ಕನ್ನಡ ಕವಿತೆ
ಇಳೆಗಿಳಿದಿದೆ ನಾಕ
August 17, 2007 - 8:42pm — jp.nevaraಅದೋ, ಬಾಂದಳದಲಿ ಮಿನುಗುತ್ತಿದೆ
ಬಿಳಿ ಬೆಳ್ಳಿಯ ಚುಕ್ಕಿ,
ಬೆಳಗಾಯಿತು, ಬೆಳಕಾಯಿತು
ಎಂದುಲಿಯುತ್ತಿವೆ ಹಕ್ಕಿ.
ಕಪ್ಪಿದ್ದದು ಕೆಂಪಾಯಿತು
ಮೂಡಣದಂಗಳದಿ.
ರಂಗವಲ್ಲಿಯ ಕಂಡಾಯಿತು
ಮನೆ-ಮನೆಯಂಗಳದಿ.
ಎಳೆ ಕುಡಿಯಲಿ, ಗಿಡದೊಡಲಲಿ
ಹರಡಿದ ಇಬ್ಬನಿಯು.
ಕರಗುತ್ತಿವೆ ಎಳೆಬಿಸಿಲಿಗೆ
ಆ ಮುತ್ತಿನ ಹನಿ-ಹನಿಯು.
ಬಿರಿಯುತ್ತಿವೆ ಗಂಟಿಕ್ಕಿದ
ಮೊಗ್ಗವು ಮುನಿ ಮರೆತು. ಮುಂದೆ ಓದಿ »

ಹಕ್ಕಿಯ ಲೋಕದ ಮಕ್ಕಳೆ
July 23, 2007 - 5:19pm — jp.nevaraಹಕ್ಕಿಯ ಲೋಕದ ಮಕ್ಕಳೆ
ದು:ಖದಿ ಕೊರಗುತ್ತಾ ಕುಂತಿರುವಿರಿ ಏಕೆ?
ನಕ್ಕಾರೂ ಮರೆಯಾದ ನೋವನ್ನು ಕೆದಕುತ್ತ
ಬಿಕ್ಕಿ-ಬಿಕ್ಕಿ ಅಳುವುದು ಏಕೆ?
ಸಣ್ಣಾಗೆ ಇದ್ಧಾ ನಿಮ್ಮ ಪ್ರೀತಿಯಗೂಡ
ಕಣ್ಣಾ ಎದುರೀಗೆ ಕಡವಿದ್ದ ನೆನೆದೀರಾ
ಅಣ್ಣ-ಅಕ್ಕರನು ನಿಮ್ಮ ಕಣ್ಣೆದುರೀಗೆ
ಹರಣವಾ ಮಾಡಿದ್ದ ನೆನೆದೀರೇನು?
ಉಂಡು ಆಡಿದ್ದ ನಿಮ್ಮ ಪ್ರೀತಿಯ ಮರವ ಮುಂದೆ ಓದಿ »

- jp.nevara ರವರ ಬ್ಲಾಗ್
- Login or register to post comments
- 248 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಹೂವಾಗಿ ಅರಳುವ ಮುನ್ನ
July 23, 2007 - 3:47pm — jp.nevaraಹೂವಾಗಿ ಅರಳುವ ಮುನ್ನ ಮೊಗ್ಗ ಕೊಯ್ದು
ಸಂಜೆ ಬಾಡುವ ಮುನ್ನ ಮನೆಗೆ ಹೊಯ್ದು
ದಾರದಲಿ ಪೋಣಿಸಿ, ಹಾರವನು ಮಾಡಿಸಿ
ಸಂತಸ ಪಡುವೆ ಮಡದಿಯ ಮುಡಿಗೆ ಏರಿಸಿ.
ಇವು ದುಂಡು ಮಲ್ಲಿಗೆ ಮೊಗ್ಗುಗಳು
ದುಂಡು ಮೊಗದ ಚಲುವೆ ಅವಳು
ಹುಣ್ಣಿಮೆಯಲಿ ಅರಳಿದ ಚೆಂದಿರನ
ಕಾಂತಿಯನು ಕಂಗಳಲಿ ತುಂಬಿಕೊಂಡವಳು.
ಗೆಳತಿ ಬಂದಿರುವಳು ಬಿಸಿಲ ದಿನಗಳಲಿ
ತಂಗಾಳಿ ಸುಳಿಯುತಿರಲಿಲ್ಲ ಆಗ ದಾರಿಯಲಿ ಮುಂದೆ ಓದಿ »

ಚಿಂತೆ
July 12, 2007 - 8:14pm — jp.nevaraಚಿಂತೆಯ ಸಂತ್ಯಾಗ, ಸಿಗತಾರ ಎಲ್ಲಾರು,
ಅಲ್ಲಿಲ್ಲ ಬಡವ, ಶ್ರೀಪತಿ,
ಮೇಲು, ಕೀಳೆಂಬ
ಭೂತ ಪ್ರೇತದ ಭಾವನೆಗಳು.
ಇರುವುದು ಅದು ಬಹುದೂರ
ಇವುಗಳ ಒಡೆತನದಿಂದ
ಅದಕ್ಕಿಲ್ಲ ಗಡಿಗಳು
ಅಲ್ಲಿಲ್ಲ ಯಾವುದೇ ಧರ್ಮದ ಗುಡಿಗಳು
ಭಾರತ, ಲಂಕೆ, ಅಮೆರಿಕೆಗಿರುವಂತೆ
ಅದಕ್ಕಿಲ್ಲ ಮೋಹಕ ಕಡಲ ತೀರಗಳು
ಸೌರಮಂಡಲಕೆ ಸೂರ್ಯನಿರುವಂತೆ
ಬೆಳಕ ನೀಡಲು
ಅಲ್ಲಿಲ್ಲ ಯಾವುದೇ ತಾರೆಗಳು ಮುಂದೆ ಓದಿ »

- jp.nevara ರವರ ಬ್ಲಾಗ್
- Login or register to post comments
- 427 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಬಾವಿಯೊಳಗಿದ್ದವನ
July 12, 2007 - 6:07pm — jp.nevaraಬಾವಿಯೊಳಗಿದ್ದವನ
ಹೊರಗೆಳೆದು ಹಾಕಿ
ಅವನ ಜಗದಡ್ಡಾರವನು
ದೊಡ್ಡದಾಗಿ ಮಾಡಿದಿರಿ
ಹಾರಲಾಗದಿದ್ದವಗೆ, ಗಟ್ಟಿ
ರೆಕ್ಕೆ-ಪುಕ್ಕವ ಕಟ್ಟಿ
ಹಾರುವ ಆಸೆಬರಿಸಿ, ಬಾನ
ತೋರಿ, ಬೆನ್ನ ತಟ್ಟಿದಿರಿ
ಎಲ್ಲೋ, ಎಲೆಯಮರೆಯಲ್ಲಿ
ಕಾಯಾಗಿ ಕೂತವನ
ಬೆಳಕಿಗೆ ತಂದಿಟ್ಟು
ಹಣ್ಣಾಗುಂತೆ ಮಾಡಿದಿರಿ
ತಿಪ್ಪೆ ಮೇಲಿದ್ದವಗೆ
ಉಪ್ಪರಿಗೆಯ ದಾರಿ ತೋರಿದಿರಿ
ನೆಲದ ಮೇಲಿನ ಚುಕ್ಕಿ ಮುಂದೆ ಓದಿ »

- jp.nevara ರವರ ಬ್ಲಾಗ್
- Login or register to post comments
- 314 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: