ ಪುಟ್ಣಣ್ಣ ಎಂದು ಎಲ್ಲರನ್ನೂ ಸದಾ ತಿದ್ದುತ್ತಿದ್ದರು. ಅಜಾನುಬಾಹುವಾಗಿದ್ದ ಅವರೊಡನೆ ಯಾರೂ ಜಗಳವಾಡುವ ಧೈರ್ಯ ಮಾಡುತ್ತಿರಲಿಲ್ಲ.
ನಾನು ಹೈಸ್ಕೂಲಿಗೆ ಹೋಗುತ್ತಿದ್ದಾಗ ಹಳೆಗನ್ನಡ ಪದ್ಯ ಉರು ಹೊಡೆಯುವುದನ್ನು ಕೇಳಿ ಅವರು ನನಗೆ ಹೇಳಿದ ವಿಷಯವಿದು. ನೆನಪಿದ್ದಷ್ಟು ವಿವರಿಸುತ್ತೇನೆ.
ಸುಮಾರು ಹದಿಮೂರನೇ ಶತಮಾನದಲ್ಲಿ ರಚಿಸಲಾಯಿತೆನ್ನಲಾದ ಒಂದು ವಿಶಿಷ್ಟ ಕನ್ನಡ ಕೃತಿ ಕವಿಕಾಯಚೂಡಾಮಣಿ. ಕುಗ್ರಾಮವೊಂದರಲ್ಲಿ ಒಂಟಿಯಾಗಿ ವಾಸವಾಗಿರುವ ಒಬ್ಬ ಕುರುಡು ಅಜ್ಜಿಯ ವಿಶಾಲವಾದ ಮನೆಯ ಅಟ್ಟದಲ್ಲಿ ಕವಿಕಾಯಚೂಡಾಮಣಿ ಸಿಕ್ಕತು. ಕಾಗದದ ಮೇಲೆ ಮೂಲದಿಂದ ಮಾಡಿಕೊಂಡ ಪ್ರತಿಯಾಗಿದ್ದು, ಲಭ್ಯವಿರುವ ಏಕಮಾತ್ರ ಪ್ರತಿ. ಸುಮಾರು ೭೦೦ಕ್ಕೂ ಹೆಚ್ಚು ಪದ್ಯಗಳಿದೆ ಎಂದು ಊಹಿಸಲಾಗಿರುವ ಈ ಕೃತಿಯ ಕೇವಲ ೧೦೬ ಪದ್ಯಗಳು ಈಗ ಲಭ್ಯವಿದೆ. ಹೆಚ್ಚು ಜನ ಕನ್ನಡ ವಿದ್ವಾಂಸರಿಗೇ ಇನ್ನೂ ಈ ಕೃತಿಯ ಬಗ್ಗೆ, ಅದರ ಕರ್ತೃವಿನ ಬಗ್ಗೆ ಗೊತ್ತಿರುವಂತಿಲ್ಲ. ಗೊತ್ತಿರುವವರೂ ಈ ಕೃತಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಂತೆ ತೋರುವುದಿಲ್ಲ. ಅದಕ್ಕೆ ಬಹುಶಃ ಎರಡು ಕಾರಣಗಳಿವೆ. ಒಂದು - ಕವಿಕಾಯಚೂಡಾಮಣಿ ಯಾವುದೇ ಪುರಾಣವನ್ನಾಗಲಿ, ಹಿಂದಿನ ಕವಿಯ ಬಗ್ಗೆಯಾಗಲಿ ಅಥವಾ ಕಾವ್ಯದ ಪುರ್ನಸೃಷ್ಠಿಯಾಗಲಿ ಅಲ್ಲ. ಎರಡದನೆಯದಾಗಿ - ಕವಿಕಾಯಚೂಡಾಮಣಿ ಕನ್ನಡದಲ್ಲಿದ್ದರೂ ಕೂಡ ಕನ್ನಡ ನಾಡು ನುಡಿ ಬಗ್ಗೆ ಒಂದು ಚೂರೂ ಪ್ರಸ್ತಾಪ ಮಾಡುವುದಿಲ್ಲ. ಮುಂದೆ ಓದಿ »






RSS: